ಒಡಿಸಾದ ಕುಚಿಂಡಾ- ಆಂದ್ರದ ಗುಂಟೂರು ಮೆಣಸಿನಕಾಯಿ; ಜಿಐ ಟ್ಯಾಗ್‌ಗಾಗಿ 'ಖಾರ'ದ ಹೋರಾಟ

ಒಡಿಶಾದ ಕುಚಿಂಡಾ ಖಾರವಿರುವ ಮೆಣಸಿನಕಾಯಿಗೆ ಜಿಐ ಟ್ಯಾಗ್ ಸಿಗಬಹುದು. ಮೆಣಸಿನಕಾಯಿಯ ಮಾದರಿಗಳನ್ನು ಒಡಿಶಾ ರೂರಲ್ ಡೆವಲಪ್‌ಮೆಂಟ್ ಮತ್ತು ಮಾರ್ಕೆಟಿಂಗ್ ಸೊಸೈಟಿಯು ಕೊಚ್ಚಿಯ ಲ್ಯಾಬ್‌ಗೆ ಪರೀಕ್ಷೆಗಾಗಿ ಕಳುಹಿಸಿದ್ದು, ಈ ಮೆಣಸಿನಕಾಯಿಯ ಫಲಿತಾಂಶಗಳು ಉತ್ತಮವಾಗಿವೆ. ಈ ಮೆಣಸಿನಕಾಯಿ ಆಂಧ್ರಪ್ರದೇಶದ ಗುಂಟೂರು ಮೆಣಸಿನಕಾಯಿಗಿಂತ ಹೆಚ್ಚು ಖಾರ ಮೆಣಸಿನಕಾಯಿ ಎಂದು ಹೇಳಲಾಗುತ್ತಿದೆ.

ಒಡಿಶಾ ಮತ್ತು ಆಂಧ್ರಪ್ರದೇಶ ನಡುವಿನ ಗಡಿ ವಿವಾದ ಇನ್ನೂ ಬಿಸಿ ಆರಿಲ್ಲ ಆದರೆ ಈ ಮಧ್ಯೆ ಮೆಣಸಿನಕಾಯಿ ಬಗ್ಗೆ ಎರಡು ರಾಜ್ಯಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಕುಚಿಂಡಾ ಮೆಣಸಿನಕಾಯಿ ಮತ್ತು ಗುಂಟೂರು ಮೆಣಸಿನಕಾಯಿಯ ಕಾವು ಕುರಿತು ಎರಡು ರಾಜ್ಯಗಳ ನಡುವೆ ಚರ್ಚೆ ನಡೆದಿದೆ. ಆಂಧ್ರಪ್ರದೇಶದ ಗುಂಟೂರು ಮೆಣಸಿನಕಾಯಿಗಳು ವರ್ಷಗಳಿಂದ ಭಾರತದಲ್ಲಿ ಪ್ರಾಬಲ್ಯ ಹೊಂದಿವೆ. ಒಡಿಶಾದಲ್ಲಿ ಬೆಳೆಯುವ ಕುಚಿಂಡಾ ಮೆಣಸಿನಕಾಯಿ ಹೆಚ್ಚು ಖಾರ ಮೆಣಸಿನಕಾಯಿ ಎಂದು ಭಾರತೀಯ ಮಸಾಲೆ ಮಂಡಳಿಯು ಹೇಳಿಕೊಂಡಿದೆ.

