ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ 3ರಂದು ವಾಟ್ಸಾಪ್ ಅಪ್‌ಡೇಟ್‌ ಮಾಡಿಕೊಂಡ್ರೆ ಏನೆಲ್ಲಾ ಲಾಭ?

|
Google Oneindia Kannada News

ನವದೆಹಲಿ, ನವೆಂಬರ್ 03: ಜಾಗತಿಕ ಮಟ್ಟದಲ್ಲಿ ವಾಟ್ಸಾಪ್ ಬಳಕೆದಾರರಿಗೆ ಮೇಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಹೊಸ ವೈಶಿಷ್ಟ್ಯಗಳೊಂದಿಗೆ ವಾಟ್ಸಾಪ್ ಗ್ರಾಹಕರ ಬಳಕೆಗೆ ತೆರೆದುಕೊಳ್ಳಲಿದೆ ಎಂಬ ಘೋಷಣೆಯು ಜಾರಿಗೆ ಬಂದಿದೆ.

ಹೊಸ ವೈಶಿಷ್ಟ್ಯಗಳ ಮೂಲಕ ವಾಟ್ಸಾಪ್ ಬಳಕೆದಾರರು ತಾವು ಬಯಸುವ ಗುಂಪುಗಳೊಂದಿಗೆ ಸಂಪರ್ಕಿಸುವುದಕ್ಕೆ ಹೆಚ್ಚು ಸಹಕಾರಿ ಆಗಲಿದೆ. ಇದು ಜನರನ್ನು ಒಂದು ಕಡೆಗೆ ಸೇರಿಸುವ ಗುರಿಯನ್ನು ಹೊಂದಿದ್ದು, ನವೆಂಬರ್ 3ರ ಗುರುವಾರದಿಂದಲೇ ವಾಟ್ಸಾಪ್ ಅಪ್‌ಡೇಟ್‌ ವರ್ಷನ್ ಬಳಕೆಗೆ ಲಭ್ಯವಾಗಲಿದೆ.

Breaking: ಜಗತ್ತಿನಾದ್ಯಂತ ನಿಂತು ಹೋಗಿದ್ದ WhatsApp ಸರಿ ಆಯ್ತು!Breaking: ಜಗತ್ತಿನಾದ್ಯಂತ ನಿಂತು ಹೋಗಿದ್ದ WhatsApp ಸರಿ ಆಯ್ತು!

ವಾಟ್ಸಾಪ್ ಅಪ್‌ಡೇಟ್‌ನೊಂದಿಗೆ 1024 ಸದಸ್ಯರನ್ನೊಳಗೊಂಡ ಗ್ರೂಪ್ ಕ್ರಿಯೇಟ್ ಮಾಡುವುದು, ಇನ್-ಚಾಟ್ ಪೋಲ್ ಕ್ರಿಯೇಟ್ ಮಾಡುವುದರ ಜೊತೆಗೆ ಏಕಕಾಲಕ್ಕೆ 32 ಮಂದಿ ವಿಡಿಯೋ ಕಾಲ್ ಮೂಲಕ ಸಂಪರ್ಕ ಸಾಧಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ವಾಟ್ಸಾಪ್ ಹೊಸ ವೈಶಿಷ್ಟ್ಯಗಳ ಬಗ್ಗೆ ಗ್ರಾಹಕರು ತಿಳಿದುಕೊಳ್ಳಬೇಕಾದ ಅಂಶಗಳೇನು?, ವಾಟ್ಸಾಪ್ ಅಪ್‌ಡೇಟ್‌ ಮೂಲಕ ಗ್ರಾಹಕರು ಏನೆಲ್ಲಾ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ವಾಟ್ಸಾಪ್ ಅಪ್‌ಡೇಟ್‌ ಬಗ್ಗೆ ಘೋಷಿಸಿದ ಜುಕರ್‌ಬರ್ಗ್

