ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಕ್ ಫ್ರಮ್ ಹೋಮ್‌ ಸೌಲಭ್ಯದಲ್ಲಿ ಶೇ.900ರಷ್ಟು ಹೆಚ್ಚಳ: ಸೋಮಾರಿಗಳಾದರಾ ಐಟಿ ಉದ್ಯೋಗಿಗಳು?

|
Google Oneindia Kannada News

ಕೋವಿಡ್‌ನಿಂದಾಗಿ ಇಡೀ ವಿಶ್ವವೇ ಜಾಗತಿಕವಾಗಿ ಸುಧಾರಿಸಿಕೊಂಡಿಲ್ಲ, ಆದರೆ ಕೇಲವು ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಿಸಿಕೊಳ್ಳಲು ಉತ್ಸುಕವಾಗಿವೆ. ಈ ಕೋವಿಡ್‌ನಿಂದಾಗಿ ಪ್ರಪಂಚದಾದ್ಯಂತ "ವರ್ಕ್ ಫ್ರಮ್ ಹೋಮ್‌" ಸಂಸ್ಕೃತಿ ಹೆಚ್ಚಾಗುತ್ತದೆ.

ಆದರೆ, ಕಂಪನಿಯ ಕೆಲಸದ ಉತ್ಪಾದಕತೆಯು ಮತ್ತು ಉದ್ಯೋಗಿಯ ಉತ್ಪಾದಕತೆಯ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಇನ್ನೂ ಯಾವೊಂದು ನಿರ್ಧಾರಗಳಿಗೆ ಐಟಿ ಕಂಪನಿಗಳಿಂದ ಒಮ್ಮತವಿಲ್ಲ!

ಇದೀಗ ಖ್ಯಾತ ಐಟಿ ದಿಗ್ಗಜ ಮೈಕ್ರೋಸಾಫ್ಟ್ ಈ ಬಗ್ಗೆ ಉದ್ಯೋಗದಾತರು ಮತ್ತು ಉದ್ಯೋಗಿಗಳಲ್ಲಿ ಸಮೀಕ್ಷೆಯೊಂದನ್ನು ನಡೆಸಿದೆ. ಅಲ್ಲದೆ, ಲಿಂಕ್ಡ್‌ಇನ್‌ನ ಸಮೀಕ್ಷೆಯು ವರ್ಕ್ ಫ್ರಮ್ ಹೋಮ್‌ನ ಹೆಚ್ಚುತ್ತಿರುವ ಪ್ರವೃತ್ತಿಯು ಪ್ರಪಂಚದಾದ್ಯಂತ ಸ್ಪಷ್ಟವಾಗಿ ಕಂಡುಬರುತ್ತದೆ ಎಂದು ತೋರಿಸುತ್ತದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

 ಮೈಕ್ರೋಸಾಫ್ಟ್‌ನ ಮುಖ್ಯಸ್ಥರು, ಉದ್ಯೋಗಿಗಳು WFH ಬಗ್ಗೆ ಏನು ಹೇಳಿದರು?

ಮೈಕ್ರೋಸಾಫ್ಟ್‌ನ ಮುಖ್ಯಸ್ಥರು, ಉದ್ಯೋಗಿಗಳು WFH ಬಗ್ಗೆ ಏನು ಹೇಳಿದರು?

ಕೋವಿಡ್ ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗಿರುವುದರಿಂದ ಜಗತ್ತಿನಾದ್ಯಂತ ಹೆಚ್ಚಿನ ಐಟಿ ಕಂಪನಿಗಳು ವಲಯವನ್ನು ಲೆಕ್ಕಿಸದೆ ಉದ್ಯೋಗಿಗಳನ್ನು ಕಚೇರಿಗೆ ವಾಪಸ್ ಕರೆಸುತ್ತಿವೆ. ನಿರ್ವಹಣೆಯು ತಮ್ಮ ತಂಡವು ಕಚೇರಿಗೆ ಮರಳಲು ಬಯಸುತ್ತಿರುವಾಗ, ಹೆಚ್ಚಿನ ಉದ್ಯೋಗಿಗಳು ಇನ್ನೂ ಮನೆಯಿಂದಲೇ ಕೆಲಸ ಮಾಡಲು ಹೆಣಗಾಡುತ್ತಿದ್ದಾರೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಈಗ ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿಯಿಂದ ಕೆಲಸ ಮಾಡುವ ಬಗ್ಗೆ ತಮ್ಮ ಆಲೋಚನೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ ಮತ್ತು ಅವರ ಸ್ವಂತ ಕಂಪನಿಯ ಆಂತರಿಕ ಸಮೀಕ್ಷೆಯು ಅದರ ಬಗ್ಗೆ ಏನು ಹೇಳುತ್ತಿದೆ ? ಎಂದರೆ, ಮೈಕ್ರೋಸಾಫ್ಟ್‌ನ ಹೆಚ್ಚಿನ ಮುಖ್ಯಸ್ಥರು, ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡಬೇಕೆಂದು ಬಯಸುತ್ತಾರೆ. ಏಕೆಂದರೆ, ಐಟಿ ಕಂಪನಿಗಳ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಾಗ ವಿಳಂಬ ಆಗುತ್ತದೆ ಎಂದು ನಾದೆಲ್ಲಾ ಹೇಳಿದ್ದಾರೆ. ಇನ್ನು ಈ ವಿಷಯವನ್ನು ಮೈಕ್ರೋಸಾಫ್ಟ್‌ನ ಉದ್ಯೋಗಿಗಳು ಬೇರೆ ರೀತಿಯಲ್ಲಿ ಭಾವಿಸುತ್ತಾರೆ!

