World Samosa Day 2023: ತಿಂದು ನೋಡು ಸಮೋಸಾ, ರುಚಿಯಲ್ಲಿ ಆಗದು ಮೋಸ

ಸೆಪ್ಟೆಂಬರ್ 5 ವಿಶೇಷವಾದ ದಿನ ಯಾಕೆ ಅಂದರೆ ಥಟ್ ಅಂತ ನಾವೆಲ್ಲಾ ಹೇಳೋದು ಶಿಕ್ಷಕರ ದಿನಾಚರಣೆ ಅಂತ. ಆದರೆ ಈ ದಿನ ಮತ್ತೊಂದು ವಿಶೇಷತೆ ಇದೆ. ಈ ಬಗ್ಗೆ ಬಹುತೇಕ ಜನರಿಗೆ ತಿಳಿದೇ ಇಲ್ಲ. ಅದೇನೆಂದರೆ ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ವಿಶ್ವ ಸಮೋಸಾ ದಿನವನ್ನು ಆಚರಿಸಲಾಗುತ್ತದೆ.

ಆಲೂಗಡ್ಡೆ, ಈರುಳ್ಳಿ, ಬಟಾಣಿ ಮತ್ತು ಮಸಾಲೆಗಳಂತಹ ವಿವಿಧ ಖಾರದ ಪದಾರ್ಥಗಳಿಂದ ತುಂಬಿದ ಈ ಸಮೋಸ ಪ್ರಪಂಚದಾದ್ಯಂತ ಜನಪ್ರಿಯ ಖಾದ್ಯ. ಇದು ರುಚಿಯಾಗಿರುವುದು ಮಾತ್ರವಲ್ಲದೆ ಆಯ್ಕೆಗನುಗುಣವಾಗಿ ವಿವಿಧ ಸ್ಟಫ್‌ನೊಂದಿಗೆ ತಯಾರಿಸಲಾಗುತ್ತದೆ. ಹಾಗಾದರೆ ಸಮೋಸಾ ನಮ್ಮ ದೇಶದಲ್ಲಿ ಪರಿಚಯವಾಗಿದ್ದು ಯಾವಾಗ? ಎಷ್ಟು ಬಗೆಯ ಸಮೋಸಗಳಿವೆ? ಸಮೋಸಾದ ಬಗ್ಗೆ ಆಸಕ್ತಿದಾಯಕ ಸಂಗತಿಗಳ ಬಗ್ಗೆ ತಿಳಿಯೋಣ.

World Samosa Day 2023: Heres the history, facts to know and the recipe

ವಿಶ್ವ ಸಮೋಸಾ ದಿನ: ಇತಿಹಾಸ ಮತ್ತು ಮಹತ್ವ

ಸಮೋಸಾಗಳು ಮಧ್ಯಪ್ರಾಚ್ಯದಲ್ಲಿ ಹುಟ್ಟಿಕೊಂಡಿವೆ. ಬಹುಶಃ 10 ನೇ ಶತಮಾನದಷ್ಟು ಹಿಂದೆಯೇ ಸಮೋಸ ಪರಿಚಯವಾಗಿತ್ತು. 13ನೇ ಅಥವಾ 14ನೇ ಶತಮಾನದಲ್ಲಿ ವ್ಯಾಪಾರಿಗಳು ಭಾರತಕ್ಕೆ ಪರಿಚಯಿಸಿದರು. ಬಳಿಕ ಇದರ ರುಚಿಯಿಂದಾಗಿ ಸಮೋಸಾ ಅನೇಕ ದೇಶಗಳಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ತ್ರಿಕೋನ ಆಕಾರದಲ್ಲಿ ತಯಾರಿಸುವ ಸಮೋಸಾ ವಿಶೇಷವಾಗಿ ಭಾರತದಲ್ಲಿ ತುಂಬಾ ಇಷ್ಟಪಟ್ಟು ತಿನ್ನುವ ಖಾದ್ಯಗಳಲ್ಲಿ ಒಂದಾಗಿದೆ.

ವಿಶ್ವ ಸಮೋಸಾ ದಿನ 2023: 5 ಬಗೆಯ ಸಮೋಸಾ ಪಾಕವಿಧಾನಗಳು

ಚಿಕನ್ ಸಮೋಸ

ಇದು ಕ್ಲಾಸಿಕ್ ಸಮೋಸಾ ರೆಸಿಪಿಯಾಗಿದ್ದು ಇದನ್ನು ರುಬ್ಬಿದ ಚಿಕನ್, ಈರುಳ್ಳಿ, ಬಟಾಣಿ ಮತ್ತು ಮಸಾಲೆಗಳೊಂದಿಗೆ ತಯಾರಿಸಲಾಗುತ್ತದೆ. ಮೈದಾ ಅಥವಾ ಗೋಧಿ ಹಿಟ್ಟಿನ ಎಲೆಯಲ್ಲಿ ಇದನ್ನು ತುಂಬಿ ತ್ರಿಕೋನ ಆಕಾರದಲ್ಲಿ ಮಡಚಿ ಗೋಲ್ಡನ್ ಬ್ರೌನ್ ಬರುವವರೆಗೆ ಹುರಿಯಲಾಗುತ್ತದೆ.

ಆಲೂಗಡ್ಡೆ ಸಮೋಸಾ

ಇದು ಆಲೂಗಡ್ಡೆ, ಈರುಳ್ಳಿ, ಬಟಾಣಿ ಮತ್ತು ಮಸಾಲೆಗಳೊಂದಿಗೆ ತಯಾರಿಸಲಾದ ಮತ್ತೊಂದು ಜನಪ್ರಿಯ ಸಮೋಸಾ ಪಾಕವಿಧಾನವಾಗಿದೆ. ಇದನೆಲ್ಲಾ ಸ್ಟಫ್ ಮಾಡಿ ಡೀಪ್ ಫ್ರೈ ಮಾಡಬೇಕು.

World Samosa Day 2023: Heres the history, facts to know and the recipe


ತರಕಾರಿ ಸಮೋಸ

ಇದು ಸಸ್ಯಾಹಾರಿ ಸಮೋಸಾ ಪಾಕವಿಧಾನವಾಗಿದ್ದು, ಕ್ಯಾರೆಟ್, ಬೀನ್ಸ್ ಮತ್ತು ಹೂಕೋಸುಗಳಂತಹ ವಿವಿಧ ತರಕಾರಿಗಳೊಂದಿಗೆ ತಯಾರಿಸಲಾಗುತ್ತದೆ. ಇದನೆಲ್ಲಾ ಸ್ಟಫ್ ಮಾಡಿ ಡೀಪ್ ಫ್ರೈ ಮಾಡಬೇಕು.

ದಾಲ್ ಸಮೋಸ

ಇದು ಲೆಂಟಿಲ್ ಸಮೋಸಾ ರೆಸಿಪಿಯಾಗಿದ್ದು ಇದನ್ನು ಬೇಳೆ, ಈರುಳ್ಳಿ ಮತ್ತು ಮಸಾಲೆಗಳೊಂದಿಗೆ ತಯಾರಿಸಲಾಗುತ್ತದೆ. ಮೈದಾ ಅಥವಾ ಗೋಧಿ ಹಿಟ್ಟಿನ ಎಲೆಯಲ್ಲಿ ಇದನ್ನು ತುಂಬಿ ತ್ರಿಕೋನ ಆಕಾರದಲ್ಲಿ ಮಡಚಿ ಗೋಲ್ಡನ್ ಬ್ರೌನ್ ಬರುವವರೆಗೆ ಹುರಿಯಲಾಗುತ್ತದೆ.

ಪಾಲಕ್ ಸಮೋಸ

ಇದು ಪಾಲಕ್ ಸಮೋಸಾ ರೆಸಿಪಿಯಾಗಿದ್ದು ಇದನ್ನು ಪಾಲಕ್, ಈರುಳ್ಳಿ ಮತ್ತು ಮಸಾಲೆಗಳೊಂದಿಗೆ ತಯಾರಿಸಲಾಗುತ್ತದೆ.

World Samosa Day 2023: Heres the history, facts to know and the recipe

ಸಮೋಸಾದ ಬಗ್ಗೆ ಆಸಕ್ತಿದಾಯಕ ಸಂಗತಿಗಳು

ತಿಂಡಿ ಅಥವಾ ಊಟ

ಅನೇಕ ದೇಶಗಳಲ್ಲಿ ಸಮೋಸಗಳನ್ನು ಬೆಳಗಿನ ತಿಂಡಿಯಾಗಿ ಅಥವಾ ಸಂಜೆ ಹೊತ್ತು ಸ್ನ್ಯಾಕ್ಸ್ ಆಹಾರವಾಗಿ ಆನಂದಿಸಲಾಗುತ್ತದೆ. ಭಾರತದ ಕೆಲವು ಪ್ರದೇಶಗಳಲ್ಲಿ ವಿವಿಧ ಬಗೆಯ ಸಮೋಸಗಳನ್ನು ಊಟಕ್ಕೆ ಬಡಿಸಲಾಗುತ್ತದೆ.

ಹುರಿದ ಅಥವಾ ಬೇಯಿಸಿದ

ಸಾಂಪ್ರದಾಯಿಕ ಸಮೋಸಾಗಳನ್ನು ಡೀಪ್-ಫ್ರೈಡ್ ಮಾಡಲಾಗುತ್ತದೆ. ಇವುಗಳನ್ನು ವಿವಿಧ ವಿನ್ಯಾಸದಲ್ಲಿ ಸಮೋಸ ಮಾಡಲಾಗುತ್ತದೆ. ಇನ್ನೂ ಕೆಲವೆಡೆ ಬೇಯಿಸಲಾಗುತ್ತದೆ.

ವೈವಿಧ್ಯಮಯ ಪದಾರ್ಥಗಳು

ಸಮೋಸಾದಲ್ಲಿ ವಿವಿಧ ಸಮೋಸಾಗಳು ಲಭ್ಯವಿದೆ. ಗ್ರಾಹಕರು ಆಯ್ಕೆ ಅನುಸಾರ ಸೇವಿಸಬಹುದು. ಸಮೋಸಾಗಳಲ್ಲಿ ಆಲೂಗಡ್ಡೆ ಮತ್ತು ಬಟಾಣಿಗಳು ಸಾಮಾನ್ಯವಾಗಿ ಸ್ಟಪ್ ಮಾಡಲಾಗುತ್ತದೆ. ಇದರ ಹೊರತಾಗಿ ಪಾಲಕ್, ಪನೀರ್, ಚಿಕನ್, ಗೋಮಾಂಸ ಮತ್ತು ಸಮುದ್ರಾಹಾರ ಸೇರಿದಂತೆ ಬಗೆ ಬಗೆಯ ಪದಾರ್ಥಗಳಿಂದ ಸಮೋಸ ತಯಾರಿಸಬಹುದು.

World Samosa Day 2023: Heres the history, facts to know and the recipe

ಸಮೋಸಾ ಚಾಟ್

ಭಾರತದಲ್ಲಿ ಸಮೋಸಾಗಳನ್ನು ಸಾಮಾನ್ಯವಾಗಿ ಪುಡಿಮಾಡಿ ಮತ್ತು ವಿವಿಧ ಚಟ್ನಿಗಳು, ಮೊಸರು, ಮಸಾಲೆಗಳೊಂದಿಗೆ "ಸಮೋಸಾ ಚಾಟ್" ಎಂದು ಕರೆಯಲ್ಪಡುವ ಭಕ್ಷ್ಯದಲ್ಲಿ ಬಡಿಸಲಾಗುತ್ತದೆ.ಸಮೋಸಾಗಳು ಅಂತರಾಷ್ಟ್ರೀಯ ಜನಪ್ರಿಯತೆಯನ್ನು ಗಳಿಸಿವೆ. ಹೀಗಾಗಿ ಅನೇಕ ದೇಶಗಳಲ್ಲಿ ಕಂಡುಬರುತ್ತವೆ, ಆಗಾಗ್ಗೆ ಸ್ಥಳೀಯ ಅಭಿರುಚಿಗೆ ತಕ್ಕಂತೆ ಪ್ರಾದೇಶಿಕ ಬದಲಾವಣೆಗಳನ್ನು ಹೊಂದಿವೆ.

ಸಾಂಸ್ಕೃತಿಕ ಚಿಹ್ನೆ

ಸಮೋಸಾಗಳು ಭಾರತೀಯ ಮತ್ತು ದಕ್ಷಿಣ ಏಷ್ಯಾದ ಪಾಕಪದ್ಧತಿಯ ಸಂಕೇತವಾಗಿದೆ. ಇದು ಪ್ರದೇಶದ ವೈವಿಧ್ಯಮಯ ರುಚಿಗಳನ್ನು ಪ್ರತಿನಿಧಿಸುತ್ತದೆ.

ಜನಪ್ರಿಯ ತಿಂಡಿ

ಸಮೋಸಾಗಳು ದಕ್ಷಿಣ ಏಷ್ಯಾದಲ್ಲಿ ಮಾತ್ರವಲ್ಲದೆ ಮಧ್ಯಪ್ರಾಚ್ಯ, ಆಗ್ನೇಯ ಏಷ್ಯಾ ಮತ್ತು ಪೂರ್ವ ಆಫ್ರಿಕಾದ ಪಾಕಪದ್ಧತಿಗಳಲ್ಲಿ ಜನಪ್ರಿಯ ತಿಂಡಿಯಾಗಿದೆ.

ಫ್ರೀಜ್ ಮಾಡಿ ಮತ್ತು ಮತ್ತೆ ಬಿಸಿ ಮಾಡಿ

ಸಮೋಸಾಗಳನ್ನು ಫ್ರೀಜ್ ಮಾಡಬಹುದು ಮತ್ತು ಮತ್ತೆ ಬಿಸಿ ಮಾಡಬಹುದು, ಇದು ಪಾರ್ಟಿಗಳು ಮತ್ತು ಕೂಟಗಳಿಗೆ ಅನುಕೂಲಕರವಾದ ತಿಂಡಿಯಾಗಿದೆ.

ಸಮೋಸಾ ಹಬ್ಬಗಳು

ಕೆಲವು ಪ್ರದೇಶಗಳು ಸಮೋಸಾ ಉತ್ಸವಗಳು ಅಥವಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಅಲ್ಲಿ ಬಾಣಸಿಗರು ತಮ್ಮ ವಿಶಿಷ್ಟವಾದ ಸಮೋಸಾ ರಚನೆಗಳನ್ನು ಪ್ರದರ್ಶಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+