ಸ್ವರ್ಗದ ಬಾಗಿಲು ತೆರೆಯುತಿದೆ ; ಇದು ವೈಕುಂಠ ಏಕಾದಶಿ

Vaikunta Ekadashi
ನಾಳೆ (ಜ. 5) ಖರ ನಾಮ ಸಂವತ್ಸರ ಪುಷ್ಯ ಶುದ್ದ ವೈಕುಂಠ ಏಕಾದಶಿ. ಹಿಂದೂ ಪಂಚಾಗದ ಪ್ರಕಾರ ಪುಷ್ಯ ಮಾಸ, ಮಾರ್ಗಶಿರ ಶುಕ್ಲ ಪಕ್ಷದ ಏಕಾದಶಿ ದಿನವನ್ನು "ವೈಕುಂಠ ಏಕಾದಶಿ" ಅಥವಾ "ಮುಕ್ಕೋಟಿ ಏಕಾದಶಿ" ಎಂದು ಆಚರಿಸಲಾಗುತ್ತದೆ. ವೈಕುಂಠದ ಬಾಗಿಲು ಗುರುವಾರ ಸದಾ ತೆರೆದೇ ಇರುತ್ತದೆ. ಈ ದಿನ ಹುಟ್ಟುವುದು ಅಥವಾ ಸಾಯುವುದು ಪುಣ್ಯ ಎಂಬುದು ವಿಷ್ಣು ಭಕ್ತರ ನಂಬಿಕೆ.

ಹುಟ್ಟಿದ ಮೇಲೆ ಸಾಯಲೇ ಬೇಕೆನ್ನುವುದು ವಿಧಿನಿಯಮ, ಹಾಗಾಗಿ ಎಲ್ಲಾ ಧರ್ಮದವರು ಸತ್ತ ಮೇಲೆ ಸ್ವರ್ಗಕ್ಕೇ ಹೋಗಬೇಕೆಂದು ಬಯಸುವುದು ಸಹಜ. ನಾಳೆ ಗುರುವಾರ ಕೈಗೊಳ್ಳಲಾಗುವ ಈ ಪವಿತ್ರ ಉಪವಾಸದಿಂದ ಲಭ್ಯವಾಗುವ ಪುಣ್ಯ ಇನ್ನುಳಿದ 23 ಏಕಾದಶಿ ವ್ರತಾಚರಣೆಗೆ ಸಮ ಎನ್ನುವುದು ನಂಬಿಕೆ. ಹಾಗಾಗಿ ಆಸಕ್ತರು ನಾಳೆ ಫಲವಸ್ತು, ಹಾಲು ಕುಡಿದು ಶಕ್ತರು ಬರೀ ನೀರು ಕುಡಿದು ಉಪವಾಸ ಮಾಡಿ ಎನ್ನುವುದು ನಮ್ಮ ಕಡೆಯಿಂದ ಒಂದು ಸಲಹೆ.

ವೈಕುಂಠ ಏಕಾದಶಿಯ ಈ ಪುಣ್ಯ ಕಾಲದಲ್ಲಿ ದೇಶದೆಲ್ಲೆಡೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತದೆ. ತಿರುಪತಿ ತಿಮ್ಮಪ್ಪ, ಬೆಂಗಳೂರಿನ ದೇವಗಿರಿ, ಜೆ ಪಿ ನಗರದ ವೆಂಕಟೇಶ್ವರ ದೇವಾಲಯ, ಶ್ರೀನಗರದ ವಿಷ್ಮು ಕುಟೀರ, ಕೋಟೆ ವೆಂಕಟೇಶ್ವರ ಸ್ವಾಮಿ ದೇವಾಲಯ, ಇಸ್ಕಾನ್, ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಮತ್ತು ಯೋಗಾ ನರಸಿಂಹ ಸ್ವಾಮಿ, ಶ್ರೀರಂಗ ಪಟ್ಟಣದ ರಂಗನಾಥ ಸ್ವಾಮಿ, ಉಡುಪಿಯ ಶ್ರೀಕೃಷ್ಣ, ಚಿಕ್ಕ ತಿರುಪತಿ ಮುಂತಾದ ಹಲವಾರು ದೇವಾಲಯಗಳಲ್ಲಿ ಬೆಳಗಿನ ಜಾವದಿಂದಲೇ ಪೂಜೆ, ವೈಕುಂಠ ದರ್ಶನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅಧಿಕಾರ ಇಲ್ಲದಿದ್ದರೇನು, ಜೈಲಿಗೆ ಹೋಗಿ ಬಂದರೇನು ಅವನು ಬರೆದ ಹಾಗೆ ನನ್ನ ಜೀವನ ನಡೆಯಲಿ ಎಂದು ಹೇಳಿಕೆ ನೀಡಿರುವ ನಮ್ಮ ಮಾಲೂರು ಕೃಷ್ಣಯ್ಯ ಶೆಟ್ಟಿಯವರು ಭಕ್ತಾದಿಗಳಿಗೆ ಲಾಡು ವಿತರಿಸುವ ಸೇವಾ ಕೈಂಕರ್ಯವನ್ನು ಈ ವರ್ಷ ಕೂಡಾ ಹಮ್ಮಿಕೊಂಡಿದ್ದಾರೆ. ಎಲ್ಲರಿಗೂ ಶ್ರೀಮನ್ನಾರಾಯಣ ಸನ್ಮಂಗಳವನ್ನು ಉಂಟುಮಾಡಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+