Viral Video: ಸಾಕು ನಾಯಿ ಹಸ್ಕಿ-ಮಾಲೀಕನ ಮೇಲೆ ಹಿಂಸಾತ್ಮಕ ಕ್ರೌರ್ಯ: ವಿಡಿಯೋ ಹಂಚಿಕೊಂಡ ಪೊಲೀಸರು
ಸಾಕು ನಾಯಿ ವಿಚಾರವಾಗಿ ಜಗಳವಾಡುವುದು, ಬೈಗುಳಗಳು ಸಾಮಾನ್ಯ. ನಂತರ ಎಂದಿನಂತೆ ವರ್ತಿಸುವವರು ಇದ್ದಾರೆ, ಮುನಿಸು ಮುಂದುವರೆಸುವವರು ಇದ್ದಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ನೆರೆಹೊರೆಯವರೇ ದೊಣ್ಣೆ, ಕಬ್ಬಿಣ ಸರಳುಗಳಿಂದ ಹಸ್ಕಿ ನಾಯಿ ಮತ್ತು ಮಾಲೀಕರ ಮೇಲೆ ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ಈ ಘಟನೆಯ ವಿಡಿಯೋವನ್ನು ಸ್ವತಃ ಪೊಲೀಸರೇ ಹಂಚಿಕೊಂಡಿದ್ದು, ಭಾರೀ ವೈರಲ್ ಆಗುತ್ತಿದೆ.
ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಮಧುರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ. ಪ್ರಾಣಿಪ್ರಿಯರು ಸೇರಿದಂತೆ ಅನೇಕರು ಈ ವಿಡಿಯೋವನ್ನು ಹೆಚ್ಚಿನ ಪ್ರಮಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಈ ಘಟನೆಯು ಎಂಥವರನ್ನು ಅಚ್ಚರಿಪಡಿಸುವಂತೆ ಮಾಡುತ್ತದೆ. ಸಣ್ಣ ವಿಷಯಕ್ಕೆ ಇಷ್ಟೊಂದು ಹಿಂಸೆ ಬೇಕಾ? ಎಂದನಿಸದೇ ಇರದು.

ಹಲ್ಲೆ ಮಾಡಿದ ಐವರ ಬಂಧನ: ಆಗಿದ್ದೇನು?
ಸಾಕು ನಾಯಿ ಮತ್ತು ಅದರ ಮಾಲೀಕ ಮಧು ಎಂಬುವವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕಡೆಯವರು ದೂರು ನೀಡಿದ್ದಾರೆ. ಸದ್ಯ ಹಲ್ಲೆ ಮಾಡಿದ ಆರೋಪದಲ್ಲಿ ಒಟ್ಟು ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ಮಾಹಿತಿ ಹಂಚಿಕೊಂಡಿದ್ದಾರೆ.
ಮಧುರಾ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಡಿ ಮಧುಸೂಧನ್ ರೆಡ್ಡಿ ಅವರ ಪ್ರಕಾರ, ನಾಯಿ ಮಾಲೀಕ ಮಧು ಮತ್ತು ಹಲ್ಲೆ ಮಾಡಿದ ಧನಂಜಯ್ ಮತ್ತು ಅವರ ನಾಲ್ಕು ಮಂದಿ ಸಹಚರರು ನೆರೆಹೊರೆಯವರು. ಈ ಧನಂಜಯನ್ ಕಡೆಯವರು ಸೇರಿ ನನ್ನ ಮೇಲೆ, ನಮ್ಮ ಹಸ್ಕಿ ನಾಯಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಧು ಮನೆಯವರು ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಧನಂಜಯ್ ಸಹ ಕೌಂಟರ್ ದೂರು ಸಹ ನೀಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಮಧು ಎಂದಿನಂತೆ ಬುಧವಾರ ರಾತ್ರಿ ನಾಯಿಯನ್ನು ಮನೆ ಬಳಿ ರಸ್ತೆಯಲ್ಲಿ ಓಡಾಡಿಸುತ್ತಿದ್ದರು. ಒಂದು ಕೈಯಲ್ಲಿ ಮೊಬೈಲ್ ಮತ್ತೊಂದು ಕೈಯಲ್ಲಿ ಬೆಲ್ಟ್‌ನಿಂದ ನಾಯಿಯನ್ನು ಹಿಡಿದುಕೊಂಡಿದ್ದರು. ಈ ವೇಳೆ ಅವರ ಪಕ್ಕದಲ್ಲಿಯೇ ತೆರಳಿದ ಧನಂಜಯ್ ಅವರು ಮಳೆ ತಮ್ಮ ಸಹಚರರ ಜತೆ ದೊಣ್ಣೆ, ಕಬ್ಬಿಣದ ಸರಳು ಸಮೇತ ಮಧು ಬಳಿ ಬಂದು ಹಲ್ಲೆ ನಡೆಸಿದ್ದಾರೆ.