ಕುಚಿಂಡಾ ಮೆಣಸಿನಕಾಯಿಯನ್ನು ಪಶ್ಚಿಮ ಒಡಿಶಾ ಅನೇಕ ಜಿಲ್ಲೆಯ ಬೆಳೆಯಲಾಗುತ್ತದೆ. ಆದರೆ, ಜನಪ್ರಿಯ ಮೆಣಸಿನಕಾಯಿಯನ್ನು ಆಂಧ್ರಪ್ರದೇಶದ ಗುಂಟೂರು ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ವಾಸ್ತವವಾಗಿ ಕೆಲವು ದಿನಗಳ ಹಿಂದೆ, ಒಡಿಶಾದ ಕುಂಚಿಂಡಾ ಮೆಣಸಿನಕಾಯಿಗೆ ಜಿಐ ಟ್ಯಾಗ್ ನೀಡುವ ಉಪಕ್ರಮವನ್ನು ಪ್ರಾರಂಭಿಸಲಾಗಿದೆ. ಇದರ ಅಡಿಯಲ್ಲಿ ಕುಚಿಂಡಾ ಮೆಣಸಿನಕಾಯಿಯ ಕೆಲವು ಮಾದರಿಗಳನ್ನು ಒಡಿಶಾ ರೂರಲ್ ಡೆವಲಪ್‌ಮೆಂಟ್ ಮತ್ತು ಮಾರ್ಕೆಟಿಂಗ್ ಸೊಸೈಟಿ (ORMAS) ಪರೀಕ್ಷೆಗಾಗಿ ಮಸಾಲೆ ಮಂಡಳಿಗೆ ಸಂಯೋಜಿತವಾಗಿರುವ SGS ಲ್ಯಾಬ್‌ಗೆ ಕಳುಹಿಸಿದೆ. ಎಸ್‌ಜಿಎಸ್ ಲ್ಯಾಬ್‌ನ ವರದಿಯ ಪ್ರಕಾರ, ಕುಚಿಂಡ ಮೆಣಸಿನಕಾಯಿಯ ಕಟುತೆ ಮತ್ತು ಇತರ ಗುಣಗಳ ಪ್ರಕಾರ, ಇದು ದೇಶದಲ್ಲಿರುವ ಜಿಐ ಟ್ಯಾಗ್ ಹೊಂದಿರುವ ಮೆಣಸಿನಕಾಯಿಗಳ ತಳಿಗಳಿಗಿಂತ ಉತ್ತಮವಾಗಿದೆ ಎಂದು ಹೇಳಲಾಗಿದೆ.

 ಮೆಣಸಿನಕಾಯಿ ಕ್ಯಾಪ್ಸೈಸಿನ್ ಪ್ರಮಾಣ

ಮೆಣಸಿನಕಾಯಿ ಕ್ಯಾಪ್ಸೈಸಿನ್ ಪ್ರಮಾಣ

ಒಡಿಶಾದ ಕುಚಿಂಡಾ ಮೆಣಸಿನಕಾಯಿಯಲ್ಲಿ 41,000 ಸ್ಕೋವಿಲ್ಲೆ ಶಾಖ ಘಟಕದೊಂದಿಗೆ 0.26% ಕ್ಯಾಪ್ಸೈಸಿನ್ ಅಂಶವಿದೆ ಎಂದು ಸ್ಪೈಸಸ್ ಲ್ಯಾಬ್ ಕಂಡುಹಿಡಿದಿದೆ. ಆದರೆ, ಆಂಧ್ರಪ್ರದೇಶದ ಗುಂಟೂರು ಪ್ರದೇಶದಲ್ಲಿ ಬೆಳೆದ ಮೆಣಸಿನಕಾಯಿಯಲ್ಲಿ ಕ್ಯಾಪ್ಸೈಸಿನ್ ಅಂಶವು 0.226% ರಷ್ಟು ಕಂಡು ಬಂದಿದೆ, ಇದು 35,000 ಮತ್ತು 40,000 ನಡುವೆ ಸ್ಕೋವಿಲ್ಲೆ ಶಾಖ ಘಟಕಗಳನ್ನು ಹೊಂದಿದೆ. ಕ್ಯಾಪ್ಸೈಸಿನ್ ಪ್ರಮಾಣವು ಮೆಣಸಿನಕಾಯಿ ಎಷ್ಟು ಕಟುವಾಗಿದೆ ಎಂಬುದನ್ನು ನಿರ್ಧರಿಸುತ್ತದೆ.

 ಮೆಣಸಿನಕಾಯಿ ಬೆಳೆ; ಆಂಧ್ರಪ್ರದೇಶ ಅಗ್ರಸ್ಥಾನ

ಮೆಣಸಿನಕಾಯಿ ಬೆಳೆ; ಆಂಧ್ರಪ್ರದೇಶ ಅಗ್ರಸ್ಥಾನ

ಭಾರತವು ವಿಶ್ವದ ಅತಿದೊಡ್ಡ ಉತ್ಪಾದಕ ಮತ್ತು ಮೆಣಸಿನಕಾಯಿಯ ಗ್ರಾಹಕ ಮತ್ತು ರಫ್ತುದಾರ. ಆಂಧ್ರಪ್ರದೇಶವು ಮೆಣಸಿನಕಾಯಿ ಉತ್ಪಾದನೆಯಲ್ಲಿ ರಾಜ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಒಟ್ಟು ಬೆಳೆಯಲ್ಲಿ 37% ಕ್ಕಿಂತ ಹೆಚ್ಚು ಪಾಲು ಹೊಂದಿದೆ. ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ಪ್ರಕಾರ, ಆಂಧ್ರಪ್ರದೇಶವು 2021-22ರಲ್ಲಿ 7 ಲಕ್ಷ ಟನ್ ಮೆಣಸಿನಕಾಯಿಯನ್ನು ಉತ್ಪಾದಿಸಿದರೆ, ತೆಲಂಗಾಣ 4.33 ಲಕ್ಷ ಟನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಒಡಿಶಾ ಅದೇ ವರ್ಷದಲ್ಲಿ ಸುಮಾರು 69,000 ಟನ್‌ಗಳನ್ನು ಉತ್ಪಾದಿಸಿತು.

 ಒಡಿಶಾದ ಕುಚಿಂಡಾ ಸ್ಟ್ರಾಂಗ್ ಖಾರಮೆಣಸಿನಕಾಯಿ

ಒಡಿಶಾದ ಕುಚಿಂಡಾ ಸ್ಟ್ರಾಂಗ್ ಖಾರಮೆಣಸಿನಕಾಯಿ

ಒಡಿಶಾದ ಕುಚಿಂಡಾ ಮೆಣಸಿನಕಾಯಿ ಆಂಧ್ರಪ್ರದೇಶದ ಗುಂಟೂರು ಮೆಣಸಿನಕಾಯಿಗಿಂತ ಹೆಚ್ಚು ಸ್ಟ್ರಾಂಗ್ ಎಂದು ಮಸಾಲೆ ಮಂಡಳಿಯ ಪ್ರಯೋಗಾಲಯದ ವರದಿಯು ಸಾಬೀತುಪಡಿಸಿದೆ ಎಂದು ಒಡಿಶಾ ರೂರಲ್ ಮಾರ್ಕೆಟಿಂಗ್ ಸೊಸೈಟಿ (ORMAS)ಉಪ ನಿರ್ದೇಶಕ ಶ್ರೀಮಂತ್ ಹೋಟಾ ಹೇಳಿದ್ದಾರೆ. ಶ್ರೀಮಂತ್ ಹೋಟಾ ಅವರ ಪ್ರಕಾರ, "ಕುಚಿಂಡಾ ಮೆಣಸಿನಕಾಯಿಯು ತುಂಬಾ ಕಟುವಾಗಿದೆ ಮತ್ತು ಸ್ಥಳೀಯ ರೈತರು ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆಸುತ್ತಾರೆ. ಕುಚಿಂಡಾ ಮೆಣಸಿನಕಾಯಿಯ ಕಾವು ಮತ್ತು ಇತರ ಗುಣಲಕ್ಷಣಗಳು ಇತರ ಮೆಣಸಿನಕಾಯಿಗಳಿಗಿಂತ ಉತ್ತಮವಾಗಿದೆ ಎಂದು ಲ್ಯಾಬ್ ಪರೀಕ್ಷೆಗಳು ಸಾಬೀತುಪಡಿಸಿವೆ.

ಈ ಮೆಣಸಿನಕಾಯಿಯು ಕಳೆದ ಕೆಲವು ವರ್ಷಗಳಲ್ಲಿ ಗುಂಟೂರು ಮೆಣಸಿನಕಾಯಿಯಂತೆ ವಿಭಿನ್ನ ಗುರುತನ್ನು ಹೊಂದಿದೆ. ಈ ಮೆಣಸಿನಕಾಯಿ ಖರೀದಿಗೆ ದೇಶ ವಿದೇಶಗಳಿಂದ ವರ್ತಕರು ಸಂಬಲ್ಪುರಕ್ಕೆ ಬರುತ್ತಾರೆ. ಅಂತರಾಷ್ಟ್ರೀಯ ಮಾರುಕಟ್ಟೆಗೆ ಕೊಂಡೊಯ್ಯಲು ಅದರ ಪ್ರಚಾರ ಮತ್ತು ಪ್ರಸಾರದಲ್ಲಿ ಸ್ವಲ್ಪ ಕೊರತೆಯಿದೆ. ಒಡಿಶಾ ಕೃಷಿ ಅಧಿಕಾರಿಗಳ ಪ್ರಕಾರ, ಸಾಂಬಾರ ಮಂಡಳಿಯ ಪ್ರಯೋಗಾಲಯದ ವರದಿಯು ಹೆಚ್ಚಿನ ರೈತರನ್ನು ಬೆಳೆ ಬೆಳೆಯಲು ಪ್ರೇರೇಪಿಸುತ್ತದೆ.

ಕುಚಿಂಡಾದಲ್ಲಿ ರೈತರು ಉತ್ಪಾದಿಸುವ ಮೆಣಸಿನಕಾಯಿ ರಾಜ್ಯ ಸರ್ಕಾರದ ರಕ್ಷಣೆ ಮತ್ತು ಮಾರುಕಟ್ಟೆ ಸೌಲಭ್ಯಗಳ ಕೊರತೆಯಿಂದ ಗುಣಮಟ್ಟಕ್ಕೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹಳ ದಿನಗಳಿಂದ ನಿಜವಾದ ಮನ್ನಣೆ ಸಿಕ್ಕಿಲ್ಲ. ನೀರಾವರಿ ಸೌಲಭ್ಯದಿಂದ ವಂಚಿತವಾಗಿರುವ ಪ್ರದೇಶಗಳ ರೈತರು ವಾಣಿಜ್ಯ ಬೆಳೆಯಾಗಿ ಬೆಳೆದ ಕುಚಿಂಡಾ ಮೆಣಸಿನಕಾಯಿಗೆ ಬೇಡಿಕೆ ನೆರೆಯ ರಾಜ್ಯಗಳಲ್ಲಿ ದೀರ್ಘಕಾಲ ಇರುತ್ತದೆ.

 ಜಿಐ ಟ್ಯಾಗ್ ನಿರೀಕ್ಷೆಯಲ್ಲಿ ಒಡಿಶಾ

ಜಿಐ ಟ್ಯಾಗ್ ನಿರೀಕ್ಷೆಯಲ್ಲಿ ಒಡಿಶಾ

ವರದಿಯ ಪ್ರಕಾರ ಕುಚಿಂಡಾ ಮೆಣಸಿನಕಾಯಿಗಳು ಜಿಐ ಟ್ಯಾಗ್ ಪಡೆಯುವ ನಿರೀಕ್ಷೆಯಿದೆ. 'ಬಮ್ರಾ ಮೆಣಸಿನಕಾಯಿ' ಎಂದು ಕರೆಯುವ ಇದನ್ನು ಅಂತರರಾಷ್ಟ್ರೀಯ ಖರೀದಿದಾರರಿಗೆ ಮಾರಾಟ ಮಾಡಬಹುದು. ಕುಚಿಂಡ ಮೆಣಸಿನಕಾಯಿಯ ಜಿಐ (ಭೌಗೋಳಿಕ ಸೂಚನಾ) ಟ್ಯಾಗ್ ಪಡೆಯುವ ಮೂಲಕ ಇಲ್ಲಿನ ರೈತರಿಗೆ ಅನುಕೂಲವಾಗಲಿದೆ, ಜೊತೆಗೆ ಕುಚ್ಚಿಂಡ ಮೆಣಸಿನಕಾಯಿ ವಿಭಿನ್ನ ಗುರುತನ್ನು ಪಡೆಯುತ್ತದೆ. ಇದರಿಂದ ರೈತರ ಆದಾಯ ಹೆಚ್ಚಲಿದ್ದು, ರೈತರು ಇದರ ಕೃಷಿ ಕೈಗೊಳ್ಳಲು ಉತ್ತೇಜನ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+