Get Updates
Get notified of breaking news, exclusive insights, and must-see stories!

2012ರಲ್ಲಿ ರಸ್ತೆಗಿಳಿಯಲಿರುವ ಸಣ್ಣಕಾರುಗಳಿಗೆ ಸುಸ್ವಾಗತ

Upcoming Small Cars in India 2012
ಹೊಸ ವರುಷವೆಂದರೆ ಹೊಸ ನಿರೀಕ್ಷೆ ಸಹಜ. ಕ್ರಿಸ್ಮಸ್ ಮತ್ತು ಹೊಸ ವರುಷದ ಸಂಭ್ರಮದಲ್ಲಿ ರಸ್ತೆಯನ್ನು ದಿಟ್ಟಿಸಿನೋಡುವರಿಗೆ ಇಷ್ಟವಾಗುವಂತಹ ಹಲವು ಕಾರುಗಳು 2012ರಲ್ಲಿ ರಸ್ತೆಗಿಳಿಯಲಿವೆ. ಈಗಾಗಲೇ ರಸ್ತೆಗಿಳಿದ ಹಳೆ ಕಾರುಗಳು ಬೋರ್ ಹೊಡೆದು ಹೊಸ ಕಾರಿನ ನಿರೀಕ್ಷೆಯಲ್ಲಿದ್ದವರಿಗೆ ಈ ವರ್ಷ ಸಾಕಷ್ಟು ಶುಭಸುದ್ದಿಗಳಿವೆ. 2012ರಲ್ಲಿ ರಸ್ತೆಗಿಳಿಯಲಿರುವ ಬೊಂಬಾಟ್ ಸಣ್ಣಕಾರುಗಳ ಒಂದು ಝಲಕ್ ಇಲ್ಲಿದೆ.

ಫೋಕ್ಸ್ ವ್ಯಾಗನ್ ಅಪ್: ಜರ್ಮನಿಯ ಕಾರು ಕಂಪನಿ ಫೋಕ್ಸ್ ವ್ಯಾಗನ್ "ಅಪ್" ಅನ್ನೋ ಕಾರು ಹೊರತರಲಿದೆ. ಇದು ಕಂಪನಿಯು ದೇಶಕ್ಕೆ ಪರಿಚಯಿಸಲಿರುವ ಅಗ್ಗದ ಸಣ್ಣಕಾರಾಗಲಿದೆ. ಇದರ ದರ ಸುಮಾರು 3.5 ಲಕ್ಷ ರು. ಆಸುಪಾಸಿನಲ್ಲಿರಲಿದೆ.

ರೆನಾಲ್ಟ್ ಪಲ್ಸ್: ಫ್ರಾನ್ಸಿನ ಐಷಾರಾಮಿ ಕಾರು ಕಂಪನಿ ರೆನಾಲ್ಟ್ ಬಹುನಿರೀಕ್ಷಿತ ಸಣ್ಣಕಾರು ರೆನಾಲ್ಟ್ ಪಲ್ಸ್ ಕೂಡ ಮುಂದಿನ ವರ್ಷ ದೇಶದ ರಸ್ತೆಗಿಳಿಯಲಿದೆ. ಇದು ನೋಡಲು ನಿಸ್ಸಾನ್ ಮೈಕ್ರಾ ರೀತಿ ಇರಲಿದೆಯಂತೆ! ಇದರ ದರ ಸುಮಾರು 6 ಲಕ್ಷ ರು. ಆಸುಪಾಸಿನಲ್ಲಿರಲಿದೆ.

ನ್ಯಾನೊ ಡೀಸೆಲ್: ನ್ಯಾನೊ ಕಾರಿನ ಡೀಸೆಲ್ ಆವೃತ್ತಿ 2012ಕ್ಕೆ ರಸ್ತೆಗಿಳಿಯಲಿದೆಯಂತೆ. ಇದು ಪ್ರತಿಲೀಟರ್ ಗೆ ಸುಮಾರು 30 ಕಿ.ಮೀ. ಮೈಲೇಜ್ ನೀಡುವ ನಿರೀಕ್ಷೆಯಿದೆ. ಇದರ ದರ ಸುಮಾರು 2.25 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

ಮಾರುತಿ 800 ಬಿಎಸ್III ಆವೃತ್ತಿ: ದೇಶದ ಬೃಹತ್ ಕಾರು ಕಂಪನಿ ಮಾರುತಿ ಸುಜುಕಿಯ ಮಾರುತಿ 800 ಕಾರಿನ ನೂತನ BSIV ಮಾನದಂಡದ BS III ಆವೃತ್ತಿ 2012ರಲ್ಲಿ ರಸ್ತೆಗಿಳಿಯಲಿದೆಯಂತೆ. ಇದು ಮುಂದಿನ ವರ್ಷದ ಆರಂಭದಲ್ಲಿ ರಸ್ತೆಗಿಳಿಯುವ ನಿರೀಕ್ಷೆಯಿದ್ದು, ದರ ಸುಮಾರು 2 ಲಕ್ಷ ರುಪಾಯಿ ಇರಲಿದೆ.

ಷೆವರ್ಲೆ ಸೊನಿಕ್: 2012ರಲ್ಲಿ ಬಿ-ಸೆಗ್ಮೆಂಟ್ ಕಾರು ಮಾರುಕಟ್ಟೆಗೆ ನೂತನ ಷೆವರ್ಲೆ ಸೊನಿಕ್ ಆಗಮಿಸಲಿದೆ. ಇದು ಷೆವರ್ಲೆ ಸ್ಪಾರ್ಕ್ ಮತ್ತು ಷೆವರ್ಲೆ ಬೀಟ್ ಸಹೋದರ ಕಾರಾಗಿದೆ. ಇದು 2012ರ ಮಧ್ಯಾವದಿಯಲ್ಲಿ ರಸ್ತೆಗಿಳಿಯಲಿದೆ. ಇದರ ದರ ಸುಮಾರು 5 ಲಕ್ಷ ರುಪಾಯಿ ಆಸುಪಾಸಿನಲ್ಲಿರಲಿದೆ.

ಫೋರ್ಡ್ ಫಿಯೆಸ್ಟಾ ಹ್ಯಾಚ್ ಬ್ಯಾಕ್: ಫೋರ್ಡ್ ಕಂಪನಿಯ ಸೆಡಾನ್ ಕಾರು ಫಿಯೆಸ್ಟಾ ದೇಶದಲ್ಲಿ ಹೆಚ್ಚು ಜನಪ್ರಿಯಗೊಂಡಿದೆ. ಮುಂದಿನ ವರ್ಷ ಕಂಪನಿಯು ಫಿಯೆಸ್ಟಾ ಹ್ಯಾಚ್ ಬ್ಯಾಕ್ ಆವೃತ್ತಿ ಹೊರತರಲಿದೆಯಂತೆ. ಇದರ ದರ ಸುಮಾರು 7 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

ವ್ಯಾಗನಾರ್ ಡೀಸೆಲ್: ವ್ಯಾಗನಾರ್ ಕಾರಿನ ಡೀಸಲ್ ಆವೃತ್ತಿಯನ್ನು ಹೊರತರುವ ಕುರಿತು ಮಾರುತಿ ಸುಜುಕಿ ಆಲೋಚಿಸುತ್ತಿದೆಯಂತೆ. ಈ ಕಾರು 2012ರ ಮಧ್ಯಭಾಗದಲ್ಲಿ ರಸ್ತೆಗಿಳಿಯುವ ನಿರೀಕ್ಷೆಯಿದ್ದು ದರ ಸುಮಾರು 4 ಲಕ್ಷ ರುಪಾಯಿ ಆಸುಪಾಸಿನಲ್ಲಿರಲಿದೆ.

ರೆನಾಲ್ಟ್ ಸಾಂಡೆರೊ: ರೆನಾಲ್ಟ್ ಕಂಪನಿಯು ಸಾಂಡೆರೊ ಎಂಬ ಸಣ್ಣಕಾರನ್ನು 2012ರಲ್ಲಿ ಪರಿಚಯಿಸಲು ನಿರ್ಧರಿಸಿದೆ. ಇದರ ದರ ಸುಮಾರು 5 ಲಕ್ಷ ರುಪಾಯಿ ಆಸುಪಾಸಿನಲ್ಲಿರಲಿದೆ. ಈ ಕಾರು ಹ್ಯುಂಡೈ ಐ10 ಮತ್ತು ಫೋರ್ಡ್ ಫಿಗೊ ಕಾರುಗಳಿಗೆ ಪೈಪೋಟಿ ನೀಡಲಿದೆ.

ಬಿಎಂಡಬ್ಲ್ಯು ಮಿನಿ: ಐಷಾರಾಮಿ ಕಾರು ಮಾರುಕಟ್ಟೆಗೆ ಸಣ್ಣಕಾರೊಂದು 2012ರಲ್ಲಿ ಆಗಮಿಸಲಿದೆ. ಬಿಎಂಡಬ್ಲ್ಯು ಮಿನಿ ಕಾರು ಜನವರಿ ತಿಂಗಳಲ್ಲಿಯೇ ಮಾರುಕಟ್ಟೆಗೆ ಬರಲಿದೆ. ಇದು ಸಣ್ಣಕಾರಾದರೂ ದರ ಮಾತ್ರ 25 ಲಕ್ಷ ರು. ಆಸುಪಾಸಿನಲ್ಲಿರಲಿದೆ.

2012ರ ವರುಷದಲ್ಲಿ ಇಷ್ಟು ಸಣ್ಣಕಾರು ರಸ್ತೆಗಿಳಿಯಲಿದೆ. ನಿಮಗೆ ಇಷ್ಟವಾದ ಕಾರನ್ನು ಆಯ್ಕೆ ಮಾಡಿಕೊಳ್ಳಬಹುದು. ಹ್ಯಾಪಿ ಕ್ರಿಸ್ಮಸ್ ಮತ್ತು ಹ್ಯಾಪಿ ನ್ಯೂ ಇಯರ್. (ಕನ್ನಡ ಡ್ರೈವ್ ಸ್ಪಾರ್ಕ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+