Viral Video of Road Rage: ಬೆಂಗಳೂರಿನಲ್ಲಿ ದಂಪತಿಯ ಕಾರಿನ ಮೇಲೆ ದಾಳಿ, ಮಗುವಿಗೆ ಗಾಯ: ಆಗಿದ್ದೇನು?
ಬೆಂಗಳೂರು, ಮೇ 23: ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಗಳಿಗೆ ಕಾರುಗಳನ್ನು ಅಡ್ಡಗಟ್ಟುವುದು, ಹಲ್ಲೆ ನಡೆಸುವುದು, ಕಾರಿನ ಗ್ಲಾಜು ಒಡೆದು ದಾಂಧಲೆ ಮಾಡುವುದು, ಬೆದರಿಸುವ ಘಟನೆಗಳು ಮೇಲಿಂದ ಮೇಲೆ ಮರುಕಳಿಸುತ್ತಿದೆ. ಇದನ್ನು ರಸ್ತೆ ಕ್ರೌರ್ಯ (Road Rage) ಅಂತಲೂ ಕರೆಯಲಾಗುತ್ತದೆ.
ಇದೀಗ ಅಂತದ್ದೆ ಘಟನೆಯೊಂದು ಇತ್ತೀಚೆಗೆ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ. ಮೂರು ವರ್ಷದ ತಮ್ಮ ಮಗುವಿನ ಜತೆ ದಂಪತಿಗಳು ಕಾರಿನಲ್ಲಿ ಪ್ರಯಾಣಿಸುವಾಗ ಈ ಕೃತ್ಯ ನಡೆಸಲಾಗಿದೆ. ಘಟನೆಯ ವಿಡಿಯೋವನ್ನು ಸಾಮಾಜಿಕ ಜಾತಲಾಣದ ಟ್ವಿಟ್ಟರ್ (ಎಕ್ಸ್) ನಲ್ಲಿ @akhilsabu45 ಎಂಬುವವರು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?, ಆಗಿದ್ದೇನು?
ಬೆಂಗಳೂರಿನ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ದಂಪತಿ ಹಾಗೂ ಅವರ ಮೂರು ವರ್ಷದ ಮಗು ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಸ್ಕೂಟರ್ ನಲ್ಲಿ ಬಂದ ಸವಾರನೊಬ್ಬ ಅವರ ಮೇಲೆ ದಾಳಿ ನಡೆಸಿದ್ದಾನೆ.
ಈ ದ್ವಿಚಕ್ರವಾಹನ ಸವಾರನು ಹುಂಡೈ i10 ಹ್ಯಾಚ್ ಬ್ಯಾಕ್ ಕಾರನ್ನು ಹಿಂದಿಕ್ಕುವಲ್ಲಿ ವಿಫಲವಾಗಿದ್ದಾನೆ. ಇದರಿಂದ ಕ್ರೋಧಗೊಂಡ ಆತ, ದಾರಿ ಬಿಟ್ಟಿಲ್ಲವೆಂದು ಕಾರಿನ ಮೇಲೆ ದಾಳಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಆರೋಪಿ ನಡು ರಸ್ತೆಯಲ್ಲಿ ಕಾರು ನಿಲ್ಲಿಸಿದ್ದಾನೆ. ಆದರೆ ಕಾರು ನಿಧಾನವಾಗಿ ಚಲಿಸಲು ಮುಂದಾಗುತ್ತಿದ್ದಂತೆ, ತನ್ನ ಕೈಲಿದ್ದ ಹೆಲ್ಮೆಟ್‌ನಿಂದ ಕಾರಿನ ಗ್ಲಾಜನ್ನು ಪುಡಿ ಮಾಡಿ ದಾಳಿ ಮಾಡಿರುವ ವಿಡಿಯೋ ಸೆರೆಯಾಗಿದೆ. ಈ ಘಟನೆಯಲ್ಲಿ ಕಾರಿನ ಒಳಗಿದ್ದ ಮೂರು ವರ್ಷದ ಮಗುವಿಗೆ ಗಾಯವಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಕೇರಳ ಮೂಲದ ಟಿಕ್ಕಿ ಪೊಲೀಸ್ ದೂರು
ಕೇರಳ ಮೂಲದ ಟಿಕ್ಕಿ ಅಖಿಲ್ ಸಾಬು ಎಂಬುವವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಅವರೇ ಆರೋಪಿಯಿಂದ ದಾಳಿಗೆ ಒಳಗಾದ ಕಾರಿನ ಮಾಲೀಕ. ರಸ್ತೆಯಲ್ಲಿ ಗಲಾಟೆ ಮಾಡಿದ ಆರೋಪಿ ಜಗದೀಶ್ ಎಂದು ಗುರುತಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೆಂಗಳೂರು ಮೂಲದ ಜಗದೀಶ್‌ನನ್ನು ಬಂಧಿಸಿದ್ದಾರೆ.
ಈ ರೀತಿ ರಸ್ತೆ ಮಧ್ಯದಲ್ಲಿ ಕಾರು ತಡೆದು ಹೆಲ್ಲೆ, ದಾಳಿ ಮಾಡುವುದು ಬೆದಿರಿಸುವುದು ಇದೇನು ಮೊದಲಲ್ಲ. ಕೆಲವು ತಿಂಗಳಗಳ ಹಿಂದೆ ಬೆಂಗಳೂರಿನಲ್ಲಿ ಇಂತಹ ಘಟನೆಗಳು ನಿರಂತವಾಗಿ ವರದಿ ಆಗಿದ್ದವು.
Road Rage Bangalore, Sarjapur main road, 9645354194 help.@DrParameshwara @Prateek34381357 @Shiva1306 @karnatakaportf @poha_met_jalebi Guys pls help to get reach, i was on car with my wife n 3 year old daughter when biker attacked us pic.twitter.com/KZNaSIi5Ds
— Akhil Sabu (@akhilsabu45) May 22, 2024
ಮಹಿಳೆ ಕಾರು ಬೆನ್ನಟ್ಟಿದ್ದ ಪುಂಡರು: ವಿಡಿಯೋ
ಇದೇ ಸರ್ಜಾಪುರ ರಸ್ತೆಯಲ್ಲಿ ಕಳೆದ ತಿಂಗಳು ಮಹಿಳೆಯ ಕಾರನ್ನು ಬೆನ್ನಟ್ಟಿ ಅಡ್ಡಗಟ್ಟಿದ್ದ ಮೂವರನ್ನು ಬಂಧಿಸಲಾಗಿತ್ತು. ಇವರು ಒಂಟಿ ಮಹಿಳೆ ಇದ್ದ ಕಾರಿನ ಕಿಟಕಿ ಒಡೆದು, ಬಾಗಿಲು ತೆರೆಯಲು ಪ್ರಯತ್ನಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು.
ವ್ಯಕ್ತಿಯ ಕಾರಿನ ಕಿಟಕಿ ಒಡೆದಿದ್ದ ಕಿಡಗೇಡಿಗಳು
2023ರ ಡಿಸೆಂಬರ್‌ನಲ್ಲಿ ದ್ವಿಚಕ್ರ ವಾಹನದಲ್ಲಿದ್ದ ವ್ಯಕ್ತಿಯೊಬ್ಬ ಕಾರನ್ನು ನಿಲ್ಲಿಸಿ ಅದರ ಕಿಟಕಿಗೆ ಬಡಿಯುತ್ತಿರುವ ದೃಶ್ಯ ವೈರಲ್ ಆಗಿದ್ದವು. ನಂತರ ಕಲ್ಲಿನಿಂದ ಕಾರಿನ ಗ್ಲಾಜು ಒಡೆದು ದಾಳಿ ಮಾಡಿದ್ದರು. ಈ ರೀತಿಯ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಟ್ರಾಫಿಕ್ ಪೋಲೀಸರು ಯಾರಾದರೂ ಹೀಗೆ ದಾಳಿ ಮಾಡಿದರೆ ಹೇಗೆಲ್ಲ ಎಚ್ಚರಿಕೆ ವಹಿಸಬೇಕು, ಆಗ ಏನು ಮಾಡಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಹೀಗೆ ಆಗದಂತೆ ಪೊಲೀಸ್ ಸಿಬ್ಬಂದಿಗೆ ಅಗತ್ಯ ಸೂಚನೆ ನೀಡಲಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ರಾತ್ರಿ ಗಸ್ತು ಪಾಳಿಯವರಿಗೆ ಒಂದಷ್ಟು ಸಲಹೆಗಳನ್ನು ಹಿರಿಯ ಅಧಿಕಾರಿಗಳು ನೀಡಿದ್ದಾರೆ.
-
ಕರ್ನಾಟಕದ ಕರಾವಳಿಯಲ್ಲಿ ಕಾಣದ ಅಗ್ನಿಕುಂಡದ ಮೇಲೆ ಘನತ್ಯಾಜ್ಯ ವಿಲೇವಾರಿಗೆ ವೀರಾವೇಶದ ಜಿದ್ದಾಜಿದ್ದಿ: ರಾಜಾರಾಂ ತಲ್ಲೂರು ಬರಹ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
IPL Tickets: ನಾವು ವಿಐಪಿಗಳು; 5 ಫ್ರೀ ಟಿಕೆಟ್ ಕೊಡಲಿ: ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ -
Tejasvi Surya: ಕೆಎಸ್ಸಿಎನಿಂದ ಐಪಿಎಲ್ ಫ್ರೀ ಟಿಕೆಟ್ ಚರ್ಚೆ: ಕಾಂಗ್ರೆಸ್ ಶಾಸಕರಿಗೆ ಸಂಸದ ತೇಜಸ್ವಿ ಸೂರ್ಯ ಕ್ಲಾಸ್ -
Political Trends: ನಿಂದಾ ರಾಜಕೀಯದ ದಾರಿ ತಪ್ಪಿದ ಪ್ರಜಾತಂತ್ರ: ಯಾವ ಮನೆಯ ಸಾಸಿವೆ ತರ ಹೊರಟಿದ್ದೀರಿ: ರಾಜಾರಾಂ ತಲ್ಲೂರು ಬರಹ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Water: ಅನಂತರಪುರ ಜಿಲ್ಲೆಯ ಬರಡು ಭೂಮಿಯ ಯಶೋಗಾಥೆ: ಜಗದೀಶ್ ಕೊಪ್ಪ ಬರಹ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್












Click it and Unblock the Notifications