ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30ರ ವಯಸ್ಸಿಗೆ ಹಾರ್ಟ್ ಅಟ್ಯಾಕ್ ಯಾಕೆ? ವಿಲನ್ ತೂಕವೋ, ಬೊಜ್ಜೋ?

|
Google Oneindia Kannada News

ಸಣ್ಣ ಸಣ್ಣ ವಯಸ್ಸಿನವರಿಗೂ ಹೃದಯಾಘಾತವಾಗುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. 50 ವರ್ಷದೊಳಗಿನ ವ್ಯಕ್ತಿಗಳಿಗೆ ಹೃದಯಾಘಾತವಾಗುವುದು ಸಾಮಾನ್ಯವಾಗಿ ಹೋಗಿದೆ. ಆದರೆ, ಇನ್ನೂ 30 ದಾಟದ ಮಂದಿಯಲ್ಲೂ ಹಾರ್ಟ್ ಅಟ್ಯಾಕ್ ಆಗುತ್ತಿದೆ.

ಈಗ ದಾಖಲಾಗುತ್ತಿರುವ ಹೃದಯಾಘಾತ ಪ್ರಕರಣಗಳಲ್ಲಿ ಪ್ರತೀ ಐದು ಪ್ರಕರಣದಲ್ಲಿ ಒಂದು ಪ್ರಕರಣ 40 ವರ್ಷದೊಳಗಿನ ವಯೋಮಾನದವರದ್ದಾಗಿರುತ್ತದೆ. 30 ವರ್ಷದೊಳಗಿನ ವಯೋಮಾನದವರಲ್ಲಿ ಹಾರ್ಟ್ ಅಟ್ಯಾಕ್ ಅಗುವುದು ಪ್ರತೀ ವರ್ಷ ಶೇ ೨ರಷ್ಟು ಹೆಚ್ಚುತ್ತಿದೆ.

'ಹೊಗೆ' ಎಳೆಯೋರಿಗೆ ಖುಷಿ ಸುದ್ದಿಯಾ? ಮಾಲಿನ್ಯ, ಧೂಮಪಾನ, ಹೃದಯಾಘಾತಕ್ಕೆ ಏನಿದೆ ನಂಟು?'ಹೊಗೆ' ಎಳೆಯೋರಿಗೆ ಖುಷಿ ಸುದ್ದಿಯಾ? ಮಾಲಿನ್ಯ, ಧೂಮಪಾನ, ಹೃದಯಾಘಾತಕ್ಕೆ ಏನಿದೆ ನಂಟು?

ಹಾರ್ಟ್ ಅಟ್ಯಾಕ್‌ನಲ್ಲಿ ಬಹುತೇಕ ಪ್ರಕರಣಗಳು ಮಯೋಕಾರ್ಡಿಯಲ್ ಇನ್ಫಾರ್ಕೇಶನ್‌ನಿಂದ ಆಗುತ್ತವೆ. ರಕ್ತದ ಪರಿಚಲನೆ ಸ್ಥಗಿತಗೊಂಡು ಹೃದಯದ ಸ್ನಾಯುವಿಗೆ ಧಕ್ಕೆಯಾದಾಗ ಎಂಐ ತೊಂದರೆ ಆಗುತ್ತದೆ.

ಹೃದಯಾಘಾತಕ್ಕೆ ಏನು ಕಾರಣ, ಹಾರ್ಟ್ ಅಟ್ಯಾಕ್ ಅಗುತ್ತಿದೆ ಎಂಬ ಸುಳಿವು ಹೇಗೆ ಪಡೆಯಬಹುದು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಹಾಗೆಯೇ, ತೂಕದ ಬಗ್ಗೆ ಗಮನ ಕೊಡುವುದಕ್ಕಿಂತ ಹೆಚ್ಚಾಗಿ ನಿಮ್ಮ ಹೊಟ್ಟೆಯ ಸುತ್ತಳತೆ ಬಗ್ಗೆ ಹುಷಾರ್ ಎಂದು ತಜ್ಞರು ಹೇಳುತ್ತಾರೆ.

ಹಾರ್ಟ್ ಅಟ್ಯಾಕ್ ಲಕ್ಷಣಗಳು ಏನು?

ಹಾರ್ಟ್ ಅಟ್ಯಾಕ್ ಲಕ್ಷಣಗಳು ಏನು?

