ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಸಿ ತಾಣವಾದ ಭಾರತ-ಪಾಕಿಸ್ತಾನ ಗಡಿಯ ಝೀರೋ ಪಾಯಿಂಟ್‍

|
Google Oneindia Kannada News

ಅಹಮದಾಬಾದ್, ಆಗಸ್ಟ್ 29: ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಅವರ ಮಾರ್ಗದರ್ಶನದಲ್ಲಿ ಗುಜರಾತ್ ಪ್ರವಾಸೋದ್ಯಮ ಇಲಾಖೆಯು ನಡಾಬೇಟ್‍ನ ಅಂತಾರಾಷ್ಟ್ರೀಯ ಗಡಿಯ ಝೀರೋ ಪಾಯಿಂಟ್‍ನಲ್ಲಿ ಸೀಮಾ ದರ್ಶನ್ ಅಡಿಯಲ್ಲಿ ಗಡಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುತ್ತಿದೆ. ಗಡಿ ಪ್ರವಾಸೋದ್ಯಮದ ಈ ಆವಿಷ್ಕಾರಕ ವಿಧಾನದಿಂದ ದೇಶದ ಜನರು ಗಡಿಯನ್ನು ಅರಿಯುವ ಅವಕಾಶ ಪಡೆಯುತ್ತಾರೆ ಮತ್ತು ಗಡಿ ಪ್ರವಾಸೋದ್ಯಮದ ಅನುಭವ ಆನಂದಿಸಬಹುದು.

ಈ ಆವಿಷ್ಕಾರಕ ಪ್ರಯೋಗವು ನಾಗರಿಕರಿಗೆ ಮಾತೃಭೂಮಿಯನ್ನು ಸತತವಾಗಿ ರಕ್ಷಣೆ ಮಾಡುತ್ತಿರುವ ಬಿಎಸ್‍ಎಫ್ ಸೈನಿಕರ ಜೀವನಶೈಲಿಯನ್ನು ಕಾಣುವ ನೈಜ ಅನುಭವ ನೀಡುತ್ತದೆ; ಗುಜರಾತ್‍ನಲ್ಲಿ ಪ್ರವಾಸೋದ್ಯಮವು ವೇಗ ಪಡೆದುಕೊಂಡಿದೆ. ರಾಜ್ಯಕ್ಕೆ ಪ್ರವಾಸಿಗರು ಈ ಸೇನಾಪಡೆಗಳ ಜೀವನಶೈಲಿ, ಕರ್ತವ್ಯಗಳು ಮತ್ತು ದೇಶಭಕ್ತಿಯನ್ನು ವೀಕ್ಷಿಸಲು ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಅಲ್ಲದೆ ಅವರು ದೇಶದ ಗಡಿಯನ್ನು ರಕ್ಷಿಸುವ ಮತ್ತು ಕಾಪಾಡುವ ರೋಮಾಂಚಕ ಕೆಲಸ ವೀಕ್ಷಿಸುವ ಅವಕಾಶ ಪಡೆಯುತ್ತಾರೆ.

ಗುಜರಾತ್‍ಗೆ ದೊಡ್ಡ ಸಂಖ್ಯೆಯ ಪ್ರವಾಸಿಗರು ಬರುತ್ತಿರುವ ಹಿನ್ನೆಲೆಯಲ್ಲಿ ನಡಾಬೇಟ್‍ನಲ್ಲಿ ಪ್ರವಾಸೋದ್ಯಮ ಇಲಾಖೆಯು ವಿವಿಧ ಆಕರ್ಷಣೆಗಳಾದ ಪೆರೇಡ್ ಮೈದಾನ, ಪ್ರದರ್ಶನ ಕೇಂದ್ರ, ಆಡಿಟೋರಿಯಂ, ಲೈಟಿಂಗ್, ಸೌರ ಮರಗಳು, ಸೆಲ್ಫೀ ಪಾಯಿಂಟ್‍ಗಳನ್ನು ಸೇರಿಸಿದೆ. ಮಕ್ಕಳು ಮತ್ತು ಗೇಮಿಂಗ್ ಜೋನ್ ಅನ್ನು ಕೂಡಾ ಮಕ್ಕಳ ಮನರಂಜನೆಗಾಗಿ ನಿರ್ಮಿಸಲಾಗಿದೆ.

ಅಜಯ್ ಪಹರಿ’ ಮೆಮೊರಿಯಲ್

ಅಜಯ್ ಪಹರಿ’ ಮೆಮೊರಿಯಲ್

ಅಜಯ್ ಪಹರಿ' ಮೆಮೊರಿಯಲ್ ಅನ್ನು ರಾಷ್ಟ್ರವನ್ನು ರಕ್ಷಿಸುವಾಗ ತಮ್ಮ ಜೀವಗಳನ್ನು ತ್ಯಾಗ ಮಾಡಿದ ಸಾಹಸಿ ಸೈನಿಕರ ಸ್ಮರಣೆಯಲ್ಲಿ ನಿರ್ಮಿಸಲಾಗಿದೆ. ಈ ಸ್ಮಾರಕಕ್ಕೆ ಭೇಟಿ ನೀಡುವ ಪ್ರವಾಸಿಗರು ಹುತಾತ್ಮರಿಗೆ ಗೌರವವನ್ನೂ ಸಲ್ಲಿಸಬಹುದು. 30 ಅಡಿ ಎತ್ತರದ ಟಿ-ಜಂಕ್ಷನ್ ಸುಂದರ ಭಿತ್ತಿಚಿತ್ರಗಳನ್ನು ಹೊಂದಿದ್ದು ಅದು ಸೀಮಾ ದರ್ಶನ್ ಸಂಕೀರ್ಣದ ಪ್ರಮುಖ ಆಕರ್ಷಣೆಯಾಗಿದೆ.

ಇದರೊಂದಿಗೆ, ರಸ್ತೆಯಲ್ಲಿ ಟಿ-ಜಂಕ್ಷನ್‍ನಿಂದ ಝೀರೋ ಪಾಯಿಂಟ್‍ಗೆ ರಸ್ತೆಯನ್ನು ಸೃಷ್ಟಿಸಲಾಗಿದೆ ಮತ್ತು ಭೂಮಿಯಿಂದ ಭೂ ಪ್ರದೇಶದ ಕ್ಷಿಪಣಿ, ಭೂಮಿಯಿಂದ ವಾಯುವಿನ ಕ್ಷಿಪಣಿ, ಟಿ-55 ಟ್ಯಾಂಕ್, ಆರ್ಟಿಲರಿ ಗನ್, ಟಾರ್ಪೆಡೊ ಮತ್ತು ಮಿಗ್-27 ವಿಮಾನವನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಇದರೊಂದಿಗೆ ಸೀಮಾ ದರ್ಶನ್ ವೀಕ್ಷಿಸಲು ಆಗಮಿಸುವ ಪ್ರವಾಸಿಗರು ನಮ್ಮ ಸೇನೆ ಮತ್ತು ಭದ್ರತಾ ಪಡೆಗಳ ಸನ್ನದ್ಧತೆಯನ್ನು ತಿಳಿಯುವ ಅವಕಾಶ ಪಡೆಯುತ್ತಾರೆ.

ವ್ಯೂಯಿಂಗ್ ಡೆಸ್ಕ್ ಟವರ್

ವ್ಯೂಯಿಂಗ್ ಡೆಸ್ಕ್ ಟವರ್

ವ್ಯೂಯಿಂಗ್ ಡೆಸ್ಕ್ ಟವರ್ ಅನ್ನು ಕೂಡಾ ಸೃಷ್ಟಿಸಲಾಗಿದ್ದು ಇದರಿಂದ ನಡಾಬೇಟ್‍ಗೆ ಭೇಟಿ ನೀಡುವ ಪ್ರವಾಸಿಗರು ಗಡಿಯ ನೋಟವನ್ನು ಆನಂದಿಸಬಹುದು. ಪ್ರವಾಸಿಗರು ಟವರ್ ಮೇಲಿನಿಂದ ಅದ್ಭುತವಾದ ಗಡಿ ನೋಟ ಪಡೆಯಬಹುದು. ಮಕ್ಕಳಿಗೆ ಪ್ಲೇ ಏರಿಯಾ ಸೃಷ್ಟಿಸಲಾಗಿದ್ದು ಅದರಲ್ಲಿ ಮಕ್ಕಳು ವಿವಿಧ ಹೊರಾಂಗಣ ಕ್ರೀಡೆಗಳನ್ನು ಆಡಬಹುದು.

ರಿಟ್ರೀಟ್ ಕಾರ್ಯಕ್ರಮಕ್ಕೆ ಪೆರೇಡ್ ಮೈದಾನವನ್ನು ಸಿದ್ಧಪಡಿಸಲಾಗಿದೆ. ಈ ಪೆರೇಡ್ ಮೈದಾನದಲ್ಲಿ ಬಿಎಸ್‍ಎಫ್ ಸೈನಿಕರಿಂದ ನಡೆಯುವ ಈ ರಿಟ್ರೀಟ್ ಕಾರ್ಯಕ್ರಮದ ನೋಟವು ನಡಾಬೇಟ್‍ಗೆ ಭೇಟಿ ನೀಡುವ ಪ್ರತಿ ಪ್ರವಾಸಿಗರಲ್ಲೂ ವಿಶಿಷ್ಟ ದೇಶಭಕ್ತಿಯ ಭಾವನೆ ಸೃಷ್ಟಿಸುತ್ತದೆ.

ಪಾರ್ಕಿಂಗ್, ಕುಡಿಯುವ ನೀರು, ಶೌಚಾಲಯಗಳು, ಅರೈವಲ್ ಪ್ಲಾಜಾ, ಕುಳಿತುಕೊಳ್ಳಲು ವ್ಯವಸ್ಥೆ, ಅಂಗಡಿಗಳು, ತಡೆಗೋಡೆ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು ಪ್ರವಾಸಿಗರಿಗೆ ಲಭ್ಯವಿರುತ್ತವೆ. ಸೌರ ಮರಗಳನ್ನು ಅಳವಡಿಸಲಾಗಿದ್ದು ರಾತ್ರಿಯಲ್ಲಿ ನಡಾಬೇಟ್ ಅನ್ನು ಸೌರಶಕ್ತಿಯಿಂದ ಬೆಳಗಿಸುತ್ತವೆ. ಸೀಮಾ ದರ್ಶನ್ ಕಾರ್ಯಕ್ರಮ ಪ್ರಾರಂಭಿಸಿದ್ದರಿಂದ ಕಳೆದ 5 ವರ್ಷಗಳಲ್ಲಿ ಸ್ಥಳೀಯ ಉದ್ಯೋಗ ಹೆಚ್ಚಾಗಿದೆ.

ನಾಡೇಶ್ವರಿ ಮಾತಾ ದೇವಾಲಯ

ನಾಡೇಶ್ವರಿ ಮಾತಾ ದೇವಾಲಯ

ನಾಡೇಶ್ವರಿ ಮಾತಾ ದೇವಾಲಯವು ಝೀರೋ ಪಾಯಿಂಟ್ ಬಳಿ ಇದ್ದು ಪ್ರತಿ ವರ್ಷ ದೊಡ್ಡ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಲು ಬರುತ್ತಾರೆ. ನಾಡೇಶ್ವರಿ ಮಾತಾ ದೇವಾಲಯದ ಬಳಿ ವಿಶ್ರಾಂತಿ ಗೃಹವನ್ನೂ ನಿರ್ಮಿಸಲಾಗಿದೆ.

