Viral Video of THAR: ಥಾರ್ ಚಾಲಕನಿಂದ ಪಾದಾಚಾರಿಗಳ ಜೀವದ ಜತೆ ಚೆಲ್ಲಾಟ: ನೆಟ್ಟಿಗರಿಂದ ಆಕ್ರೋಶ
ಭಾರತದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುವ ಜೊತೆಗೆ ಅಜಾಗರೂಕ ಚಾಲನೆ ಪ್ರಕರಣ, ಅಪಘಾತದಂತಹ ಘಟನೆಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲೂ ರೀಲ್ಸ್ ವಿಡಿಯೋ ಹುಚ್ಚಿಗಾಗಿ, ಹೆಚ್ಚಿನ ಲೈಕ್ಸ್, ವಿವ್ಸ್ ಪಡೆಯಲು ವಾಹನಗಳ ಜೊತೆಗೆ ಅಪಾಯಕಾರಿ ಸಾಹಸ ಮಾಡುವ ದೃಶ್ಯ ಸಾಮಾನ್ಯವಾಗಿದೆ. ಇದೀಗ ಅಂತದ್ದೆ ಘಟನೆ ನಡೆದಿದೆ. ಥಾರ್ ಎಸ್‌ಯುವಿ (THAR suv) ಚಾಲಕನ ಡ್ರೈವಿಂಗ್ ವಿಡಿಯೋ ವೈರಲ್ ಆಗಿದೆ.
ದೆಹಲಿಯಲ್ಲಿ 25 ವರ್ಷದ ಯುವಕ ಅಜಾಗರೂಕವಾಗಿ ಮಹೀಂದ್ರ ಥಾರ್ ಅನ್ನು ಓಡಿಸುವ ದೃಶ್ಯ, ಥಾರ್ ಜೊತೆಗಿನ ಸ್ಟಂಟ್ ವಿಡಿಯೋ ವೈರಲ್ ಆಗುತ್ತಿದೆ. ವಾಹನಗಳನ್ನು ಹೆಚ್ಚು ಪ್ರೀತಿಸುವ, ಹೆಚ್ಚು ಕಾಳಜಿಯಿಂದ ಓಡಿಸುವವರು ಇದ್ದಾರೆ. ಇನ್ನೂ ಕೆಲವೊಬ್ಬರು ಮನಬಂದಂತೆ ಇತರರಿಗೆ ಹಾನಿ ಆಗುವಂತೆ ವಾಹನ ಚಲಾಯಿಸುವವರು ಇದ್ದಾರೆ.

ಪಾದಾಚಾರಿಗಳಿಗೆ ಜೀವ ಭಯ ಹುಟ್ಟಿಸಿದ ಚಾಲಕ
ಈ ಯುವಕ ಥಾರ್ ವಾಹನವನ್ನು ರಸ್ತೆಗಳಲ್ಲಿ ಪಾದಚಾರಿಗಳಿಗೆ ಅಪಾರ ಉಂಟು ಮಾಡುವಂತೆ ಓಡಿಸಿದ್ದಾನೆ. ರೀಲ್ಸ್ ಹುಚ್ಚಿಗೆ ಹೀಗೆ ಮಾಡಿದ್ದಾರೆ ಎನ್ನಲಾಗಿದೆ. ಸಾರ್ವಜನಿಕರು ರಸ್ತೆ ಬರುವಾಗ ವೇಗವಾಗಿ ಅವರ ಮುಂದೆ ಹೋಗಿ ದಿಢೀರ್ ಬ್ರೇಕ್ ಹಾಕುವುದು. ಇದರಿಂದ ಜನ ಮೈಮೇಲೆಯೇ ವಾಹನ ಬಂತೆಂದು ರಸ್ತೆ ತುಂಬಾ ಓಡಾಡುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ನೋಯ್ಡಾದ ಸೆಕ್ಟರ್-125ರಲ್ಲಿರುವ ಅಮಿಟಿ ವಿಶ್ವವಿದ್ಯಾಲಯದ ಬಳಿ ನಡೆದ ಘಟನೆ ಇದಾಗಿದೆ. ಹರಿಯಾಣ ರಾಜ್ಯದ ನೋಂದಣಿಯ ಈ ಥಾರ್ ಎಸ್‌ಯುವಿ ಚಾಲಕನ ಸಾಹಸದ ವಿಡಿಯೋ ಇತರರ ಜೀವಕ್ಕೆ ಅಪಾಯ ತಂದೊಡ್ಡುತ್ತಿರುವ ದೃಶ್ಯಾವಳಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ವಿಡಿಯೋದಲ್ಲಿ ಏನಿದೆ?
ವೈರಲ್ ಆದ ವಿಡಿಯೋದಲ್ಲಿ, ಥಾರ್ ಚಾಲಕ ಪಾದಚಾರಿಗಳ ಎದುರು ಸ್ಕಿಡ್ಡಿಂಗ್ ಮಾಡುವುದು ಮತ್ತು ಥಟ್ಟನೆ ಬ್ರೇಕ್ ಹಾಕತ್ತಾನೆ. ಜನರು ಒಂದು ಕ್ಷಣ ಏನಾಯಿತು ಎಂದು ದಿಢೀರ್ ಬೇರೆಡೆಗೆ ಸರಿಯುತ್ತಾರೆ. ಹೀಗಾದಾಗ ಮತ್ತೊಂದು ಬದಿಯಲ್ಲಿ ವೇಗವಾಗಿ ವಾಹನಗಳು ಅದೇ ವೇಳೆ ಬಂದರೆ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ.

