#BanNetFlixInindia ಟ್ರೆಂಡಿಂಗ್ ಏಕೆ? ಸಾರ್ವಜನಿಕರಿಗೆ ಆಕ್ರೋಶವೇಕೆ?
ನವದೆಹಲಿ, ಸೆ. 06: ನೆಟ್ ಫ್ಲಿಕ್ಸ್ ನ ಬಹುನಿರೀಕ್ಷಿತ ಸೇಕ್ರೆಡ್ ಗೇಮ್ಸ್ 2 ಸರಣಿ ಪೈರಸಿ ಕಾರಣಕ್ಕೆ ಭಾರಿ ನಷ್ಟ ಅನುಭವಿಸಿತ್ತು. ಈಗ ಸೇಕ್ರೆಡ್ ಗೇಮ್ಸ್, ಲೈಲಾ ಹಾಗೂ ಘೌಲ್ ಮೂರು ಸರಣಿಯ ವಿರುದ್ಧ ಹಿಂದುಪರವಾದಿಗಳು ಒಟ್ಟಿಗೆ ತಿರುಗಿಬಿದ್ದಿದ್ದು, ನೆಟ್ ಫ್ಲಿಕ್ಸ್ ಭಾರತದಲ್ಲಿ ನಿಷೇಧಿಸುವಂತೆ ಅಭಿಯಾನ ನಡೆಸಿದ್ದಾರೆ.
ಮುಂಬೈನ ಭೂಗತ ಜಗತ್ತು, ರಾಜಕೀಯ, ಧರ್ಮ ಎಲ್ಲದರ ಬಗ್ಗೆ ಕಥೆ ಹೇಳುವ ಸೇಕ್ರೆಡ್ ಗೇಮ್ ಮೊದಲ ಸರಣಿ ಭಾರಿ ಯಶಸ್ಸು ತಂದಿತ್ತು. ಹೀಗಾಗಿ, ಸರಿ ಸುಮಾರು 100 ಕೋಟಿ ರು ಅಧಿಕ ಮೊತ್ತ ಹೂಡಿಕೆ ಮಾಡಿ ಎರಡನೇ ಸರಣಿಯನ್ನು ನೆಟ್ ಫ್ಲಿಕ್ ಬಿಡುಗಡೆ ಮಾಡಿತ್ತು. ಆದರೆ, ಈ ಸರಣಿಯಲ್ಲಿ ಸೆಕ್ಸ್, ನಗ್ನತೆ, ಹಿಂಸೆ, ಸರ್ಕಾರದ ವಿರುದ್ಧ ಘೋಷಣೆ ಎಲ್ಲವೂ ಇದರಲ್ಲಿ ಸೇರಿವೆ. ಇದಲ್ಲದೆ ಲೈಲಾ ಹಾಗೂ ಘೌಲ್ ನಲ್ಲೂ ಹಿಂದೂ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿವೆ ಎಂದು ಶಿವಸೇನಾದ ಐಟಿ ಸೆಲ್ ಪೊಲೀಸರಿಗೆ ದೂರು ಸಲ್ಲಿಸಿದೆ. "ದೇಶದ ಮಾನವನ್ನು ಜಾಗತಿಕವಾಗಿ ಹರಾಜು ಹಾಕಲಾಗುತ್ತಿದೆ" ಎಂದು ಎಲ್ ಟಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ರಮೇಶ್ ಸೋಲಂಕಿ ದೂರು ದಾಖಲಿಸಿದ್ದಾರೆ.
ಏನಿದು ಸೇಕ್ರೆಡ್ ಗೇಮ್ಸ್ : ಮುಂಬೈನ ಭೂಗತ ಜಗತ್ತು, ರಾಜಕೀಯ, ಧರ್ಮ ಎಲ್ಲದರ ಬಗ್ಗೆ ಕಥೆ ಹೇಳುವ ಸೇಕ್ರೆಡ್ ಗೇಮ್ ಮೊದಲ ಸರಣಿ ಭಾರಿ ಯಶಸ್ಸು ತಂದಿತ್ತು. ಹೀಗಾಗಿ, ಸರಿ ಸುಮಾರು 100 ಕೋಟಿ ರು ಅಧಿಕ ಮೊತ್ತ ಹೂಡಿಕೆ ಮಾಡಿ ಎರಡನೇ ಸರಣಿಯನ್ನು ನೆಟ್ ಫ್ಲಿಕ್ ಬಿಡುಗಡೆ ಮಾಡಿತ್ತು. ವಿಕ್ರಮ್ ಚಂದ್ರ ಎಂಬವರ ಕಾದಂಬರಿ ಆಧಾರಿತ ಕಥೆಯನ್ನು ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದಾರೆ. ಇನ್ನು ಸೈಫ್ ಅಲಿ ಖಾನ್, ನವಾಜುದ್ದೀನ್ ಸಿದ್ದಿಕಿ ಹಾಗೂ ರಾಧಿಕಾ ಅಪ್ಟೆ ಮುಖ್ಯ ಭೂಮಿಕೆಯಲ್ಲಿದ್ದ ವೆಬ್ ಸರಣಿ ವೀಕ್ಷಕರ ಮನ ಗೆದ್ದಿತ್ತು.
|
ವಿವಾದಿತ ಸರಣಿಗಳಿವೆ
ಸೇಕ್ರೆಡ್ ಗೇಮ್ಸ್ ಎರಡನೇ ಸೀಸನ್ ನಲ್ಲಿ ರಣವೀರ್ ಶೋರೆ ಹಾಗೂ ಕಲ್ಕಿ ಕೋಚ್ಲಿನ್ ಸೇರ್ಪಡೆಗೊಂಡಿದ್ದಾರೆ. ನೆಟ್ ಫ್ಲಿಕ್ಸ್ ನ ವೆಬ್ ಸರಣಿ 'ಸೇಕ್ರೆಡ್ ಗೇಮ್ಸ್'ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಅವಮಾನಿಸುವಂಥ ಡೈಲಾಗ್ ಇದೆ ಎಂದು ಆರೋಪಿಸಲಾಗಿತ್ತು. ಪಶ್ಚಿಮಬಂಗಾಳದ ಕಾಂಗ್ರೆಸ್ ನಾಯಕರೊಬ್ಬರು ನಟ ನವಾಝುದ್ದೀನ್ ಸಿದ್ದಿಕಿ, ನೆಟ್‌ಫ್ಲಿಕ್ಸ್ ಹಾಗೂ ವೆಬ್ ಸರಣಿಯ ನಿರ್ಮಾಪಕರ ವಿರುದ್ಧ ಕೋಲ್ಕತ್ತಾ ಪೊಲೀಸರ ಬಳಿ ದೂರು ದಾಖಲಿಸಿದ್ದರು. ಈ ಬಗ್ಗೆ ರಾಜೀವ್ ಗಾಂಧಿ ಅವರ ಪುತ್ರ ರಾಹುಲ್ ಗಾಂಧಿ ಅವರು ಪ್ರತಿಕ್ರಿಯಿಸಿ, ಟಿವಿ ಸರಣಿಯಿಂದ ನನ್ನ ತಂದೆಯ ವ್ಯಕ್ತಿತ್ವವನ್ನು ಅಳೆಯಲಾಗದು ಎಂದಿದ್ದರು.
| Array |
ಭವಿಷ್ಯದ ಭಾರತ ತೋರಿಸಿದ ಲೈಲಾ
ಭವಿಷ್ಯದ ಭಾರತ ಹೀಗಿರಬಹುದು ಎಂದು ತೋರಿಸಿದ ಲೈಲಾ, ಹಿಂದೂ ಸಂಸ್ಕೃತಿ, ಸಂಪ್ರಾಯದ ವಿರುದ್ಧವಾಗಿದೆ ಎಂದು ಲೈಲಾ ಟ್ರೇಲರ್ ಬಂದ ಕೂಡಲೇ ಪ್ರತಿಭಟನೆ ಆರಂಭವಾಗಿತ್ತು.
ಅಮೇಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ಬಳಿಕ ಬಂದಿದೆ ಕನ್ನಡದ್ದೇ ಆದ ಪ್ಲೆಫಿಕ್ಸ್
|
ನೆಟ್ ಫ್ಲಿಕ್ ಏಕೆ ನಿಷೇಧಿಸಬೇಕು
ನೆಟ್ ಫ್ಲಿಕ್ ಏಕೆ ನಿಷೇಧಿಸಬೇಕು ಎಂಬುದಕ್ಕೆ ಕಾರಣ ಕೊಟ್ಟ ಚೇತನ್ ಎಂಬುವರು, ಇದು ರಾಷ್ಟ್ರೀಯತೆಯ ವಿರೋಧಿ, ಹಿಂದೂ ವಿರೋಧಿ ಎಂದು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.
|
ಕೆಲ ದೃಶ್ಯಗಳಿಗೆ ನಿರ್ಬಂಧವಿರಲಿ
ಕೆಲ ದೃಶ್ಯಗಳಿಗೆ ನಿರ್ಬಂಧವಿರಲಿ, 18+ ಕಂಟೆಂಟ್ ಇದ್ದರೆ ಸೂಚಿಸಲಾಗುತ್ತದೆ, ಆದರೆ, ಸರಿಯಾದ ಸೆನ್ಸಾರ್ ಶಿಪ್ ಇಲ್ಲ, ಹಾಗಂತ ನೆಟ್ ಫ್ಲಿಕ್ಸ್ ನಿಷೇಧಿಸುವುದು ಸರಿಯಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.











Click it and Unblock the Notifications