ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಹಾದಿಯಲ್ಲಿ ಸಾಗಿರುವ ಹರ್ಯಾಣ ಸಿಎಂ ಮನೋಹರ್ ಲಾಲ್

|
Google Oneindia Kannada News

ಹರ್ಯಾಣದಲ್ಲಿ ಸರ್ಕಾರ ರಚನೆ ಕಸರತ್ತು ಕೊನೆಗೊಂಡಿದೆ. ಬಿಜೆಪಿ ಮತ್ತು ಜೆಜೆಪಿ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಯಾಗಿದ್ದು, ಮನೋಹರ್ ಲಾಲ್ ಖಟ್ಟರ್ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ. ಐದು ವರ್ಷಗಳ ಮುಂಚೆ ಮೊದಲ ಬಾರಿಗೆ ಶಾಸಕರಾಗಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಅವರ ಹಾದಿಯನ್ನು ತುಳಿದಿದ್ದರು. ಈಗ ಎರಡನೇ ಬಾರಿಗೆ ಆರೆಸ್ಸೆಸ್ ಕಟ್ಟಾಳು ಖಟ್ಟರ್ ಗೆ ಅವಕಾಶ ಸಿಕ್ಕಿದೆ.

ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿತ್ತು. 40 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಜನನಾಯಕ ಜನತಾ ಪಕ್ಷ (ಜೆಜೆಪಿ) ಜೊತೆ ಸೇರಿ ಸರ್ಕಾರ ರಚಿಸುವುದು ಅನಿವಾರ್ಯವಾಯಿತು.

ಮಹಾರಾಷ್ಟ್ರ, ಹರ್ಯಾಣ ಫಲಿತಾಂಶ 2019: ಗೆದ್ದವರು, ಸೋತವರುಮಹಾರಾಷ್ಟ್ರ, ಹರ್ಯಾಣ ಫಲಿತಾಂಶ 2019: ಗೆದ್ದವರು, ಸೋತವರು

90 ಸದಸ್ಯ ಬಲದ ಹರ್ಯಾಣ ವಿಧಾನಸಭೆಯಲ್ಲಿ ಬಿಜೆಪಿ 40, ಕಾಂಗ್ರೆಸ್ 31, ಜೆಜೆಪಿ 10, ಐಎನ್‌ಎಲ್‌ಡಿ 1, ಹೆಚ್‌ಎಲ್‌ಪಿ 1 ಸ್ಥಾನದಲ್ಲಿ ಜಯಗಳಿಸಿದೆ. 7 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 46.

ಬಿಜೆಪಿ-ಜೆಜೆಪಿ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಜೆಜೆಪಿ ಪಾಲಾಗಿದೆ. 31 ವರ್ಷ ವಯಸ್ಸಿನ ದುಷ್ಯಂತ್ ಚೌಟಾಲಾ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಜೆಪಿಗೆ ಬೆಂಬಲ ನೀಡುವ ಜೆಜೆಪಿಗೆ 3 ಸಚಿವ ಸ್ಥಾನಗಳೂ ಸಿಕ್ಕಿದೆ.

ಅಂಗಡಿ ನಡೆಸುತ್ತಾ ವಿದ್ಯಾಭ್ಯಾಸ ಪೂರೈಸಿದ್ದ ಖಟ್ಟರ್

ಅಂಗಡಿ ನಡೆಸುತ್ತಾ ವಿದ್ಯಾಭ್ಯಾಸ ಪೂರೈಸಿದ್ದ ಖಟ್ಟರ್

* ಮನೋಹರ್ ಲಾಲ್ ಖಟ್ಟರ್ 1954ರಲ್ಲಿ ಹರಿಯಾಣದ ರೋಹ್ಟಕ್ ಜಿಲ್ಲೆಯ ಮಾಹಮ್ ನ ನಿದಾನಾ ಗ್ರಾಮದಲ್ಲಿ ಜನಿಸಿದವರು. ಖಟ್ಟರ್ ಅವರ ಪೂರ್ವಜರು ಸ್ವಾತಂತ್ರ್ಯದ ಬಳಿಕ ಹರಿಯಾಣಕ್ಕೆ ವಲಸೆ ಬಂದು ನೆಲೆಸಿದರು.
* ರೋಹ್ಟಕ್ ನಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ಮೇಲೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ದೆಹಲಿ ಸೇರಿದರು. ಸಾದರ್ ಬಜಾರಿನಲ್ಲಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಾ ಪದವಿ ಶಿಕ್ಷಣ ಪೂರೈಸಿದರು.
* 1994 ರಲ್ಲಿ ಬಿಜೆಪಿ ಸೇರಿ ಹರಿಯಾಣ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು.

ರಾಜಕೀಯ ರಂಗಕ್ಕೆ ಹೊಸಬರಾದರೂ ಪಳಗಿದ ಮನೋಹರ್

ರಾಜಕೀಯ ರಂಗಕ್ಕೆ ಹೊಸಬರಾದರೂ ಪಳಗಿದ ಮನೋಹರ್

* ಚುನಾವಣೆಯಲ್ಲಿ ಅವರು ಹರಿಯಾಣ ಚುನಾವಣಾ ಪ್ರಚಾರ ಸಮಿತಿಯ ನೇತೃತ್ವ ವಹಿಸಿದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯರೂ ಆಗಿದ್ದಾರೆ.
* 65 ವರ್ಷ ವಯಸ್ಸಿನ ಮನೋಹರ್ ಲಾಲ್ ಖಟ್ಟರ್ ಅವರಿಗೆ ರಾಜಕೀಯ ರಂಗ ತೀರಾ ಹೊಸತು. ಆರೆಸ್ಸೆಸ್ ಹಾಗೂ ಮೋದಿ ಅವರ ಅಣತಿಯಂತೆ ಈ ಬಾರಿ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
* ಖಟ್ಟರ್ ಸ್ಪರ್ಧಿಸಿದ್ದ ಕರ್ನಾಲ್ ವಿಧಾನಸಭಾ ಕ್ಷೇತ್ರದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಚುನಾವಣಾ ಪ್ರಚಾರ ಆರಂಭಿಸಿದ್ದರು. ಇದು ಅದೃಷ್ಟ ತಂದಿದೆ ಎಂದು ನಂಬಲಾಗಿದೆ.

ಹರ್ಯಾಣ ಸಿಎಂ ಆಗಿ ಮನೋಹರ್ ಖಟ್ಟರ್ ಪಮಾಣ ವಚನಹರ್ಯಾಣ ಸಿಎಂ ಆಗಿ ಮನೋಹರ್ ಖಟ್ಟರ್ ಪಮಾಣ ವಚನ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾ ಸದಸ್ಯ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾ ಸದಸ್ಯ

* ಕಳೆದ 45 ವರ್ಷಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾ ಸದಸ್ಯರಾಗಿದ್ದಾರೆ.
* ಖಟ್ಟರ್ ಅವರು ಮೂಲತಃ ಪಂಜಾಬಿಯಾಗಿದ್ದು, ಮೋದಿ ಅವರ ಅಣತಿಯಂತೆ ಹರ್ಯಾಣ ಅಸೆಂಬ್ಲಿಗೆ ಸ್ಪರ್ಧಿಸಿ, ಮೊದಲ ಪ್ರಯತ್ನದಲ್ಲೇ ಶಾಸಕ, ಸಿಎಂ ಆಗಿದ್ದರು. ಈಗ ಎರಡನೇ ಅವಧಿಗೆ ಸಿಎಂ ಆಗಿದ್ದಾರೆ.
* ಕೃಷಿಕ ಹಾಗೂ ಮನೆ ಪಾಠ ಮಾಡುವುದು, ಆರೆಸ್ಸೆಸ್ ಸಂಘಟನೆ ಇವರ ವೃತ್ತಿಯಾಗಿದೆ.ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.

ಸಾಲ ಹೊಂದಿರುವ ಸಿಎಂ ಖಟ್ಟರ್

ಸಾಲ ಹೊಂದಿರುವ ಸಿಎಂ ಖಟ್ಟರ್

* ಅವಿವಾಹಿತರಾಗಿರುವ ಖಟ್ಟರ್ ಹಾಗೂ ಅವರ ತಂದೆ ಹರ್ಭನ್ಸ್ ಲಾಲ್ ಅವರ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ಇಲ್ಲ.
* ಖಟ್ಟರ್ ಅವರ ಒಟ್ಟು ಘೋಷಿತಾ ಆಸ್ತಿ 2014ರಲ್ಲಿ 8,29,952 ರು. ಸುಮಾರು 6.2 ಲಕ್ಷ ರು ಸಾಲ ಹೊಂದಿದ್ದರು. 2019ರಲ್ಲಿ ಶೇ1047ರಷ್ಟು ಆಸ್ತಿ ಪ್ರಮಾಣದಲ್ಲಿ ಏರಿಕೆ ಕಂಡು 1.27 ಕೋಟಿ ರು ಗೇರಿದೆ. ಯಾವುದೇ ಕಾರು ಹೊಂದಿಲ್ಲ. ಚರಾಸ್ತಿ 94 ಲಕ್ಷ ರು ಹಾಗೂ ಸ್ಥಿರಾಸ್ತಿ 33 ಲಕ್ಷ ರು. ಬಿಯಾನಿಯಲ್ಲಿ ಕೃಷಿ ಭೂಮಿ ಹೊಂದಿದ್ದಾರೆ. 15 ಸಾವಿರ ರು ನಗದು ಹೊಂದಿದ್ದಾರೆ. ಕೃಷಿಕ ವೃತ್ತಿ ಹೊಂದಿದ್ದ ಖಟ್ಟರ್ ಈ ಬಾರಿ ಅಫಿಡವಿಟ್ ನಲ್ಲಿ ಶಾಸಕ ಎಂದು ನಮೂದಿಸಿದ್ದಾರೆ. 2015-16ರಿಂದ ಐಟಿ ರಿಟರ್ನ್ಸ್ ಸಲ್ಲಿಸಿದ್ದು, 2018-19ರಲ್ಲಿ 28.95 ಲಕ್ಷ ರು ತೋರಿಸಿದ್ದಾರೆ.

English summary
Who is Manohar Lal Khattar? Bharatiya Janata Paerty’s Manohar Lal Khattar was sworn-in as the chief minister of Haryana for the second consecutive term.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X