
ವ್ಯಕ್ತಿಚಿತ್ರ: ಟ್ವಿಟ್ಟರ್ ಹೊಸ ಬಾಸ್ ಪರಾಗ್ ಅಗರವಾಲ್
ನವದೆಹಲಿ, ನವೆಂಬರ್ 29: ಜನಪ್ರಿಯ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್ ಸಂಸ್ಥೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಸಿಇಒ) ಜಾಕ್ ಡೋರ್ಸಿ ಅವರು ತಮ್ಮ ಹುದ್ದೆಯನ್ನು ತೊರೆದಿದ್ದಾರೆ. ತಮ್ಮ ಸ್ಥಾನದಲ್ಲಿ ಸಿಇಒ ಆಗಿ ಪರಾಗ್ ಅಗರವಾಲ್ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಜಾಕ್ ಟ್ವೀಟ್ ಮಾಡಿದ್ದಾರೆ. ಟ್ವಿಟ್ಟರ್ ಸಂಸ್ಥೆಯಲ್ಲಿ ಸಿಟಿಒ ಆಗಿ ಕಾರ್ಯ ನಿರ್ವಹಿಸಿದ್ದ ಪರಾಗ್ ಇನ್ಮುಂದೆ ಸಿಇಒ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ಇಂಜಿನಿಯರ್ ಪರಾಗ್ ಅವರು ಸ್ಟಾನ್ ಫಾರ್ಡ್ ವಿವಿಯಿಂದ ಪಿಎಚ್ ಡಿ ಪಡೆದುಕೊಂಡಿದ್ದಾರೆ. ಸಾಫ್ಟ್ ವೇರ್ ಇಂಜಿನಿಯರ್ ಆಗಿ ಟ್ವಿಟ್ಟರ್ ಸಂಸ್ಥೆ ಸೇರಿ ಹಂತ ಹಂತವಾಗಿ ಬೆಳೆದ ಪರಾಗ್ ಅವರು ಹತ್ತು ವರ್ಷಗಳ ಸಂಸ್ಥೆಯ ಸಿಇಒ ಆಗಿ ಹೊರ ಹೊಮ್ಮಿದ್ದಾರೆ.
Breaking news: ಟ್ವಿಟ್ಟರ್ ಸಿಇಒ ಹುದ್ದೆ ತೊರೆದ ಜಾಕ್ ಡಾಸಿ
ಸರಿ ಸುಮಾರು 37 ಬಿಲಿಯನ್ ಡಾಲರ್ ಮೌಲ್ಯ ಹೊಂದಿರುವ ಸಂಸ್ಥೆಯ ಮುಖ್ಯಸ್ಥರಾಗಿರುವ ಪರಾಗ್ ಅವರು ತಾಂತ್ರಿಕ ವಿಭಾಗದ ಅಭಿವೃದ್ಧಿ, ಮಷಿನ್ ಲರ್ನಿಂಗ್, ಎಐ ಬಳಕೆ, ಆದಾಯ ಗಳಿಕೆ, ಉನ್ನತ ತಂತ್ರಜ್ಞಾನ ಮೂಲಕ ಗ್ರಾಹಕರನ್ನು ಸೆಳೆಯುವುದು ಮುಂತಾದ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ. ಜೊತೆಗೆ ಭಾರತದಂಥ ದೇಶಗಳು ವಿಧಿಸಿರುವ ಕಠಿಣ ಸಾಮಾಜಿಕ ಜಾಲ ತಾಣ ನಿಯಮಗಳ ಬಗ್ಗೆ ಸಂಸ್ಥೆ ಏನು ನಿಲುವು ತಾಳಲಿದೆ ಎಂಬುದನ್ನು ಕಾಣಬೇಕಿದೆ.
ಟ್ವಿಟ್ಟರ್ ಸಂಸ್ಥೆ ಸೇರುವುದಕ್ಕೂ ಮುನ್ನ ಮೈಕ್ರೋಸಾಫ್ಟ್, ಯಾಹೂ, ಎಟಿ ಅಂಡ್ ಟಿ ಮುಂತಾದ ಸಂಸ್ಥೆಗಳ ಸಂಶೋಧನಾ ವಿಭಾಗದಲ್ಲಿ ಪರಾಗ್ ಕಾರ್ಯ ನಿರ್ವಹಿಸಿದ್ದಾರೆ.
ಟೆಕ್ ದಿಗ್ಗಜ ಸಂಸ್ಥೆ ಹಾಗೂ ಭಾರತ ಮೂಲದವರು:
ಗೂಗಲ್ ಸಂಸ್ಥೆಯ ಆಲ್ಫಾಬೆಟ್‌ನ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಂಸ್ಥೆಯ ಸತ್ಯ ನಾದೆಲ್ಲಾ, ಐಬಿಎಂ ಸಂಸ್ಥೆಯ ಅರವಿಂದ್ ಕೃಷ್ಣ, ಅಡೋಬ್ ಸಂಸ್ಥೆಯ ಶಂತನು ನಾರಾಯಣ್ ಅವರ ಸಾಲಿಗೆ ಟ್ವಿಟ್ಟರ್ ಸಿಇಒ ಪರಾಗ್ ಅಗರವಾಲ್ ಹೊಸ ಸೇರ್ಪಡೆಯಾಗಿದ್ದಾರೆ.
2006ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸುವಂಥ ಬ್ಲಾಗಿಂಗ್ ತಾಣವನ್ನು ಡೋರ್ಸಿ ಸ್ಥಾಪಿಸಿದರು. 2008 ರವರೆಗೆ ಸಿಇಒ ಆಗಿದ್ದರು. ನಂತರ ಮಾಜಿ ಸಿಇಒ ಡಿಕ್ ಕಾಸ್ಟೊಲೊ ಕೆಳಗಿಳಿದ ನಂತರ ಮತ್ತೊಮ್ಮೆ 2015 ರಲ್ಲಿ ಟ್ವಿಟರ್ ಬಾಸ್ ಆಗಿ ಡಾಸಿ ಮರಳಿದರು.
ಅಕ್ಟೋಬರ್ 5. 2015 ರಂದು ಡೋರ್ಸಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಂತರ ಷೇರುಗಳು 85% ರಷ್ಟು ಜಿಗಿದಿವೆ. ಈ ಮಧ್ಯೆ, ನವೆಂಬರ್ 19, 2015 ರ ಐಪಿಒ ಘೋಷಣೆ ಬಳಿಕ ಸ್ಕ್ವೇರ್ ಷೇರುಗಳು 1,566% ರಷ್ಟು ಏರಿಕೆ ಕಂಡಿವೆ. ಜಾಕ್ ತಮ್ಮ ಹುದ್ದೆಯಿಂದ ಕೆಳಗಿಳಿಯುವ ಸುದ್ದಿ ಹಬ್ಬುತ್ತಿದ್ದಂತೆ ಟ್ವಿಟ್ಟರ್ ಷೇರುಗಳು ಶೇ 5ರಷ್ಟು ಏರಿಕೆ ಕಂಡಿವೆ.
Deep gratitude for @jack and our entire team, and so much excitement for the future. Here’s the note I sent to the company. Thank you all for your trust and support 💙 https://t.co/eNatG1dqH6 pic.twitter.com/liJmTbpYs1
— Parag Agrawal (@paraga) November 29, 2021
2022 ರ ಬೋರ್ಡ್ ಸದಸ್ಯರ ಸಭೆ ಮುಗಿಯುವ ತನಕ ಡೋರ್ಸಿ ಅವರು ಮಂಡಳಿಯ ಸದಸ್ಯರಾಗಿ ಉಳಿಯುತ್ತಾರೆ ಎಂದು ಕಂಪನಿ ಹೇಳಿದೆ. ನೂತನ ಸಿಇಒ ಪರಾಗ್ ಅಗರವಾಲ್ ಅವರು ಅನೇಕ ಗುರಿಗಳನ್ನು ಎದುರಿಸಲು ಸಜ್ಜಾಗಬೇಕಿದೆ. ಕಂಪನಿಯು 2023 ರ ಅಂತ್ಯದ ವೇಳೆಗೆ 315 ಮಿಲಿಯನ್ ಹಣಗಳಿಸಬಹುದಾದ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದುವ ಗುರಿಯನ್ನು ಹೊಂದಿದೆ ಮತ್ತು ಆ ವರ್ಷದಲ್ಲಿ ವಾರ್ಷಿಕ ಆದಾಯವನ್ನು ಕನಿಷ್ಠ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ.
ಕಳೆದ ವರ್ಷ ಟ್ವಿಟ್ಟರ್ ಮಧ್ಯಸ್ಥಗಾರ ಎಲಿಯಟ್ ಮ್ಯಾನೇಜ್‌ಮೆಂಟ್ ಅವರನ್ನು ಬದಲಿಸಲು ಪ್ರಯತ್ನಿಸಿದಾಗ ಡೋರ್ಸಿ ಪದಚ್ಯುತಿಯ ಬಗ್ಗೆ ಸುದ್ದಿ ಹಬ್ಬಿತ್ತು. ಎಲಿಯಟ್ ಮ್ಯಾನೇಜ್‌ಮೆಂಟ್ ಸಂಸ್ಥಾಪಕ ಮತ್ತು ಬಿಲಿಯನೇರ್ ಹೂಡಿಕೆದಾರ ಪಾಲ್ ಸಿಂಗರ್ ಅವರು ಎರಡೂ ಸಾರ್ವಜನಿಕ ಕಂಪನಿಗಳನ್ನು ನಡೆಸಬೇಕೆ ಎಂದು ಪ್ರಶ್ನಿಸಿದ್ದರು. ಹೂಡಿಕೆ ಸಂಸ್ಥೆಯು ಕಂಪನಿಯ ನಿರ್ವಹಣೆಯೊಂದಿಗೆ ಒಪ್ಪಂದಕ್ಕೆ ಬರುವ ಮೊದಲು, ಒಂದು ಸಂಸ್ಥೆಯ ಸಿಇಒ ಸ್ಥಾನದಿಂದ ಕೆಳಗಿಳಿಯುವಂತೆ ಕರೆ ನೀಡಿದ್ದರು.