Bidadi Township: JMC ಸರ್ವೇಗೆ ಹೋದ ಅಧಿಕಾರಿಗಳ ಮೇಲೆ ದಾಳಿ, ಮಹಿಳೆಯರಿಂದ ಪೊರಕೆ ಏಟು, ಭುಗಿಲೆದ್ದ ಪ್ರತಿಭಟನೆ

ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ಭಾಗವಾದ ಬಿಡದಿಯಲ್ಲಿ ಸರ್ಕಾರದ 'ಟೌನ್‌ಶಿಪ್ ಯೋಜನೆ' ವಿರುದ್ಧ ನಡೆಸಿದ್ದ ರೈತರ ಪ್ರತಿಭಟನೆ ಇಂದು ತೀವ್ರ ಸ್ವರೂಪ ಪಡೆದುಕೊಂಡಿದೆ. ರೈತರು ಭುಗಿಲೆದ್ದಿದ್ದು, ಅಧಿಕಾರಿಗಳ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಪ್ರತಿಭಟನಾನಿರತ ಮಹಿಳೆಯರು ಅಧಿಕಾರಿಗಳಿಗೆ ಪೊರಕೆ ಸೇವೆ ಮಾಡಿದ್ದಾರೆ. ನೋಡ ನೋಡುತ್ತಿದ್ದಂತೆ ಮಹಿಳಾ ರೈತರ ಗುಂಪು ಅಧಿಕಾರಿಗಳ ಕಾರಿನ ಮೇಲೆ ದಾಳಿ ನಡೆಸುತ್ತಿದ್ದಂತೆ ಕೆಲ ಕಾಲ ಬಿಗುಡಾಯಿಸಿದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬಿಡದಿ ಟೌನ್‌ಶಿಪ್ (ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಡೌನ್‌ಶಿಫ್) ಯೋಜನೆಗೆ ಪರ-ವಿರೋಧ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಸರ್ಕಾರ ಮಾತ್ರ ನಿರ್ಧಾರದಿಂದ ಹಿಂದೆ ಸರಿದಿಲಲ್. ಅಲ್ಲದೇ ಇಂದು ಸೋಮವಾರ (ಜುಲೈ 13) ಅಧಿಕಾರಿಗಳು ಜೆಎಂಸಿ ಸರ್ವೇ ಮಾಡಲು ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಸರ್ವೇ ವಿರೋಧಿಸಿ ಮಹಿಳೆಯರು ಬೀದಿಗೆ ಇಳಿದರು. ಕೆಲ ಅಧಿಕಾರಿ, ಸಿಬ್ಬಂದಿಗೆ ಪೊರಕೆಯಿಂದ ಏಟು ಕೊಟ್ಟು, ಸರ್ವೇ ಮಾಡದಂತೆ ಆಗ್ರಹಿಸಿದರು.

Land Survey

ಕಣ್ತಪ್ಪಿಸಿ ಬೇರೆ ಜಾಗದಲ್ಲಿ ಸರ್ವೇ ಯತ್ನ, ದಾಳಿ

ಈ ಸರ್ವೇ ಸಂಬಂಧ ಮಂಡಳಹಳ್ಳಿ ಗ್ರಾಮಸ್ಥರಿಗೆ ನೋಟಿಸ್ ನೀಡಲಾಗಿತ್ತು. ಸಣ್ಣ ರೈತರು ಸರ್ವೇಗೆ ಒಪ್ಪಿಗೆ ನೀಡಿದ್ದರಾದರೂ, ಎಲ್ಲರೂ ಒಪ್ಪಿಗೆ ನೀಡಿರಲಿಲ್ಲ. ಸರ್ವೇ ನಡೆಸದಂತೆ ತಡೆಯಲು ಮಂಡಲಹಳ್ಳಿಯಲ್ಲಿ ರೈತರು ಮುಂದಾದಾಗ, ಪೊಲೀಸರ ಸಹಾಯದಿಂದ ಜನರ ಕಣ್ತಪ್ಪಿಸಿ ಬೇರೆ ಜಾಗದಲ್ಲಿ ಸರ್ವೇಗೆ ಅಧಿಕಾರಿಗಳು ಮುಂದಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು. ಮಹಿಳೆಯರ ಗುಂಪು ಅಧಿಕಾರಿಗಳ ಮೇಲೆ ದಾಳಿ ನಡೆಸಿದರು.

