Viral Video of Dog: ರೈಲಿನಲ್ಲಿ ಪ್ರಯಾಣಿಸಿದ ನಾಯಿ: ಪ್ರಯಾಣಿಕರಿಗೆ ಈ ನಾಯಿ ಮಾದರಿ ಎಂದಿದ್ದೇಕೆ ನೆಟ್ಟಿಗರು?
ಸಾಕು ಪ್ರಾಣಿಗಳಲ್ಲಿ ನಾಯಿಯಷ್ಟು ಇಷ್ಟದ ಪ್ರಾಣಿ ಮತ್ತೊಂದಿಲ್ಲ. ಮಾನವನ ಜತೆ ಅತ್ಯುತ್ತಮ ಒಡನಾಡಿ ಪ್ರಾಣಿ ನಾಯಿ ಎನ್ನಬಹುದು. ಮನೆತುಂಬಾ ಓಡಾಡಿಕೊಂಡು ಹೇಳಿದಂತೆ ಕೇಳುವ ನಾಯಿಗಳು ಇವೆ. ಜಾತಿ ನಾಯಿ, ಬೀದಿ ನಾಯಿಗಳನ್ನು ಸಾಕುವ ಪರಿಪಾಠ ಇದೆ. ಆದರೆ ಇಲ್ಲೊಂದು ನಾಯಿ ಯಾರು ಸಾಕಿದ್ದಾರೆ ಗೊತ್ತಿಲ್ಲ. ಸಾರ್ವಜನಿಕರಿಂದ ರೈಲಿನಲ್ಲಿ ಓಡಾಟ ನಡೆಸಿದ ವಿಡಿಯೋ ಭಾರೀ ವೈರಲ್ ಆಗಿದೆ.
ವಾಣಿಜ್ಯ ನಗರಿ ಮುಂಬೈನ ಸ್ಥಳೀಯ ರೈಲಿನಲ್ಲಿ ಬೀದಿ ನಾಯಿಯೊಂದು ಪ್ರಯಾಣಿಸಿದ ವಿಡಿಯೋ ವೈರಲ್ ಆಗಿದೆ. ಜನ ಸಾಮಾನ್ಯರಂತೆ ಪ್ರಯಾಣ ಮಾಡಿ, ರೈಲಿನಿಂದ ಇಳಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಇದು ಅಂತರ್ಜಾಲದಲ್ಲಿ ನೆಟ್ಟಿಗರ ಹೃದಯ ಗೆದ್ದಿದೆ.

ನಾಯಿ ರೈಲಿನಲ್ಲಿ ಇರುವಾಗ ರೈಲು ಪ್ರಯಾಣಿಕರೊಬ್ಬರ ಅಸಭ್ಯ ವರ್ತನೆಯು ನೆಟಿಜನ್‌ಗಳನ್ನು ಕೆರಳಿಸುವಂತೆ ಮಾಡಿತು. ಪ್ರಯಾಣಿಕರನೊಬ್ಬ ರೈಲು ನಿಲ್ಲುವುದಕ್ಕೆ ಮೊದಲೇ ನಾಯಿಗೆ ಇಳಿಯುವಂತೆ ಮೈ ಮುಟ್ಟಿ ನೂಕುವ ಪ್ರಯತ್ನ ಮಾಡಿದ್ದಾನೆ. ಆದರೂ ನಾಯಿ ಕದಲಲಿಲ್ಲ. ನಂತರ ನಿಲ್ದಾಣ ಬರುತ್ತಲೇ ರೈಲು ನಿಧಾನವಾಗಿ ಸಾಗಿದೆ. ಈ ವೇಳೆ ರೈಲು ನಿಂತ ಮೇಲೆ ನಾಯಿ ಇಳಿದು ಹೋಗಿದೆ.
ರೈಲು ನಿಂತ ಮೇಲೆ ಇಳಿದ ನಾಯಿ, ಮಾದರಿ
ನಾಯಿಯು ರೈಲಿನಲ್ಲಿ ಪ್ರಯಾಣಿಸಿ, ನಿಲ್ದಾಣ ಪ್ಲಾಟ್‌ಫಾರ್ಮ್‌ನಲ್ಲಿ ರೈಲ ನಿಂತ ಮರುಕ್ಷಣ ಮನುಷ್ಯರಂತೆ ಇಳಿದು ಹೋದ ಘಟನೆಗೆ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ನಾಯಿ ರೈಲಿನಲ್ಲಿ ಯಾರಿಗೂ ತೊಂದರೆ ಮಾಡದೇ ಯೋಗ್ಯ ನಡವಳಿಕೆ ಪ್ರದರ್ಶಿಸಿದೆ ಎಂದಿದ್ದಾರೆ.
ರೈಲು ನಿಂತ ನಂತರವೇ ನಾಯಿ ಕೆಳಗೆ ಇಳಿದಿದೆ. ಇದು ಮನುಷ್ಯರಿಗೆ ಮಾದರಿಯಾಗಿದೆ. ಶಿಷ್ಟಾಚಾರ ಎಂದು ಮತ್ತೊಬ್ಬ ಸಾಮಾಜಿಕ ಬಳಕೆದಾರರು ಹೇಳಿದ್ದಾರೆ. ಈ ನಾಯಿ ಅನೇಕ ಪ್ರಯಾಣಿಕರಿಗಿಂತ ಬುದ್ಧಿವಂತವಾಗಿದೆ. ಈ ಡಾಗು ರೈಲು ಪ್ರಯಾಣವನ್ನು ಅರ್ಥೈಸಿಕೊಂಡಂತಿದೆ ಎಂದರು.
Dog traveling in the local train.
byu/HouDini2598 inmumbai
ನಾಯಿ ಇಳಿದ ರೀತಿ ಜನರಿಗೆ ತಿಳಿಸಬೇಕು
ಮುಂಬೈ ಸ್ಥಳೀಯ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ವೈರಲ್ ವೀಡಿಯೊವನ್ನು ಬಳಸಲು ಸೂಚಿಸುತ್ತಾ, ಮುಂಬೈ ಸ್ಥಳೀಯರು ಈ ವೀಡಿಯೊ ನೋಡಬೇಕು. ಓಡುತ್ತಿರುವ ರೈಲು ನಿಲ್ಲುವ ಮೊದಲೇ ಇಳಿಯದಂತೆ ಜನರಿಗೆ ತಿಳಿಸಬೇಕು. ಎಂದು ಬರೆದಿದ್ದಾರೆ.
ನಾಯಿ ಪ್ರಯಾಣವನ್ನು ಮತ್ತೊಬ್ಬರು ಮೆಚ್ಚಿಕೊಂಡಿದ್ದಾರೆ. ನಾನು ಸಹ ಒಮ್ಮೆ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಹೀಗೆ ನಾಯಿಮರಿಯನ್ನು ತಕ್ಷಣವೇ ಗುರುತಿಸಿದ್ದೇನೆ. ಸದ್ಯ ಈ ವಿಡಿಯೋ ಹುಡುಕಲು 10 ನಿಮಿಷ ಕಳೆದಿದ್ದೇನೆ. ಬಳಿಕ ಹಳೆಯ ವಿಡಿಯೋವನ್ನು ಕಾಮೆಂಟ್ ಮಾಡಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ನಾಯಿಯ ರೈಲು ಪ್ರಯಾಣದ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ. ಅನೇಕ ಜನರು ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.












Click it and Unblock the Notifications