ಮೈಸೂರು ದಸರಾ ಕವಿಗೋಷ್ಠಿಗೆ ಎನ್‌ಟಿಆರ್ ಶ್ರೀಮತಿ ಅತಿಥಿ
ಅ.4ರಂದು 20 ಕವಿ ಹಾಗೂ 8 ಕವಯಿತ್ರಿಯರ ಕಾವ್ಯಧಾರೆ
ಆ ದಿನ ಸಂಜೆ ಕವಿ ಡಾ. ಸಿದ್ಧಲಿಂಗಯ್ಯ ಕವಿಗೋಷ್ಠಿ ಉದ್ಘಾಟಿಸುವರು. ಗೋಷ್ಠಿಯಲ್ಲಿ 20 ಕವಿಗಳು ಹಾಗೂ 8 ಕವಯಿತ್ರಿಯರು ಭಾಗವಹಿಸಲಿದ್ದಾರೆ. ಲಕ್ಷ್ಮೀ ಪಾರ್ವತಿ ಕೂಡ ಗೋಷ್ಠಿಯಲ್ಲಿ ಕವನ ವಾಚನ ಮಾಡಲಿದ್ದಾರೆ ಎಂದು ಕವಿಗೋಷ್ಠಿ ಉಪ ಸಮಿತಿ ಗೌರವಾಧ್ಯಕ್ಷ ಪ್ರೊ.ಕೆ.ಎಸ್.ಭಗವಾನ್ ಸುದ್ದಿಗಾರರಿಗೆ ಹೇಳಿದರು.
ಖಾಸಗಿ ಸಂಸ್ಥೆಗಳು ಪ್ರಾಯೋಜಿಸಿರುವ ಈ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು - ಸಿ. ನಾಗಣ್ಣ, ಎಂ. ಸರಸ್ವತಿ ಗೌಡ, ಸೋಮಶೇಖರ ಇಮ್ರಾಪುರ, ಚೆನ್ನಣ್ಣ ವಾಲೀಕಾರ, ಶ್ಯಾಮಸುಂದರ ಬಿದರಕುಂದಿ, ಧರಣೇಂದ್ರ ಕುರಕುರಿ, ಎಲ್.ಹನುಮಂತಯ್ಯ, ಸಬಿಹಾ ಭೂಮಿಗೌಡ, ರತ್ನಾ ಕಾಳೇಗೌಡ, ಯು.ಮಹೇಶ್ವರಿ, ಇಂದಿರಾ ಶಿವಣ್ಣ, ಮನು ಬಳಿಗಾರ್, ಜಯಪ್ಪ ಹೊನ್ನಾಳಿ, ಕೆ.ಓಂಕಾರಪ್ಪ, ಮಹಾಂತೇಶ ಮಲ್ಲನಗೌಡರ, ಸುಬ್ಬು ಹೊಲೆಯಾರ್, ಪ್ರಸನ್ನ, ಕೆ.ಎನ್.ಸೋಮಶೇಖರ್, ನಿಂಗಣ್ಣ ಸಣ್ಣಕ್ಕಿ, ಸೋಮಶೇಖರ ಬಿಸಲ್ವಾಡಿ, ಎಂ.ಪರಡ್ಡಿ (ಸಂಸ್ಕೃತ), ಎಡ್ವರ್ಡ್ ನರೋನ್ಹ (ಕೊಂಕಣಿ), ತೆನ್ನಿರ ರಾಧಾ ಪೊನ್ನಪ್ಪ (ಕೊಡವ), ಅಜಯಕುಮಾರ ಸಿಂಗ್ (ಹಿಂದಿ), ಪುತ್ತಿಗೆ ಈಶ್ವರ ಭಟ್ಟ (ತುಳು), ಮಹಾಜಬೀನ್ (ಉರ್ದು)
(ಇನ್ಫೋ ವಾರ್ತೆ)












Click it and Unblock the Notifications