Viral Video: ಪಳಗಿದೇ ಎಂದು ಸಿಂಹ ಮುಟ್ಟಿದ ವ್ಯಕ್ತಿ ಕಿರುಚುತ್ತಲೇ ಕಾಲ್ಕಿತ್ತಿದ್ದಾನೆ: ಅದೃಷ್ಟವಂತ ಎಂದ ನೆಟ್ಟಿಗರು
ಕಾಡು ಪ್ರಾಣಿಗಳನ್ನು ನೀವು ಎಷ್ಟೇ ಪಳಗಿಸಿದರೂ ಕೆಲ ಸಮಯ ಸಂದರ್ಭದಲ್ಲಿ ಅವು ಕ್ರೌರ್ಯವಾಗಿ ವರ್ತಿಸುತ್ತವೆ. ಅದನ್ನು ಸಾಕಿದವರು, ಇಲ್ಲವೇ ಪಳಸಿಗುವವರು ಅಥವಾ ವೀಕ್ಷಣೆಗೆ ಬಂದವರು ಎಚ್ಚರಿಕೆಯಿಂದ ಇದ್ದಷ್ಟು ಉತ್ತಮ. ಆದರೆ ಇಲ್ಲೊಬ್ಬ ಮಹಾಶಯ ಸಿಂಹ ಸುಮ್ಮನಿದೆ ಎಂದು ಮುಟ್ಟಿ ಆವಾಂತರ ಮೈಮೇಲೆ ಎಳೆದುಕೊಂಡಿದ್ದಾನೆ. ಅದರ ವಿಡಿಯೋ ವೈರಲ್ ಆಗಿದೆ.
ನಾವೆಷ್ಟೇ ಎಚ್ಚರಿಕೆ ವಹಿಸಿದರು, ಕಾಡು ಪ್ರಾಣಿಗಳು ಪಂಜರದಲ್ಲಿದ್ದರು ಅವರು ಕಾಡು ಪ್ರಾಣಿಗಳೇ. ಒಮ್ಮೊಮ್ಮೆ ಅವುಗಳಿಂದ ಜೀವಕ್ಕೆ ಅಪಾಯ ಎದುರಾಗುವ ಸಂಭವವಿರುತ್ತದೆ. ಸುಮ್ಮನಿವೆ ಎಂದು ಅವುಗಳನ್ನು ಮಟ್ಟಲು, ಆಹಾರ ನೀಡಲು ಇನ್ನಿತರ ರೀತಿಯಲ್ಲಿ ತೊಂದರೆ ನೀಡಲು ಹೋದರೆ ತೊಂದರೆಗೆ ಸಿಲುಕಬೇಕಾಗುತ್ತದೆ.

ಚೈನಿಂದ ಕಟ್ಟಿದ ಸಿಂಹ ಮುಟ್ಟಿ ಕಾಲ್ಕಿತ್ತ
ಈ ಪ್ರಕರಣದಲ್ಲಿ ಆಗಿದ್ದು ಅದೇ. ಪಂಜರದಲ್ಲಿ ಸಿಂಹವನ್ನು ಚೈನಿನ ಮೂಲಕ ಕಟ್ಟಲಾಗಿದೆ. ಅದು ಸಾಕಿದವನ ಮುಂದೆ ಮೈ ಉಜ್ಜಿಕೊಳ್ಳುತ್ತಾರೆ ಸಜಜವಾಗಿ ಕೂತಿದೆ. ಇದೇ ವೇಳೆ ಅದೇ ಪಂಜರದಲ್ಲಿ ಮಾಲೀಕನ ಜೊತೆಗಿದ್ದ ವ್ಯಕ್ತಿ ಸಿಂಹವನ್ನು ನಾಯಿಯನ್ನು ಮುಟ್ಟಿ ತಲೆ ಮೇಲೆ ಕೈಯಾಡಿಸುವ ರೀತಿಯಲ್ಲಿ ಸಿಂಹದ ಮೇಲೆ ಕೈಯಾಡಿಸಿದ್ದಾನೆ.
ಸಿಂಹಕ್ಕೆ ಅದೇನೆನಿಸಿತೋ ಏಕಾಎಕಿ ಆತನ ಮೇಲೆ ಎರಗಿದೆ. ಪಂಜರದೊಳಗೆ ಒಂದು ಮೂಲೆಯಿಂದ ಮತ್ತೊಂದು ಮೂಲೆವರೆಗೂ ಅಟ್ಟಿಸಿಕೊಂಡು ಹೋಗಿದೆ. ಸಿಂಹ ಸಾಕಿದ ಮಾಲೀಕ ಕೈಯಲ್ಲಿದ್ದ ಚೈನ್ ಹಿಡಿದು ಎಳೆದು ಮುಂದಾಗುವ ಅಪಾಯ ತಡೆಯಲು ಪ್ರಯತ್ನಿಸಿದ ವಿಡಿಯೋ ವೈರಲ್ ಆಗಿದೆ.

ಕಿರುಚುತ್ತಲೇ ಪಂಜದೊಳಗೆ ಓಡಾಡಿದ ವ್ಯಕ್ತಿ
ಚೈನ್ ಹಿಡಿದು ಎಳೆದ ಮರುಕ್ಷಣವೇ ಚೈನ್ ತುಂಡಾಗಿದೆ. ನಿಯಂತ್ರಣ ಮುಕ್ತ ಸಿಂಹ ಮನಬಂದಂತೆ ಆ ವ್ಯಕ್ತಿ ಮೇಲೆ ಎರಗಲು ಶುರು ಮಾಡಿದೆ. ಕೂಡಲೇ ಎಚ್ಚೆತ್ತ ಮಾಲೀಕ ಮಧ್ಯ ಪ್ರವೇಶಿಸಿ ವ್ಯಕ್ತಿಯನ್ನು ರಕ್ಷಣೆ ಮಾಡಿದ ಘಟನೆಯನ್ನು ನೀವು ವಿಡಿಯೋದಲ್ಲಿ ನೋಡಬಹುದಾಗಿದೆ.
ಸಿಂಹ ಮೈಮೇಲೆ ಜಿಗಿಯುತ್ತಿದ್ದಂತೆ ಗಾಬರಿ ಒಳಗಾದ ವ್ಯಕ್ತಿ ಕಿರುಚುತ್ತಲೇ ಪಂಜರದಿಂದ ತುಂಬೆಲ್ಲ ಓಡಾಡಿದ ವ್ಯಕ್ತಿ, ಸಿಂಹದಿಂದ ಕಾಪಾಡುತ್ತಿದ್ದಂತೆ ಪಂಜರದಿಂದ ಹೊರಕ್ಕೆ ಓಡಿದ್ದಾನೆ. ಬದುಕಿತು ಬಡಜೀವ ಎಂದುಕೊಂಡು ನಿಟ್ಟುಸಿರು ಬಿಟ್ಟಿದ್ದಾನೆ.
— Fck Around N Find Out (@FAFO_TV) May 18, 2024
ನೀನು ಅದೃಷ್ಟಶಾಲಿ ಎಂದ ನೆಟ್ಟಿಗರು
ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಾಡು ಪ್ರಾಣಿ, ಮನುಷ್ಯ ಸಂಬಂಧ ಕಾಡು ಪ್ರಾಣಿಗಳ ಕ್ರೌರ್ಯ ಬಗ್ಗೆ ನಾನಾ ಕಾಮೆಂಟುಗಳು ಬಂದಿವೆ. ಕಾಡು ಪ್ರಾಣಿ ಎಂಬ ಜ್ಞಾನ ಇಲ್ಲದೇ ಅದರ ಬಳಿ ಹೋಗಿರುವುದು ದುರದೃಷ್ಟಕರ ಎಂದು ನೆಟ್ಟಿಗರು ಹೇಳಿದ್ದಾರೆ.
ಇತ್ತೀಚೆಗೆ ನಡೆದ ಘಟನೆ ಇದಾಗಿದೆ. ಇಂತಹ ಪ್ರಾಣಿಯನ್ನು ನೀವೆಷ್ಟೆ ಪಳಗಿಸಿದರೂ ಅದು ಪರಭಕ್ಷಕ ವರ್ತನೆ ಎಂದಿಗೂ ಬಿಡುವುದಿಲ್ಲ. ಅನಿರೀಕ್ಷಿತ ಸ್ವಭಾವ, ಗುಣ ಪ್ರದರ್ಶಿಸದೇ ಬಿಡುವುದಿಲ್ಲ ಎಂದಿದ್ದಾರೆ. ಸಿಂಹ ಬಳಿ ಹೋಗಿ ಹೊರ ಬಂದ ನೀವು ಅದೃಷ್ಟಶಾಲಿ. ಕಾಡು ಬೆಕ್ಕಿನಿಂದ ತಪ್ಪಿಸಿಕೊಂಡಿದ್ದೀರಿ ಎಂದು ತಿಳಿಸಿದ್ದಾರೆ. ಈ ವ್ಯಕ್ತಿಗೆ ಗಂಭೀರವಾದ ಗಾಯಗಳೇನು ಆಗಿಲ್ಲ ಎಂದು ತಿಳಿದು ಬಂದಿದೆ.
-
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Love Mocktail 3: ಲವ್ ಮಾಕ್ಟೇಲ್ 3 ಸಿನಿಮಾ ಕದ್ದ ಕಥೆ: ಮಾರಿ ಗೋಲ್ಡ್ ನಿರ್ದೇಶಕ ರಾಘವೇಂದ್ರ ನಾಯ್ಕ್ ಗಂಭೀರ ಆರೋಪ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications