• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Work From Home ವೇಳೆಯಲ್ಲಿ ಮಂದಿಗೆ 'ಅಂಥ' ವಿಡಿಯೋಗಳದ್ದೇ ಹುಚ್ಚು!?

By ಒನ್‌ಇಂಡಿಯಾ ಡೆಸ್ಕ್
|
Google Oneindia Kannada News

ನವದೆಹಲಿ, ಆಗಸ್ಟ್ 24: ಕೊರೊನಾವೈರಸ್ ಅಂಟಿಕೊಳ್ಳುತ್ತೆ, ನೀವ್ಯಾರೂ ಕಚೇರಿಗೆ ಬರುವುದು ಬೇಕಾಗಿಲ್ಲ. ಮನೆಯಲ್ಲೇ ಆನ್ ಲೈನ್ ಮೂಲಕ ಕೆಲಸ ಮಾಡಿದರೆ ಸಾಕು. ಹೀಗೆ ಹೇಳಿದ ಕಂಪನಿಗಳು ಒಂದಾ ಎರಡಾ? ಅದೇ Work From Home ಸಂಸ್ಕೃತಿಯು ಜನರಲ್ಲಿ ಹೊಸ ವಿಕೃತಿಯನ್ನು ಹುಟ್ಟು ಹಾಕಿದೆ.

ನೂರಾರು ಕಂಪನಿಗಳು ತಮ್ಮ ಸಾವಿರಾರು ಉದ್ಯೋಗಿಗಳಿಗೆ ವರ್ಕ್ ಫ್ರಾಮ್ ಹೋಮ್ ಆಪ್ಷನ್ ಅನ್ನು ನೀಡಿವೆ. ಮನೆಯಲ್ಲಿ ಉದ್ಯೋಗ ಮಾಡುವ ಜನರಿಗೆ ಹೊಸ ಗೀಳು ಅಂಟಿಕೊಂಡಿದೆ. ಅಶ್ಲೀಲತೆಯ ಹುಚ್ಚು ಹಿಡಿಸಿಕೊಂಡಿರುವ ಉದ್ಯೋಗಿಗಳು ಈಗ ಬರೀ ಅಂಥ ವಿಡಿಯೋಗಳನ್ನು ನೋಡುವುದರಲ್ಲೇ ದಿನ ಕಳೆಯುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ಖುಷಿ ವಿಚಾರ ಇದು: ಏಡ್ಸ್ ರೋಗಕ್ಕೂ ಬಂತು ಔಷಧಿಖುಷಿ ವಿಚಾರ ಇದು: ಏಡ್ಸ್ ರೋಗಕ್ಕೂ ಬಂತು ಔಷಧಿ

ಆನ್ ಲೈನ್ ಅಂಗಳದಲ್ಲಿ ಕೆಲಸ ಮಾಡುವ ಮಂದಿ ಅಶ್ಲೀಲ(Porn) ವಿಡಿಯೋಗಳಿಗೆ ಒಗ್ಗಿಕೊಂಡಿದ್ದಾರೆ. ದಿನಕ್ಕೆ 14 ಗಂಟೆ ಜನರು ಪೋರ್ನ್ ವಿಡಿಯೋ ನೋಡುವುದರಲ್ಲೇ ಕಾಲ ಕಳೆಯುವುದಕ್ಕೆ ಕಾರಣವೇನು?, ಈ ಸಮೀಕ್ಷೆಯಲ್ಲಿ ಉಲ್ಲೇಖವಾಗಿರುವ ಅಂಶಗಳೇನು?, ಜನರಿಗೆ ಹುಚ್ಚು ಹಿಡಿಸಿರುವ ಆ ವಿಡಿಯೋಗಳ ಗೀಳಿನ ಬಗ್ಗೆ ಆರೋಗ್ಯ ತಜ್ಞರು ಹೇಳುವುದೇನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಪೋರ್ನ್ ವಿಡಿಯೋಗಳಿಗೆ ಅಂಟಿಕೊಂಡಿದ್ದೇಕೆ ಮಂದಿ?

ಪೋರ್ನ್ ವಿಡಿಯೋಗಳಿಗೆ ಅಂಟಿಕೊಂಡಿದ್ದೇಕೆ ಮಂದಿ?

ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ವರ್ಕ್ ಫ್ರಮ್ ಹೋಮ್ ಆಯ್ಕೆ ಅನ್ನು ನೀಡಲಾಗಿತ್ತು. ಈ ಹಂತದಲ್ಲಿ ಯುನೈಟೆಡ್ ಕಿಂಗ್ ಡಮ್ ನೆಲದಲ್ಲಿ ಜನರು ಅಶ್ಲೀಲ ವಿಡಿಯೋಗಳನ್ನು ನೋಡುವುದಕ್ಕಾಗಿ ಕಳೆದಿದ್ದಾರೆ. ಇದರ ಜೊತೆ ಅಶ್ಲೀಲ ಅಭ್ಯಾಸಗಳಿಗೆ ಒಗ್ಗಿಕೊಳ್ಳುವವರ ಪ್ರಮಾಣವೂ ಹೆಚ್ಚಾಗಿದೆ ಎಂದು ಮಾಧ್ಯಮ ವಿಮರ್ಶೆಗಳು ಉಲ್ಲೇಖಿಸಿವೆ. ಸಾಂಕ್ರಾಮಿಕ ಸಮಯದಲ್ಲಿ ಯುನೈಟೆಡ್ ಕಿಂಗ್ ಡಮ್ ನೆಲದಲ್ಲಿ ವರ್ಕ್ ಫ್ರಮ್ ಹೋಮ್ ಆಯ್ಕೆಯು ಬಹುತೇಕ ಡಬಲ್ ಆಗಿತ್ತು. ಹೀಗಾಗಿ ಜನರು ಅಶ್ಲೀಲ ವಿಡಿಯೋಗಳಿಗೆ ಅಂಟಿಕೊಳ್ಳುವುದನ್ನು ಸಹ ವೈದ್ಯಕೀಯ ಸಮಸ್ಯೆ ಎಂದು ಪರಿಗಣಿಸಲಾಗುತ್ತಿದೆ.

Porn ವಿಡಿಯೋಗಳಿಗೆ ಅಂಟಿಕೊಂಡವರಲ್ಲಿ ಇದೊಂದು ರೀತಿ ಚಟ

Porn ವಿಡಿಯೋಗಳಿಗೆ ಅಂಟಿಕೊಂಡವರಲ್ಲಿ ಇದೊಂದು ರೀತಿ ಚಟ

ವೈದ್ಯಕೀಯ ತಜ್ಞರ ಪ್ರಕಾರ, ಈ ಮೊದಲು Porn ವಿಡಿಯೋಗಳನ್ನು ನೋಡುವವರ ಸಂಖ್ಯೆಯು ತೀರಾ ವಿರಳವಾಗಿತ್ತು. ಆದರೆ ವರ್ಕ್ ಫ್ರಮ್ ಹೋಮ್ ಪದ್ಧತಿ ಜಾರಿಗೊಂಡ ನಂತರದಲ್ಲಿ ಬಹುಪಾಲು ಮಂದಿಯು ಇಂಥ ವೆಬ್ ಸೈಟ್ ಹಾಗೂ ವಿಡಿಯೋಗಳಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಅದನ್ನು ಒಂದು ವ್ಯಸನವಾಗಿ ಬೆಳೆಸಿಕೊಳ್ಳುತ್ತಿದ್ದಾರೆ. ಅಶ್ಲೀಲತೆಯು ಒಂದು ರೀತಿ ಸಂಭೋಗ ಅಭ್ಯಾಸವಾಗಿದ್ದು, ಗ್ರಾಹಕರು ಲೈಂಗಿಕ ವ್ಯಾಯಾಮಕ್ಕೆ ಸಂಬಂಧಿಸಿದ ಆಹ್ಲಾದಕರ ಸಂವೇದನೆ ಅಥವಾ "ಅತಿಯಾದ" ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಿದ್ದಾರೆ.

ದಿನಕ್ಕೆ 14 ಗಂಟೆ ಅಶ್ಲೀಲ ವಿಡಿಯೋ ನೋಡುವವರಿಗೆ ಚಿಕಿತ್ಸೆ

ದಿನಕ್ಕೆ 14 ಗಂಟೆ ಅಶ್ಲೀಲ ವಿಡಿಯೋ ನೋಡುವವರಿಗೆ ಚಿಕಿತ್ಸೆ

ಯುನೈಟೆಡ್ ಕಿಂಗ್ ಡಮ್ ನೆಲದಲ್ಲಿ ಕೆಲವು ಮಂದಿ ದಿನಕ್ಕೆ 14 ಗಂಟೆ ಪೋರ್ನ್ ವಿಡಿಯೋ ನೋಡುವುದಕ್ಕೆ ಒಗ್ಗಿಕೊಂಡಿದ್ದಾರೆ. ಅಂಥ ವ್ಯಕ್ತಿಗಳಿಗೆ ಬ್ರಿಟನ್‌ನ ಅತಿದೊಡ್ಡ ಸಂಭೋಗ ಮತ್ತು ಅಶ್ಲೀಲ ಅಭ್ಯಾಸದ ಕ್ಲಿನಿಕ್ ಆಗಿರುವ ಲಂಡನ್‌ನ ಲಾರೆಲ್ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೇಂದ್ರದ ವೈಜ್ಞಾನಿಕ ನಿರ್ದೇಶಕರಾದ ಪೌಲಾ ಕಾರಿಡಾರ್, WFH ಎಂದರೆ ಈ ಸಮಯದಲ್ಲಿ ಜನರು ತಮ್ಮ ಕಂಪ್ಯೂಟರ್ ಸಿಸ್ಟಮ್‌ಗಳಿದೆ ಮೊದಲಿಗಿಂತಲೂ ಹೆಚ್ಚು ಅಂಟಿಕೊಂಡಿದ್ದರು. ಕಂಪ್ಯೂಟರ್ ಜೊತೆಯಲ್ಲಿ ಹೆಚ್ಚು ಕಾಲ ಸಮಯ ಕಳೆದ ಜನರು ಅಡ್ಡದಾರಿ ಹಿಡಿದಿರುವುದು ಬೆಳಕಿಗೆ ಬಂದಿದೆ ಎಂದು ಉಲ್ಲೇಖಿಸಿದ್ದಾರೆ

