Cauvery River: ಕರ್ನಾಟಕದ ಕಾವೇರಿಗೆ ಕೈಮುಗಿದು, ಆರತಿ ಬೆಳಗಿ ಬರಮಾಡಿಕೊಂಡ ತಮಿಳುನಾಡು ಜನ

ಕಾವೇರಿ ನೀರಿನ ವಿಚಾರವಾಗಿ ಕರ್ನಾಟಕ ಹಾಗೂ ಪಕ್ಕದ ತಮಿಳುನಾಡು ರಾಜ್ಯಗಳ ನಡುವೆ ವಿವಾದ, ವಾಗ್ವಾದ, ಗಲಾಟೆ ದಶಕಗಳಿಂದಲೂ ಇದೆ. ಪ್ರತಿ ವರ್ಷವೂ ತಮಿಳುನಾಡು ಕಾವೇರಿ ನೀರಿಗಾಗಿ ಕರ್ನಾಟಕದೊಂದಿಗೆ ಕ್ಯಾತೆ ತೆಗೆಯುತ್ತಲೇ ಇದೆ. ಕರ್ನಾಟಕದ ರೈತರು ಕಾವೇರಿ ನಮ್ಮವಳು ಎಂದು ಬೀದಿಗಿಳಿದು ಪ್ರತಿಭಟನೆ ಮಾಡುತ್ತಲೇ ಇದ್ದಾರೆ. ಆದರೆ ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ಕೆಆರ್‌ಎಸ್‌ ಜಲಾಶಯ ಬಹುತೇಕ ಭರ್ತಿಯಾಗಿದ್ದು, ನೀರು ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ. ಮತ್ತೊಂದೆಡೆ ತಮಿಳುನಾಡಿಗೆ ಹರಿಯುವ ಕಾವೇರಿಯನ್ನು ಅಲ್ಲಿನ ಜನ ಪೂಜ್ಯ ಭಾವನೆಯಿಂದ ಕೈಮುಗಿದು ಬರಮಾಡಿಕೊಳ್ಳುತ್ತಿರುವ ವಿಡಿಯೋ ಕೂಡ ವೈರಲ್‌ ಆಗಿದೆ.

ಹೌದು ಕರ್ನಾಟಕದಲ್ಲಿ ಹುಟ್ಟುವ ಕಾವೇರಿ ನದಿಯು ಇಲ್ಲಿನ ಹಲವು ಜಿಲ್ಲೆಗಳಲ್ಲಿ ಹರಿದು ತಮಿಳುನಾಡು ಮೂಲಕ ಬಂಗಾಳ ಕೊಲ್ಲಿ ಸೇರುತ್ತದೆ. ಬರಗಾಲದಲ್ಲಿ ಕರ್ನಾಟಕಕ್ಕೇ ಹೆಚ್ಚಿನ ನೀರು ಲಭ್ಯವಿರುವುದಿಲ್ಲ. ಆದರೂ ತಮಿಳುನಾಡು ನಮಗೆ ನೀರು ಕೊಡಿ ಕೊಡಿ ಎಂದು ಕ್ಯಾತೆ ತೆಗೆಯುತ್ತಾರೆ. ಇದು ರಾಜಕೀಯ ಸ್ವರೂಪ ಪಡೆದುಕೊಂಡಿರುವ ನಿದರ್ಶನಗಳು ಕೂಡ ಸಾಕಷ್ಟಿವೆ. ಎರಡೂ ರಾಜ್ಯಗಳು ನಡುವೆ ಹಲವು ಬಾರಿ ಕಾವೇರಿ ಕಿಚ್ಚು ಹೊತ್ತಿಕೊಂಡಿತ್ತು. ಕಾವೇರಿ ಅಂದರೆ ತಮಿಳುನಾಡಿನ ಜನರಿಗೂ ಪೂಜ್ಯವಾದ ಭಾವನೆ ಇದೆ. ಇದಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

viral-video-shows-tamil-nadu-residents-performing-aarti-on-cauvery-flowing-from-karnataka

ತಮಿಳುನಾಡಿನಲ್ಲಿ ಕಾವೇರಿ ನೀರು ಹರಿಯುವ ಸಮೀಪದ ಜನರು ಕರ್ನಾಟಕದಿಂದ ನೀರು ಹರಿದುಬಂದಾಗ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದಾರೆ. ಅಷ್ಟೇ ಅಲ್ಲದೆ ಬಾಲಕನೊಬ್ಬ ನೀರು ಬರ್ತಿದೆ ಎಂದು ತಮಿಳಿನಲ್ಲಿ ಜೋರಾಗಿ ಕೂಗಿ ಹೇಳಿದ್ದಾನೆ. ಬಳಿಕ ಊರಿನ ಕಿರಿ-ಹಿರಿಯರೆಲ್ಲರೂ ಕಾವೇರಿಗೆ ಆರತಿ ಬೆಳಗಿದ್ದಾರೆ. ನೀರು ಹರಿದು ಬಂದೊಡನೆ ಚಪ್ಪಲಿ ಬಿಟ್ಟು ನಮಸ್ಕರಿಸಿದ್ದಾರೆ. ಕಾವೇರಿಯನ್ನು ದೇವರಂತೆ ಪೂಜಿಸಿರುವ ಈ ಹಳೆಯ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

ಕಾವೇರಿ ಹುಟ್ಟಿದ್ದೂ ತಮಿಳುನಾಡಲ್ಲಿ ಅನ್ನಬೇಡಿ

ಈ ವಿಡಿಯೋಗೆ ಕಾಮೆಂಟ್‌ ಮಾಡಿರುವ ಕನ್ನಡಿಗರು, 'ಹರಿಯುವ ನಿರಿಗೆನೇ ಭೇದವಿಲ್ಲ ಅದರ ಮೇಲೆ ನಮಗೆೇಕೆ? ದೇಶದ ರೈತ ಸುಖವಾಗಿರಲಿ ಅಷ್ಟೇ ಸಾಕು. ರೈತ ಖುಷಿಯಾಗಿದ್ದರೆ ಇಡೀ ದೇಶ 3 ಹೊತ್ತು ಹೊಟ್ಟೆ ತುಂಬ ತಿನ್ನುತ್ತದೆ' ಎಂದಿದ್ದಾರೆ. ʼನಮ್ಮ ತಾಯಿ ಕಾವೇರಿ ನೀರು ಬೇಕು ನಿಮಗೆಲ್ಲ, ಆದರೆ ನಮ್ಮ ತಾಯಿ ಭಾಷೆ ಕನ್ನಡ ಬೇಡ ಅಲ್ವಾ? ನಮ್ ಕನ್ನಡ ಕರ್ನಾಟಕಕ್ಕೆ ಕೊಡುವುದು ಗೊತ್ತು, ನಿಮ್ ತರ ಅಲ್ಲ ನಮ್ ಕನ್ನಡ ಭಾಷೆ, ಜೈ ಕರ್ನಾಟಕ' ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ಇದಕ್ಕೆ ತಮಿಳು ನಟ ಕಮಲ್‌ ಹಾಸನ್‌ ಅವರನ್ನು ಎಳೆದು ತಂದಿದ್ದಾರೆ. ʼಗುರೂ ಕಾವೇರಿ ಕರ್ನಾಟಕದಲ್ಲಿ ಹುಟ್ಟಿದ್ದು ತಮಿಳುನಾಡಿನಲ್ಲಿ ಅಲ್ಲ, ನಂತರ ದಯವಿಟ್ಟು ಕಾವೇರಿ ತಮಿಳುನಾಡಿನಲ್ಲಿ ಹುಟ್ಟಿದೆ ಅಂತ ಹೇಳಬೇಡಿ ಎಂದು ಕಾಲೆಳೆದಿದ್ದಾರೆ. ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದ ಕಮಲ್‌ ಹಾಸನ್‌ಗೆ ಈ ವಿಡಿಯೋ ಮೊದಲು ತೋರಿಸಬೇಕು' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+