Women's Day 2025 Wishes: ಹೆಣ್ಣು ಸೃಷ್ಟಿಯ ಕಣ್ಣು- ಮಹಿಳಾ ದಿನದ ಸ್ಪೂರ್ತಿದಾಯಕ ಸಂದೇಶಗಳು
ಮಹಿಳೆಯರಿಲ್ಲದೆ ಈ ಜಗತ್ತನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಂತಹ ಮಹಿಳೆಯರಿಗೆ ಗೌರವ ಮತ್ತು ಪ್ರೀತಿಯನ್ನು ನೀಡಲು ಪ್ರತಿ ವರ್ಷ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ನೀವು ನಿಮ್ಮ ತಾಯಿ, ಸಹೋದರಿ, ಮಗಳು, ಹೆಂಡತಿ ಅಥವಾ ಸ್ನೇಹಿತೆಯನ್ನು ಮಹಿಳಾ ದಿನದಂದು ವಿಶೇಷ ರೀತಿಯಲ್ಲಿ ಅಭಿನಂದಿಸಲು ಬಯಸಿದರೆ ಈ ಸಂದೇಶಗಳು, ಕವನಗಳು, ಉಲ್ಲೇಖಗಳು ಮತ್ತು ಫೋಟೋಗಳು ನಿಮಗೆ ಉಪಯುಕ್ತವಾಗಬಹುದು. ಇದರ ಮೂಲಕ ನೀವು ನಿಮ್ಮ ಜೀವನದಲ್ಲಿ ನಿಮ್ಮ ನೆಚ್ಚಿನ ಮಹಿಳೆಯನ್ನು ಸಂತೋಷಗೊಳಿಸಬಹುದು.

ಮಹಿಳಾ ದಿನಾಚರಣೆ 2025 ಶುಭಾಶಯಗಳು:-
1. ಮಹಿಳೆ ಅಂದರೆ ಸ್ಪೂರ್ತಿ, ಮನೆಯ ನಂದಾದೀಪ, ಸೌಂದರ್ಯದ ಗಣಿ, ಸಹನಾಮಯಿ, ಪದಗಳಲ್ಲಿ ವರ್ಣಿಸಲಾಗದ ವರ್ಣನಾತೀತ ಮಹಿಳೆಗೆ ಅಭಿನಂದನೆ.
2. ಹೆಣ್ಣು ಪ್ರಕೃತಿ, ಹೆಣ್ಣು ಸಂಸ್ಕೃತಿ, ಕಾಪಾಡಿಕೊಂಡರೆ ಉಳಿವು. ಮಹಿಳಾ ದಿನಾಚರಣೆಯ ಶುಭಾಶಯಗಳು.
3. ಮಹಿಳೆ ಮಮತೆ ಕರ್ತವ್ಯದ ಆಗರ, ಪ್ರೀತಿ ವಾತ್ಸಲ್ಯ ತಾಳ್ಮೆ ಕರುಣೆ ಅಕ್ಕರೆಯ ಸಾಗರ, ಸಮಯ ಪ್ರಜ್ಞೆ ಶಿಸ್ತಿನ ಸಿಪಾಯಿ.
4. ಹೆಣ್ಣು ಜಗದ ಕಣ್ಣು. ಕಳೆದುಕೊಳ್ಳಬೇಡ ಆ ಕಣ್ಣು. ಮಹಿಳಾ ದಿನಾಚರಣೆಯ ಶುಭಾಶಯಗಳು.