Work From Homeನಲ್ಲಿ ಅಂಥ ವಿಡಿಯೋಗಳ ಮೇಲೆ ಏಕೆ ಲಕ್ಷ್ಯ?

Work From Homeನಲ್ಲಿ ಅಂಥ ವಿಡಿಯೋಗಳ ಮೇಲೆ ಏಕೆ ಲಕ್ಷ್ಯ?

ಸಾಮಾನ್ಯವಾಗಿ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಆ ರೀತಿಯ ವಿಡಿಯೋಗಳ ಮೇಲೆ ಯಾವುದೇ ರೀತಿ ಗಮನ ಇರುವುದಿಲ್ಲ. ಕಚೇರಿ ವಾತಾವರಣದಲ್ಲಿ ಇಂಥ ನಡುವಳಿಕೆ ಪ್ರದರ್ಶಿಸುವುದಕ್ಕೆ ಅವಕಾಶ ಇರುವುದಿಲ್ಲ. ಆದರೆ ವರ್ಕ್ ಫ್ರಮ್ ಹೋಮ್ ಪದ್ಧತಿಯು ಕಂಪ್ಯೂಟರ್ ಜೊತೆಗಿನ ನಿರಂತರ ಕಾರ್ಯವೈಖರಿ ಮಧ್ಯೆ ಮನಸ್ಸು ಈ ರೀತಿ ಚಂಚಲತೆಗೆ ಹೊಂದಿಕೊಳ್ಳುವುದು ಎಂಬುದನ್ನು ತಜ್ಞರು ಹೇಳಿದ್ದಾರೆ.

Porn ವಿಡಿಯೋ ನೋಡುವವರ ಸಂಖ್ಯೆ ಎಷ್ಟಿದೆ?

Porn ವಿಡಿಯೋ ನೋಡುವವರ ಸಂಖ್ಯೆ ಎಷ್ಟಿದೆ?

ಕಳೆದ 2019ರ ಸಾಲಿನಲ್ಲಿ ಒಟ್ಟು 950 ಅಶ್ಲೀಲ ವ್ಯಸನಿಗಳನ್ನು ಪತ್ತೆ ಮಾಡಿತ್ತು. ಆದರೆ 2022ರ ಮೊದಲ ಆರು ತಿಂಗಳಿನಲ್ಲೇ 750 ಮಂದಿ ಅಶ್ಲೀಲ ವ್ಯಸನಿಗಳನ್ನು ಲಾರೆಲ್ ಸೆಂಟರ್ ಪತ್ತೆ ಮಾಡಿದೆ. ಈ 12 ತಿಂಗಳುಗಳಲ್ಲಿ ಕ್ಲಿನಿಕ್‌ಗೆ ಬರುವ ರೋಗಿಗಳು "ಹೆಚ್ಚುವರಿ ತೀವ್ರವಾದ ಪರಿಹಾರವನ್ನು ಬಯಸುತ್ತಾರೆ" ಎಂದು ತಜ್ಞರು ಹೇಳಿದ್ದಾರೆ. ಈ ವರದಿ ಪ್ರಕಾರ, ಲಂಡನ್ ಕ್ಲಿನಿಕ್‌ನಲ್ಲಿರುವ ಚಿಕಿತ್ಸಕರು 2019ರಲ್ಲಿ ತಿಂಗಳಿಗೆ 360 ಗಂಟೆಗಳ ಕಾಲ ಅಶ್ಲೀಲ ವಿಡಿಯೋ ವ್ಯಸನಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಸಮಯ ಕಳೆಯುತ್ತಿದ್ದರು. ಆದರೆ ಈಗ ತಿಂಗಳಿನಲ್ಲಿ 600 ಗಂಟೆಗಳ ಕಾಲ ಚಿಕಿತ್ಸೆಗಾಗಿ ಮೀಸಲಿಡುವ ಪರಿಸ್ಥಿತಿ ಬಂದಿದೆ.

English summary
Work From Home Culture led to spike in Porn Addiction in UK, People Consuming Up to 14 Hours of Pornography a Day; Report
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X