Viral Video: ಭಾರೀ ಮಳೆಗೆ ಪುಣೆ ರಸ್ತೆಗಳಲ್ಲಿ ಪ್ರವಾಹ, ಅದರಲ್ಲೇ ಯುವಕನ ಸರ್ಫಿಂಗ್: ಭಾರೀ ವೈರಲ್

ದೇಶಾದ್ಯಂತ ಮುಂಗಾರು ವ್ಯಾಪಿಸಿದೆ. ಜೋರು ಮಳೆಗೆ ಮುಂಬೈ ಮತ್ತು ಪುಣೆಯಂತಹ ನಗರಗಳಲ್ಲಿ ತಾಪಮಾನ ಇಳಿಕೆಯಾಗಿದೆ. ಇದು ಖಷಿ ಕೊಡುವ ಸಂಗತಿಯಾದರೂ ಸಹ ಸದ್ಯ ಬರುತ್ತಿರುವ ಮುಂಗಾರು ಮಳೆಯು ಅವಾಂತರ ಸೃಷ್ಟಿಸಿದೆ. ಅನೇಕ ಪ್ರದೇಶಗಳು ಜಲಾವೃತವಾಗಿವೆ. ವಿದ್ಯುತ್ ಕಡಿತ ಇನ್ನಿತರ ಸಮಸ್ಯೆ ಎದುರಾಗಿದೆ. ಈ ಮಧ್ಯೆ ಕೆರೆಯಂತಾದ ರಸ್ತೆಯಲ್ಲಿ ಯುವಕನೊಬ್ಬ 'ಸರ್ಫಿಂಗ್' ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಹೌದು, ಈ ಯುವಕ ಪುಣೆಯ ನಿವಾಸಿ ಎನ್ನಲಾಗಿದೆ. ಮಳೆಗೆ ಜಲಾವೃತಗೊಂಡಿರುವ ರಸ್ತೆಗಳಲ್ಲಿಯೇ ಕಾರು, ಬೈಕುಗಳ ಸಂಚರಿಸುತ್ತಿವೆ. ಈ ಮಧ್ಯೆ ಯುವಕ ಬೆಡ್ ರೀತಿಯ ತೆಲುವ ಹಾಸಿಗೆ ಮೇಲೆ ಮಲಗಿ ರಸ್ತೆಯಲ್ಲಿ ಸಂಚರಿಸಿದ (ಸರ್ಫಿಂಗ್ ಮಾಡಿದ) ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಉರ್ಮಿ ಎಂಬುವವರು ಹಂಚಿಕೊಂಡಿದ್ದಾರೆ.

Viral Video of Pune Youth Surfing on Flooded Street after Due Heavy Rain Internet Reacts

ಈ ವಿಡಿಯೋ ಸದ್ಯದ ಪುಣೆ ಪರಿಸ್ಥಿತಿಯನ್ನು ತಿಳಿಸುವ ಜೊತೆಗೆ ಆಡಳಿತ ಸರ್ಕಾರದ ಬೇಜವಾಬ್ದಾರಿ ಎಂಥದ್ದು ಎಂದು ತೋರಿಸುತ್ತಿದೆ. ಸ್ಥಳೀಯ ನಾಗರಿಕ ಸಂಸ್ಥೆಗಳ ಜವಾಬ್ದಾರಿಯನ್ನು ಬಡಿದೆಬ್ಬಿಸುವಂತಿದೆ.

ವಿಡಿಯೋದಲ್ಲಿ ಏನಿದೆ? ನೆಟ್ಟಿಗರು ಏನಂದ್ರು?

ಪ್ರವಾಹದ ರಸ್ತೆಯಲ್ಲಿ ತೆಲುವ ಬೆಡ್ ಮೇಲೆ ಮಲಗಿಕೊಂಡು ಯುವಕ ಸಂಚರಿಸಿದ ವಿಡಿಯೋ ಇದಾಗಿದೆ. ಇದರಲ್ಲಿ ತನ್ನ ಅಕ್ಕ- ಪಕ್ಕ ಬರುವ ಬೈಕ್, ಎದುರಿಗೆ ರಸ್ತೆಯಲ್ಲಿ ಓಡಾಡುವ ಆಟೋಗಳಿಗೆ ತನ್ನ ಮುಂದೆ ಬರದಂತೆ ಯುವಕ ಕೈ ಸನ್ನೆ ಮಾಡುವುದನ್ನು ನೀವು ನೋಡಬಹುದು.

ಕಾರುಗಳು ಇನ್ನಿತರ ವಾಹನಗಳು ಈ ಜಲಾವೃತದ ರಸ್ತೆಗಳಲ್ಲಿ ಸಂಚರಿಸಲು ಪರದಾಡುತ್ತಿವೆ. ಆದರೆ ಈತ ಮಾತ್ರ ಚಿಲ್ ಆಗಿ ಹಾಸಿಗೆ ಮೇಲೆ ಮಲಗಿ ಹವಾಮಾನವನ್ನು ಆನಂದಿಸಿದ್ದಾನೆ. ನೋಡುಗರಿಗೆ ಇದೊಂದು ಮನರಂಜನಾತ್ಮಕ ದೃಶ್ಯದಂತೆ ಕಂಡಿದೆ.

ವಿಡಿಯೋಗೆ ಕ್ಷಣಗಳಲ್ಲೇ 47,000 ವಿವ್ಸ್

ಈ ವಿಡಿಯೋವನ್ನು ಶುಕ್ರವಾರ ಉರ್ಮಿ ಎಂಬುವವರು ಶೇರ್ ಮಾಡಿಕೊಂಡಿದ್ದಾರೆ. ಪುಣೆ ರೈನ್ (#PuneRains) ಎಂದು ಹ್ಯಾಷ್‌ ಟ್ರ್ಯಾಗ್ ಹಾಕಿದ್ದಾರೆ. ಇದರಕ್ಕೆ ನೀಡಲಾದ ಶಿರ್ಷಿಕೆಯನ್ನು ಓದುವ ಬರೀ 15-ಸೆಕೆಂಡ್ ಈ ವಿಡಿಯೋ ಕ್ಲಿಪ್ 47,000 ವಿವ್ಸ್ ಪಡೆದಕೊಂಡಿದೆ. 500 ಕ್ಕೂ ಹೆಚ್ಚು ಲೈಕ್ಸ್‌ಗಳು ಈ ವಿಡಿಯೋಗೆ ಬಂದಿವೆ.

ವಿಡಿಯೋ ನೋಡಿದವರು ಹೇಳಿದ್ದೇನು?

ಸಾಮಾಜಿಕ ಜಾಲತಾಣದಲ್ಲಿ ಸರ್ಫಿಂಗ್ ವೀಡಿಯೋ ವೈರಲ್ ಆಗುತ್ತಿದ್ದ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸಿದರು. ಮಳೆಗಾಲದಲ್ಲಿ ಪುಣೆ ಹೆಚ್ಚು ಪರಿಸರ ಸ್ನೇಹಿ ಆಗುತ್ತದೆ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು ಈ ಯುವಕನಿಗೆ ಅಸೈನ್ ಮೆಂಟ್ ಬಾಕಿ ಇದೆ. ಅದನ್ನು ಪೂರ್ಣಗೊಳಿಸಲು ಹೊರಟಿದ್ದಾನೆ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು 'ಮ್ಯಾಜಿಕ್ ಕಾರ್ಪೆಟ್ ಮೇಲೆ ಪುಣೆಯ ಅಲ್ಲಾದೀನ್" ಎಂದು ವ್ಯಂಗ್ಯವಾಡಿದ್ದಾರೆ.

ಇನ್ನೂ ಕೆಲವರು ಯುವಕರ ಸೃಜನಶೀಲತೆಯನ್ನು ಕೊಂಡಾಡಿದ್ದಾರೆ. ಇಂತಹ ಪ್ರವಾಹ ಸ್ಥಿತಿಯನ್ನು ಯುವಕ ಸದ್ಭಳಕೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಪುಣೆ-ಮುಂಬೈ ಪ್ರದೇಶಗಳಲ್ಲಿ ಬೇರೆ ಬೇರೆ ಕಡೆ ತೆರಳು ಮಾಲಿನ್ಯವೇ ಇಲ್ಲದ ಇಂತಹ ಪ್ರಯಾಣ ಸೂಕ್ತ ಎಂದು ಮತ್ತೊಬ್ಬರು #MumbaiRain ಹ್ಯಾಷ್ ಟ್ಯಾಗ್ ಹಾಕಿ ಟೀಕಿಸಿದ್ದಾರೆ. ಇಷ್ಟೆಲ್ಲ ನಾನ್ಸೆನ್ಸ್ ನಡೆದರೂ ಟ್ರಾಫಿಕ್ ಎಲ್ಲಿ? ಎಂದು ಇನ್ನೊಬ್ಬ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+