5. ಜೀವ ಕೊಡುವ ತಾಯಿಯಾಗಿ, ದೈರ್ಯತುಂಬುವ ಅಕ್ಕ-ತಂಗಿಯಾಗಿ, ಜೀವನಕ್ಕೆ ದಾರಿ ದೀಪವಾಗಿ, ಮನೆ ಮನಗಳ ಬೆಳಗಿಸುವ ಮಗಳಾಗಿ, ಪ್ರತಿ ಮೈಲುಗಲ್ಲಿನಲ್ಲೂ ಜೊತೆಯಾಗಿ ಇರುವ ನಿಮಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.
6. ಸರ್ವ ಭಾಂದವ್ಯವನ್ನು ನಿಭಾಯಿಸಿ, ತನ್ನವರ ಸಾಧನೆಗೆ ಪ್ರೋತ್ಸಾಹಿಸಿ ಬೆಂಗಾವಲಾಗಿ ನಿಂತು, ಗೆದ್ದರೂ ಸೋತರೂ ಮುನ್ನಡೆಯುವ ನಿಮಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.
7. ಬಂದಿದ್ದೆಲ್ಲವನ್ನು ಸಮಾನವಾಗಿ ಸ್ವೀಕರಿಸುವ ಕ್ಷಮಯಾಧರಿತ್ರಿ ನೀನು, ದೇವತೆಯ ಪ್ರತಿರೂಪ ನೀನು. ನೊಂದು ಬೆಂದರೂ ಆತ್ಮಾಭಿಮಾನ ಬಿಡದೆ, ಸರ್ವ ಕ್ಷೇತ್ರಗಳಲ್ಲೂ ಛಾಪು ಮೂಡಿಸಿದ ಮಹಿಳೆಗೆ ಸಲಾಮ್.
8. ಸುಖ ದು:ಖವನ್ನು ಸಮನಾಗಿ ಸ್ವೀಕರಿಸುವ ಖನಿ, ಮನಸೆಂಬ ಮನೆಗೆ ಇವಳೇ ಮಹಾರಾಣಿ, ಎಲ್ಲರನ್ನೂ ಒಂದುಗೂಡಿಸುವ ಶಕ್ತಿ, ಎಲ್ಲರಲ್ಲೂ ಪ್ರೇಮದ ದೀವಿಗೆ ಬೆಳಗುವವಳು. ಮಹಿಳಾ ದಿನಾಚರಣೆಯ ಶುಭಾಶಯಗಳು,
9. ಅಣ್ಣನ ಪ್ರೀತಿಯ ತಂಗಿಯಾಗಿ, ಅಕ್ಕನ ಜೀವದ ಗೆಳತಿಯಾಗಿ, ಅಪ್ಪನ ಮುದ್ದಿನ ಮಗಳಾಗಿ, ತಮ್ಮನ ಎರಡನೇ ತಾಯಿಯಾಗುವ ನಿನ್ನ ಪಾತ್ರ ನಿಭಾಯಿಸಲು ಯಾರಿಂದ ಸಾಧ್ಯ?
10. ವರ್ಣನೆಗೆ ನಿಲುಕದ ಸೌಂದರ್ಯ, ನವಿಲೇ ಮೆಚ್ಚುವ ಅಂದ, ನಕ್ಷತ್ರವೇ ಬೆರಗಾಗುವ ಹೊಳಪು, ದೈವವೇ ಶರಣಾಗುವ ಪ್ರೀತಿ, ನೋವೇ ತಲೆಬಾಗುವ ಸಹನೆ ಹೊಂದಿದ ಹೆಣ್ಣಿಗೆ ಹೃತ್ಪೂರ್ವಕ ಶುಭಾಶಯಗಳು.
11. ಸ್ತ್ರೀ ಎಂದರೆ ಒಂದು ಸೌಂದರ್ಯದ ಗಣಿ, ಅವಳ ಭೂಮಿ ತೂಕದ ಸಹನೆಗೆ ನಾ ಚಿರಋಣಿ. ಮಹಿಳಾ ದಿನಾಚರಣೆಯ ಶುಭಾಶಯಗಳು.
12. ಹೆಣ್ಣು ಸೃಷ್ಟಿಯ ಕಣ್ಣು, ಸಂಸಾರದ ಹುಣ್ಣು ತಿದ್ದಿ ಹಸಿವನ್ನು ನೀಗುವ ಮಹಿಳೆಗೆ ನನ್ನದೊಂದು ಸಲಾಮ್.
13. ಗರ್ಭದಲ್ಲಿ ಕಾಯುವವಳು ಜನ್ಮದಾತೆ, ಅವಳ ಸಂಕುಲವನ್ನು ಉಳಿಸಿ ಬೆಳೆಸಿ. ಮಹಿಳಾ ದಿನಾಚರಣೆಯ ಶುಭಾಶಯಗಳು.
14. ಹುಟ್ಟುತ್ತಲೇ ಶೋಷಣೆ, ಪ್ರತಿಹೆಜ್ಜೆಯಲ್ಲೂ ನೋವು, ಕಾಮುಕ ಕಣ್ಣನ್ನು ತಪ್ಪಿಸಿ ಓಡಾಡುವ ಸಹನೆಯ ಪ್ರತಿರೂಪವಾದ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.
15. ನಿನ್ನಂದಲೇ ಸುಖ, ನಿನ್ನಿಂದಲೇ ಶಾಂತಿ, ನೀ ಒಲಿದರೆ ನಿಜ ಸಂಗಾತಿ. ಮಹಿಳಾ ದಿನಾಚರಣೆಯ ಶುಭಾಶಯಗಳು.












Click it and Unblock the Notifications