 ಕಂಪನಿಯ ಮುಖ್ಯಸ್ಥರು ಕಚೇರಿಯಿಂದ ಕೆಲಸಕ್ಕೆ ಒಲವು?

ಕಂಪನಿಯ ಮುಖ್ಯಸ್ಥರು ಕಚೇರಿಯಿಂದ ಕೆಲಸಕ್ಕೆ ಒಲವು?

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಮಾತನಾಡಿ, ಕಂಪನಿಯ ಹಿರಿಯ ಅಧಿಕಾರಿಗಳು, ಮ್ಯಾನೇಜರ್‌ಗಳು ತಮ್ಮ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿರುವುವಾಗ ನಿಧಾನ ಗತಿಯಲ್ಲಿ ಕೆಲಸ ಸಾಗುತ್ತದೆ ಎಂದು ಭಾವಿಸುತ್ತಾರೆ. ಕೆಲಸದ ಸ್ಥಳದ ವರದಿಯ ಪ್ರಕಾರ, ಕೆಲವು ಮೇಲಧಿಕಾರಿಗಳು ಮನೆಯಿಂದ ಕೆಲಸ ಮಾಡುವ ಸಂಸ್ಕೃತಿಯನ್ನು ಅನುಮಾನದಿಂದ ನೋಡುತ್ತಾರೆ ಎಂದು ನಾದೆಲ್ಲಾ ಹೇಳಿದ್ದಾರೆ. ನಾವು ಉತ್ಪಾದಕತೆಯ ಪ್ರಲೋಭನೆಯನ್ನು ಮೀರಿ ಹೋಗಬೇಕಾಗಿದೆ ಎಂದು ನಾಡೆಲ್ಲಾ ಹೇಳಿದರು. ಏಕೆಂದರೆ, ನಮ್ಮಲ್ಲಿರುವ ಡೇಟಾವು ಶೇಕಡಾ 80ಕ್ಕಿಂತ ಹೆಚ್ಚು ಉದ್ಯೋಗಿಗಳು ವೈಯಕ್ತಿಕವಾಗಿ ಕಂಪನಿಯ ಕೆಲಸವನ್ನು ಸಂಪೂರ್ಣ ಸಮರ್ಪಣೆಯೊಂದಿಗೆ ಮಾಡುತ್ತಿದ್ದಾರೆ ಎಂದು ಭಾವಿಸುತ್ತಾರೆ ಎಂದು ಸಮೀಕ್ಷೆಯ ಡೇಟಾದಿಂದ ತಿಳಿದುಬಂದಿದೆ.

 ಮನೆಯಿಂದಲೇ ಕೆಲಸದ ಕುರಿತು ಏನು ಹೇಳುತ್ತದೆ?

ಮನೆಯಿಂದಲೇ ಕೆಲಸದ ಕುರಿತು ಏನು ಹೇಳುತ್ತದೆ?

ತಮ್ಮ ಸಿಬ್ಬಂದಿ ತಮ್ಮ ಕೆಲಸವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಅವರ ಅಧಿಕಾರಿಗಳು ಭಾವಿಸುತ್ತಾರೆ ಎಂದು ನಾಡೆಲ್ಲಾ ಹೇಳಿದರು. ಮನೆಯಿಂದಲೇ ಕೆಲಸ ಮಾಡುವ ವಿಷಯದ ಕುರಿತು ಕಂಪನಿಯ ಒಳಗಿನ ಸಮೀಕ್ಷೆಯನ್ನು ಉಲ್ಲೇಖಿಸಿದ ನಾಡೆಲ್ಲಾ 87% ಮೈಕ್ರೋಸಾಫ್ಟ್ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಾಗ ಹೆಚ್ಚು ಉತ್ಪಾದಕರಾಗಿದ್ದಾರೆ ಎಂದು ಭಾವಿಸುತ್ತಾರೆ. ಆದರೆ ಕಂಪನಿಯ 80% ಅಧಿಕಾರಿಗಳು, ಕೆಲಸಗಾರರು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಭಾವಿಸಿದ್ದಾರೆ ಆದರೆ ಕಂಪನಿಯ ಬೆಳವಣಿಗೆಗೆ ಉದ್ಯೋಗಿಗಳ ಅಭಿಪ್ರಾಯಗಳು ಹೊಂದಿಕೊಳ್ಳುವುದಿಲ್ಲ ಹಾಗಾಗಿ ಮನೆಯಿಂದಲೇ ಕೆಲಸ ಮಾಡುವುದು ಐಟಿ ಕಂಪನಿಗಳಿಗೆ ಹೊಡೆತ ಎಂಬುವುದು ತಿಳಿಯುತ್ತಿದೆ.

