Viral video: ಮದುವೆಗೆ ಹುಡ್ಗಿ ಸಿಕ್ಲು ಎಂಬ ಖುಷಿಯಲ್ಲಿ ಮಧುಮಗನ ಡ್ಯಾನ್ಸ್‌ ಸಖತ್ ವೈರಲ್‌

ಸಾಮಾಜಿಕ ತಾಣದಲ್ಲಿ ತಾವು ರಾತ್ರೋ ರಾತ್ರಿ ಖ್ಯಾತಿ ಪಡೆಯಲು ಜನ ಏನೆಲ್ಲಾ ಮಾಡ್ತಾರೆ ಅನ್ನೋದನ್ನು ನೋಡಿದ್ದೇವೆ. ಇನ್ನು ಕೆಲವರಿಗೆ ತಮಗೆ ಜೀವನದಲ್ಲಿ ಆದ ಖುಷಿಯನ್ನು ವ್ಯಕ್ತ ಪಡಿಸಲು ಸಹ ಸಾಮಾಜಿಕ ತಾಣ ಬೆಸ್ಟ್‌ ಪ್ಲಾಟ್ ಫಾರ್ಮ್‌. ದಿನ ನಿತ್ಯ ಒಂದಿಲ್ಲಾ ಒಂದು ವೈರಲ್‌ ವಿಡಿಯೋಗಳನ್ನು ನೋಡುತ್ತಲೇ ಇರುತ್ತವೆ. ಇದೇ ಸಾಲಿಗೆ ಈ ವಿಡಿಯೋ ಸಹ ಸೇರಿದ್ದು, ನಿಜಕ್ಕೂ ಈ ವಿಡಿಯೋ ನೋಡಿದರೆ ನಕ್ಕು ನಕ್ಕು ಸುಸ್ತಾಗ್ತಿರಾ.

ಈ ವೈರಲ್‌ ವಿಡಿಯೋ ಪ್ರಪಂಚದಲ್ಲಿ ಜನ ಏನೆಲ್ಲಾ ಸರ್ಕಸ್‌ ಮಾಡುತ್ತಾರೆ ಎಂಬುದು ಗೊತ್ತು. ಇನ್ನು ಅವರಿಗೂ ಗೊತ್ತಿರದೇ ಅವರು ಫೇಮಸ್ ಆಗಿ ಬಿಡ್ತಾರೆ. ಇದೇ ಸಾಲಿಗೆ ಈ ಮಧುಮಗ ಸೇರುತ್ತಾನೆ. ಪಾಪ್‌ ಆತನಿಗೆ ಅದೇನು ಖುಷಿ ಆಗಿತ್ತೋ ಏನು ಎದ್ವಾ ತದ್ವಾ ಡ್ಯಾನ್ಸ್‌ ಮಾಡಿ ಬಿಟ್ಟಿದ್ದಾನೆ. ಈ ಡ್ಯಾನ್ಸ್‌ ನೋಡಿದ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡಿದ್ದಾರೆ.

Viral video Groom s Infectious Joy Takes to the Streets in Viral Wedding Dance

ಸಖತ್‌ ವೈರಲ್‌ ವಿಡಿಯೋ

ಇನ್‌ಸ್ಟಾಗ್ರಾಮ್‌ನಲ್ಲಿ ಈಗ ವಿಡಿಯೋ ಒಂದು ವೈರಲ್ ಆಗುತ್ತಿದೆ. ಮಧುಮಗನನ್ನು ಮೆರವಣಿಗೆ ಮೂಲಕ ಚೌಟ್ರಿಗೆ ಕರೆದುಕೊಂಡು ಹೋಗುವ ಕಾರ್ಯ ನಡೆಯುತ್ತಿದೆ. ಈ ವೇಳೆ ಶಹನಾಯಿ, ಬ್ಯಾಂಡ್ ಭಜಂತ್ರಿಯ ಸೌಂಡ್ ಕೇಳುತ್ತದೆ. ಮಧು ಮಗನಿಗೆ ಬಿಸಿಲು ತಾಕ ಬಾರದು ಎಂದು ಪಾಪ್‌ ಅಲ್ಲಿ ಒಬ್ಬ ಅವನಿಗೆ ಕೊಡೆ ಸಹ ಹಿಡಿದಿದ್ದಾನೆ. ರಸ್ತೆಯ ಮಧ್ಯದಲ್ಲಿ ಮಧುಮಗನಿಗೆ ಅದು ಏನು ಅನಿಸಿತೋ ಏನು ತಿಳಿಯದು ಸಿಕ್ಕಾಪಟ್ಟಿ ಕುಣಿದು ಕುಪ್ಪಳ್ಳಿಸಿದ್ದಾನೆ.

ರಸ್ತೆಯ ಮಧ್ಯದಲ್ಲಿ ಸಖತ್ ಸ್ಟೆಪ್ಸ್‌

ತಾನು ಮಧುವೆ ಮನೆಗೆ ಮೆರವಣಿಗೆ ಹೊರಟಿರುವೆ, ನಾನು ಹಾಕಿಕೊಂಡ ಶೇರ್ವಾನಿ ಕೊಳೆ ಆಗಬಹುದು ಎಂಬ ಕಲ್ಪನೆ ಸಹ ಆತನಿಗೆ ಇರಲಿಲ್ಲ. ಅದನ್ನೆಲ್ಲಾ ಮೀರಿ ಪಾಪ್ ಆತ ಮಧುವೆ ಆಗುವ ಖುಷಿಯಲ್ಲಿ ಒಂದು ಸ್ಟೆಪ್‌ ಜಾಸ್ತಿ ಹಾಕಿ ಬಿಟ್ಟ. ಅದು ಬರೀ ಕೈ, ಕಾಲು ಅಲುಗಾಡಿಸಿ ಡ್ಯಾನ್ಸ್‌ ಮಾಡಿದ್ದರೆ ಏನು ಆಗ್ತಾ ಇರಲಿಲ್ಲ ಏನು. ಆದರೆ ರಸ್ತೆಯ ಮಧ್ಯೆದಲ್ಲಿ ಹೊರಳಾಡಿ ಡ್ಯಾನ್ಸ್‌ ಮಾಡಿದ್ದನ್ನು ಕಂಡು ಅಲ್ಲಿ ನಿಂತದ ಒಬ್ಬರು ವಿಡಿಯೋ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ sambalpuriya_ame_ ಹೆಸರಿನ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಸುದ್ದಿ ಬರೆಯುವವರೆಗೂ ಈ ವಿಡಿಯೋವನ್ನು 1 ಲಕ್ಷದ 73 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದ ಜನರು ತಮಾಷೆಯ ಕಾಮೆಂಟ್‌ಗಳನ್ನೂ ಮಾಡುತ್ತಿದ್ದಾರೆ.

ಈ ವಿಡಿಯೋ ಸಖತ್ ವೈರಲ್‌ ಆಗ್ತಾ ಇದ್ದಂತೆ ನೆಟ್ಟಿಗರು ಸಹ ತಮಾಷೆಯ ಕಮೆಂಟ್‌ಗಳನ್ನು ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+