E Swathu:
E Swathu: "ಇ-ಸ್ವತ್ತು 2.0ನಾ, ಇ-ಸಂಕಷ್ಟನಾ? ಇ-ಖಾತಾ ವಿತರಣೆ ವಿಳಂಬ, ಗ್ರಾಮೀಣ ಆಸ್ತಿ ಮಾಲೀಕರ ಸಂಕಷ್ಟ'

ಈ ವೇಳೆ ಪೊಲೀಸರು ಮಹಿಳೆಯರು ಸೇರಿದಂತೆ ಸ್ಥಳಿಯ ಪ್ರತಿಭಟನಾಕಾರರ ತಡೆಯಲು ಯತ್ನಿಸಿದರು. ಅಷ್ಟರದಲ್ಲಿ ಮಹಿಳೆಯರು ಪೊರಕೆ ಹಿಡಿದು ಅಧಿಕಾರಿಗಳ ಕಾರಿನ ಮೇಲೆ ಮುತ್ತಿಗೆ ಹಾಕಿದರು. ಪೊರಕೆಯಿಂದ ಹೊಡೆದು ಅಲ್ಲಿಂದ ಅವರನ್ನು ಓಡಿಸುವ ಯತ್ನ ನಡೆಸಿದರು. ಇನ್ನೂ ಕೆಲವರು ಕಲ್ಲು, ದೊಣ್ಣೆ ಹಿಡಿದು ದಾಳಿ ನಡೆಸಿದ ಪ್ರಸವಂಗವು ನಡೆಯಿತು. ಪ್ರತಿಭಟನಾಕಾರರನ್ನು ಪೊಲೀಸರು ತಡೆಯುವಲ್ಲಿ ಹರಸಾಹಸಪಟ್ಟರು. ಇಂದು ಮಂಡಲಹಳ್ಳಿ ಗ್ರಾಮದಲ್ಲಿ ದೊಡ್ಡ ಹೈಡ್ರಾಮಾವೇ ನಡೆಯಿತು.

ಸಿಎಂ ಸುಳ್ಳು ಹೇಳುತ್ತಿದ್ದಾರೆ!

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ಥಳೀಯರು ಜಾಗ ನೀಡಲು ಒಪ್ಪಿದ್ದಾರೆ ಎಂದು ಹೇಳಿರುವುದು ಸುಳ್ಳು. ಶೇ. 80ರಷ್ಟು ಪರಿಹಾರದ ದಾಖಲಾತಿ ಇದ್ದರೆ ತೋರಿಸಲಿ ಎಂದು ರೈತರೊಬ್ಬರು ಸವಾಲು ಹಾಕಿದರು. ಸರ್ಕಾರ ಯೋಜನೆಯಿಂದ ಹಿಂದೆ ಸರಿಯಬೇಕು. ದುಡ್ಡು ಯಾರಿಗೆಲ್ಲ ಕೊಟ್ಟಿದ್ದಾರೋ ಅವರಿಂದಷ್ಟೇ ಜಮೀನು ಪಡೆಯಲಿ. ಯಾವುದೇ ಕಾರಣಕ್ಕೂ ನಮ್ಮ ಕೃಷಿ ಭೂಮಿ ನೀಡುವುದಿಲ್ಲ. ಇನ್ನೂ ಸರ್ವೇ ಹೆಸರಿನಲ್ಲಿ ಪದೇ ಪದೇ ಬಂದು ತೊಂದರೆ ಕೊಡದಂತೆ ರೈತರು ಆಕ್ರೋಶ ಹೊರ ಹಾಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+