ಸೀಮಾ ದರ್ಶನ್- ನಡಾಬೇಟ್ ಭಾರತ-ಪಾಕ್ ಗಡಿಯ ಬನಸ್ಕಾಂತಾ ಜಿಲ್ಲೆಯಲ್ಲಿದೆ. ಪ್ರವಾಸಿಗರು ಹತ್ತಿರದ ಸ್ಥಳಗಳಿಗೆ ಸುಲಭವಾಗಿ ಭೇಟಿ ನೀಡಬಹುದು. ಪ್ರಖ್ಯಾತ ಅಂಬಾ ಮಾತಾ ದೇವಾಲಯ ಅಂದರೆ ಅಂಬಾಜಿ, ಜೇಸರ್ ಕರಡಿ ಅಭಯಾರಣ್ಯ, ಬಲರಾಮ್ ಅರಮನೆ ಮತ್ತು ಬಲರಾಮ್ ಮಹಾದೇವ್ ದೇವಾಲಯಗಳು ಬನಸ್ಕಾಂತಾ ಜಿಲ್ಲೆಯಲ್ಲಿವೆ. ಇದಲ್ಲದೆ ರಾಣಿ ಕಿ ವಾವ್' ಮತ್ತು ಪಟೋಲಾ ಹೌಸ್' ನೆರೆಯ ಪಟಾನ್ ಜಿಲ್ಲೆಯಲ್ಲಿದ್ದು ಇವು ಕೂಡಾ ಭೇಟಿ ನೀಡಲು ಆಸಕ್ತಿದಾಯಕ ತಾಣಗಳಾಗಿವೆ.

ಸೀಮಾ ದರ್ಶನ್‍ಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರೂ ಸರ್ಕಾರದ ಅನುಮೋದಿತ ಫೋಟೋ ಗುರುತಿನ ಚೀಟಿ ಇರಬೇಕಾದುದು ಕಡ್ಡಾಯವಾಗಿದೆ.

ಸೀಮಾ ದರ್ಶನ್-ನಡಾಬೇಟ್‍ಗೆ ಮಾರ್ಗ

ಸೀಮಾ ದರ್ಶನ್-ನಡಾಬೇಟ್‍ಗೆ ಮಾರ್ಗ

ಪ್ರವಾಸಿಗರು ಸೀಮಾ ದರ್ಶನ್-ನಡಾಬೇಟ್‍ಗೆ ಸುಲಭವಾಗಿ ರಸ್ತೆಯ ಮೂಲಕ ತಲುಪಬಹುದು. ಇದು ಅಹಮದಾಬಾದ್‍ನಿಂದ 262 ಕಿ.ಮೀ.ಗಳು, ವಡೋದರದಿಂದ 372 ಕಿ.ಮೀ.ಗಳು, ರಾಜ್‍ಕೋಟ್‍ನಿಂದ 315 ಕಿ.ಮೀ.ಗಳು, ಸೂರತ್‍ನಿಂದ 524 ಕಿ.ಮೀ.ಗಳು, ಭಾವನಗರದಿಂದ 371 ಕಿ.ಮೀ.ಗಳು ಮತ್ತು ಭುಜ್‍ನಿಂದ 262 ಕಿ.ಮೀ.ಗಳ ದೂರ ಹೊಂದಿದೆ. ಹತ್ತಿರದ ವಿಮಾನ ನಿಲ್ದಾಣವೆಂದರೆ ಅಹಮದಾಬಾದ್ ವಿಮಾನ ನಿಲ್ದಾಣ.
ನಡಾಬೇಟ್‍ನ ಝೀರೋ ಪಾಯಿಂಟ್‍ನಲ್ಲಿನ ಸೀಮಾ ದರ್ಶನ್ ಕಾರ್ಯಕ್ರಮವನ್ನು ಡಿಸೆಂಬರ್ 24, 2016ರಂದು ಮುಖ್ಯಮಂತ್ರಿ ವಿಜಯ್ ರುಪಾನಿ ಉದ್ಘಾಟಿಸಿದರು ಎನ್ನುವುದನ್ನು ಗಮನಿಸಬೇಕಾಗಿದೆ.

ಸ್ವದೇಶ್ ದರ್ಶನ್ ಯೋಜನೆಯಡಿಯಲ್ಲಿ ಗುಜರಾತ್ ಪ್ರವಾಸೋದ್ಯಮ ಇಲಾಖೆಯಿಂದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ

ಗುಜರಾತ್ ಪ್ರವಾಸೋದ್ಯಮ ಇಲಾಖೆ

ಗುಜರಾತ್ ಪ್ರವಾಸೋದ್ಯಮ ಇಲಾಖೆ

ಗುಜರಾತ್ ಪ್ರವಾಸೋದ್ಯಮ ಇಲಾಖೆ ರಾಜ್ಯದಲ್ಲಿ ವಿವಿಧ ಪ್ರವಾಸೀ ತಾಣಗಳನ್ನು ಅಭಿವೃದ್ಧಿಪಡಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ವದ್‍ನಗರ್, ಮೊಧೇರಾ ಮತ್ತು ಪಟಾನ್ ಕೂಡಾ ಹೆರಿಟೇಜ್ ಸರ್ಕ್ಯೂಟ್‍ನಲ್ಲಿ ಸೇರಿಸಲಾಗಿದೆ. ಐತಿಹಾಸಿಕ ಮೊಧೇರಾ ಸೂರ್ಯ ದೇವಾಲಯದಲ್ಲಿ ಸ್ವದೇಶ್ ದರ್ಶನ್ ಯೋಜನೆಯಡಿಯಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ನಡೆಸಿದೆ.

ಪಾದಚಾರಿ ಮಾರ್ಗಗಳು, ಸೀಟಿನ ವ್ಯವಸ್ಥೆ, ಪ್ರದೇಶಾಭಿವೃದ್ಧಿ, ತಡೆಗೋಡೆ, ಆರ್‍ಸಿಸಿ ಗೋಡೆ, ಪಿಚ್ ವಾಲ್, ಸಾಮಾನ್ಯ ಬೆಳಕು, ಪ್ಲಾಂಟೇಷನ್, ಬೀದಿದೀಪಗಳು, ವಿದ್ಯುತ್ ಕೆಲಸ, ಬೆಂಚುಗಳು ಇತ್ಯಾದಿಯನ್ನು ಸೂರ್ಯ ದೇವಾಲಯದಲ್ಲಿ ರೂಪಿಸಲಾಗಿದೆ.

ಸೂರ್ಯ ದೇವಾಲಯ

ಸೂರ್ಯ ದೇವಾಲಯ

ಸೂರ್ಯ ದೇವಾಲಯವನ್ನು ಮೊದಲಿಗೆ 11ನೇ ಶತಮಾನದಲ್ಲಿ ಮೊದಲನೆಯ ಭೀಮ್‍ರಾಜ್ ಮೊದಲಿಗೆ ನಿರ್ಮಿಸಿದನು. ವಾಸ್ತುಶಿಲ್ಪದ ದೃಷ್ಟಿಕೋನದಿಂದ ಈ ಸೂರ್ಯ ದೇವಾಲಯವು ಗುಜರಾತ್‍ನ ಸೋಳಂಕಿ ಶೈಲಿಯಲ್ಲಿ ನಿರ್ಮಿಸಿದ ದೇವಾಲಯಗಳಿಗೆ ಉನ್ನತ ಉದಾಹರಣೆಯಾಗಿದೆ. ದೇಶ ಹಾಗೂ ವಿಶ್ವದ ಮೂಲೆ ಮೂಲೆಯಿಂದ ಲಕ್ಷಾಂತರ ಪ್ರವಾಸಿಗರು ಪ್ರತಿ ವರ್ಷ ಈ ಐತಿಹಾಸಿಕ ಪರಂಪರೆಯನ್ನು ವೀಕ್ಷಿಸಲು ಬರುತ್ತಾರೆ.

ಮೊಧೇರಾ ದೇಶದ ಮೊದಲ ಸೌರ ಗ್ರಾಮವಾಗಿ ಪ್ರಖ್ಯಾತಿ ಪಡೆದಿದೆ ಎಂದು ಗಮನಿಸಬೇಕು. ಐತಿಹಾಸಿಕ ಮೊಧೇರಾ ಸೂರ್ಯ ದೇವಾಲಯ ಮತ್ತು ಮೊಧೇರಾ ಗ್ರಾಮವು ಸೌರಶಕ್ತಿಯೊಂದಿಗೆ ಬೆಳಗುತ್ತದೆ. ಮೊಧೇರಾ ಗ್ರಾಮದಲ್ಲಿ ಮನೆಗಳು ಮತ್ತು ಸೂರ್ಯ ದೇವಾಲಯಕ್ಕೆ ಸಂಪೂರ್ಣವಾಗಿ ಸೌರಶಕ್ತಿಯಿಂದ ಬೆಳಕು ನೀಡಲಾಗಿದೆ.

English summary
Gujarat Tourism Department is developing Border tourism under Seema Darshan project at zero point of international border at Nadabet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X