ವಾಟ್ಸಾಪ್ ಅಪ್‌ಡೇಟ್‌ ಬಗ್ಗೆ ಘೋಷಿಸಿದ ಜುಕರ್‌ಬರ್ಗ್

"ವಾಟ್ಸಾಪ್ ಕಮ್ಯುನಿಟಿಗೆ ಹೊಸ ವೈಶಿಷ್ಟ್ಯಗಳನ್ನು ಸೇರ್ಪಡೆ ಮಾಡುತ್ತಿರುವುದರ ಬಗ್ಗೆ ಘೋಷಿಸುವುದಕ್ಕೆ ನನಗೆ ಇಂದು ಸಂತೋಷವಾಗುತ್ತದೆ. ಮೊದಲ ಬಾರಿಗೆ ವಾಟ್ಸಾಪ್ ಅನ್ನು 2009ರಲ್ಲಿ ಪ್ರಾರಂಭಿಸಿದ ಆ ದಿನದಿಂದ ಇಂದಿನವರೆಗೂ, ನಾವು ಗ್ರಾಹಕರಿಗೆ ಯಾವ ರೀತಿ ಅನುಕೂಲ ಕಲ್ಪಿಸಬಹುದು ಎಂಬುದರ ಮೇಲೆ ಗಮನ ಹರಿಸುತ್ತಿದ್ದೇವೆ. ವೈಯಕ್ತಿಕವಾಗಿ ಸ್ನೇಹಿತರು ಹಾಗು ಕುಟುಂಬ ಸದಸ್ಯರೊಟ್ಟಿಗೆ ಸಂಪರ್ಕ ಸಾಧಿಸಲು ಅಗತ್ಯವಾದ ಸೇವೆಗಳ ಮೇಲೆ ನಾವು ಹೆಚ್ಚು ನಿಗಾ ವಹಿಸುತ್ತಿದ್ದೇವೆ. ವಾಟ್ಸಾಪ್ ಬಳಸುತ್ತಿರುವ ಗ್ರಾಹಕರ ಮೂಲಕ ಈ ಸಮುದಾಯ ಸಂಪರ್ಕದ ಸೌಲಭ್ಯ ನೀಡುವಂತೆ ನಾವು ಬೇಡಿಕೆಯನ್ನು ಸ್ವೀಕರಿಸಿದ್ದೆವು," ಎಂದು ಮಾರ್ಕ್ ಜುಕರ್‌ಬರ್ಗ್ ಉಲ್ಲೇಖಿಸಿದ್ದಾರೆ.

ವಾಟ್ಸಾಪ್ ಕಮ್ಯುನಿಟಿ ಬಗ್ಗೆ ತಿಳಿಯಿರಿ

ವಾಟ್ಸಾಪ್ ಕಮ್ಯುನಿಟಿ ಬಗ್ಗೆ ತಿಳಿಯಿರಿ

ವಾಟ್ಸಾಪ್ ಕಮ್ಯುನಿಟಿ ಎಂಬ ಸೌಲಭ್ಯವು ವಿವಿಧ ಗುಂಪುಗಳ ಸದಸ್ಯರು ಒಂದು ಕಡೆಯಲ್ಲಿ ಸೇರುವುದಕ್ಕೆ ಅನುಕೂಲಕರವಾಗಲಿದೆ. ಇದರಿಂದ ಜನರು ಪರಸ್ಪರ ಸಂದೇಶಗಳನ್ನು ಕಳುಹಿಸುವುದಕ್ಕೆ ಹಾಗೂ ಸ್ವೀಕರಿಸುವುದಕ್ಕೆ ಸುಲಭವಾಗುತ್ತದೆ. ಇದಲ್ಲದೇ ಯಾವುದೇ ಸಂಸ್ಥೆಗಳು ತಮ್ಮ ಉದ್ಯೋಗಿಗಳ ಮಧ್ಯೆ ಸೂಕ್ತ ವಿಷಯಗಳು ಮತ್ತು ಅಗತ್ಯ ಮಾಹಿತಿ ಹಂಚಿಕೊಳ್ಳುವುದಕ್ಕೆ ಸೂಕ್ತವಾಗುತ್ತದೆ. ಹೊಸ ವೈಶಿಷ್ಟ್ಯದಿಂದಾಗಿ ಗ್ರೂಪ್ ಅಡ್ಮಿನ್ ಹೆಚ್ಚುವರಿ ಸವಲತ್ತು ಪಡೆದುಕೊಳ್ಳುತ್ತಾರೆ. ಅನೌನ್ಸ್ ಮೆಂಟ್ ಮೆಸೇಜ್ ಎಂಬ ಸೌಲಭ್ಯವನ್ನು ನೀಡುತ್ತಿದ್ದ ಇದರಿಂದ ಗ್ರೂಪ್ ಅಡ್ಮಿನ್ ಏಕಕಾಲಕ್ಕೆ ಎಲ್ಲಾ ಸದಸ್ಯರಿಗೂ ತಲುಪುವಂತೆ ಸಂದೇಶವನ್ನು ಕಳುಹಿಸಬಹುದು.

ಈ ಹಂತಗಳನ್ನು ಅನುಸರಿಸಿ, ಬಳಕೆದಾರರು ಮೊದಲಿನಿಂದ ಹೊಸ ಸಮುದಾಯವನ್ನು ಪ್ರಾರಂಭಿಸಬಹುದು ಅಥವಾ ಅಸ್ತಿತ್ವದಲ್ಲಿರುವ ಗುಂಪುಗಳನ್ನು ಸೇರಿಸಬಹುದು. ಒಮ್ಮೆ ನೀವು ವಾಟ್ಸಾಪ್ ನಲ್ಲಿ ಸಮುದಾಯವನ್ನು ಸೇರಿದ ನಂತರ, ನಿಮಗೆ ಅಗತ್ಯವಿರುವ ಮಾಹಿತಿಯನ್ನು ಪಡೆಯಲು ಲಭ್ಯವಿರುವ ಗುಂಪುಗಳ ನಡುವೆ ನೀವು ಸುಲಭವಾಗಿ ಬದಲಾಯಿಸಬಹುದು. ನಿರ್ವಾಹಕರು ಸಮುದಾಯದಲ್ಲಿರುವ ಪ್ರತಿಯೊಬ್ಬರಿಗೂ ಪ್ರಮುಖ ನವೀಕರಣಗಳನ್ನು ಕಳುಹಿಸಬಹುದು. ವಾಟ್ಸಾಪ್ ಸಮುದಾಯಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿವೆ ಎಂದು ವಾಟ್ಸಾಪ್ ಪುನರುಚ್ಚರಿಸಿದೆ.