ಈ ಥಾರ್ ಟಿಂಟೆಡ್ ಕಿಟಕಿ ಹೊಂದಿದ್ದು ಇದು ಮೋಟಾರು ವಾಹನ ಕಾಯ್ದೆಯಡಿ ಕಾನೂನು ಬಾಹಿರವಾಗಿದೆ. ಅಲ್ಲದೇ ನಂಬರ್ ಪ್ಲೇಟ್ ಹಾಕದಿರುವುದನ್ನು ನೋಡಿದರೆ, ವಿಡಿಯೋ ವೈರಲ್ ಆಗಲೆಂದೆ ಪಾದಾಚಾರಿಗಳ ಜೀವದ ಜೊತೆ ಚೆಲ್ಲಾಡವಾಡಿರುವ ಮೇಲ್ನೋಟಕ್ಕೆ ಗೊತ್ತಾಗುತ್ತದೆ. ನಂಬರ್ ಪ್ಲೇಟ್ ಬದಲಿಗೆ ಆ ಜಾಗದಲ್ಲಿ ಹಿಂದಿಯಲ್ಲಿ "ಗುರ್ಜರ್" ಎಂದು ಬರೆದಿರುವುದು ವಿಡಿಯೋದಲ್ಲಿ ಕಾಣುತ್ತದೆ.
HR30Z4504 नंबर की काले शीशों की यह गाडी नोएडा अमेटी युनिवर्सिटी के पास खतरनाक स्टंट करके आए दिन लोगों की जान जोखिम में डालती है।’गुर्जर’ लिखकर लड़कियों को छेड़ने और परेशान करने वाले ऐसे असामाजिक तत्व समाज का नाम भी खराब करते है।@Uppolice @noidapolice आपसे कारवाई की उम्मीद है। pic.twitter.com/VOnJ8nM72y
— Gaurav Nagar (@gauravnagar_) May 24, 2024
2,300 ಕ್ಕೂ ಹೆಚ್ಚು ನೋಟಿಸ್
ಉತ್ತರ ಪ್ರದೇಶ ಪೊಲೀಸರು ವರ್ಷದ ಹಿಂದೆ ಕಾನೂನು ಬಾಹೀರವಾಗಿ ವಾಹನಗಳ ಮೇಲೆ ಜಾತಿ ಮತ್ತು ಧರ್ಮ ಪ್ರದರ್ಶಿಸುವ ಸಂಕೇತ ಹೊಂದಿರುವವರ ವಿರುದ್ಧ 2,300 ಕ್ಕೂ ಹೆಚ್ಚು ನೋಟಿಸ್ ನೀಡಿದ್ದರು. ಸದ್ಯ ವೈರಲ್ ಆದ ಥಾರ್ ವಿಡಿಯೋ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ.












Click it and Unblock the Notifications