ಜಗತ್ತಿನ ಅತಿಹೆಚ್ಚು ಜನನಿಬಿಡ ವಿಮಾನ ನಿಲ್ದಾಣ: ದುಬೈಗಿಂತ ದೆಹಲಿಯೇ ಟಾಪ್ ಗುರೂ!

ಜಗತ್ತಿನಲ್ಲೇ ಅತಿಹೆಚ್ಚು ಜನನಿಬಿಡ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದುಬೈ ವಿಮಾನ ನಿಲ್ದಾಣವನ್ನು ಮಾರ್ಚ್ ವೇಳೆಗೆ ಹಿಂದಿಕ್ಕಿದೆ ಎಂದು ವರದಿಯಾಗಿದೆ.

ಕಳೆದ 2022ರ ಮಾರ್ಚ್ ತಿಂಗಳಿನಲ್ಲೇ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ನಿರ್ವಹಣೆಗೆ ಸಂಬಂಧಿಸಿದಂತೆ ದೆಹಲಿ ವಿಮಾನ ನಿಲ್ದಾಣವು ವಿಶ್ವದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ.

ಜಾಗತಿಕ ಪ್ರಯಾಣ ಡೇಟಾ ಪೂರೈಕೆದಾರರಾದ ಅಧಿಕೃತ ಏರ್‌ಲೈನ್ ಗೈಡ್ (OAG) ತನ್ನ ಇತ್ತೀಚಿನ ವರದಿಯಲ್ಲಿ ಈ ಬಗ್ಗೆ ತಿಳಿಸಿದೆ. ಜಗತ್ತಿನ ಅತಿಹೆಚ್ಚು ಜನನಿಬಿಡ ವಿಮಾನ ನಿಲ್ದಾಣಗಳ ಪಟ್ಟಿನಲ್ಲಿ "ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದ ಅಟ್ಲಾಂಟಾ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಮಾರ್ಚ್ ತಿಂಗಳಿನಲ್ಲಿ ದೆಹಲಿಯು ಎರಡನೇ ಸ್ಥಾನಕ್ಕೆ ಜಂಪ್ ಆಗಿರುವುದರಿಂದ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದ ದುಬೈ ಮೂರನೇ ಸ್ಥಾನಕ್ಕೆ ಕುಸಿದಿದೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Worlds second busiest airport: Delhi Airport will Overtake Dubai in March

23ನೇ ಸ್ಥಾನದಲ್ಲಿದ್ದ ದೆಹಲಿ; 2019 ಮಾರ್ಚ್ ತಿಂಗಳಿಗೂ ಮೊದಲು ಅಂದರೆ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿಗೂ ಮೊದಲು ಇದೇ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 23ನೇ ಸ್ಥಾನದಲ್ಲಿತ್ತು.

ಆದರೆ ಈ ವರ್ಷದ ಮಾರ್ಚ್‌ನಲ್ಲಿ ಯುಎಸ್‌ನ ಅಟ್ಲಾಂಟಾ ವಿಮಾನ ನಿಲ್ದಾಣದಲ್ಲಿ 4.42 ದಶಲಕ್ಷ ಪ್ರಯಾಣಿಕರು ಪ್ರಯಾಣಿಸಿದರೆ, ಎರಡನೇ ಸ್ಥಾನದಲ್ಲಿರುವ ಭಾರತದ ದೆಹಲಿ ವಿಮಾನ ನಿಲ್ದಾಣದಲ್ಲಿ 3.61 ದಶಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿರುವ ದುಬೈ ವಿಮಾನ ನಿಲ್ದಾಣದಲ್ಲಿ 3.55 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದೆ.

Worlds second busiest airport: Delhi Airport will Overtake Dubai in March

ಅಂತಾರಾಷ್ಟ್ರೀಯ ಪ್ರಯಾಣ; "ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಜಗತ್ತಿನ ತೀವ್ರ ಪರಿಣಾಮ ಬೀರಿದೆ. ಕೋವಿಡ್-19 ಕಠಿಣ ನಿಯಮಗಳು ಮತ್ತು ಪ್ರಯಾಣ ನಿರ್ಬಂಧಗಳಿಂದ ಎರಡು ವರ್ಷಗಳ ಕಾಲ ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ" ಎಂದು ದೆಹಲಿ ಏರ್‌ಪೋರ್ಟ್ ಇಂಟರ್‌ನ್ಯಾಶನಲ್ ಲಿಮಿಟೆಡ್‌ನ (DIAL) ಸಿಇಒ ವಿದೇಹ್ ಕುಮಾರ್ ಜೈಪುರಿಯಾರ್ ತಿಳಿಸಿದ್ದಾರೆ.

"ಪ್ರಪಂಚದಾದ್ಯಂತ ಕೊರೊನಾ ವೈರಸ್ ಲಸಿಕೆ ಪಡೆದುಕೊಂಡವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಈ ಹಿನ್ನೆಲೆ ಸರ್ಕಾರಗಳು ಕೋವಿಡ್-19 ನಿರ್ಬಂಧಗಳನ್ನು ಸಡಿಲಿಸುತ್ತಿದ್ದು, ತಮ್ಮ ಗಡಿಯನ್ನು ಪ್ರಯಾಣಕ್ಕೆ ಮುಕ್ತಗೊಳಿಸುತ್ತಿವೆ" ಎಂದರು.

"ಭಾರತ ಕೂಡ ಕಳೆದ ತಿಂಗಳು ತನ್ನ ಗಡಿಗಳನ್ನು ತೆರೆದಿದ್ದು, ಸಂಪೂರ್ಣ ಲಸಿಕೆ ಪಡೆದುಕೊಂಡ ಅಂತಾರಾಷ್ಟ್ರೀಯ ಪ್ರಯಾಣಿಕರು ದೇಶಕ್ಕೆ ಪ್ರವೇಶಿಸಲು ಅನುಮತಿ ನೀಡಿದೆ. ಈ ಕ್ರಮಗಳು ಹೆಚ್ಚಾಗಿ ಪ್ರಯಾಣ ಮತ್ತು ಪ್ರವಾಸೋದ್ಯಮಕ್ಕೆ ಸಹಕಾರಿಯಾಗಿದೆ. ವಿಮಾನ ಪ್ರಯಾಣಕ್ಕೆ ಹೆಚ್ಚು ಅಗತ್ಯವಿರುವ ಉತ್ತೇಜನ ನೀಡಿದೆ" ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+