ಹೃದಯಾಘಾತ ಯಾವಾಗ ಹೇಗೆ ಸಂಭವಿಸುತ್ತದೆ ಗೊತ್ತಾಗುವುದಿಲ್ಲ. ಕೆಲವೊಮ್ಮೆ ದಿಢೀರ್ ಆಗಿ ತೀವ್ರ ಮಟ್ಟದಲ್ಲಿ ಹೃದಯ ಸ್ತಂಬನವಾಗುತ್ತದೆ. ಮೊದಲ ಬಾರಿಗೆ ಹಾರ್ಟ್ ಅಟ್ಯಾಕ್ ಆಗುವಾಗ ಸಾಮಾನ್ಯವಾಗಿ ಅದು ಮೆದುವಾಗಿರುತ್ತದೆ. ಯಾವುದೋ ಮೈಕೈ ನೋವು ಎಂದು ನೀವು ಯಾಮಾರಬಹುದು.

* ಬಹುತೇಕ ಹೃದಯಾಘಾತ ಪ್ರಕರಣಗಳಲ್ಲಿ ಎದೆಯ ಮಧ್ಯಭಾಗದಲ್ಲಿ ನೋವು ಕಾಣಿಸಿಕೊಂಡ ಕೆಲ ನಿಮಿಷಗಳವರೆಗೂ ಇರುತ್ತದೆ. ಕೆಲವೊಮ್ಮೆ ನೋವು ಬಿಟ್ಟು ಬಿಟ್ಟು ಬರಬಹುದು. ಎದೆಯಲ್ಲಿ ನೋವು ಅಥವಾ ಏನೋ ಒತ್ತಿದಂತೆ ಅನಿಸಬಹುದು, ಅಥವಾ ಎದೆಯನ್ನು ಕಿವುಚಿದಂತೆಯೂ ಅನಿಸಬಹುದು.

* ಕೈ, ಬೆನ್ನು, ಕುತ್ತಿಗೆ, ದವಡೆ ಅಥವಾ ಹೊಟ್ಟೆಯಲ್ಲಿ ನೋವು ಬರಬಹುದು.

* ನಿಮಗೆ ಎದೆ ನೋವು ಇಲ್ಲದಿದ್ದರೂ ಕೆಲವೊಮ್ಮೆ ಉಸಿರಾಟ ಆಡಲು ಕಷ್ಟವಾಗಬಹುದು. ಇದು ಕೂಡ ಹಾರ್ಟ್ ಅಟ್ಯಾಕ್ ಲಕ್ಷಣ

* ವಾಂತಿ ಬರುವಂತೆ ಅನಿಸಬಹುದು, ತಲೆ ಧಿಮ್ ಅನಿಸಬಹುದು, ಅಥವಾ ಬೆವರು ಬರಬಹುದು.

ದಪ್ಪಗಾದೀರೀ ಜೋಕೆ

ದಪ್ಪಗಾದೀರೀ ಜೋಕೆ

ದೇಹದ ತೂಕ ಅತಿಯಾಗಿ ಹೆಚ್ಚಾದರೆ ತೊಂದರೆ ಎಂಬ ಅಭಿಪ್ರಾಯ ಇದೆ. ಇದರಲ್ಲಿ ಸತ್ಯಾಂಶ ಇದೆ. ಆದರೆ, ದೇಹದ ತೂಕಕ್ಕಿಂತ ಹೆಚ್ಚಾಗಿ ದೇಹದ ಬೊಜ್ಜು ಅಪಾಯಕಾರಿ. ಅದರಲ್ಲೂ ಹೊಟ್ಟೆಯ ಬೊಜ್ಜು ಹೆಚ್ಚಿದಷ್ಟೂ ಅಪಾಯವೂ ಹೆಚ್ಚು ಎಂದಿದೆ ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಸಂಶೋಧನೆ.

ಕೆಲವೊಮ್ಮೆ ನಮ್ಮ ದೇಹದ ತೂಕ ಸರಿಯಾದ ಪ್ರಮಾಣದಲ್ಲಿ ಇರುತ್ತದೆ. ಆದರೆ, ಹೊಟ್ಟೆಯಲ್ಲಿನ ಬೊಜ್ಜು ಅಧಿಕ ಇರುತ್ತದೆ. ಇದು ಆರೋಗ್ಯದ ಲಕ್ಷಣವಲ್ಲ. ಹೊಟ್ಟೆಯ ಸುತ್ತಳಗೆ ಒಂದು ಇಂಚು ಹೆಚ್ಚಿದಷ್ಟೇ ಹೃದಯಾಘಾತದ ಸಂಭವನೀಯತೆ ಶೇ. 10ರಷ್ಟು ಹೆಚ್ಚುತ್ತದೆ ಎಂದು ಆಕ್ಸ್‌ಫರ್ಡ್ ಸಂಶೋಧಕರು ಹೇಳುತ್ತಾರೆ.

ಬ್ರಿಟನ್ ದೇಶದಲ್ಲಿ 13 ವರ್ಷಗಳ ಕಾಲ 4 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಅಧ್ಯಯನ ನಡೆಸಿ ಈ ಅಂಶವನ್ನು ಪತ್ತೆ ಮಾಡಲಾಗಿದೆ. ಈ ಅಧ್ಯಯನದ ಪ್ರಕಾರ, ತೂಕ ಹೆಚ್ಚು ಇರುವವರಿಗಿಂತ ಹೊಟ್ಟೆಯ ಬೊಜ್ಜು ಹೆಚ್ಚಿರುವ ಜನರಲ್ಲಿ ಹೃದಯದ ತೊಂದರೆಗಳು ಹೆಚ್ಚಿರುವುದು ಕಂಡುಬಂದಿದೆ.

35 ವರ್ಷದೊಳಗಿನವರಿಗೆ ಯಾಕೆ ಹಾರ್ಟ್ ಅಟ್ಯಾಕ್?

35 ವರ್ಷದೊಳಗಿನವರಿಗೆ ಯಾಕೆ ಹಾರ್ಟ್ ಅಟ್ಯಾಕ್?

* ಕಳಪೆ ಜೀವನಶೈಲಿ
* ಅತಿಯಾದ ಧೂಮಪಾನ ಅಥವಾ ಮದ್ಯಪಾನ
* ಅತಿ ತೂಕ ಅಥವಾ ಬೊಜ್ಜು
* ಒತ್ತಡ
* ಬಿಪಿ ಅಥವಾ ಡಯಾಬಿಟಿಸ್

ಯಾವ ಎಣ್ಣೆ ಡೇಂಜರ್, ಯಾವುದು ಬೆಟರ್? ತುಪ್ಪ ತಿನ್ನೋದು ತಪ್ಪಾ?ಯಾವ ಎಣ್ಣೆ ಡೇಂಜರ್, ಯಾವುದು ಬೆಟರ್? ತುಪ್ಪ ತಿನ್ನೋದು ತಪ್ಪಾ?

ಸಣ್ಣ ವಯಸ್ಸಿನವರಿಗೆ ಮಯೋಕಾರ್ಡಿಯಲ್ ಇನ್ಫಾರ್ಕೇಶನ್ ಅಥವಾ ಹಾರ್ಟ್ ಅಟ್ಯಾಕ್ ಸಂಭವಿಸಲು ಬಹು ಕಾರಣಗಳು ಇವೆ. ಧೂಮಪಾನ, ಬೊಜ್ಜು, ನಿಷ್ಕ್ರಿಯ ಜೀವನಶೈಲಿ ಇತ್ಯಾದಿ ಎಲ್ಲವೂ ಸೇರಿ ಎಳೆಯ ವಯಸ್ಸಿನವರಿಗೆ ಹೃದಯದ ಸಮಸ್ಯೆ ತರುವ ಸಾಧ್ಯತೆ ಹೆಚ್ಚಿರುತ್ತದೆ.

ಮುನ್ನೆಚ್ಚರಿಕೆ ಕ್ರಮ

ಮುನ್ನೆಚ್ಚರಿಕೆ ಕ್ರಮ

ಹೃದಯಾಘಾತ ಮಾತ್ರವಲ್ಲ ನಮ್ಮ ಸಾಮಾನ್ಯ ಆರೋಗ್ಯವನ್ನು ಕಾಪಾಡಬೇಕೆಂದರೆ ಸೂಕ್ತ ಜೀವನಶೈಲಿ ಅಳವಡಿಸಿಕೊಳ್ಳುವುದು ಅನಿವಾರ್ಯ ಮತ್ತು ಅಗತ್ಯವೂ ಹೌದು.

* ಫೈಬರ್‌ಯುಕ್ತ ಆಹಾರವನ್ನು ತಪ್ಪದೇ ಸೇವಿಸಿ
* ಉಪ್ಪು, ಸೋಡಿಯಂ ಅಂಶದ ಪದಾರ್ಥಗಳನ್ನು ಕಡಿಮೆ ತಿನ್ನಿ
* ಪ್ಯಾಕೇಜ್ ಮಾಡಿದ ಆಹಾರವನ್ನು ತಿನ್ನಬೇಡಿ
* ನಿಯಮಿತವಾಗಿ ನಿಮ್ಮ ಶುಗರ್, ಬಿಪಿ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸುತ್ತಿರಿ.
* ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ನಿಯಮಿತವಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

ವಾಕಿಂಗ್ ಬಹಳ ಮುಖ್ಯ. ಸಾಧ್ಯವಾದಷ್ಟೂ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಹತ್ತಿರದ ಪ್ರದೇಶಗಳಿಗೆ ನಡೆದೇ ಹೋಗುವುದನ್ನು ರೂಢಿಸಿಕೊಳ್ಳಿ.

(ಒನ್ಇಂಡಿಯಾ ಸುದ್ದಿ)

English summary
Oxford University researchers have found that people with extra waistline has higher risk for heart attack. Here are few reasons why under 35 people are getting heart complications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X