ವಿಶ್ವ ಹಿರಿಯ ನಾಗರಿಕರ ದಿನ - ವೃದ್ಧರು ನಿರುಪಯುಕ್ತರಲ್ಲ, ನಮ್ಮ ಅಮೂಲ್ಯ ಆಸ್ತಿ
ಆಗಸ್ಟ್ 21, ವಿಶ್ವ ಹಿರಿಯ ನಾಗರಿಕರ ದಿನವಾಗಿ ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಹಿರಿಯ ನಾಗರಿಕರು ಒಂದು ತಲೆಮಾರಿನ ಹಿಂದಿನವರೆಗೂ ನಮ್ಮ ಕುಟುಂಬಗಳ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ನೊಗ ಹೊತ್ತವರು. ದುಡಿಯುವ ಶಕ್ತಿ ಕುಂಠಿತಗೊಂಡರೂ ಅವರು ಯಾವತ್ತಿದ್ದರೂ ದೇಶದ ಆಸ್ತಿ. ಅವರಿಗಾಗಿ ಒಂದು ದಿನವನ್ನು ಮುಡಿಪಾಗಿಟ್ಟು ಆಚರಿಸುವುದು ಹೊಸ ತಲೆಮಾರಿನವರ ಭಾಗ್ಯ ಮತ್ತು ಕರ್ತವ್ಯ.
ಇಂದಿನ ವೇಗದ ಜೀವನ, ಅಥವಾ ಹಾಗೆ ವೇಗವಾಗಿ ಸಾಗುತ್ತಿದ್ದೇವೆಂಬ ಭ್ರಮೆಯಲ್ಲಿ ನಡೆಯುತ್ತಿರುವ ಈ ಲೋಕದಲ್ಲಿ ಮುಮ್ಮಲ ಮರುತ್ತಿರುವುದು ಹೆಚ್ಚಾಗಿ ಹಿರಿಯ ಜೀವಗಳೇ. ಯುವಜನರು ಸಂಪಾದನೆಯ ಬೇಟೆಗೆ ಬಿದ್ದು ಊರು ತೊರೆದು ಹೋಗುವ ಅಥವಾ ಸಂಗಾತಿಯ ಮಾತಿಗೆ ಕಟ್ಟುಬಿದ್ದು ಕುಟುಂಬ ತೊರದು ಹೋಗುವ ಪ್ರವೃತ್ತಿ ಅಥವಾ ಪರಿಸ್ಥಿತಿ ಹೆಚ್ಚುತ್ತಿದೆ. ಇದರಿಂದ ಬಾಧಿತವಾಗಿರುವ ವೃದ್ಧರ ಗೋಳನ್ನು ವಿವರಿಸುವುದು ಕಷ್ಟಸಾಧ್ಯ.
ನಮ್ಮ ಬದುಕಿಗೆ ದಾರಿ ಮಾಡಿಕೊಟ್ಟ ಹಿರಿಯ ನಾಗರಿಕರ ಕೊನೆಗಾಲದ ಬದುಕನ್ನು ಹಸನುಗೊಳಿಸುವುದು ಪ್ರತಿಯೊಬ್ಬ ಯುವಜನರ ಕರ್ತವ್ಯ. ಆಗಸ್ಟ್ ೨೧ರ ಈ ದಿನವನ್ನು ಹಿರಿಯ ನಾಗರಿಕರ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಅರಿವು ಮೂಡಿಸುವ ಕೆಲಸ ಆಗಬೇಕು.

ಹಿರಿಯ ನಾಗರಿಕರ ದಿನ ಇತಿಹಾಸ
ಕಳೆದ 32 ವರ್ಷಗಳಿಂದಲೂ ವಿಶ್ವ ಹಿರಿಯ ನಾಗರಿಕರ ದಿನ ಆಚರಿಸಿಕೊಂಡು ಬರಲಾಗುತ್ತಿದೆ. 1991ರಲ್ಲಿ ಈ ದಿನದ ಘೋಷಣೆ ಮಾಡಲಾಯಿತು. ವಿಶ್ವ ಹಿರಿಯ ನಾಗರಿಕರ ದಿನ ಅಸ್ತಿತ್ವಕ್ಕೆ ಬರಲು ಕಾರಣವಾಗಿದ್ದು ಅಮೆರಿಕ ಮಾಜಿ ಅಧ್ಯಕ್ಷ ರೊನಾಲ್ಡ್ ರೀಗನ್. 1988 ಆಗಸ್ಟ್ 19ರಂದು ಅವರು ಘೋಷಣೆಗೆ ಸಹಿ ಹಾಕಿದರು. 1990ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದಲ್ಲಿ ಆಗಸ್ಟ್ 21ರ ದಿನವನ್ನು ವಿಶ್ವ ಹಿರಿಯ ನಾಗರಿಕರ ದಿನ ಎಂದು ಘೋಷಿಸಿತು.
