ನಾಡಹಬ್ಬ -2003 : ಮೈಸೂರು ದಸರಾ ಕಾರ್ಯಕ್ರಮ ವಿಶೇಷ


ಮೈಸೂರು ದಸರಾ ಉತ್ಸವ 2003ರ ಸೆಳಕು- ಹೊಳಹುಗಳು ...

ಸೆಪ್ಟಂಬರ್‌ 27, ಶನಿವಾರ

Chamundeshwariಉದ್ಘಾಟನೆ : ಬೆಳಗ್ಗೆ 10.42ರಿಂದ 11 ಗಂಟೆಯಾಳಗೆ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವುದರೊಂದಿಗೆ ಭಾರತೀಯ ವಿಜ್ಞಾನ ಕೇಂದ್ರದ ಮಾಜಿ ನಿರ್ದೇಶಕ ಹಾಗೂ ಬಾಹ್ಯಾಕಾಶ ವಿಜ್ಞಾನಿ ಪ್ರೊ । ಸಿ.ಎನ್‌. ಆರ್‌.ರಾವ್‌ ಅವರಿಂದ ದಸರಾ ಮಹೋತ್ಸವಕ್ಕೆ ಚಾಲನೆ.

ಕೇಂದ್ರ ಗ್ರಾಹಕ ಕಲ್ಯಾಣ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಸಮಾರಂಭದ ಅಧ್ಯಕ್ಷರು. ಸಹಕಾರ ಸಚಿವ ವಿಶ್ವನಾಥ್‌, ಪಶು ಸಂಗೋಪನಾ ಸಚಿವ ಮಹದೇವ್‌, ತೋಟಗಾರಿಕಾ ಸಚಿವ ಶಿವಣ್ಣ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಶ್ರೀಮತಿ ರಾಣಿ ಸತೀಶ್‌, ಮುಜರಾಯಿ ಸಚಿವೆ ಶ್ರೀಮತಿ ಸುಮಾ ವಸಂತ್‌, ಸಂಸತ್‌ ಸದಸ್ಯರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌, ರಾಜಶೇಖರಮೂರ್ತಿ, ಮೇಯರ್‌ ಮೋದಾಮಣಿ ಹಾಗೂ ನಗರ ಮತ್ತು ಜಿಲ್ಲೆಯ ಶಾಸಕರು ಮುಖ್ಯ ಅತಿಥಿಗಳು.

ಖಾಸಗಿ ದರ್ಬಾರ್‌ : ಸರ್ಕಾರಿ ದಸರಾ ಉತ್ಸವದ ಜೊತೆಗೆ ಅರಮನೆಯಾಳಗೆ ಖಾಸಗಿ ದಸರಾ ಉತ್ಸವ ಸಾಂಪ್ರದಾಯಿಕವಾಗಿ ಆರಂಭಗೊಳ್ಳಲಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅಂಬಾ ವಿಲಾಸದಲ್ಲಿ ಮಹಾರಾಜರ ಪೋಷಾಕಿನಲ್ಲಿ ದಸರಾ ದರ್ಬಾರ್‌ ನಡೆಸಸುವರು.

ಚಲನ ಚಿತ್ರೋತ್ಸವ : ಸಂಗಮ್‌ ಚಿತ್ರಮಂದಿರದಲ್ಲಿ ಬೆಳಗ್ಗೆ 10.15 ಗಂಟೆಗೆ ವಾರ್ತಾ ಸಚಿವ ಅಲ್ಲಂ ವೀರಭದ್ರಪ್ಪ ದಸರಾ ಚಲನಚಿತ್ರೋತ್ಸವ ಉದ್ಘಾಟಿಸಲಿದ್ದಾರೆ. ನಟರಾದ ಅಂಬರೀಶ್‌, ಉಪೇಂದ್ರ, ನಟಿ ವಿಜಯಲಕ್ಷ್ಮಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ರಮೇಶ್‌, ನಿರ್ಮಾಪಕ ಸಂದೇಶ್‌ ನಾಗರಾಜ್‌ ಮುಖ್ಯ ಅತಿಥಿಗಳು.

ವಸ್ತು ಪ್ರದರ್ಶನ : ಪ್ರವಾಸೋದ್ಯಮ ಸಚಿವ ಡಿ.ಬಿ.ಇನಾಂದಾರ್‌ ಅವರಿಂದ ದೊಡ್ಡಕೆರೆ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ವಸ್ತು ಪ್ರದರ್ಶನದ ಉದ್ಘಾಟನೆ. ಮುಖ್ಯ ಅತಿಥಿ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಪ್ರೊ. ಬಿ.ಕೆ.ಚಂದ್ರಶೇಖರ್‌. ಅಧ್ಯಕ್ಷತೆ- ಎಚ್‌.ವಿಶ್ವನಾಥ್‌.

ದಸರಾ ಕುಸ್ತಿ : ಮಧ್ಯಾಹ್ನ 3 ಗಂಟೆಗೆ ಸಾಹುಕಾರ್‌ ಚನ್ನಯ್ಯ ಕುಸ್ತಿ ಅಖಾಡದಲ್ಲಿ ಅರಣ್ಯ ಸಚಿವ ಕೆ.ಎನ್‌.ಗದ್ದಿ ಅವರಿಂದ ಕುಸ್ತಿ ಪಂದ್ಯಾವಳಿ ಉದ್ಘಾಟನೆ. ಸಚಿವ ಎಂ.ಶಿವಣ್ಣ ಸಮಾರಂಭದ ಅಧ್ಯಕ್ಷತೆ ವಹಿಸುವರು.

ಫಲ ಪುಷ್ಪ ಪ್ರದರ್ಶನ : ಮೇಯರ್‌ ಮೋದಾಮಣಿ ಮಧ್ಯಾಹ್ನ 3.45 ಗಂಟೆಗೆ ಕರ್ಜನ್‌ ಪಾರ್ಕ್‌ನಲ್ಲಿ ದಸರಾ ಫಲ ಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಸಚಿವ ಎಂ.ಶಿವಣ್ಣ ಸಮಾರಂಭದ ಅಧ್ಯಕ್ಷರು.

ಸಾಂಸ್ಕೃತಿಕ ಉತ್ಸವ : ಸಂಜೆ 6 ಗಂಟೆಗೆ ಅರಮನೆ ಆವರಣದಲ್ಲಿ ಚಿತ್ರನಟ ಅಂಬರೀಶ್‌ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಸಾರ್ವಜನಿಕರ ಪ್ರದರ್ಶನಕ್ಕೆ ಮಯೂರ ಸಿಂಹಾಸನ
ಯದುವಂಶ ರಾಜರ ವಿಶ್ವ ಪ್ರಸಿದ್ಧ ಚಿನ್ನದ ಮಯೂರ ಸಿಂಹಾಸನವನ್ನು ನೋಡುವ ಅವಕಾಶವನ್ನು ದಸರೆಯ ಪ್ರಯುಕ್ತ ಸೆ.27ರಿಂದ ಸಾರ್ವಜನಿಕರಿಗೆ ಕಲ್ಪಿಸಲಾಗಿದೆ. ದಸರಾ ಉತ್ಸವ ಕಾಲದಲ್ಲಷ್ಟೇ ಈ ಅವಕಾಶ ಸಿಗುವುದು. ಪ್ರತಿದಿನ ಬೆಳಗ್ಗೆ 9ರಿಂದ 1ಗಂಟೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ಸಾರ್ವಜನಿಕರು ಸಿಂಹಾಸನವನ್ನು ವೀಕ್ಷಿಸಬಹುದು.

9 ದಿನಗಳ ದಸರಾ ಹಬ್ಬದ ಪ್ರಮುಖ ಆಕರ್ಷಣೆಗಳು

  • ಸೆ.27 ರಿಂದ ಅ. 4ರವರೆಗೆ ಅರಮನೆ ಮುಂಭಾಗದಲ್ಲಿ ಸಂಗೀತ ಮತ್ತು ಕಲೆಯ ವೈಭವ ದರ್ಶನ.
  • ಸೆ.28ರಂದು ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಅಂತರರಾಷ್ಟ್ರೀಯ ಕಲಾವಿದರಿಂದ ಯುವ ದಸರಾ
  • ಅದೇ ದಿನ ಜಗನ್ಮೋಹನ ಅರಮನೆಯಲ್ಲಿ ನೃತ್ಯೋತ್ಸವ
  • ಸೆ.28ರಂದು ಬನ್ನಿ ಮಂಟಪದಲ್ಲಿ ‘ವಿವ’ ಸಂಗೀತ ಗೋಷ್ಠಿ
  • ಅ. 5ರಂದು ಭಾರತೀಯ ವಾಯುಪಡೆಯಿಂದ ವೈಮಾನಿಕ ಪ್ರದರ್ಶನ
  • ಅ.5ರಂದು ಮೈಸೂರು ದಸರಾ ಮೆರವಣಿಗೆ ಮತ್ತು ಪಂಜಿನ ಕವಾಯತು
  • ಸೆ. 28ರಂದು ಶಿವಮೊಗ್ಗ ಸುಬ್ಬಣ್ಣ, ಮಡಿಕೇರಿ ನಾಗೇಂದ್ರ, ರಾಜು ಅನಂತಸ್ವಾಮಿ ಮೊದಲಾದವರಿಂದ ಸುಗಮ ಸಂಗೀತ
  • ಸೆ.29ರಂದು ಲಾಲ್‌ಗುಡಿ ಜಿ. ಜಯರಾಮನ್‌ ಪಿಟೀಲು ವಾದನ
  • ಸೆ.30ಕ್ಕೆ ಡಾ.ಬಾಲಮುರಳಿ ಕೃಷ್ಣ ಹಾಡುಗಾರಿಕೆ
  • ಅ.2ರಂದು ಶುಭ ಮುದಗಲ್‌ ಅವರಿಂದ ಹಿಂದೂಸ್ಥಾನಿ ಸಂಗೀತ
  • ಅ.3ರಂದು ಡಾ.ಕೆ.ಜೆ.ಯೇಸುದಾಸ್‌ ಗಾಯನ
  • ಅ.4ರಂದು ಪಂಡಿತ್‌ ರಾಜನ್‌ ಮಿಶ್ರಾ ಮತ್ತು ಪಂ.ಸಾಜನ್‌ ಮಿಶ್ರಾ ಅವರಿಂದ ಬನಾರಸ್‌ ಶೈಲಿಯ ಹಾಡುಗಾರಿಕೆ.
  • ಸೆ. 27ರಂದು ಜಗನ್ಮೋಹನ ಅರಮನೆಯಲ್ಲಿ ನೃತ್ಯೋತ್ಸವ. ಕರ್ನಾಟಕ ತಿಲಕ ಬಿರುದಾಂಕಿತೆ ಜಯಲಕ್ಷ್ಮಿ ಆಳ್ವ ಅವರಿಂದ ರಾಮಾಯಣ ನೃತ್ಯ ರೂಪಕ, ಎಚ್‌.ಆರ್‌.ಕೇಶವಮೂರ್ತಿ ಅವರಿಂದ ಬಸವೇಶ್ವರ ನೃತ್ಯರೂಪಕ, ವೈಜಯಂತಿ ಕಾಶಿ ನೃತ್ಯ ಪಯಣ- ಕಾರ್ಯಕ್ರಮದ ಸೆಳಕುಗಳು.
  • ಸೆ.28ರಂದು ಕಲಾಮಂದಿರದಲ್ಲಿ ನಂದನ ತಂಡದಿಂದ ಗಿರೀಶ್‌ ಕಾರ್ನಾಡ್‌ ವಿರಚಿತ ಯಯಾತಿ ನಾಟಕ ಪ್ರದರ್ಶನ.
  • ಅ.1ನೇ ತಾರೀಕು ರಂಗಾಯಣದಿಂದ ಶ್ರೀರಂಗರ ಕತ್ತಲೆ ಬೆಳಕು ನಾಟಕ.
  • ಅ.2ರಂದು ಭಾಮಿನಿ ತಂಡದಿಂದ ಶ್ರೀಕೃಷ್ಣಾರ್ಪಣ ಯಕ್ಷಗಾನ ಪ್ರಸಂಗ, ರಚನೆ- ಶತಾವಧಾನಿ ಆರ್‌.ಗಣೇಶ್‌
  • ಅ. 4ರಂದು ಕುವೆಂಪು ವಿರಚಿತ ಜಲಗಾರ ನಾಟಕ ಪ್ರದರ್ಶನ, ಹುಲಿ ಬಳಗದಿಂದ.
ಹತ್ತು ದಿನಗಳ ಕಾಲ ನಡೆಯುವ ಖಾಸಗಿ ದಸರಾದಲ್ಲಿ ರಾಜ ಮನೆತನದ ಎಲ್ಲಾ ಸದಸ್ಯರು ಪಾಲ್ಗೊಳ್ಳುತ್ತಾರೆ. ಆಯ್ದ ಅತಿಥಿಗಳನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಪ್ರವೇಶ ನಿಷಿದ್ಧ. ಆಯುಧ ಪೂಜೆ ದಿನ ನಡೆಯುವ ಜಟ್ಟಿಗಳ ವಜ್ರಮುಷ್ಟಿ ಕಾಳಗ ರೋಮಾಂಚಕ ಅನುಭವ ಕಟ್ಟಿ ಕೊಡುತ್ತದೆ.

(ಇನ್ಫೋ ವಾರ್ತೆ)

ನಾಡಹಬ್ಬ - 2003


ಮುಖಪುಟ / ಮೈಸೂರು ದಸರಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+