ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

World Coconut Day 2022 : ವಿಶ್ವ ತೆಂಗು ದಿನ- ತೆಂಗಿನಕಾಯಿಯ ಅದ್ಭುತ ಪ್ರಯೋಜನಗಳು ಇವು

|
Google Oneindia Kannada News

ಸೆಪ್ಟೆಂಬರ್ 2, ವಿಶ್ವ ತೆಂಗು ದಿನ. ತೆಂಗಿನ ಕಾಯಿ ಅಥವಾ ಎಳನೀರು ರುಚಿ ಹತ್ತದವರು ಭಾರತದಲ್ಲಿ ವಿರಳ. ಅದರಲ್ಲೂ ಕರ್ನಾಟಕದ ಮಂದಿಯ ಆಹಾರಶೈಲಿಯಲ್ಲಿ ತೆಂಗಿಗೆ ಖಾಯಂ ಸ್ಥಾನ ಇರುತ್ತದೆ. ದೇಶದಲ್ಲಿ ಅತಿ ಹೆಚ್ಚು ತೆಂಗು ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕ ಅಗ್ರಪಂಕ್ತಿಗೆ ಬರುತ್ತದೆ.

ತೆಂಗು ಅಕ್ಷರಶಃ ಕಲ್ಪವೃಕ್ಷ. ಇದರ ಪ್ರತಿಯೊಂದು ಭಾಗವೂ ಪ್ರಯೋಜನಕಾರಿ. ಬಾಯಿ ರುಚಿಯಿಂದ ಹಿಡಿದು ಔಷಧದವರೆಗೂ ಇದು ಉಪಯುಕ್ತ. ಈ ಮರದ ಯಾವ ಭಾಗವೂ ಅಪ್ರಯೋಜಕ ಎನ್ನುವಂತಿಲ್ಲ. ಅಷ್ಟರಮಟ್ಟಿಗೆ ಇದನ್ನು ಕಲ್ಪವೃಕ್ಷ ಎನ್ನಲಡ್ಡಿಯಿಲ್ಲ.

ಮಳೆಗೆ ಮನೆಯಲ್ಲಿ ಸೊಳ್ಳೆ ತೊಡೆದುಹಾಕಲು ಮನೆಮದ್ದು ಬಳಸಿ; ಹೇಗೆ ತಿಳಿಯಿರಿಮಳೆಗೆ ಮನೆಯಲ್ಲಿ ಸೊಳ್ಳೆ ತೊಡೆದುಹಾಕಲು ಮನೆಮದ್ದು ಬಳಸಿ; ಹೇಗೆ ತಿಳಿಯಿರಿ

ತೆಂಗು ಬಹಳ ರೈತರಿಗೆ ಒಂದು ಸ್ಥಿರ ಆದಾಯ ತಂದುಕೊಡುವ ಬೆಳೆ. ನೂರು ತೆಂಗಿನ ಮರಗಳ ತೋಟ ಇದ್ದರೂ ಸಾಕು ವರ್ಷಕ್ಕೆ 2 ಲಕ್ಷದಷ್ಟು ಹಣ ಸಂಪಾದನೆ ಮಾಡಬಹುದು. ಹೀಗಾಗಿ, ರೈತರ ಪಾಲಿಗೆ ತೆಂಗು ಲಾಭದಾಯಕ ಬೆಳೆಯೂ ಹೌದು.

ವಿಶ್ವ ತೆಂಗು ದಿನವನ್ನು ಮಾರು ಮೊದಲು ಆಚರಣೆಗೆ ತಂದರು, ತೆಂಗಿನ ಮರದಿಂದ ಸಿಗುವ ವಿವಿಧ ರೀತಿಯ ಉತ್ಪನ್ನಗಳು ಯಾವುವು, ತೆಂಗು, ಎಳನೀರು ಇತ್ಯಾದಿಯಿಂದ ಆಗುವ ಪ್ರಯೋಜನಗಳು ಏನು ಎಂಬಿತ್ಯಾದಿ ವಿವರ ಇಲ್ಲಿದೆ.

30ರ ವಯಸ್ಸಿಗೆ ಹಾರ್ಟ್ ಅಟ್ಯಾಕ್ ಯಾಕೆ? ವಿಲನ್ ತೂಕವೋ, ಬೊಜ್ಜೋ?30ರ ವಯಸ್ಸಿಗೆ ಹಾರ್ಟ್ ಅಟ್ಯಾಕ್ ಯಾಕೆ? ವಿಲನ್ ತೂಕವೋ, ಬೊಜ್ಜೋ?

ವಿಶ್ವ ತೆಂಗು ದಿನ ಆಚರಣೆ ಯಾಕೆ?

ವಿಶ್ವ ತೆಂಗು ದಿನ ಆಚರಣೆ ಯಾಕೆ?

ತೆಂಗಿನಕಾಯಿ ಮತ್ತು ಎಳನೀರಿನ ಪ್ರಯೋಜನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಪ್ರತೀ ವರ್ಷ ಸೆಪ್ಟೆಂಬರ್ ೨ರಂದು ವಿಶ್ವ ತೆಂಗು ದಿನವನ್ನು ಆಚರಿಸಲಾಗುತ್ತಿದೆ.

ಭಾರತ ಸೇರಿದಂತೆ ಹಲವು ದೇಶಗಳು ಸದಸ್ಯರಾಗಿರುವ ಏಷ್ಯನ್ ಅಂಡ್ ಪೆಸಿಫಿಕ್ ಕೋಕೋನಟ್ ಕಮ್ಯೂನಿಟಿ (ಎಪಿಸಿಸಿ) ಎಂಬ ಅಂತಾರಾಷ್ಟ್ರೀಯ ಸರಕಾರಿ ಸಂಸ್ಥೆ ಮೊದಲಿಗೆ ಈ ದಿನವನ್ನು ಆಚರಿಸಿತು.

ತೆಂಗಿನ ಉತ್ಪನ್ನಗಳು

ತೆಂಗಿನ ಉತ್ಪನ್ನಗಳು

* ತೆಂಗಿನ ಎಣ್ಣೆ
* ಕೊಬ್ಬರಿ
* ಎಳನೀರು
* ತೆಂಗಿನ ಹಾಲು
* ತೆಂಗಿನ ಕಾಯಿ
* ನೀರಾ

ಇವು ಸಹಜವಾಗಿ ತೆಂಗಿನ ಮರದಿಂದ ಸಿಗುವ ಉತ್ಪನ್ನಗಳು. ಹಾಗೆಯೆ, ತೆಂಗಿನಕಾಯಿಯಿಂದ ಅನೇಕ ರೀತಿಯ ಆಹಾರವಸ್ತುಗಳು ತಯಾರಾಗುತ್ತವೆ. ತೆಂಗಿನ ವಿನೇಗರ್, ಸ್ಕ್ಯಾಶ್ ಇತ್ಯಾದಿ ಮಾಡಬಹುದು. ತೆಂಗಿನ ಗರಿ, ಗುದುಮಟ್ಟೆ ಇತ್ಯಾದಿ ಭಾಗಗಳು ಒಳ್ಳೆಯ ಸೌದೆಗಳಾಗುತ್ತವೆ. ತೆಂಗಿನ ನಾರಿನಿಂದ ಹಗ್ಗ, ಹುರಿ ಇತ್ಯಾದಿ ತಯಾರಿಸುತ್ತಾರೆ.

ತೆಂಗಿನಿಂದ ಆರೋಗ್ಯ ಪ್ರಯೋಜನಗಳು

ತೆಂಗಿನಿಂದ ಆರೋಗ್ಯ ಪ್ರಯೋಜನಗಳು

ತೆಂಗಿನಲ್ಲಿ ಕೊಬ್ಬಿನ ಅಂಶ ಹೆಚ್ಚಿರುತ್ತದೆ. ಆದರೆ, ಅದನ್ನು ಮರೆಸುವಂತೆ ಪೌಷ್ಟಿಕಾಂಶಗಳ ಅಗರ ಈ ತೆಂಗು. ಇದರಲ್ಲಿ ಪ್ರೋಟೀನು, ಹಲವು ಪ್ರಮುಖ ಖನಿಜಗಳು ಇವೆ. ವೈಟಮಿನ್‌ಗಳ ಪೈಕಿ ಬಿ ವೈಟಮಿನ್ ಅನ್ನು ತೆಂಗಿನಕಾಯಿಯಿಂದ ಪಡೆಯಬಹುದು.

ನಮಗೆ ಅಗತ್ಯ ಇರುವ ಮ್ಯಾಂಗನೀಸ್ ಇತ್ಯಾದಿ ಖನಿಜಗಳನ್ನು ತೆಂಗಿನಿಂದ ನಾವು ಸುಲಭವಾಗಿ ಪಡೆಯಬಹುದು. ಇವು ನಮ್ಮ ಮೂಳೆಯನ್ನು ಗಟ್ಟಿಗೊಳಿಸುತ್ತದೆ. ದೇಹದ ತೂಕ ಇಳಿಸಲೂ ಇದು ಸಹಕಾರಿ.

ತೆಂಗಿನಕಾಯಿಯಲ್ಲಿ ಫೈಬರ್ ಅಂಶ ಹೆಚ್ಚಿರುವುದರಿಂದ ಡಯಾಬಿಟಿಸ್ ನಿಯಂತ್ರಣಕ್ಕೆ ಸಹಕಾರಿ ಆಗಬಹುದು. ಕೊಬ್ಬರಿ ಎಣ್ಣೆಯನ್ನು ಆಹಾರದಲ್ಲಿ ಬಳಸಿದರೆ ಸಕ್ಕರೆ ಮಟ್ಟವನ್ನು ಕೆಳಗೆ ಇಳಿಸಬಹುದು ಎಂದು ಕೆಲ ಅಧ್ಯಯನಗಳು ಹೇಳುತ್ತವೆ.

ತೆಂಗಿನಕಾಯಿಯಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಹೆಚ್ಚಿರುತ್ತವೆ. ಇದು ನಮ್ಮ ದೇಹದ ವಿಷಕಾರಿ ವಸ್ತುಗಳನ್ನು ನೀಗಿಸುವ ಕೆಲಸ ಮಾಡುತ್ತದ.

ತೆಂಗಿನಿಂದ ತೊಂದರೆಗಳು

ತೆಂಗಿನಿಂದ ತೊಂದರೆಗಳು

ತೆಂಗಿನಕಾಯಿಯಲ್ಲಿ ಕೊಬ್ಬಿನ ಅಂಶ ಜೊತೆಗೆ ಕ್ಯಾಲೋರಿ ಅಂಶವೂ ಹೆಚ್ಚಿರುತ್ತೆ. ಕೆಲ ಸಂಶೋಧನೆಗಳ ಪ್ರಕಾರ, ತೆಂಗಿನಕಾಯಿಯಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ನ ಮಟ್ಟ ಹೆಚ್ಚುತ್ತದೆ. ಇದರಿಂದ ಹೃದಯದ ಸಮಸ್ಯೆ ತಲೆದೋರಬಹುದು. ಆದ್ದರಿಂದ ತೆಂಗಿನಕಾಯಿಯನ್ನು ಅತಿಯಾಗಿ ಬಳಸದೇ ತಕ್ಕಮಟ್ಟಿಗೆ ಬಳಕೆ ಮಾಡಬಹುದು ಎನ್ನುತ್ತಾರೆ ತಜ್ಞರು.

ಆದರೆ, ಎಳನೀರಿನ ಬಗ್ಗೆ ನಾವು ಹೆಚ್ಚು ಚಿಂತೆ ಮಾಡುವ ಅಗತ್ಯ ಇಲ್ಲ. ದಿನಕ್ಕೆ ಒಂದು ಎಳನೀರು ಕುಡಿದರೆ ಪ್ರಯೋಜನಗಳ ಸರಮಾಲೆಯೇ ಉಂಟು.

(ಒನ್ಇಂಡಿಯಾ ಸುದ್ದಿ)

English summary
Know how World Coconut Day Came to Existence, Know what health benefits we have from coconut, and different products of coconut and its tree.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X