 WFH ಪ್ರವೃತ್ತಿ ಹೆಚ್ಚುತ್ತಿದೆ, 900% ಬೆಳವಣಿಗೆ!

WFH ಪ್ರವೃತ್ತಿ ಹೆಚ್ಚುತ್ತಿದೆ, 900% ಬೆಳವಣಿಗೆ!

ಸಾಂಕ್ರಾಮಿಕ ರೋಗದ ಮೊದಲು ಲಿಂಕ್ಡ್‌ಇನ್‌ನಲ್ಲಿ ದಾಖಲಾದ ಡೇಟಾವು ಆ ಸಮಯದಿಂದ ಕೇವಲ 2% ಜನರು ಮಾತ್ರ ಕೆಲಸ ಮಾಡುತ್ತಿದ್ದರು ಎಂದು ತೋರಿಸುತ್ತದೆ. ಆದರೆ, ಕೋವಿಡ್‌ನಂತರ ಈ ಸಂಖ್ಯೆ 20%ರಷ್ಟು ಏರಿದೆ. ಈ ರೀತಿಯಾಗಿ, ಕೇವಲ ಎರಡು ವರ್ಷಗಳಲ್ಲಿ ವರ್ಕ್ ಫ್ರಮ್ ಹೋಮ್ ಕಲ್ಚರ್‌ನಲ್ಲಿ ಸುಮಾರು 900% ಹೆಚ್ಚಳವಾಗಿದೆ. ಈಗ ಹಾಗೂ ಮುಂದೆ ದಿನಗಳಲ್ಲಿ ಉದ್ಯೋಗಿಗಳು ಹೀಗೆ ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿಗೆ ಉಳಿಯಲು ಹೋಗುತ್ತಿದ್ದಾರೆ, ಇಲ್ಲಿ ಉದ್ಯೋಗಿಗಳ ಸೋಮಾರಿತನ ಹೆಚ್ಚುತ್ತಿದೆ ಆದರೆ ಮುಂದೆ ಇದೆ ಮುಂದುವರಿದರೆ ಉದ್ಯೋಗಿಗಳು ಈ ಕಲ್ಚರ್‌ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ!

 ಮೈಕ್ರೋಸಾಫ್ಟ್ ಪ್ರಸ್ತುತ ಹೈಬ್ರಿಡ್ ಸಂಸ್ಕೃತಿ

ಮೈಕ್ರೋಸಾಫ್ಟ್ ಪ್ರಸ್ತುತ ಹೈಬ್ರಿಡ್ ಸಂಸ್ಕೃತಿ

ಸತ್ಯ ನಾಡೆಲ್ಲಾ ಅವರ ನಾಯಕತ್ವದಲ್ಲಿ ಈ ದಿನಗಳಲ್ಲಿ ಮೈಕ್ರೋಸಾಫ್ಟ್ ಪ್ರಸ್ತುತ ಹೈಬ್ರಿಡ್ ವರ್ಕಿಂಗ್ ಸಂಸ್ಕೃತಿಯನ್ನು ಅನುಮತಿಸುತ್ತದೆ. ಇದರಲ್ಲಿ ಉದ್ಯೋಗಿಗಳಿಗೆ 50% ಸಮಯವನ್ನು ಮನೆಯಿಂದ ಮತ್ತು ಶೇಕಡಾ 50ರಷ್ಟು ಸಮಯವನ್ನು ಕಚೇರಿಯಿಂದ ಕೆಲಸ ಮಾಡಲು ಅನುಮತಿಸಲಾಗಿದೆ. ಈ ಮಧ್ಯೆ, ಗೂಗಲ್, ಆಪಲ್ ಸೇರಿದಂತೆ ಇತರ ಕೆಲವು ಟೆಕ್ ಕಂಪನಿಗಳು ನಿರಂತರವಾಗಿ ಉದ್ಯೋಗಿಗಳನ್ನು ಕಚೇರಿಗೆ ಕರೆಸುತ್ತಿವೆ. ಈ ಕಂಪನಿಗಳು ಜನರನ್ನು ಮತ್ತೆ ಕಚೇರಿಯ ಆವರಣಕ್ಕೆ ಕರೆತರಲು ಮನವೊಲಿಸಲು ಹೆಚ್ಚುವರಿ ಪ್ರಯತ್ನಗಳನ್ನು ಮಾಡುತ್ತಿವೆ.

English summary
Work From Home: Microsoft CEO Satya Nadella, IT employees working from home lazy and slacking? Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X