ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದಲ್ಲಿ ಮೊದಲ ಝಿಕಾ ವೈರಸ್ ಪ್ರಕರಣ: ಸೋಂಕಿನ ಬಗ್ಗೆ ತಿಳಿಯಿರಿ

|
Google Oneindia Kannada News

ಲಕ್ನೋ, ಅಕ್ಟೋಬರ್ 25: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಆರಂಭವಾದ ಕಳೆದ ಎರಡು ವರ್ಷಗಳಲ್ಲಿ ಜನರಿಗೆ ರೋಗಾಣುಗಳು ಮತ್ತು ರೋಗಗಳ ಭೀತಿ ಬೆನ್ನು ಬಿಡದ ಭೂತದಂತೆ ಕಾಡುತ್ತಿವೆ. ಈ ವರ್ಷದ ಆರಂಭದ ಹೊತ್ತಿಗೆ ಕೇರಳದಲ್ಲಿ ಝಿಕಾ ವೈರಸ್ ಎಂಬ ಹೊಸ ರೋಗಕ್ಕೆ ಸಂಬಂಧಿಸಿದ 11 ಪ್ರಕರಣಗಳು ವರದಿಯಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಕೇರಳದಲ್ಲಿ ಪತ್ತೆಯಾದ ಅದೇ ಝಿಕಾ ವೈರಸ್ ಸೋಂಕಿನ ಭೀತಿ ನಡುವೆ ಭಾನುವಾರ ಉತ್ತರ ಪ್ರದೇಶದಲ್ಲಿ ಭಾರತೀಯ ವಾಯು ಸೇನಾ ಸಿಬ್ಬಂದಿಯೊಬ್ಬರಲ್ಲಿ ಅದೇ ರೀತಿಯ ಸೋಂಕಿನ ಲಕ್ಷಣಗಳು ವರದಿಯಾಗಿದೆ. ಸದ್ಯಕ್ಕೆ ಐಎಎಫ್ ಅಧಿಕಾರಿಯನ್ನು ಕೊವಿಡ್-19 ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದರ ಜೊತೆಗೆ ಸೋಂಕಿತನೊಂದಿಗೆ ಸಂಪರ್ಕದಲ್ಲಿದ್ದ 22 ಜನರ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ರವಾನಿಸಲಾಗಿದೆ.

 ಪ್ಯಾರಸಿಟಮಲ್‌ನಿಂದ ಝಿಕಾ ಸೋಂಕಿನಿಂದ ಚೇತರಿಕೆ ಸಾಧ್ಯ ಎಂದ ತಜ್ಞ ಪ್ಯಾರಸಿಟಮಲ್‌ನಿಂದ ಝಿಕಾ ಸೋಂಕಿನಿಂದ ಚೇತರಿಕೆ ಸಾಧ್ಯ ಎಂದ ತಜ್ಞ

ಉತ್ತರ ಪ್ರದೇಶದಲ್ಲಿ ನಾಗರಿಕ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಜಿಲ್ಲೆಯಲ್ಲಿ ಅಲರ್ಟ್ ಘೋಷಿಸಿದ್ದಾರೆ. ಇದರ ಜೊತೆಗೆ ಜಿಲ್ಲೆಯಲ್ಲಿ ಪರಿಸ್ಥಿತಿ ಪರಿಶೀಲಿಸುವುದಕ್ಕೆ ವಿಶೇಷ ಅಧಿಕಾರಿಗಳ ತಂಡವನ್ನು ನಿಯೋಜನೆ ಮಾಡಲಾಗಿದೆ. ಝಿಕಾ ವೈರಸ್ ಕೊರೊನಾವೈರಸ್ ಸೋಂಕಿನಷ್ಟು ಅಪಾಯಕಾರಿ ಅಲ್ಲದಿದ್ದರೂ ಸಾರ್ವಜನಿಕರ ವಲಯದಲ್ಲಿ ಕೊಂಚ ಹಾನಿಯುಂಟು ಮಾಡುವುದಂತೂ ನಿಶ್ಚಿತವಾಗಿರುತ್ತದೆ. ಈ ಹಿನ್ನೆಲೆ ಝಿಕಾ ವೈರಸ್ ಕುರಿತು ಸಾರ್ವಜನಿಕರು ತಿಳಿದುಕೊಳ್ಳಲೇಬೇಕಾದ ಕೆಲವು ವಿಷಯಗಳು ಇಲ್ಲಿವೆ ಓದಿ.

ಝಿಕಾ ವೈರಸ್ ಎಂಬುದರ ಅರ್ಥ

ಝಿಕಾ ವೈರಸ್ ಎಂಬುದರ ಅರ್ಥ

ಉತ್ತರ ಪ್ರದೇಶದಲ್ಲಿ ಈಗ ಕಾಣಿಸಿಕೊಂಡಿರುವ ಝಿಕಾ ವೈರಸ್ ಸೋಂಕು ಕೊರೊನಾವೈರಸ್ ಸೋಂಕಿಗೆ ಹೋಲಿಸಿದರೆ ಅಷ್ಟೊಂದು ಅಪಾಯಕಾರಿಯಲ್ಲ. ಕಳೆದ 1947ರಲ್ಲಿ ಮೊದಲ ಬಾರಿಗೆ ಉಗಾಂಡಾದ ಕೋತಿಗಳಲ್ಲಿ ಈ ಝಿಕಾ ವೈರಸ್ ಕಾಣಿಸಿಕೊಂಡಿತ್ತು. ತದನಂತರ 1954ರಲ್ಲಿ ನೈಜೀರಿಯಾದಲ್ಲಿ ಮೊದಲ ಬಾರಿಗೆ ಮನುಷ್ಯನಲ್ಲಿ ಈ ಝಿಕಾ ವೈರಸ್ ಪತ್ತೆಯಾಗಿತ್ತು. ಈ ರೋಗವು ಸಾಮಾನ್ಯವಾಗಿ ಸೋಂಕಿತ ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ. ಆದರೆ ಎಲ್ಲ ಸೊಳ್ಳೆಗಳಲ್ಲಿ ಈ ಝಿಕಾ ವೈರಸ್ ಕಾಣಿಸಿಕೊಳ್ಳುವುದಿಲ್ಲ ಹಾಗೂ ಸೊಳ್ಳೆ ಕಚ್ಚಿದ ಪ್ರತಿಯೊಬ್ಬರಲ್ಲಿ ಈ ಝಿಕಾ ವೈರಸ್ ಅಂಟಿಕೊಳ್ಳುವುದಿಲ್ಲ. ಒಂದು ವೇಳೆ ವ್ಯಕ್ತಿಯೊಬ್ಬನಿಗೆ ಝಿಕಾ ವೈರಸ್ ಸೋಂಕು ಕಾಣಿಸಿಕೊಂಡಿದೆ ಎಂದರೆ ಆತನು ಝಿಕಾ ವೈರಸ್ ಸೋಂಕಿತ ಸೊಳ್ಳೆಯಿಂದ ಕಚ್ಚಲ್ಪಟ್ಟಿರುತ್ತಾರೆ ಅಥವಾ ಸೋಂಕು ಹೆಚ್ಚಾಗಿರುವ ವಲಯದಲ್ಲಿ ಪ್ರಯಾಣಿಸಿರುತ್ತಾರೆ ಎಂದು ತಜ್ಞರು ತಿಳಿಸಿದ್ದಾರೆ.

ಝಿಕಾ ವೈರಸ್ ರೋಗ ಹರಡುವುದು ಹೇಗೆ?

ಝಿಕಾ ವೈರಸ್ ರೋಗ ಹರಡುವುದು ಹೇಗೆ?

ಡೆಂಘೀ ಹಾಗೂ ಚಿಕುನ್ ಗುನ್ಯಾ ರೋಗದ ರೀತಿಯಲ್ಲೇ ಝಿಕಾ ವೈರಸ್ ಕೂಡಾ ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ. ಏಡೆಸ್ ಜೆನಸ್ ಎಂಬ ಸೊಳ್ಳೆ ಕಚ್ಚುವುದರಿಂದ ಈ ಸೋಂಕು ಹರಡುತ್ತದೆ ಎಂದು ತಿಳಿದು ಬಂದಿದೆ. ಬೆಳಗಿನ ಜಾವ ಹಾಗೂ ಸಂಜೆ ವೇಳೆಯಲ್ಲಿ ಈ ಏಡೆಸ್ ಜೆನಸ್ ಎಂಬ ಸೊಳ್ಳೆಗಳು ಹೆಚ್ಚು ಕ್ರೀಯಾಶೀಲವಾಗಿರುತ್ತವೆ. ಈ ಸೊಳ್ಳೆ ಕಚ್ಚುವುದರಿಂದ ಮನುಷ್ಯರಿಗೆ ಝಿಕಾ ವೈರಸ್ ಸೋಂಕು ತಗುಲುತ್ತದೆ ಎಂದು ತಿಳಿದು ಬಂದಿದೆ.