ನಾಯಿಗೆ ಥಳಿಸುತ್ತಿದ್ದಂತೆ ಅದು ಹೆದರಿ ಪಕ್ಕಕ್ಕೆ ಸರಿದಿದೆ. ಕೂಡಲೇ ಎಲ್ಲರೂ ಮಧು ಮೇಲೆ ಎರಗಿದ್ದಾರೆ. ಕೈ ಕಾಲು, ದೇಹಕ್ಕೆ ಮನಬಂದಂತೆ ಎಲ್ಲ ಸೇರಿ ಕೆಡವಿ ಹೊಡೆದಿದ್ದಾರೆ. ಹಿಂಸಾತ್ಮಕವಾಗಿ ಹಲ್ಲೆ ಮಾಡಿರುವುದು, ವಿಕೋಪದ ಕ್ರೌರ್ಯ ಇದಾಗಿದೆ. ಈ ವೇಳೆ ಬಿಡಿಸಿಕೊಳ್ಳಲು ಬಂದ ಮಧು ತಾಯಿ ಮತ್ತು ಸಹೋದರಿಗೂ ಒಂದಷ್ಟು ಗಾಯಗಳಾಗಿವೆ. ಇದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ನೋಡಿದವರಿಗೆ ಇದು ನಾಯಿಗಾಗಿ ಜಗಳ ಅಲ್ಲ ಎನ್ನಿಸುತ್ತದೆ. ಯಾವುದೋ ಧ್ವೇಷಕ್ಕಾಗಿ ಮಾಡಿ ಹಲ್ಲೆ ಎಂದು ಶಂಕೆ ವ್ಯಕ್ತವಾಗುತ್ತದೆ.
ವೈಯಕ್ತಿಕ ಕಾರಣಕ್ಕೆ ಹಲ್ಲೆಯ ಅನುಮಾನ
ಸದ್ಯ ಹಲ್ಲೆ ಮಾಡಿದ ಐವರ ಮೇಲೆ ಸೆಕ್ಷನ್ 147, 148, 307 ಆರ್/ಡಬ್ಲ್ಯು 34 ಐಪಿಸಿ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ದಾಳಿ ಮಾಡಿದ ಎಲ್ಲ ಐವರು ಪೊಲೀಸ್ ಬಂಧನದಲ್ಲಿದ್ದಾರೆ.
ಮಧು ಹಾಗೂ ಧನುಂಜಯ್ ಕುಟುಂಬಗಳ ನಡುವೆ ಇದೇ 8ರಂದು ಜಗಳ ನಡೆದಿತ್ತು. ಮಧು ಅವರ ಕುಟುಂಬದವರು ತಮ್ಮ ಹಲಸಿನ ನಾಯಿಯೊಂದಿಗೆ ಅಂಚೆ ಮತ ಚಲಾಯಿಸಲು ತೆರಳುತ್ತಿದ್ದಾಗ ಸಂಘರ್ಷದ ಘಟನೆ ನಡೆದಿದೆ. ಇದು ವೈಯಕ್ತಿಕ ಕಾರಣಗಳಿಗೆ ನಡೆದ ಹಲ್ಲೆಯ ಘಟನೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications