ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಮ್ಯಾ ಟ್ವಿಟ್ಟರ್ ಗೆ ಗುಡ್ ಬೈ ಅಂದಿದ್ದಕ್ಕೆ ಅಸಲಿ ಕಾರಣ ಇದೇನಾ?

|
Google Oneindia Kannada News

Recommended Video

ರಮ್ಯಾ ಟ್ವಿಟ್ಟರ್ ಇನ್ಸ್ಟಾಗ್ರಾಮ್ ಗೆ ಗುಡ್ ಬೈ ಹೇಳಲು ನಿಜವಾದ ಕಾರಣ ಇದೇನಾ? | Oneindia Kannada

ನವದೆಹಲಿ, ಜೂನ್ 04: ಲೋಕಸಭೆ ಚುನಾವಣೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅತೀ ಹೆಚ್ಚು ಕಾಲೆಳೆದವರ ಪಟ್ಟಿಯಲ್ಲಿ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಅವರಿಗೆ ಅಗ್ರಪಂಕ್ತಿಯಲ್ಲೇ ಸ್ಥಾನ ಸಿಕ್ಕಿದೆ.

ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ದಿನದಿನವೂ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ಕಾಲೆಳೆಯುವ ಕೆಲಸ ಮಾಡುತ್ತಿದ್ದ ರಮ್ಯಾ, ಇದ್ದಕ್ಕಿದ್ದಂತೆ ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಂ ಖಾತೆಗಳಿಗೆ ಗುಡ್ ಬೈ ಹೇಳಿರುವುದು ಕುತೂಹಲ ಸೃಷ್ಟಿಸಿತ್ತು.

ಕಾಂಗ್ರೆಸ್ ಸಾಮಾಜಿಕ ಜಾಲ ತಾಣ ಮುಖ್ಯಸ್ಥೆ ರಮ್ಯಾ ಟ್ವಿಟ್ಟರ್ ಖಾತೆ ನಿಷ್ಕ್ರಿಯಕಾಂಗ್ರೆಸ್ ಸಾಮಾಜಿಕ ಜಾಲ ತಾಣ ಮುಖ್ಯಸ್ಥೆ ರಮ್ಯಾ ಟ್ವಿಟ್ಟರ್ ಖಾತೆ ನಿಷ್ಕ್ರಿಯ

ಲೋಕಸಭೆ ಚುನಾವಣೆಯ ಸೋಲಿನ ನಂತರವು ಒಂದಷ್ಟು ದಿನ ಟ್ವಿಟ್ಟರ್ ನಲ್ಲಿ active ಆಗಿಯೇ ಇದ್ದ ರಮ್ಯಾ ಇದ್ಯಾಕೆ ಇದ್ದಕ್ಕಿದ್ದಂತೆ ಮೈಕ್ರೋ ಬ್ಲಾಗಿಂಗ್ ಸೈಟ್ ನಿಂದ ಹೊರಹೋದರು ಎಂಬ ಅನುಮಾನ ಎದ್ದಿತ್ತು. ಆದರೆ ರಮ್ಯಾ ಹೀಗೆ ಟ್ವಿಟ್ಟರ್ ನಿಂದ ಹೊರಹೋಗುತ್ತಿರುವುದು ಇದೇ ಮೊದಲಲ್ಲ. ಕಳೆದ ಅಕ್ಟೋಬರ್ ನಲ್ಲೂ ಅವರು ಕೆಲ ದಿನಗಳ ಕಾಲ ಟ್ವಿಟ್ಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರು. ಕಾಂಗ್ರೆಸ್ ಪಕ್ಷದ ಬಗ್ಗೆ ಅಸಮಾಧಾನಗೊಂಡ ರಮ್ಯಾ ಟ್ವಿಟ್ಟರ್ ನಿಂದ ಆಚೆ ಬಂದಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಕೆಲವೇ ದಿನಗಳ ನಂತರ ಮತ್ತೆ ಟ್ವಿಟ್ಟರ್ ಗೆ ಮರುಪದಾರ್ಪಣೆ ಮಾಡಿ ವದಂತಿಗಳನ್ನು ಹುಸಿಗೊಳಿಸಿದ್ದರು.

ಆದರೆ ಇದೀಗ ಮತ್ತೆ ಅವರು ಟ್ವಿಟ್ಟರ್ ನಿಂದ ಹೊರಹೋಗಿದ್ದಾರೆ. ಅಷ್ಟಕ್ಕೂ ಅದಕ್ಕೆ ಕಾರಣವೇನು?

ರಾಜಕೀಯದಿಂದ ಬ್ರೇಕ್?

ರಾಜಕೀಯದಿಂದ ಬ್ರೇಕ್?

ಕೇವಲ ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಂ ಮಾತ್ರವಲ್ಲದೆ ದಿವ್ಯ ಸ್ಪಂದನ ಅವರು ಕಾಂಗ್ರೆಸ್ ನ ಆಂತರಿಕ ವಾಟ್ಸಾಪ್ ಗ್ರೂಪ್ ನಿಂದಲೂ ಎಕ್ಸಿಟ್ ಆಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದ್ದು, ಅವರು ರಾಜಕಾರಣದಿಂದ ಕೆಲ ಕಾಲ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದಂತಿದೆ ಎಂದು ಪಕ್ಷದ ಕೆಲವು ಮೂಲಗಳು ತಿಳಿಸಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಟ್ವಿಟ್ಟರ್ ನಿಂದ ರಮ್ಯಾ ಆಪ್ತನ ನಿರ್ಗಮನ!

ಟ್ವಿಟ್ಟರ್ ನಿಂದ ರಮ್ಯಾ ಆಪ್ತನ ನಿರ್ಗಮನ!

ರಮ್ಯಾ ಟ್ವಿಟ್ಟರ್ ನಿಂದ ಹೊರಬಂದ ಕೆಲವೇ ದಿನದಲ್ಲಿ ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣಗಳ ನಿರ್ವಹಣಾ ವಿಭಾಗದ ಪ್ರಮುಖ ಸದಸ್ಯ ಚಿರಾಗ್ ಪಟ್ನಾಯಕ್ ಅವರು ಸಹ ಟ್ವಿಟ್ಟರ್ ಗೆ ಗುಡ್ ಬೈ ಹೇಳಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಚಿರಾಗ್ ಅವರ ವಿರುದ್ಧ ಕ್ರಿಮಿನಲ್ ಪ್ರಕಣಗಳಿದ್ದು, ಅವರೊಂದಿಗೆ ಗುರುತಿಸಿಕೊಂಡ ಕಾರಣಕ್ಕೆ ತನಗೂ ಸಮಸ್ಯೆಯಾಗಬಹುದು ಎಂಬುದನ್ನು ಅರಿತ ದಿವ್ಯ ಸ್ಪಂದನ ಕೆಲಕಾಲ ಸಾಮಾಜಿಕ ಮಾಧ್ಯಮದಿಂದ ದೂರವುಳಿಯಲು ನಿರ್ಧರಿಸಿದ್ದಾರೆ ಎಂಬ ವದಂತಿಯೂ ಇದೆ.

ದಿವ್ಯಸ್ಪಂದನ ನಂತರ ಟ್ವಿಟ್ಟರ್ ತೊರೆದ ಚಿರಾಗ್ ಪಟ್ನಾಯಕ್! ದಿವ್ಯಸ್ಪಂದನ ನಂತರ ಟ್ವಿಟ್ಟರ್ ತೊರೆದ ಚಿರಾಗ್ ಪಟ್ನಾಯಕ್!

ಮಾಧ್ಯಮಗಳಿಂದ ದೂರ ಉಳಿಯುವುದಕ್ಕಾಗಿ?

ಮಾಧ್ಯಮಗಳಿಂದ ದೂರ ಉಳಿಯುವುದಕ್ಕಾಗಿ?

ಲೋಕಸಭೆ ಚುನಾವಣೆಯ ಹೀನಾಯ ಪ್ರದರ್ಶನದಿಂದ ಬೇಸತ್ತಿರುವ ಕಾಂಗ್ರೆಸ್ ಪಕ್ಷ ಇನ್ನೊಂದು ತಿಂಗಳು ತನ್ನ ಪಕ್ಷದ ಯಾವುದೇ ಮುಖಂಡರು, ಸದಸ್ಯರು, ಕಾರ್ಯಕರ್ತರು ಮಾಧ್ಯಮಗಳ ಚರ್ಚೆಯಲ್ಲಿ ಪಾಲ್ಗೊಳ್ಳಬಾರದು ಎಂದು ಸೂಚನೆ ನೀಡಿದೆ. ಇದರದೇ ಭಾಗವಾಗಿ ರಮ್ಯಾ ಅವರೂ ತಮ್ಮ ಟ್ವಿಟ್ಟರ್ ಖಾತೆಯಿಂದ ಹೊರಗೆ ಹೋಗಿರಬಹುದು ಎನ್ನಲಾಗಿದೆ. ಚುನಾವಣೆಯ ಸೋಲಿನ ಬಳಿಕವೂ ಮೋದಿ ಸರ್ಕಾರದ ಕಾಲೆಳೆಯುವಂಥ ಟ್ವೀಟ್ ಗಳನ್ನು ಮಾಡಲು ಹೊರಟಿದ್ದ(ನಿರ್ಮಲಾ ಸೀತಾರಾಮನ್ ಕುರಿತಾದ ಟ್ವೀಟ್) ರಮ್ಯಾ ಅವರಿಗೆ ಪಕ್ಷದ ವರಿಷ್ಠರೇ ಎಚ್ಚರಿಕೆ ನೀಡಿರಬಹುದು ಎನ್ನಲಾಗಿದೆ.

ಖಾತೆ ನಿಷ್ಕ್ರಿಯ

ಖಾತೆ ನಿಷ್ಕ್ರಿಯ

ಏಪ್ರಿಲ್-ಮೇ ತಿಂಗಳಿನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52(543) ಸ್ಥಾನಗಳಲ್ಲಿ ಗೆದ್ದು ಹೀನಾಯ ಪ್ರದರ್ಶನ ತೋರಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಅಂದರೆ ಮೇ 01 ರಂದು ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ತಮ್ಮ ಟ್ವಿಟ್ಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರು.

ರಮ್ಯಾ ಥ್ಯಾಂಕ್ ಯೂ, 2024ಕ್ಕೆ ಮತ್ತೆ ಸಿಗೋಣ ಎಂದ ಟ್ವಿಟ್ಟಿಗರುರಮ್ಯಾ ಥ್ಯಾಂಕ್ ಯೂ, 2024ಕ್ಕೆ ಮತ್ತೆ ಸಿಗೋಣ ಎಂದ ಟ್ವಿಟ್ಟಿಗರು

English summary
Why Ramya aka Divya Spandana deleted her Twitter and instagram profiles? Is she taking break from politics? Here are the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X