ಝಿಕಾ ವೈರಸ್ ಸೋಂಕಿನ ಲಕ್ಷಣಗಳ ಬಗ್ಗೆ ತಿಳಿಯಿರಿ

ಝಿಕಾ ವೈರಸ್ ಸೋಂಕಿನ ಲಕ್ಷಣಗಳ ಬಗ್ಗೆ ತಿಳಿಯಿರಿ

ಕೊರೊನಾವೈರಸ್ ರೀತಿಯಲ್ಲಿ ಝಿಕಾ ವೈರಸ್ ಜೀವ ತೆಗೆಯುವಷ್ಟು ಅಪಾಯಕಾರಿ ವೈರಸ್ ಅಲ್ಲ ಎಂದು ಹೇಳಲಾಗುತ್ತಿದೆ. ಎರಡರಿಂದ ಏಳು ದಿನಗಳವರೆಗೆ ಈ ರೋಗಕ್ಕೆ ಸಂಬಂಧಿಸಿದ ಹಲವು ಲಕ್ಷಣಗಳು ಗೋಚರಿಸುತ್ತವೆ. ಈ ಸೋಂಕಿನಿಂದ ಸಾವು ಸಂಭವಿಸುವ ಅಪಾಯ ಕಡಿಮೆಯಾಗಿರುತ್ತದೆ. ಹಾಗಿದ್ದಲ್ಲಿ ಝಿಕಾ ವೈರಸ್ ರೋಗದ ಲಕ್ಷಣಗಳು ಹೇಗಿರುತ್ತವೆ ಎಂಬುದರ ಕುರಿತು ತಿಳಿದುಕೊಳ್ಳೋಣ.

* ಜಾಂಡಿಸ್ ಬಗೆಯ ಲಕ್ಷಣಗಳು ಕಾಣಿಸಿಕೊಳ್ಳುವುದು

* ಕಣ್ಣು ಕೆಂಪಗಾಗುವುದು,

* ಜ್ವರ,

* ಗಂಟು ನೋವು,

* ಕೀಲು ಮತ್ತು ಸ್ನಾಯು ನೋವು

* ತಲೆನೋವು,

* ಕೆಂಪು ಕಲೆ ಕಾಣಿಸಿಕೊಳ್ಳುವುದು

ಗರ್ಭಿಣಿಯರ ಪಾಲಿಗೆ ಅಪಾಯಕಾರಿಯೇ ಝಿಕಾ ವೈರಸ್?

ಗರ್ಭಿಣಿಯರ ಪಾಲಿಗೆ ಅಪಾಯಕಾರಿಯೇ ಝಿಕಾ ವೈರಸ್?

ಝಿಕಾ ವೈರಸ್ ಸೋಂಕಿನಿಂದ ಗರ್ಭಿಣಿಯರ ಹೊಟ್ಟೆಯಲ್ಲಿ ಬೆಳೆಯುತ್ತಿರುವರು ಮಗುವಿನಲ್ಲಿ ಜನ್ಮದೋಷ ಮತ್ತು ಇತರ ನರಗಳ ಬೆಳವಣಿಗೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಸೋಂಕು ತಗುಲಿದ ಗರ್ಭಿಣಿಯರಿಗೆ ಜನಿಸುವ ಪ್ರತಿಯೊಂದು ಮಕ್ಕಳಲ್ಲಿ ನರದೌರ್ಬಲ್ಯ ಮತ್ತು ಜನ್ಮದೋಷಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ.

ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಸೂಚನೆ

ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಸೂಚನೆ

ಝಿಕಾ ವೈರಸ್ ಸೋಂಕಿನಿಂದ ಪಾರಾಗುವುದಕ್ಕೆ ಮೊದಲು ಅಪಾಯಕಾರಿ ಪ್ರದೇಶಗಳಿಗೆ ಪ್ರಯಾಣಿಸುವುದನ್ನು ತಪ್ಪಿಸಬೇಕು. ಒಂದು ವೇಳೆ ಪ್ರಯಾಣ ಮಾಡುವ ಅಗತ್ಯವಿದ್ದಲ್ಲಿ ಎಲ್ಲಾ ಸಮಯದಲ್ಲೂ ಆದರ್ಶ ಪ್ರಾಯವಾಗಿ ಸೊಳ್ಳೆ ನಿವಾರಕಗಳನ್ನು ಬಳಸಿ. ಸೋಂಕಿತ ಪಾಲುದಾರರೊಂದಿಗೆ ಲೈಂಗಿಕ ಸಂಪರ್ಕವನ್ನು ತಪ್ಪಿಸಲು ಸಹ ಸಲಹೆ ನೀಡಲಾಗುತ್ತದೆ. ಏಕೆಂದರೆ ಸದ್ಯ ಝಿಕಾ ವೈರಸ್‌ಗೆ ಯಾವುದೇ ಲಸಿಕೆ ಹೊಂದಿಲ್ಲ, ಇದು ಗರ್ಭಿಣಿಯರು ಮತ್ತು ಅವರ ಹುಟ್ಟಲಿರುವ ಮಕ್ಕಳಿಗೆ ಹೆಚ್ಚಿನ ಅಪಾಯವನ್ನು ಉಂಟು ಮಾಡುತ್ತದೆ.

Recommended Video

Chahal ಅವರು ನಿನ್ನೆ ಪಂದ್ಯದಲ್ಲಿ ಇರಬೇಕಿತ್ತು ಎಂದ ಅಭಿಮಾನಿಗಳು | Oneindia Kannada

English summary
Zika Virus First Case Reported in Uttar Pradesh: Centre Team Rushed to Infected Area. Know About Symptoms, Treatment to Disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X