ರೊನಾಲ್ಡ್ ರೀಗನ್ ಅವರು ಹಿರಿಯ ನಾಗರಿಕ ಸಾಧನೆಗಳನ್ನು ಪ್ರಶಂಸಿಸುತ್ತಾ, ಅವರನ್ನು ಗೌರವಿಸುವುದು ಎಷ್ಟು ಮುಖ್ಯ ಎಂಬ ವಿಚಾರವನ್ನು ತಮ್ಮ ಘೋಷಣೆಯಲ್ಲಿ ಎತ್ತಿತೋರಿಸಿದ್ದರು. ವಯೋವೃದ್ಧರಿಗೆ ನಾವು ಎಷ್ಟು ಋಣಿಯಾಗಿರಬೇಕು, ಸರಕಾರ ಈ ಹಿರಿಯ ಜೀವಗಳು ನೆಮ್ಮದಿಯಿಂದ ಮತ್ತು ಗೌರವದಿಂದ ಬದುಕಲು ಸಾಧ್ಯವಾಗುವಂತೆ ಹೇಗೆ ಮಾಡಬೇಕು ಎಂಬುದನ್ನು ರೇಗನ್ ಹೇಳಿದ್ದರು.

ಹಿರಿಯ ನಾಗರಿಕರ ಮಹತ್ವ
ವಿಶ್ವಸಂಸ್ಥೆ ವರದಿಯೊಂದರ ಪ್ರಕಾರ 2050ರಷ್ಟರಲ್ಲಿ ವಿಶ್ವಾದ್ಯಂತ ಹಿರಿಯ ನಾಗರಿಕ ಸಂಖ್ಯೆ 150 ಕೋಟಿ ಆಗಬಹುದು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ವೃದ್ಧರು ಇರುವುದರಿಂದ ಅವರ ಮೂಲಭೂತ ಅಗತ್ಯಗಳಿಗೆ ಅನುಕೂಲ ಮಾಡಿಕೊಡುವಂಥ ವ್ಯವಸ್ಥೆಯನ್ನು ನಿರ್ಮಿಸುವುದು ಅತ್ಯಗತ್ಯವಾಗಿದೆ.
ಯಾಕೆಂದರೆ ಎಲ್ಲಾ ವೃದ್ಧರೂ ಕೂಡ ತಮ್ಮ ಕೊನೆಗಾಲದಲ್ಲಿ ನೆಮ್ಮದಿಯಿಂದ ಇರುತ್ತಾರೆಂದು ಹೇಳಲು ಸಾಧ್ಯವಿಲ್ಲ. ಕೆಲವರಿಗೆ ಅವರ ಮಕ್ಕಳು, ಮೊಮ್ಮಕ್ಕಳ ಆಸರೆ ಸಿಗಬಹುದು. ಈ ಅದೃಷ್ಟ ಎಲ್ಲರಿಗೂ ಇರುವುದಿಲ್ಲ. ತಮ್ಮ ಮಕ್ಕಳಿಗಾಗಿ ಇಡೀ ಜೀವಮಾನ ದುಡಿದು, ಉಳಿತಾಯದ ಹಣ ಇಲ್ಲದೇ ವೃದ್ಧಾಪ್ಯಕ್ಕೆ ಕಾಲಿಟ್ಟವರೇ ಬಹುತೇಕರು. ಹಣಕಾಸು ಸಮಸ್ಯೆ ಮಾತ್ರವಲ್ಲ ವೃದ್ಧಾಪ್ಯದಲ್ಲಿ ಆರೋಗ್ಯ ಸಮಸ್ಯೆಯೂ ಬಹಳವಾಗಿ ಕಾಡುತ್ತದೆ. ಜೊತೆಗೆ, ದೈಹಿಕ ಮತ್ತು ಮಾನಸಿಕ ದೃಢತೆ ಕಳೆದುಕೊಂಡ ವೃದ್ಧರು ಬಹಳ ಸುಲಭವಾಗಿ ದೌರ್ಜನ್ಯಕ್ಕೆ ತುತ್ತಾಗುತ್ತಾರೆ.
ಈ ಹಿನ್ನೆಲೆಯಲ್ಲಿ ಹಿರಿಯ ಜೀವಗಳಿಗೆ ಭದ್ರತೆ ಒದಗಿಸುವ ಬಲಿಷ್ಠ ವ್ಯವಸ್ಥೆ ನಿರ್ಮಾಣವಾಗಬೇಕು.

ಆಚರಣೆ ಹೇಗೆ?
