Viral Video: ಮನುಷ್ಯರೊಂದಿಗೆ ಯೋಗ ಮಾಡಿದ ನಾಯಿ: ಇಲ್ಲಿದೆ ನೋಡಿ ವಿಡಿಯೋ
ಯೋಗಾಸನ ಮಾಡಿ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಎಂದು ಹಿರಿಯರು ಹೇಳುತ್ತಾರೆ. ಬೆಳಗ್ಗೆ ಸೂರ್ಯ ಆಗಸದಲ್ಲಿ ತನ್ನ ಕೆಲಸವನ್ನು ಆರಂಭಿಸುವ ಮುನ್ನ ಹಲವರು ಯೋಗಾಸನ ಮಾಡಲು ಆರಂಭಿಸುತ್ತಾರೆ.
ಯೋಗಾಸಾನವನ್ನು ಪರಿಶುದ್ಧವಾದ ಸ್ಥಳದಲ್ಲಿ ಮಾಡಿ ಹಲವಾರು ಲಾಭಗಳನ್ನು ಈಗಿನ ಯುಗದಲ್ಲಿ ಮನುಷ್ಯರು ಪಡೆಯುತ್ತಿದ್ದಾರೆ. ಯೋಗಾಸನದ ಮಹತ್ವವನ್ನು ಸಾರಲು ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವೆಂದು ಆಚರಿಸಲಾಗುತ್ತಿದೆ. ಈಗ ವಿಶ್ವದ ಬೇರೆ ಬೇರೆ ದೇಶಗಳು ಸಹ ಯೋಗವನ್ನು ಅಳವಡಿಸಿಕೊಂಡಿವೆ. ಇದರಿಂದ ಆಗುವ ಲಾಭವನ್ನು ಅರಿತು ಕೊಂಡು ಮುಂದಿನ ಪೀಳಿಗೆಯ ಜನರಿಗೆ ಹೇಳಿ ಕೊಡುತ್ತಿವೆ.

ವೈರಲ್ ವಿಡಿಯೋ
ಈಗ ಸಾಮಾಜಿಕ ತಾಣದಲ್ಲಿ ಯೋಗಕ್ಕೆ ಸಂಬಂಧ ಪಟ್ಟ ವಿಡಿಯೋಒಂದು ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಮೇಲೆ ಮನುಷ್ಯರಿಗೆ ಅಷ್ಟೇ ಅಲ್ಲಾ ಪ್ರಾಣಿಗಳಿಗೂ ಇದರ ಅವಶ್ಯಕತೆ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಜಿಮ್‌ನಲ್ಲಿ ಯೋಗವನ್ನು ಶಿಕ್ಷಕ ಹೇಳುತ್ತಾ ಇರುತ್ತಾನೆ. ಆಗಲೇ ಅಲ್ಲಿಗೆ ಒಂದು ನಾಯಿ ಬರುತ್ತದೆ.
Yoga lover 😂
— The Best (@ThebestFigen) May 20, 2024
pic.twitter.com/ctKCSRjdb0
ಯೋಗ ಮಾಡಿದ ಶ್ವಾನ
ನಾಯಿಯನ್ನು ಕಂಡು ಯೋಗ ಶಿಕ್ಷಕ, ತಾನು ಕುಳಿತಿದ್ದ ಸ್ಥಾನದಿಂದ ಎದ್ದು ನಾಯಿಯನ್ನು ಓಡಿಸಲು ಮುಂದಾಗುತ್ತಾನೆ. ಇವನು ಹೊಡೆಯುತ್ತಿರುವುದನ್ನು ಕಂಡು ನಾಯಿ ಓಡಿ ಹೋಗುತ್ತದೆ. ಇದನ್ನು ಕಂಡು ಆ ಶಿಕ್ಷಕ ಮತ್ತೆ ಕುಳಿತು ಯೋಗ ಹೇಳಿ ಕೊಡಲು ಆರಂಭಿಸುತ್ತಾನೆ. ಆಗಲೇ ಒಂದು ಅಚ್ಚರಿಯ ದೃಶ್ಯ ಕಂಡು ಬರುತ್ತದೆ.

ಅಲ್ಲಿಂದ ಓಡಿ ಹೋಗಿದ್ದ ನಾಯಿ, ಯೋಗಾಸನ ಮಾಡುತ್ತಿದ್ದ ಜನರ ಪಕ್ಕದಲ್ಲಿ ಬರುತ್ತದೆ. ಅಲ್ಲದೆ ಅವರ ಪಕ್ಕದಲ್ಲಿ ಇದ್ದ ಖಾಲಿ ನೀಲಿ ಮ್ಯಾಟ್ ಮೇಲೆ ತಾನು ಕುಳಿತು ಕೊಳ್ಳುತ್ತದೆ. ಅಲ್ಲದೆ ಮನುಷ್ಯರು ಹೇಗೆ ಮಾಡುತ್ತಾರೋ ಹಾಗೇ ಯೋಗ ಮಾಡಲು ಆರಂಭಿಸುತ್ತದೆ. ತಮ್ಮ ಪಕ್ಕದಲ್ಲಿ ಕುಳಿತು ಮಾಡುವ ಜನರ ರೀತಿ ಪರ್ವತಾಸನ ಮಾಡಿ ಎಲ್ಲರ ಮನ ಗೆಲ್ಲುತ್ತದೆ.
ಹಲವು ಆಸನಗಳನ್ನು ಮಾಡಿ ಗಮನ ಸೆಳೆದ ಶ್ವಾನ
ಮನುಷ್ಯರು ಪದ್ಮಾಸನದಲ್ಲಿ ಕುಳಿತು, ಎರಡೂ ಕೈಗಳನ್ನು ಮೇಲೆತ್ತಿ ನಮಸ್ಕರಿಸುವುದಕ್ಕೆ ಪರ್ವತಾಸನ ಎನ್ನುತ್ತಾರೆ. ನಾಯಿ ತನ್ನ ಮುಂದಿನ ಎರಡೂ ಕಾಲುಗಳನ್ನು ಮೇಲೆತ್ತಿ ಇದೇ ರೀತಿ ಆಸಲು ಮಾಡಲು ಪ್ರಯತ್ನಿಸುತ್ತದೆ.
ಇನ್ನು ಬಾಲಾಸನ ಮಾಡಿ ಎಲ್ಲರೂ ಹುಬ್ಬೆರುವಂತೆ ಮಾಡಿದ ನಾಯಿ ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಎಲ್ಲರೂ ಎರಡೂ ಕೈಗಳನ್ನು ಮುಂದೆ ಮಾಡಿ ಬಾಗಿದರೆ, ನಾಯಿ ಸಹ ಇದೇ ಆಸನವನ್ನು ಮಾಡಿತು.
ಯೋಗ ಮಾಡುವ ಶಿಕ್ಷಕ ಅಂಬೇಗಾಲಿನಲ್ಲಿ ಕುಳಿತು, ಎರಡು ಕೈಗಳನ್ನು ಮುಂದೆ ಇಟ್ಟರು. ಇದನ್ನು ನೋಡಿದ್ದೇ ಶ್ವಾನ ಇದ್ದನೇ ಕಾಪಿ ಮಾಡಿತು. ನಂತರ ಒಂದು ಕೈಯನ್ನು ಬಿಟ್ಟು ಬ್ಯಾಲೆನ್ಸ್ ಮಾಡಿದರು. ಶ್ವಾನ ಸಹ ಮಾಡಿ ಎಲ್ಲರ ಪ್ರೀತಿಗೆ ಪಾತ್ರವಾಯಿತು.












Click it and Unblock the Notifications