ಹಿಜಾಬ್ ಎಂದರೇನು, ನಿಖಾಬ್-ಬುರ್ಕಾಗಳ ವ್ಯತ್ಯಾಸವೇನು?: ಇಲ್ಲಿದೆ ವಿವರ
ಉಡುಪಿ, ಕುಂದಾಪುರದಲ್ಲಿ ಆರಂಭವಾದ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದವು ಈಗ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಉಡುಪಿನ ವಿಚಾರವೇ ಈಗ ರಾಜಕೀಯ ದಾಳವಾಗಿದೆ. ಹಲವಾರು ಕಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಮಾಧ್ಯಮಗಳಲ್ಲಿ ಹಿಜಾಬ್ ವಿಚಾರವೇ ಬಿಸಿ ಬಿಸಿ ಚರ್ಚೆ ಆಗುತ್ತಿದೆ.
ಈ ಎಲ್ಲಾ ಬೆಳವಣಿಗೆಯ ನಡುವೆ ರಾಜ್ಯ ಸರ್ಕಾರವು ಆದೇಶವೊಂದನ್ನು ಹೊರಡಿಸಿದೆ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರವು ಆದೇಶವನ್ನು ಹೊರಡಿಸಿದೆ. ಖಾಸಗಿ ಶಾಲಾ-ಕಾಲೇಜುಗಳಲ್ಲಿ ಸಹ ಆಯಾ ಆಡಳಿತ ಮಂಡಳಿ ನಿರ್ಧರಿಸಿರುವ ಸಮವಸ್ತ್ರವನ್ನು ಧರಿಸಬೇಕಾದುದು ಕಡ್ಡಾಯವಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಥವಾ ಆಡಳಿತ ಮಂಡಳಿ ಮೇಲ್ವಿಚಾರಣಾ ಸಮಿತಿ ನಿರ್ಧರಿಸುವ ಸಮವಸ್ತ್ರ ಧರಿಸಬೇಕು ಎಂದು ತಿಳಿಸಿದೆ. ಆದರೆ ಶಾಲಾ-ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಮಾತ್ರವಲ್ಲದೇ ನೀಲಿ ಶಾಲುಗಳು ಕೂಡಾ ಕಾಣಿಸತೊಡಗಿದೆ.
ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಹಿಜಾಬ್ ವಿವಾದವು ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಹಲವಾರು ಮಂದಿಗೆ ಹಿಜಾಬ್ ಎಂದರೇನು? ನಿಖಾಬ್, ಬುರ್ಕಾ, ಹಿಜಾಬ್ ನಡುವೆ ಇರುವ ವ್ಯತ್ಯಾಸಗಳು ಏನು? ಮುಸ್ಲಿಂ ಮಹಿಳೆಯರು ತೊಡುವ ಈ ಉಡುಗೆಯಲ್ಲಿ ಏನೇನು ವ್ಯತ್ಯಾಸವಿದೆ ಎಂಬುವುದು ತಿಳಿದಿಲ್ಲ. ಹಾಗಾದರೆ ನಿಜವಾಗಿ ಹಿಜಾಬ್ ಏನು, ನಿಖಾಬ್-ಹಿಜಾಬ್-ಬುರ್ಕಾ ನಡುವೆ ಏನಿದೆ ವ್ಯತ್ಯಾಸ ಎಂದು ತಿಳಿಯಲು ಮುಂದೆ ಓದಿ...

ಹಿಜಾಬ್ ಎಂದರೇನು?
ಪ್ರಸ್ತುತ ಹಿಜಾಬ್ ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿರುವ ಒಂದು ವಸ್ತ್ರ. ಹೆಚ್ಚಿನ ಮಂದಿ ಹಿಜಾಬ್ ಎಂದರೆ ಮುಸ್ಲಿಮ್ ಮಹಿಳೆಯರು ಧರಿಸುವ ಸಂಪೂರ್ಣ ವಸ್ತ್ರ ಎಂದೇ ಅಂದುಕೊಂಡಿದ್ದಾರೆ. ಆದರೆ ನಿಜವಾಗಿ ಹಿಜಾಬ್ ಎಂದರೆ ಮುಸ್ಲಿಂ ಮಹಿಳೆಯರು ತಲೆಗೂದಲು ಹಾಗೂ ಕುತ್ತಿಗೆಯನ್ನು ಮುಚ್ಚಲು ಬಳಸುವ ಬಟ್ಟೆಯಾಗಿದೆ. ಮುಖವನ್ನು ಮುಚ್ಚಿದರೆ ಅದು ಹಿಜಾಬ್ ಆಗುವುದಿಲ್ಲ. ಹಿಜಾಬ್ ಬರೀ ತಲೆಯ ಕೂದಲು ಹಾಗೂ ಕುತ್ತಿಗೆಯ ಭಾಗವನ್ನು ಮುಚ್ಚಲು ಬಳಸಲಾಗುವ ವಸ್ತ್ರ. ಸಾಮಾನ್ಯವಾಗಿ ಈ ಹಿಂದೆ ಕಪ್ಪು ಬಣ್ಣದಲ್ಲೇ ಹಿಜಾಬ್ ಅನ್ನು ಧರಿಸಲಾಗುತ್ತಿತ್ತು. ಆದರೆ ಈಗ ಹಲವಾರು ಬಣ್ಣಗಳಲ್ಲಿ ಹಿಜಾಬ್ ಬಟ್ಟೆಯು ಲಭ್ಯವಾಗುತ್ತದೆ. ಇದನ್ನು ಸ್ಕಾರ್ಫ್ ಎಂದು ಕೂಡಾ ಕರೆಯಲಾಗುತ್ತದೆ.

ನಿಖಾಬ್ ಎಂದರೇನು?
ತಲೆಗೆ ಧರಿಸಲಾಗುವ ಸ್ಕಾರ್ಫ್ ಅಥವಾ ಹಿಜಾಬ್ ಜೊತೆಗೆ ಮುಖವನ್ನು ಮುಚ್ಚಲು ಬಳಸುವ ಬಟ್ಟೆಯನ್ನು ನಿಖಾಬ್ ಎಂದು ಕರೆಯಲಾಗುತ್ತದೆ. ಮುಖದ ಮೇಲೆ ಪರದೆಯಂತೆ ಕಂಡು ಬರುವ ಈ ಬಟ್ಟೆಯನ್ನು ಹಿಜಾಬ್ ಧರಿಸಿದ ಬಳಿಕ ಹಾಕಲಾಗುತ್ತದೆ. ಇದನ್ನು ಧರಿಸಿದರೆ ಕಣ್ಣು ಮಾತ್ರ ಕಾಣಿಸುತ್ತದೆ. ಹಿಜಾಬ್ ನಮ್ಮ ಕೂದಲು ಹಾಗೂ ಕುತ್ತಿಗೆಯನ್ನು ಮುಚ್ಚಿದರೆ, ನಿಖಾಬ್ ನಮ್ಮ ಕಣ್ಣನ್ನು ಬಿಟ್ಟು ಮುಖ ಪೂರ್ತಿ ಮುಚ್ಚುತ್ತದೆ. ಇದಕ್ಕಾಗಿ ಸಾಮಾನ್ಯವಾಗಿ ಕಪ್ಪು ಬಣ್ಣದ ಬಟ್ಟೆಯನ್ನೇ ಬಳಸಲಾಗುತ್ತದೆ.

ಬುರ್ಕಾ ಎಂದರೇನು?
ಸಾಮಾನ್ಯವಾಗಿ ಹಿಜಾಬ್ ಹಾಗೂ ನಿಖಾಬ್‌ಗೆ ಭಿನ್ನವಾಗಿ ಬುರ್ಕಾ ಎಂಬ ಪದವನ್ನು ಹೆಚ್ಚಿನ ಜನರು ಬಳಕೆ ಮಾಡುತ್ತಾರೆ. ಬುರ್ಕಾ ಮೂಲಕ ಸಂಪೂರ್ಣ ದೇಹವನ್ನೇ ಮುಚ್ಚಲಾಗುತ್ತದೆ. ಬುರ್ಕಾ ಎಂದರೆ ಏಕ ವಸ್ತ್ರವೂ ಆಗಿರಬಹುದು ಅಥವಾ ಸಂಪೂರ್ಣ ಶರೀರವನ್ನೇ ಮುಚ್ಚುವ ಪ್ರತ್ಯೇಕ ಪ್ರತ್ಯೇಕವಾದ ಬಟ್ಟೆಯೂ ಆಗಬಹುದು.

ಹಿಜಾಬ್, ಬುರ್ಕಾ, ನಿಖಾಬ್ ವ್ಯತ್ಯಾಸವೇನು?
ಹಿಜಾಬ್, ಬುರ್ಕಾ, ನಿಖಾಬ್ ಮೂರು ಕೂಡಾ ವಿಭಿನ್ನವಾದುದು. ಮುಸ್ಲಿಂ ಮಹಿಳೆಯರು ಹಿಜಾಬ್ ಹಾಕಿದ್ದರೂ ಬುರ್ಕಾ ಎಂದೇ ಹೇಳುವವರು ಹಲವಾರು ಮಂದಿ ಇದ್ದಾರೆ. ಹಿಜಾಬ್ ಅನ್ನು ಮುಸ್ಲಿಂ ಮಹಿಳೆಯರು ತಲೆಕೂದಲು ಹಾಗೂ ಕುತ್ತಿಗೆ ಭಾಗವನ್ನು ಮುಚ್ಚಲು ಬಳಸಿದರೆ, ನಿಖಾಬ್ ಅನ್ನು ಕಣ್ಣು ಹೊರತುಪಡಿಸಿ ಮುಖವನ್ನು ಸಂಪೂರ್ಣವಾಗಿ ಮುಚ್ಚಲು ಬಳಸಲಾಗುತ್ತದೆ. ಬುರ್ಕಾ ಸಂಪೂರ್ಣವಾಗಿ ದೇಹವನ್ನು ಮುಚ್ಚಲು ಬಳಸಲಾಗುವ ವಸ್ತ್ರವಾಗಿದೆ. ನಾವು ಸಾಮಾನ್ಯವಾಗಿ ಧರಿಸುವ ಬಟ್ಟೆಯನ್ನು ಧರಿಸಿ ಅದರ ಮೇಲೆ ಬುರ್ಕಾವನ್ನು ಧರಿಸಲಾಗುತ್ತದೆ. ಇನ್ನು ಇರಾನಿ ಮಹಿಳೆಯರು ಧರಿಸುವ ಬಟ್ಟೆಗಳಿಗೂ ಭಾರತದ ಮುಸ್ಲಿಂ ಮಹಿಳೆಯರು ಧರಿಸುವ ಬಟ್ಟೆಗಳಿಗೂ ಕೂಡಾ ಕೆಲವು ವ್ಯತ್ಯಾಸವಿದೆ.
ಚಾದರ್ ಎಂಬುವುದು ಸಂಪೂರ್ಣವಾಗಿ ದೇಹವನ್ನು ಮುಚ್ಚಲು ಬಳಸುವ ಬಟ್ಟೆಯಾಗಿದೆ. ಇನ್ನು ಅಲ್-ಅಮಿರಾ ಎರಡು ಭಾಗಗಳನ್ನು ಹೊಂದಿರುತ್ತದೆ. ಒಂದು ಕ್ಯಾಪ್ ರೀತಿಯಲ್ಲಿ ಇದ್ದರೆ ಇನ್ನೊಂದು ಕೊಳವೆ ರೀತಿಯ ಸ್ಕಾರ್ಫ್ ಆಗಿದೆ. ಇನ್ನು ಖೀಮರ್ ಕೂಡಾ ಒಂದು ರೀತಿಯ ಸ್ಕಾರ್ಫ್ ಆಗಿದೆ. ಆದರೆ ಇದು ಉದ್ಧವಾಗಿದ್ದು ಸೊಂಟದ ಭಾಗದವರೆಗೆ ಮುಚ್ಚುತ್ತದೆ. ಶಾಯ್ಲಾ ಎಂದರೆ ಆಯತಾಕಾರದ ಬಟ್ಟೆಯ ತುಂಡಾಗಿದ್ದು, ಇದನ್ನು ತಲೆಯ ಮೇಲೆ ಸ್ಕಾರ್ಫ್‌ನಂತೆ ಹೊದ್ದು ಒಂದೆಡೆ ಪಿನ್ ಹಾಕುವುದು ಆಗಿದೆ. (ಒನ್‌ಇಂಡಿಯಾ ಸುದ್ದಿ)
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications