Video Viral: ಸಾಂಬಾರ್‌ನಲ್ಲಿ ಸಿಕ್ಕಿದ್ದನ್ನು ನೋಡಿ ತಬ್ಬಿಬ್ಬಾದ ಗ್ರಾಹಕ, ನೆಟ್ಟಿಗರಿಂದ ವ್ಯಾಪಕ ಆಕ್ರೋಶ

ಸಾಮಾಜಿಕ ಜಾಲತಾಣವು ಇಂದಿನ ದಿನಗಳಲ್ಲಿ ಹೆಚ್ಚು ಪ್ರಭಾವಿ ಮಾಧ್ಯಮವಾಗಿದೆ. ಎಲ್ಲಿ ಏನೇ ನಡೆದರೂ ಕ್ಷಣಾರ್ಧದಲ್ಲಿ ಜಗತ್ತಿಗೆ ಬಹಿರಂಗೊಂಡುಬಿಡುತ್ತದೆ. ಊಟದಲ್ಲಿ ಜಿರಳೆ, ಹಲ್ಲಿ, ನೋಣಗಳು ಬರುವುದನ್ನು ಕೇಳಿದ್ದೀರಿ. ಆದರೆ ಇಲ್ಲೊಬ್ಬರಿಗೆ ಊಟದಲ್ಲಿ ಇಲಿ ಪತ್ತೆಯಾಗಿದೆ. ಇದರ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.

ಹೌದು, ಅಹಮದಾಬಾದ್‌ನ ಜನಪ್ರಿಯ ತಿನಿಸುಗಳಲ್ಲಿ ಒಂದಾದ ಸಾಂಬಾರ್‌ನಲ್ಲಿ ಸತ್ತ ಇಲಿ ಪತ್ತೆ ಆಗಿರುವ, ಸಾಂಬಾರ್‌ ನಲ್ಲಿ ಇಲಿ ಕಂಡು ಬಂದ ದೃಶ್ಯದ ವಿಡಿಯೋ ವೈರಲ್ ಆಗುವ ಜೊತೆಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Viral Video of Customer has Found Dead Rat in Sambar at Ahmedabad Hotel Netizens Outrage

ಈ ಘಟನೆ ನಡೆದಿರುವುದು ಅಹಮದಾಬಾದ್‌ನಲ್ಲಿ. ಇಲ್ಲಿನ ನಿಕೋಲ್‌ನಲ್ಲಿರುವ ದೇವಿ ದೋಸೆ ಫುಡ್ ಜಾಯಿಂಟ್ ಗ್ರಾಹಕರಿಗೆ ಬಡಿಸಿದ್ದ ಸಾಂಬಾರ್ ಬಟ್ಟಲಿನಲ್ಲಿ ಸತ್ತ ಇಲಿ ಇರುವುದನ್ನು ಗ್ರಾಹಕ ನೋಡಿದ್ದಾನೆ. ಸಾಂಬಾರ್‌ನಲ್ಲಿ ಸತ್ತ ಇಲಿ ತೇಲುತ್ತಿರುವುದು ವಿಡಿಯೋ ಆಗಿದೆ.

ವಿಡಿಯೋದಲ್ಲಿ ಏನಿದೆ?

ಈ ವಿಡಿಯೋವನ್ನು Instagram ನಲ್ಲಿ @ahmedabad.updates ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಮೇಜಿನ ಮೇಲೆ ಎಂದಿನಂತೆ ಆಹಾರ ಬಡಿಸಲಾಗಿದೆ. ಗ್ರಾಹಕರೊಬ್ಬರಿಗೆ ತಿಂಡಿ ಸವಿಯುವಾಗ ಸಾಂಬಾರ್‌ನಲ್ಲಿ ಸತ್ತ ಇಲಿ ಇರುವುದು ಗೊತ್ತಾಗಿದೆ. ಅದನ್ನು ಅವರು ಖಚಿತಪಡಿಸಿಕೊಂಡೇ ವಿಡಿಯೋ ಮಾಡಿಕೊಂಡಿದ್ದಾರೆ.

ದುಡ್ಡು ಕೊಟ್ಟು ಹೊಟ್ಟೆಗೆ ತಿನ್ನುವ ಆಹಾರ ಪದಾರ್ಥದಲ್ಲಿ ಈ ರೀತಿಯ ನಿರ್ಲಕ್ಷ್ಯ ಉಂಟಾದರೆ ಹೋಟೆಲ್, ರೆಸ್ಟೋರೆಂಟ್‌ಗಳನ್ನೆಲ್ಲ ಹೇಗೆ ನಂಬಲು ಸಾಧ್ಯ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಳಿಯ ಲೋಟದಲ್ಲಿ ಸಾಂಬರ್‌ನಲ್ಲಿ ಸತ್ತ ಇಲಿ ಕಂಡು ಬಂದಿದ್ದು, ಒಂದೆಡೆಯಾದರೆ, ಈ ಅಹಮದಾಬಾದ್‌ನ ಹೋಟೆಲ್ ಒಳಗೆ ಸಾಂಬರ್ ಇನ್ನಿತರ ಆಹಾರ ಪದಾರ್ಥಗಳು ಇರುವ ದೊಡ್ಡ ಪಾತ್ರೆಗಳನ್ನು ಮುಚ್ಚದೇ ಹಾಗೆ ಬಿಟ್ಟಿರುವುದು ಗೊತ್ತಾಗುತ್ತದೆ.

ವಿಡಿಯೋ ನೋಡಿದ ನೆಟ್ಟಿಗರಿಂದ ಆಕ್ರೋಶ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದ ಈ ದೋಸೆ ಪಾಯಿಂಟ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ವೈರಲ್ ಆಗುತ್ತಿರುವ ಈ ವೀಡಿಯೊಗೆ ಪ್ರತಿಕ್ರಿಯಿಸಿದ ಅನೇಕ ಬಳಕೆದಾರರು, ಈ ಹೋಟೆಲ್‌ನವರು ಯಾವಾಗ ಎಚ್ಚೆತ್ತುಕೊಳ್ಳುತ್ತಾರೆ? ಯಾವಾಗ ಇಂಥವರಿಗೆ ಬುದ್ಧಿ ಬರುತ್ತದೆ, ನೈರ್ಮಲ್ಯ ಕಾಪಾಡಿಕೊಳ್ಳುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮತ್ತೊಬ್ಬ ನೆಟ್ಟಿಗರು, ದಯವಿಟ್ಟು ನಾನು ಆಹಾರ ಮತ್ತು ಔಷಧ ಇಲಾಖೆಗೆ ಈ ಕುರಿತು ವಿನಂತಿಸಿಕೊಳ್ಳುತ್ತೇನೆ. ಇಂತಹ ಘಟನೆಗಳು ಆದಾಗಲಾದರೂ ಎಚ್ಚೆತ್ತುಕೊಳ್ಳಿ, ಮೇಜಿನ ಕೆಳಗೆ ಹಣ ಪಡೆದು ಏನು ಆಗಿಲ್ಲ ಎಂಬಂತೆ ವರ್ತಿಸಬೇಡಿ ಎಂದು ಹೇಳಿದ್ದಾರೆ.

ಹೋಟೆಲ್ ಉದ್ಯಮಿದಾರರಿಗೆ ಪಾಲಿಕೆ ಎಚ್ಚರಿಕೆ

ಘಟನೆ ಕುರಿತು ಮಾತನಾಡಿದ ಅಹಮದಾಬಾದ್ ಮಹಾನಗರ ಪಾಲಿಕೆ (ಎಎಮ್‌ಸಿ) ಆಹಾರ ಸುರಕ್ಷತಾ ಅಧಿಕಾರಿ ಭವಿನ್ ಜೋಶಿ, ಅವರು ಅಹಮದಾಬಾದ್ ಕಾರ್ಪೊರೇಷನ್‌ನ ಎಲ್ಲಾ ವ್ಯಾಪಾರ ನಿರ್ವಾಹಕರು ಗ್ರಾಹಕರಿಗೆ ಅವರು ನೀಡುವ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ತಪ್ಪುಗಳು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ಕೊಟ್ಟಿದ್ದಾರೆ.

ಇತ್ತೀಚೆಗೆ ಆನ್‌ಲೈನ್ ಆರ್ಡರ್ ಮಾಡಿದವರಿಗೆ ವೆಜ್ ಬದಲು ನಾನ್ ವೆಜ್, ಅಮೇಜಾನ್ ಪಾರ್ಸೆಲ್ ನಲ್ಲಿ ಹಾವು ಬಂದಿದ್ದ ವಿಡಿಯೋ ಭಾರೀ ವೈರಲ್ ಆಗಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+