ನಮಗಾಗಿ ತಮ್ಮಿಡೀ ಜೀವನ ಮೀಸಲಿಟ್ಟ ವೃದ್ಧರಿಗೆ ಪ್ರೀತಿ, ಗೌರವ, ಕಾಳಜಿ ತೋರುವುದು ಎಲ್ಲರ ಕರ್ತವ್ಯ. ಹಿರಿಯ ನಾಗರಿಕರ ದಿನವಾದ ಇಂದು ನಾವು ವೃದ್ಧರ ಜೊತೆ ಸೆಲ್ಫಿ ತೆಗೆದುಕೊಂಡು ಸೋಷಿಯಲ್ ಮೀಡಿಯಾಗೆ ಹಾಕಿಕೊಳ್ಳುವುದಕ್ಕೆ ಸೀಮಿತವಾದರೆ ಅರ್ಥ ಇಲ್ಲ.
ನೀವು ವರ್ಷದ 365 ದಿನವೂ ನಿಮ್ಮ ಕುಟುಂಬದ ಹಿರಿಯ ಜೀವಗಳ ಜೊತೆ ಒಡನಾಡುತ್ತಿದ್ದೀರೆಂದರೆ ಅದು ನಿಮ್ಮ ಸೌಭಾಗ್ಯ. ಈಗಿನ ಜಾಗತಿಕತೆಯ ದಿನಗಳಲ್ಲಿ ಅದು ಕಷ್ಟ. ಈ ಒಂದು ದಿನವನ್ನು ಇಡಿಯಾಗಿ ನಿಮ್ಮ ಅಜ್ಜ ಅಜ್ಜಿ, ಅಪ್ಪ ಅಮ್ಮನ ಜೊತೆ ಕಳೆಯಿರಿ. ಅವರಿಗೆ ಖುಷಿ ಕೊಡುವ, ನೆಮ್ಮದಿ ತರುವ ಕೆಲಸವನ್ನು ಮಾಡಿಕೊಡಿ. ಅವರ ಮಾತನ್ನು ಆಲಿಸಿ. ಅವರಿಗೆ ಒಂದು ನೋಟಿನ ಕಂತೆ ಕೊಡುವುದಕ್ಕಿಂತ ಈ ಕೆಲಸಗಳು ಹೆಚ್ಚು ಅರ್ಥಪೂರ್ಣ.
ನಮ್ಮ ಪ್ರದೇಶದ ಸುತ್ತಮುತ್ತ ಅನೇಕ ವೃದ್ಧಾಶ್ರಮಗಳಿಗೆ. ಅಲ್ಲಿಗೆ ಹೋಗಿ ಅಲ್ಲಿನ ವೃದ್ಧರನ್ನು ಭೇಟಿಯಾಗಿ ಕಷ್ಟಸುಖ ಕೇಳಿ. ವೃದ್ಧಾಶ್ರಮಗಳಿಗೆ ದೇಣಿಗೆ ಕೊಡುವ ಪ್ರವೃತ್ತಿ ಬೆಳೆಸಿಕೊಳ್ಳಿ.

ಸರಕಾರದ ಸೌಲಭ್ಯ ತಲುಪಿಸಿ
ನಮ್ಮ ಸರಕಾರಗಳು ವೃದ್ಧರಿಗೆಂದು ಹಲವು ಸೌಲಭ್ಯಗಳನ್ನು ಒದಗಿಸುತ್ತದೆ. ಅನೇಕ ಹಿರಿಯ ನಾಗರಿಕರಿಗೆ ಈ ಯೋಜನೆಗಳು ಬೇರೆ ಬೇರೆ ಕಾರಣಕ್ಕೆ ತಲುಪದೇ ಹೋಗಿರಬಹುದು. ನಿಮಗೆ ಇಂಥ ಪ್ರಕರಣಗಳು ಗಮನಕ್ಕೆ ಬಂದರೆ ಅವರಿಗೆ ನೆರವಾಗುವ ಪ್ರಯತ್ನ ಮಾಡಿ. ಹಿರಿಯ ನಾಗರಿಕರ ಕಾರ್ಡ್ ಮಾಡಿಸಿಕೊಡುವುದು, ಪಿಂಚಣಿ ಮಾಡಿಸಿಕೊಡುವುದು ಇತ್ಯಾದಿ ಕಾರ್ಯಗಳಲ್ಲಿ ನೆರವಾಗಿ.
ನಿಮ್ಮ ಇಂಥ ಈ ಸಹಾಯವು ಆ ವೃದ್ಧರಿಗೆ ದೊಡ್ಡ ಉಪಕಾರವಾಗಬಹುದು. ವಿಶ್ವ ಹಿರಿಯ ನಾಗರಿಕರ ದಿನ ಆಚರಣೆಗೂ ಒಂದು ಅರ್ಥ ಸಿಗಬಹುದು.
(ಒನ್ಇಂಡಿಯಾ ಸುದ್ದಿ)
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications