Year Ender 2024: ದಕ್ಷಿಣ ಭಾರತದ ಟಾಪ್ 5 ಫ್ಲಾಪ್ ಸಿನಿಮಾಗಳು
2024ರಲ್ಲಿ ಬಾಲಿವುಡ್‌ನಿಂದ ಹಲವು ಸಿನಿಮಾಗಳು ಬಿಡುಗಡೆಯಾದವು. 'ಕಲ್ಕಿ 2898 ಎಡಿ' ಯಿಂದ 'ಪುಷ್ಪ 2: ದಿ ರೂಲ್' ನಂತಹ ಸೌತ್ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡಿವೆ. ಆದರೆ 2024ರಲ್ಲಿ ಭಾರೀ ಬಜೆಟ್‌ನ ಕೆಲವು ಸೌತ್ ಸಿನಿಮಾಗಳು ಫ್ಲಾಪ್ ಆಗಿವೆ. ಹಾಗಾದರೆ ಆ ಸಿನಿಮಾಗಳು ಯಾವುವು? ಅವು ಯಾರ ಅಭಿನಯದ ಸಿನಿಮಾಗಳು ಎಂದು ಈಗ ತಿಳಿಯೋಣ.
ದೇವರ-ಭಾಗ 1(Devara-Part 1)
ದಕ್ಷಿಣದ ಖ್ಯಾತ ನಟ ಜೂನಿಯರ್ ಎನ್‌ಟಿಆರ್ ಅವರು ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ದೇವರ-ಭಾಗ 1'. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸುದ್ದಿ ಮಾಡುತ್ತೆ ಎಂದು ಪ್ರೇಕ್ಷಕರು ಅಂದುಕೊಂಡಿದ್ದರು. ಆದರೆ 300 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಹೆಚ್ಚು ಗಳಿಸಲು ಸಾಧ್ಯವಾಗಲಿಲ್ಲ. ಈ ಚಿತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ನಟಿ ಜಾನ್ವಿ ಕಪೂರ್ ಕೂಡ ಅಭಿನಯಿಸಿದ್ದಾರೆ.

ಇಂಡಿಯನ್ 2 (Indian 2)
2024ರಲ್ಲಿ ಫ್ಲಾಪ್ ಆದ ಮತ್ತೊಂದು ಸಿನಿಮಾ ಅಂದರೆ ಅದು ದಕ್ಷಿಣದ ಮೆಗಾಸ್ಟಾರ್ ಕಮಲ್ ಹಾಸನ್ ಅಭಿನಯದ 'ಇಂಡಿಯನ್ 2' ಸಿನಿಮಾ. ಈ ಚಿತ್ರ ಅದ್ದೂರಿಯಾಗೇ ತೆರೆ ಕಂಡಿತ್ತು. ಪ್ರೋಮೋ ಮೂಲಕ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಆದರೆ 250 ಕೋಟಿ ವೆಚ್ಚದಲ್ಲಿ ತಯಾರಾದ ಈ ಚಿತ್ರ ಭಾರತದಲ್ಲಿ ಗಳಿಸಿದ್ದು ಕೇವಲ 81.32 ಕೋಟಿ ಮಾತ್ರ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷೆಯಂತೆ ಲಾಭ ಗಳಿಸಲಿಲ್ಲ.
ವೇಟ್ಟೈಯನ್ (Vettaiyan)
ಜೊತೆಗೆ ಸೌತ್ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ವೇಟ್ಟೈಯನ್' ಚಿತ್ರ ಕೂಡ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಫ್ಲಾಪ್ ಆಗಿತ್ತು. ಈ ಚಿತ್ರದ ಬಜೆಟ್ 160 ಕೋಟಿ ರೂಪಾಯಿ. ಆದರೆ ಈ ಚಿತ್ರ ಕೇವಲ 146.81 ಕೋಟಿ ರೂಪಾಯಿ ಮಾತ್ರ ಗಳಿಸಿತು. ನಿರ್ಮಾಪಕರು ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು. ಆದರೆ ಇದು ಹೇಳಿಕೊಳ್ಳುವ ಮಟ್ಟಿಗೆ ಲಾಭ ಗಳಿಸಲು ಸಾಧ್ಯವಾಗಲಿಲ್ಲ.

ಕಂಗುವಾ (Kanguva)
2024ರಲ್ಲಿ ಫ್ಲಾಪ್ ಆದ ಮತ್ತೊಂದು ಸಿನಿಮಾ ಅಂದರೆ ಕಂಗುವಾ. ದಕ್ಷಿಣದ ಖ್ಯಾತ ನಟ ಸೂರ್ಯ ಹಾಗೂ ಬಾಲಿವುಡ್ ನಟ ಬಾಬಿ ಡಿಯೋಲ್ ಅಭಿನಯದ 'ಕಂಗುವ' ಚಿತ್ರ 350 ಕೋಟಿ ಬಜೆಟ್‌ನಲ್ಲಿ ತಯಾರಾಗಿತ್ತು. ಆದರೆ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕೇವಲ 70 ಕೋಟಿ ಬ್ಯುಸಿನೆಸ್ ಮಾಡಿತ್ತು. ಈ ಚಿತ್ರ 2024ರಲ್ಲಿ ಸೂಪರ್ ಫ್ಲಾಪ್ ಎನ್ನಲಾಗುತ್ತದೆ.
ತಂಗಳನ್ (Thangalaan)
ಜೊತೆಗೆ 2024ರಲ್ಲಿ ದಕ್ಷಿಣದ ಖ್ಯಾತ ನಟ ಚಿಯಾನ್ ವಿಕ್ರಮ್ ಅಭಿನಯದ 'ತಂಗಳನ್' ಚಿತ್ರದ ಬಗ್ಗೆ ಜನರಲ್ಲಿ ಸಾಕಷ್ಟು ಕ್ರೇಜ್ ಕಂಡುಬಂದಿತ್ತು. ಚಿತ್ರದ ಬಜೆಟ್ 135 ಕೋಟಿ ರೂಪಾಯಿ. ಆದರೆ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೇವಲ 45 ಕೋಟಿ ಗಳಿಸಿದೆ. ಇದೂ ಕೂಡ 2024ರಲ್ಲಿ ಫ್ಲಾಪ್ ಸಿನಿಮಾವಾಗಿದೆ.












Click it and Unblock the Notifications