ಇನ್-ಚಾಟ್ ಪೋಲ್ ವೈಶಿಷ್ಟ್ಯವೇನು?

ಇನ್-ಚಾಟ್ ಪೋಲ್ ವೈಶಿಷ್ಟ್ಯವೇನು?

ಅಂತಿಮವಾಗಿ ವೈಶಿಷ್ಟ್ಯವನ್ನು ಹೊರತರುವ ಮೊದಲು ವಾಟ್ಸಾಪ್ ಬಹಳ ಹಿಂದೆಯೇ ಇನ್-ಚಾಟ್ ಪೋಲ್ ವೈಶಿಷ್ಟ್ಯವನ್ನು ಪರೀಕ್ಷಿಸಲು ಪ್ರಾರಂಭಿಸಿತ್ತು. ಬೀಟಾ ಆವೃತ್ತಿಗಳಲ್ಲಿ ಗುರುತಿಸಿದಂತೆ, ವಾಟ್ಸಾಪ್ ನಿಮಗೆ ಇನ್-ಚಾಟ್ ಪೋಲ್‌ಗಳಲ್ಲಿ ಪ್ರಶ್ನೆಯನ್ನು ರಚಿಸಲು ಅನುಮತಿಸುತ್ತದೆ. ಈ ಅಪ್ಲಿಕೇಶನ್‌ನಲ್ಲಿ ಪ್ರತ್ಯೇಕ ಪರದೆಯಲ್ಲಿ 12 ಸಂಭವನೀಯ ಉತ್ತರಗಳನ್ನು ಸೇರಿಸಲು ನಿಮಗೆ ಅನುಮತಿಸುತ್ತದೆ. ಈ ವೈಶಿಷ್ಟ್ಯವು ಹೇಗೆ ಕಾಣಿಸಿಕೊಳ್ಳುತ್ತದೆ ಮತ್ತು ಅದರ ಕಾರ್ಯವನ್ನು ವಾಟ್ಸಾಪ್ ಇನ್ನೂ ಬಹಿರಂಗಪಡಿಸಿಲ್ಲ. ಇತ್ತೀಚಿನ ವೈಶಿಷ್ಟ್ಯಗಳನ್ನು ಪಡೆಯಲು, ನೀವು ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ನಿಮ್ಮ ವಾಟ್ಸಾಪ್ ಅನ್ನು ಅಪ್‌ಡೇಟ್‌ ಮಾಡಬಹುದು.

ವಾಟ್ಸಾಪ್ ನಲ್ಲಿ 1024 ಜನರ ಗ್ರೂಪ್ ಕ್ರಿಯೇಟ್ ಮಾಡಬಹುದು

ವಾಟ್ಸಾಪ್ ನಲ್ಲಿ 1024 ಜನರ ಗ್ರೂಪ್ ಕ್ರಿಯೇಟ್ ಮಾಡಬಹುದು

ನವೆಂಬರ್ 3ರಿಂದ ವಾಟ್ಸಾಪ್ ಅಪ್‌ಡೇಟ್‌ ಮಾಡಿಕೊಂಡವರು ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಈ ಹಿಂದೆ ಒಂದು ಗ್ರೂಪ್ ಕ್ರಿಯೇಟ್ ಮಾಡಿದಾಗ ಗರಿಷ್ಠ ಸದಸ್ಯರ ಸಂಖ್ಯೆಯು 200 ಗಡಿ ದಾಟುವಂತಿರಲಿಲ್ಲ. ಆದರೆ ಇದೀಗ ಒಂದೇ ಗ್ರೂಪಿನಲ್ಲಿ 1024 ಸದಸ್ಯರನ್ನು ಸೇರಿಸುವ ಸೌಲಭ್ಯವನ್ನು ನೀಡಲಾಗಿದೆ. ಇದರ ಜೊತೆಗೆ ಏಕಕಾಲಕ್ಕೆ 32 ಜನರೊಂದಿಗೆ ವಿಡಿಯೋ ಕಾಲ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಇದರೊಂದಿಗೆ ದೊಡ್ಡ ಪ್ರಮಾಣದ(ಲಾರ್ಜ್ ಫೈಲ್) ಫೈಲ್ಸ್ ಅನ್ನು ಕಳುಹಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

English summary
WhatsApp launches Communities, in chat polls, 32 person video calls, 2GB file sharing limit and More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X