World Water Day 2022: ವಿಶ್ವ ಜಲ ದಿನ: ರಕ್ಷಿಸಿ ಜಲ-ಸಂರಕ್ಷಿಸಿ ಜೀವ ಸಂಕುಲ
ಭೂಮಿ ಮೇಲೆ ಸಕಲ ಜೀವರಾಶಿಗಳು ಬದುಕುತ್ತಿರುವುದು ಗಾಳಿ, ಆಹಾರ ಮತ್ತು ನೀರಿನಿಂದ. ಆಹಾರ, ಗಾಳಿ ಒಂದು ಜೀವಿಗೆ ಎಷ್ಟು ಮಖ್ಯವೋ ನೀರು ಕೂಡ ಅಷ್ಟೇ ಮುಖ್ಯವಾಗಿದೆ. ಕೊರೊನಾವೈರಸ್ ಸಂದರ್ಭದಲ್ಲಿ ನಮಗೆ ನೀರು ಮತ್ತು ಅದರ ಸ್ವಚ್ಛತೆ ಬಗ್ಗೆ ಸಾಕಷ್ಟು ಅರಿವಾಗಿದೆ. ನೀರಿನ ಪ್ರಾಮುಖ್ಯತೆಯ ಕುರಿತು ಜನರಿಗೆ ಅರಿವು ಮೂಡಿಸಲು ವಿಶ್ವಸಂಸ್ಥೆಯು 1993 ರಿಂದ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ವಿಶ್ವದಲ್ಲಿ ನೀರಿನ ಕೊರತೆಯ ಬಗ್ಗೆ ಜಾಗೃತಿ ಮೂಡಿಸಲು ಆಚರಿಸುತ್ತಿದೆ.
ಯಾಕೆಂದರೆ ಜಗತ್ತಿನಲ್ಲಿ ಸುರಕ್ಷಿತ ನೀರು ಸಿಗದೆ ಜೀವನವನ್ನು ಉಳಿಸಿಕೊಳ್ಳಬೇಕಾದ ಸುಮಾರು 2 ಬಿಲಿಯನ್ ಜನರಿದ್ದಾರೆ. ನೀರಿಗಾಗಿ ಸುಸ್ಥಿರ ಅಭಿವೃದ್ಧಿ ಗುರಿಯತ್ತ ಕ್ರಮ ಕೈಗೊಳ್ಳುವ ಜನರನ್ನು ಉತ್ತೇಜಿಸಲು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ. 2030 ರ ವೇಳೆಗೆ ಎಲ್ಲರಿಗೂ ನೀರು ಮತ್ತು ನೈರ್ಮಲ್ಯವನ್ನು ಖಚಿತಪಡಿಸುವುದು ಈ ದಿನಾಚರಣೆಯ ಗುರಿಯಾಗಿದೆ.
ನೀರಿನ ಮೌಲ್ಯವು ಅಮೂಲ್ಯವಾದುದು ಎಂಬ ಅಂಶವನ್ನು ನಾವ್ಯಾರು ಅಲ್ಲಗಳೆಯುವಂತಿಲ್ಲ. ದಿನನಿತ್ಯದ ಕೆಲಸಗಳಲ್ಲಿ ಇದರ ಅಗತ್ಯ ಜೀವನದಲ್ಲಿ ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ನಾವು ಈಗ ನೀರನ್ನು ಉಳಿಸಲು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಮುಂದಿನ ಪೀಳಿಗೆಗೆ ಈ ಸಂಪನ್ಮೂಲವನ್ನು ಸಂರಕ್ಷಿಸಲು ನಮಗೆ ಸಾಧ್ಯವಾಗುವುದಿಲ್ಲ.

ಅತಿಯಾದ ಮಾಲಿನ್ಯ ಮತ್ತು ಅಂತರ್ಜಲದ ಅನಗತ್ಯ ವ್ಯರ್ಥ ಪ್ರಪಂಚದಾದ್ಯಂತ ವಿವಿಧ ಸ್ಥಳಗಳಲ್ಲಿ ಶುದ್ಧ ನೀರಿನ ಲಭ್ಯತೆಯನ್ನು ಮತ್ತಷ್ಟು ಕಡಿಮೆ ಮಾಡಿದೆ. ಇದರ ನಡುವೆ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿರುವುದು ಮತ್ತೊಂದು ಪ್ರಮುಖ ಸಮಸ್ಯೆಯಾಗಿದೆ. ಈ ಎಲ್ಲಾ ಅಂಶಗಳು ಆಹಾರ ಸರಪಳಿಯ ಮೇಲೂ ಪರಿಣಾಮ ಬೀರುತ್ತಿವೆ. ಇದರಲ್ಲಿ ಜಲಚರಗಳ ಸಾವಿಗೆ ಪ್ರಮುಖ ಕಾರಣಗಳಲ್ಲಿ ಕಲುಷಿತ ನೀರು ಒಂದು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ.
ನಮ್ಮಲ್ಲಿ ವಿಜ್ಞಾನ ವರ್ಷಗಳಿಂದ ಪ್ರಗತಿ ಹೊಂದಿದ್ದರೂ, ಜಲಮೂಲಗಳಲ್ಲಿನ ಎಲ್ಲಾ ಮಾಲಿನ್ಯಕಾರಕಗಳನ್ನು ತೊಡೆದುಹಾಕಲು ನಮಗೆ ಸಾಧ್ಯವಾಗಲಿಲ್ಲ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವುಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಜನರನ್ನು ಉತ್ತೇಜಿಸಲು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಜಲ ದಿನ: ಥೀಮ್
ಪ್ರಸಕ್ತ ವರ್ಷ 'ಅದೃಶ್ಯ ಅಂತರ್ಜಲವನ್ನು ಸದೃಶ್ಯಗೊಳಿಸುವುದು' ಎಂಬ ಥೀಮ್ (ಪರಿಕಲ್ಪನೆ) ಹೊಂದಲಾಗಿದೆ. ಏಕೆಂದರೆ ಅಂತರ್ಜಲ ನಮ್ಮ ಕಣ್ಣಿಗೆ ಗೋಚರಿಸದಿದ್ದರೂ ಅದರ ಇರುವಿಕೆಯು ಪರಿಸರದ ಮೇಲೆ ಉಂಟುಮಾಡುವ ಸಕಾರಾತ್ಮಕ ಬದಲಾವಣೆಯನ್ನು ಜನರ ಅನುಭವಕ್ಕೆ ತರುವುದು ಥೀಮ್‌ನ ಉದ್ದೇಶ.

ವಿಶ್ವ ಜಲ ದಿನ 2022 ರಂದು ನೀವು ಏನು ಮಾಡಬಹುದು?
* ನೀರಿನ ಸಂರಕ್ಷಣೆಯ ಕುರಿತು ಜಾಗೃತಿಯನ್ನು ಹೆಚ್ಚಿಸಲು, ನಿಮ್ಮ ನೆರೆಹೊರೆಯಲ್ಲಿರುವ ಜನರನ್ನು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಜಲಸಂರಕ್ಷಣಾ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ನೀವು ಕರೆ ನೀಡಬಹುದು.
* ನಿಮ್ಮ ಮನೆಯಲ್ಲಿ ನೀರಿನ ಬಳಕೆಯನ್ನು ನೀವು ಮೇಲ್ವಿಚಾರಣೆ ಮಾಡಬಹುದು ಮತ್ತು ಸಂಪನ್ಮೂಲವನ್ನು ಉಳಿಸುವ ಮಾರ್ಗಗಳನ್ನು ಕಂಡುಹಿಡಿಯಬಹುದು.
* ನೀರನ್ನು ಸಂರಕ್ಷಿಸುವಲ್ಲಿ ಸಹಾಯ ಮಾಡುವ ವಿಧಾನಗಳಿಗೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಬದಲಾಯಿಸುವ ಬಗ್ಗೆ ನೀವು ಜನರಿಗೆ ತಿಳುವಳಿಕೆ ನೀಡಬಹುದು. ಉದಾಹರಣೆಗೆ, ಸ್ನಾನಕ್ಕಾಗಿ ಶವರ್ ಬದಲಿಗೆ ಬಕೆಟ್‌ಗಳನ್ನು ಬಳಸುವುದು.
* ಕೆರೆ, ಬಾವಿ, ಹಳ್ಳ, ನದಿಗಳಲ್ಲಿ ನೀರು ಕಲುಷಿತವಾಗದಂತೆ ನೋಡಿಕೊಳ್ಳುವುದು. ಇದರ ಬಗ್ಗೆ ಎಚ್ಚರಿಕೆ ಮೂಡಿಸುವುದು.
* ಕಂಪನಿಗಳಿಂದ ಕಲುಷಿತ ನೀರುಗಳು ನದಿಗಳಿಗೆ ಹರಿ ಬಿಡುವುದನ್ನು ತಪ್ಪಿಸಲು ಜಾಗೃತಿ ಕಾರ್ಯಕ್ರಮಗಳನ್ನು ಯೋಜಿಸಬಹುದು.
300 ವರ್ಷಗಳ ಇತ್ತೀಚಿನ ಅಂಕಿ ಅಂಶ ಗಮನಿಸಿದರೆ ನೀರಿನ ಬಳಕೆಯ ಪ್ರಮಾಣ ಶೇ.35ರಷ್ಟು ಹೆಚ್ಚಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಾರ್ಷಿಕವಾಗಿ ಸುಮಾರು 650 ಕ್ಯುಬಿಕ್ ಕಿ.ಮೀಟರ್ ನೀರಿನ ಅವಶ್ಯಕತೆಯಿದ್ದು, ಶೇ. 60ರಷ್ಟು ಕೃಷಿಗೆ, ಶೇ. 30ರಷ್ಟು ಕೈಗಾರಿಕೆ ಬಳಕೆಗೆ, ಶೇ.10ರಷ್ಟು ಇತರ ಬಳಕೆಗೆ ಉಪಯೋಗವಾಗುತ್ತಿದೆ.
ಭಾರತದಲ್ಲಿ ಎಷ್ಟು ನೀರು ಲಭ್ಯವಿದೆ?
ಭಾರತದ ಭೌಗೋಳಿಕ ಪ್ರದೇಶದ ಸುಮಾರು 33 ಲಕ್ಷ ಚದರ ಕಿ.ಮೀ.ನಲ್ಲಿ ವಿಶ್ವದ ಜನಸಂಖ್ಯೆಯ ಸುಮಾರು 16% ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಆದರೆ ಇಲ್ಲಿ ಕೇವಲ 4% ಸಿಹಿನೀರಿನ ಮೂಲಗಳು ಲಭ್ಯವಿದೆ. ಜೊತೆಗೆ ಸಿಹಿನೀರಿನ ಕಡಿಮೆ ಲಭ್ಯತೆಯ ಜೊತೆಗೆ, ಲಭ್ಯವಿರುವ ನೀರಿನ ಮೂಲಗಳಲ್ಲಿ ಭಾರಿ ವ್ಯತ್ಯಾಸವಿದೆ.
ದೇಶದಲ್ಲಿ ಅಂತರ್ಜಲದ ವಿಷಯದಲ್ಲಿ ಏನು ಸಮಸ್ಯೆ?
ದೇಶದಲ್ಲಿ ಲಭ್ಯವಿರುವ ಅಂತರ್ಜಲದ 70% ಇಂಡೋ-ಗಂಗಾ-ಬ್ರಹ್ಮಪುತ್ರ ಬಯಲು ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತದೆ. ಇದು ದೇಶದ ಭೌಗೋಳಿಕ ಪ್ರದೇಶದ 30% ರಷ್ಟು ಮಾತ್ರ ಕಂಡು ಬರುತ್ತದೆ. ದೇಶದಲ್ಲಿ ಹೆಚ್ಚಿನ ಅಂತರ್ಜಲ ಲಭ್ಯತೆಯು ದೇಶದ ವಾಯುವ್ಯ ಭಾಗದಲ್ಲಿದೆ. ಇದು ಪಂಜಾಬ್, ಹರಿಯಾಣ, ದೆಹಲಿ ಮತ್ತು ಪಶ್ಚಿಮ ಉತ್ತರ ಪ್ರದೇಶದ ಭಾಗಗಳನ್ನು ಒಳಗೊಂಡಿದೆ. ಇಲ್ಲಿ ಸಂಪನ್ಮೂಲಗಳಿವೆ. ಆದರೆ ಅವುಗಳ ವಿವೇಚನೆಯಿಲ್ಲದ ಹೊರತೆಗೆಯುವಿಕೆಯಿಂದಾಗಿ ಅಂತರ್ಜಲ ಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿಕೆಯಾಗುತ್ತಿದೆ.
ಆದರೆ ದೇಶದ ಪಶ್ಚಿಮ ಭಾಗದ ಸಮಸ್ಯೆ ವಿಭಿನ್ನವಾಗಿದೆ. ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳ ಅನೇಕ ಭಾಗಗಳಲ್ಲಿ ಕಡಿಮೆ ಮಳೆಯಿಂದಾಗಿ ಅಂತರ್ಜಲ ಮಟ್ಟ ಮರುಪೂರಣಗೊಳ್ಳುತ್ತಿಲ್ಲ. ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿನ ಭೌಗೋಳಿಕ ಪರಿಸ್ಥಿತಿಗಳಿಂದಾಗಿ ಅಂತರ್ಜಲವು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲ.
ಅಂತರ್ಜಲ ಪರಿಸ್ಥಿತಿ ಚಿಂತಾಜನಕವಾಗಿರುವ ರಾಜ್ಯಗಳು
ಇಡೀ ದೇಶದಲ್ಲಿ ಸುಮಾರು 64%ರಷ್ಟು ಪ್ರದೇಶದಲ್ಲಿ ಅಂತರ್ಜಲ ಸ್ಥಿತಿ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಆದರೆ ದೇಶದ ಹಲವು ರಾಜ್ಯಗಳಲ್ಲಿ ಅಂತರ್ಜಲ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ.
ಇವುಗಳಲ್ಲಿ ದೆಹಲಿ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ಸೇರಿವೆ. ದೇಶದ ರಾಜಧಾನಿ ದೆಹಲಿಯ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು, ಶೇ.8ರಷ್ಟು ಅಂತರ್ಜಲ ಮಾತ್ರ ಸುರಕ್ಷಿತ ಮಟ್ಟದಲ್ಲಿದೆ. ಪಂಜಾಬ್, ರಾಜಸ್ಥಾನ ಮತ್ತು ಹರಿಯಾಣದಲ್ಲಿ ಸುರಕ್ಷಿತ ಪ್ರದೇಶಗಳ ಶೇಕಡಾವಾರು ಪ್ರಮಾಣವು ಕ್ರಮವಾಗಿ 11.3%, ರಾಜಸ್ಥಾನ 12.54% ಮತ್ತು ಹರಿಯಾಣ 21.28 ಪ್ರತಿಶತದಷ್ಟಿದೆ. ಅಂತರ್ಜಲ ಮಟ್ಟ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇರುವ ಕೆಲವು ರಾಜ್ಯಗಳಿವೆ. ಈ ರಾಜ್ಯಗಳಲ್ಲಿ ತಮಿಳುನಾಡು, ತೆಲಂಗಾಣ ಮತ್ತು ಕರ್ನಾಟಕ ಸೇರಿವೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications