2023ರ ಹಿನ್ನೋಟ; ದೇಶವನ್ನೇ ಬೆಚ್ಚಿ ಬೀಳಿಸಿದ ಕೊಲೆ ಪ್ರಕರಣಗಳು
2023ನೇ ವರ್ಷ ಮುಗಿಯಲು ಕೆಲವೇ ದಿನಗಳು ಬಾಕಿ ಇದೆ. ಹೊಸ ವರ್ಷದಲ್ಲಿ ಹೊಸ ಹೊಸ ಕೆಲಸ ಮಾಡುವ ಆಲೋಚನೆ ಈಗಾಗಲೇ ತಯಾರಾಗುತ್ತಿದೆ. ಹೊಸ ವರ್ಷವನ್ನು ಎಲ್ಲಿ ಸ್ವಾಗತಿಸಬೇಕು? ಎಂದು ಸಹ ಜನರು ಪ್ರವಾಸ ಹೋಗುವ ಚಿಂತನೆಯನ್ನು ನಡೆಸಿದ್ದಾರೆ.
ಕಳೆದು ಹೋಗುತ್ತಿರುವ 2023ರಲ್ಲಿ ಹಲವಾರು ಘಟನೆಗಳು ನಡೆದಿವೆ. ಕೆಲವು ಘಟನೆಗಳು ನಮ್ಮ ಅಕ್ಕಪಕ್ಕದಲ್ಲಿಯೇ ನಡೆದಿವೆ. ಇನ್ನೂ ಕೆಲವು ದೂರದಲ್ಲಿ ಎಲ್ಲೋ ನಡೆದರೂ ಸಹ ಮನಸ್ಸಿನಲ್ಲಿ ನೆನಪಾಗಿ ಉಳಿದಿದೆ.

ಈ ವರ್ಷ ಭಾರತದಲ್ಲಿ ನಡೆದ ಕೆಲವು ಹತ್ಯೆ ಪ್ರಕರಣಗಳು ರಾಜ್ಯದ ಗಡಿಗಳನ್ನು ದಾಟಿ ಸುದ್ದಿ ಮಾಡಿವೆ. ಜನರ ಆಕ್ರೋಶಕ್ಕೆ ಕಾರಣವಾಗಿವೆ. ಕೆಲವು ಕೊಲೆ ಪ್ರಕರಣಗಳ ಬಗ್ಗೆ ತಿಳಿಯಲು ಇಂದು ಸಹ ಜನರು ಗೂಗಲ್‌ನಲ್ಲಿ ಹುಡುಕಾಟ ಮಾಡುತ್ತಿದ್ದಾರೆ.
2023ರಲ್ಲಿ ಭಾರತದಲ್ಲಿ ನಡೆದ ಕೆಲವು ಹತ್ಯೆ ಪ್ರಕರಣಗಳ ವಿವರಗಳು ಇಲ್ಲಿವೆ. ಈ ಹತ್ಯೆಗಳು ಅದು ನಡೆದ ಸ್ಥಳದಿಂದಲೂ ಆಚೆಗೆ ಕುತೂಹಲ ಹುಟ್ಟು ಹಾಕಿದ್ದವು. ಅಪರಾಧಿಗಳನ್ನು ಶಿಕ್ಷಿಸಿ ಎಂದು ಜನರು ಆಕ್ರೋಶ ವ್ಯಕ್ತಪಡಿಸುವಷ್ಟು ಭೀಕರವಾಗಿದ್ದವು. ಅಂತಹ ಪ್ರಕರಣಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ....
ಕಂಜ್ವಾಲಾ ಹಿಟ್ ಎಂಡ್ ರನ್; 2023ರ ಆರಂಭದಲ್ಲಿಯೇ ದೇಶವನ್ನು ಬೆಚ್ಚಿಬೀಳಿಸಿದ್ದು ಕಂಜ್ವಾಲಾ ಹಿಟ್ ಎಂಡ್ ರನ್ ಪ್ರಕರಣ. ಮೊದಲು ಇದು ರಸ್ತೆ ಅಪಘಾತ ಎಂದು ಬಿಂಬಿತವಾಗಿತ್ತು. ಬಳಿಕ ಹತ್ಯೆಯ ಭಯಾನಕ ಮಾಹಿತಿ ಬಹಿರಂಗವಾಯಿತು. ಜನವರಿ 1ರಂದು, 20 ವರ್ಷದ ಅಂಜಲಿಗೆ ಕಾರನ್ನು ಡಿಕ್ಕಿ ಹೊಡೆಸಲಾಯಿತು. ಬಳಿಕ ಸುಲ್ತಾನ್‌ಪುರಿಯಿಂದ ಕಂಜ್ವಾಲಾವರೆಗೆ 10-12 ಕಿಲೋಮೀಟರ್ ಎಳೆದೊಯ್ಯಲಾಯಿತು.
ತನಿಖೆಯನ್ನು ಮೂರು ತಿಂಗಳಲ್ಲಿ ಮುಗಿಸಿದ ಪೊಲೀಸರು 800 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದರು. ಏಪ್ರಿಲ್ 13 ರಂದು,ದೆಹಲಿನ ರೋಹಿಣಿ ನ್ಯಾಯಾಲಯವು ಚಾರ್ಜ್‌ಶೀಟ್ ಸ್ವೀಕಾರ ಮಾಡಿತು. ಈ ಪ್ರಕರಣದಲ್ಲಿ 7 ಆರೋಪಿಗಳಿದ್ದಾರೆ. ಮನೋಜ್ ಮಿತ್ತಲ್, ಅಮಿತ್ ಖನ್ನಾ, ಕ್ರಿಶನ್ ಅಲಿಯಾಸ್, ಮಿಥುನ್ ಅಲಿಯಾಸ್ ಅರ್ಜುನ್, ದೀಪಕ್ ಖನ್ನಾ, ಅಂಕುಶ್ ಖನ್ನಾ ಮತ್ತು ಅಶುತೋಷ್ ಭಾರದ್ವಾಜ್. ಆದರೆ ಪ್ರಕರಣ ನಡೆದಾಗ ಅಮಿತ್, ಕ್ರಿಶನ್, ಮಿಥುನ್ ಮತ್ತು ಮನೋಜ್ ಕಾರಿನಲ್ಲಿದ್ದರು.
ನಿಕ್ಕಿ ಯಾದವ್ ಹತ್ಯೆ ಪ್ರಕರಣ; ನವದೆಹಲಿಯಲ್ಲಿ ನಡೆದ 23 ವರ್ಷದ ನಿಕ್ಕಿ ಯಾದವ್ ಹತ್ಯೆ ಪ್ರಕರಣ ರಾಷ್ಟ್ರಮಟ್ಟಲ್ಲಿ ಸದ್ದು ಮಾಡಿತು. 24 ವರ್ಷದ ಸಾಹಿಲ್ ಗೆಹ್ಲೋತ್ ನಿಕ್ಕಿ ಯಾದವ್ ಕೊಂದ ಆರೋಪಿ. ನಿಕ್ಕಿಯನ್ನು ಕೊಂದು ದೇಹವನ್ನು ಫ್ರಿಡ್ಜ್‌ನಲ್ಲಿಟ್ಟು ಆತ ಮತ್ತೊಂದು ಮದುವೆಯಾಗಿದ್ದ. 2020ರಲ್ಲಿಯೇ ನಿಕ್ಕಿ ಯಾದವ್ ಗುಟ್ಟಾಗಿ ಮದುವೆಯಾಗಿದ್ದ ಸಾಹಿಲ್ ಮತ್ತೊಂದು ಮದುವೆಗೆ ಪ್ರಯತ್ನ ನಡೆಸಿದ್ದ. ಇದೇ ವಿಚಾರಕ್ಕೆ ಗಲಾಟೆ ನಡೆದಿತ್ತು. ತನ್ನ ಮತ್ತೊಂದು ಮದುವೆ ದಿನವೇ ಸಾಹಿಲ್ ನಿಕ್ಕಿಯನ್ನು ಕೇಬಲ್ ವೈರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಶವವನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ.
ಉಮೇಶ್ ಪಾಲ್ ಹತ್ಯೆ; 2023ರ ಫೆಬ್ರವರಿ 24ರಂದು ವಕೀಲ ಉಮೇಶ್ ಪಾಲ್ ಹತ್ಯೆ ಮಾಡಲಾಗಿತ್ತು. 2005ರಲ್ಲಿ ನಡೆದ ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್‌ರನ್ನು ಪ್ರಯಾಗ್ ರಾಜ್‌ನಲ್ಲಿರುವ ಮನೆಯ ಮುಂದೆಯೇ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಉಮೇಶ್ ಪಾಲ್ ನೀಡಿದ ದೂರಿನ ಅನ್ವಯ ಅತೀಕ್ ಅಹ್ಮದ್, ಆತನ ಸಹೋದರ ಆಶ್ರಫ್ ಬಂಧಿಸಲಾಗಿತ್ತು. ಕಾರಿನಲ್ಲಿ ಬಂದು ಉಮೇಶ್ ಪಾಲ್ ಹತ್ಯೆ ಮಾಡುವ ದೃಶ್ಯಗಳು ವೈರಲ್ ಆಗಿದ್ದವು.
ಅತೀಕ್ ಅಹ್ಮದ್, ಆಶ್ರಫ್ ಕೊಲೆ; ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿಗಳಾದ ಅತೀಕ್ ಅಹ್ಮದ್ ಮತ್ತು ಆಶ್ರಫ್‌ರನ್ನು ಏಪ್ರಿಲ್ 15, 2023ರಲ್ಲಿ ಪ್ರಯಾಗ್‌ರಾಜ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆಗ ನಡು ರಸ್ತೆಯಲ್ಲಿಯೇ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಪೊಲೀಸರ ಸಮ್ಮುಖದಲ್ಲಿಯೇ ಹತ್ಯೆ ಮಾಡಲಾಗಿತ್ತು. ಹತ್ಯೆಯಾದ ಅತೀಕ್ ಅಹ್ಮದ್ ಶಾಸಕ, ಸಂಸದರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದರು. ಹಲವಾರು ಕೊಲೆ, ಬೆದರಿಕೆ ಪ್ರಕರಣದಲ್ಲಿ ಆರೋಪಿಯಾಗಿದ್ದರು.
ಸರಸ್ವತಿ ವೈದ್ಯ ಹತ್ಯೆ; ಮುಂಬೈನ ನಿವಾಸಿ 36 ವರ್ಷದ ಸರಸ್ವತಿ ವೈದ್ಯರನ್ನು ಲಿವಿಂಗ್ ಟುಗೆದರ್ ಪಾಲುದಾರ ಮನೋಜ್ ಸಾನೆ ಹತ್ಯೆಮಾಡಿದ. ಮೀರಾ ರಸ್ತೆಯಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಶವ ಪತ್ತೆಯಾಗಿತ್ತು. ದೇಹವನ್ನು ತಂಡು ತುಂಡುಗಳಾಗಿ ಕತ್ತರಿಸಿ ಆತ. ಬೇರೆ ಬೇರೆ ಪ್ರದೇಶದಲ್ಲಿ ಎಸೆದಿದ್ದ. ಕೆಲವು ತುಂಡುಗಳನ್ನು ಸುಟ್ಟು ಹಾಕಿದ್ದ. ಈ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು.
ಸನಾ ಖಾನ್ ಹತ್ಯೆ; ನಾಗ್ಪುರದ ಸನಾಖಾನ್‌ರನ್ನು ಪತಿಯೇ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದ ಬಳಿಕ ಶವವನ್ನು ನದಿಗೆ ಎಸೆದಿದ್ದ. ಆಗಸ್ಟ್ 2ರಂದು ಈ ಹತ್ಯೆ ನಡೆದಿತ್ತು. ಆದರೆ ಶವವನ್ನು ಹುಡುಕಲೂ ಇಂದಿಗೂ ಸಹ ಸಾಧ್ಯವಾಗಿಲ್ಲ. ಸನಾಖಾನ್ ಬಿಜೆಪಿ ಅಲ್ಪಸಂಖ್ಯಾತ ಘಟಕದಲ್ಲಿ ಗುರುತಿಸಿಕೊಂಡಿದ್ದರು. ಹಣದ ವಿಚಾರವಾಗಿ ಸನಾ ಮತ್ತು ಆಕೆಯ ಪತಿ ಅಮಿತ್ ನಡುವೆ ಬಹಳ ವರ್ಷಗಳಿಂದ ಮನಸ್ತಾಪವಿತ್ತು.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ












Click it and Unblock the Notifications