Viral Video: ಡೀಸೆಲ್ ಹಾಕಿ ಪರೋಟಾ ಮಾಡಿದ ಢಾಬಾವಾಲ: ಇದು ಕ್ಯಾನ್ಸರ್‌ಗೆ ದಾರಿ ಎಂದ ನೆಟ್ಟಿಗರು
ಬೆಂಗಳೂರು, ಮೇ 14: ಭಾರತೀಯರು ನಿತ್ಯ ಸೇವಿಸುವ ಆಹಾರ ಕ್ರಮದಲ್ಲಿ ಪರೋಟಾ (Paratha) ಸಹ ಒಂದು. ಈ ಪರೋಟಾಗಿ ನಾವು, ನೀವೆಲ್ಲರು ಈರುಳ್ಳಿ, ಮೊಟ್ಟೆ, ಚಿಕನ್, ಮಟನ್, ಆಲೂಗಡ್ಡೆ ಪಲ್ಯ, ದಾಲ್‌ನಂತಹ ಪಲ್ಯ-ಗ್ರೇವಿಗಳೊಂದಿಗೆ ಕೊಡುವುದನ್ನು ನೋಡಿದ್ದೇವೆ.
ಆದರೆ ಇಲ್ಲೋಬ್ಬ ಮಹಾಶಯ ಡೀಸೆಲ್ ಹಾಕಿ ಪರೋಟಾ ಮಾಡಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದೆ. ಹೆಂಚಿನ ಮೇಲೆ ಪರೋಟಾ ಬೇಯಿಸುವಾಗಿ ಬಹಳಷ್ಟು ಪ್ರಮಾಣದಲ್ಲಿ ಡೀಸೆಲ್ ಸುರಿಯುವ ದೃಶ್ಯ ಕಂಡು ನೆಟ್ಟಿಗರು ದಂಗಾಗಿದ್ದಾರೆ. ಈ ಆಹಾರವನ್ನು ಗ್ರಾಹಕರು ಸವಿಯುತ್ತಾರೆ ಎಂದು ನಗುತ್ತಲೇ ಬೀದಿ ಬದಿ ವ್ಯಾಪಾರಿ ಹೇಳುವುದು ವಿಡಿಯೋದಲ್ಲಿ ಕೇಳುತ್ತಾರೆ.

ರುಚಿಕರ ಆಹಾರಗಳಲ್ಲಿ ಪರೋಟಾ ಸಹ ಒಂದಾಗಿದೆ. ಆದರೆ ಅದನ್ನು ತುಪ್ಪ, ಬೆಣ್ಣೆ, ಎಣ್ಣೆ ಇಲ್ಲದೇ ಡೀಸೆಲ್ ಹಾಕಿ ತಯಾರಿಸಿದನ್ನು ನೋಡಿದರೆ ಜೀವನದಲ್ಲಿ ಪರೋಟಾವೇ ಬೇಡ ಎನ್ನಿಸುತ್ತದೆ. ಇದು ಚಂಡೀಗಢದ ದಾಬಾವೊಂದರಲ್ಲಿ ಸೆರೆ ಹಿಡಿದು ದೃಶ್ಯವಾಗಿದೆ.
ಪರೋಟಾಗೆ ಡೀಸೆಲ್ ಸುರಿದ ಧಾಬಾವಾಲಾ
ಸಾಮಾಜಿಕ ಬಳಕೆದಾರರಲ್ಲಿ ಒಬ್ಬರಾದ ನೆಬ್ಯುಲಾ ವರ್ಲ್ಡ್ ಎಂಬುವವರು ಈ ಡೀಸೆಲ್ ಪರೋಟಾ ಮಾಡುವ ವಿಡಿಯೋ ಹಂಚಿಕೊಂಡಿದ್ದಾರೆ. ಧಾಬಾವಾಲಾ ಅಡುಗೆಯಲ್ಲಿ ಮೊದಲು ಪರೋಟಾ ಅನ್ನು ಕಾದ ಹೆಂಚಿನ ಮೇಲೆ ಹಾಕುತ್ತಾರೆ. ಅದು ತುಸು ಬೇಯುತ್ತಿದ್ದಂತೆ ಅದರ ಮೇಲೆ ಬಹಳಷ್ಟು ಪ್ರಮಾಣದಲ್ಲಿ ಡೀಸೆಲ್ ಸುರಿಯುತ್ತಾರೆ.
ಪರೋಟಾ ಬೇಯಿಸಲು ಡೀಸೆಲ್ ಬಳಸಲಾಗಿದೆ. ಇದು ಆರೋಗ್ಯಕರ ದೇಹಕ್ಕೆ ಕ್ಯಾನ್ಸರ್‌ಗೆ ತರಬಹುದಾದ ನಿಜವಾದ ಪಾಕವಿಧಾನ. ಇಂತಹ ಆಹಾರ ತಿಂದು ಬದುಕುವುದಾದರೂ ಹೇಗೆ ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನು ಗ್ರಾಹಕರು ತಿನ್ನತ್ತಾರೆ ಎಂದು ಢಾಬಾವಾಲ
ಈ ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ ಹಲವು ಗಂಟೆಗಳಲ್ಲಿ ನಾಲ್ಕರಿಂದ ಐದು ಲಕ್ಷ ಜನರು ನೋಡಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಈ ವಿಡಿಯೋಗೆ ಬಂದಿವೆ. ಸನ್‌ಗ್ಲಾಸ್ ಧರಿಸಿರುವ ಢಾಬಾವಾಲನೊಬ್ಬ ಪರೋಟಾ ಡೀಸೆಲ್ ಹಾಕಿ ಮಾಡುವುದಲ್ಲದೇ, ಇದನ್ನು ಗ್ರಾಹಕರು ತಿನ್ನುತ್ತಾರೆ ಎಂದು ಹೇಳಿಕೊಂಡಿದ್ದಾರೆ.
ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣ ಬಳಕೆದಾರರು (ನೆಟ್ಟಿಗರು) ಈ ಪ್ರಯೋಗವನ್ನು ಆಕ್ಷೇಪಿಸಿದ್ದಾರೆ. ಇದರಿಂದ ಕ್ಯಾನರ್ ಬರಲಿದೆ ಎಂದು ದೂರಿದ್ದಾರೆ. ಇಂತಹ ಆಹಾರ ತಿಂದು ರೋಗು ರುಜಿನಗಳು ಬಂದರೆ ಅದರ ಚಿಕಿತ್ಸೆಗೆಂದೆ ಲಕ್ಷ ಲಕ್ಷ ಖರ್ಚು ಮಾಡಬೇಕಾಗುತ್ತದೆ. ಗ್ರಾಹಕರು ಶೀಘ್ರದಲ್ಲೇ ತಮ್ಮ ಫೆರಾರಿ ಇನ್ನಿತರ ಕಾರು, ಆಸ್ತಿಗಳನ್ನು ಮಾರಿ ಚಿಕಿತ್ಸೆಗೆ ಹಣ ಹೊಂದಿಸಬೇಕಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಡೀಸೆಲ್ ಆಗಿದ್ದರೆ ಬೆಂಕಿಗೆ ಹೊತ್ತಿಕೊಳ್ಳಬೇಕಿತ್ತು?
ಮತ್ತೊಬ್ಬರು ಕಾಮೆಂಟ್ ಮಾಡಿದ್ದು, ಇದು ನಿಜವಾಗಿಯೂ ಡೀಸೆಲ್? ಎಂದು ಪ್ರಶ್ನಿಸಿದ್ದರು. ಏಕೆಂದರೆ ಡೀಸೆಲ್ ಬೆಂಕಿಗೆ ಸುಟ್ಟುಹೋಗುತ್ತದೆ. ಅದು ದಹಿಸುವ ಗುಣಲಕ್ಷಣ ಹೊಂದಿದೆ. ಬೆಂಕಿ ಸಹಿತಿ ಕಾದ ಹೆಂಚಿನ ಮೇಲೆ ಇಷ್ಟು ಪ್ರಮಾಣದಲ್ಲಿ ಡೀಸೆಲ್ ಹಾಕಿದರೂ ಬೆಂಕಿ ಹೊತ್ತಿಕೊಳ್ಳುತ್ತಿಲ್ಲ.
ಇದೆಲ್ಲ ನೋಡಿದರೆ ಕೇವಲ ವೀಡಿಯೋ ವೈರಲ್ ಆಗಲಿದೆ ಎಂದು ಕೆಲವು ಇದನ್ನು ವೈರಲ್ ಮಾಡುತ್ತಿದ್ದಾರೆ. ಈ ಢಾಬಾದಲ್ಲಿ ಯಾರೂ ಈ ಪರೋಟಾಗಳನ್ನು ತಿಂದಿಲ್ಲ ಎಂದು ಅನಿಸುತ್ತದೆ. ಇದು ಡೀಸೆಲ್ ಅಲ್ಲದೇ ಹಳೆಯದಾದ ಎಣ್ಣೆ ಇರಬೇಕು.
ಇದು ಸಾಮಾನ್ಯ ಎಣ್ಣೆ ಇರಬೇಕು
ಪರೋಟಾಗೆ ಹಾಕಿದ್ದು ಡೀಸೆಲ್ ಆಗಿದ್ದರೆ ಅದು ಧಾಬಾದಲ್ಲಿರುವ ಉಷ್ಣಕ್ಕೆ ಬೇಗೆ ಬೆಂಕಿ ಹೊತ್ತಿಕೊಳ್ಳಬೇಕಿತ್ತು. ಆದರೆ ಇಲ್ಲಿ ಹಾಗಾಗಿಲ್ಲ. ಏಕೆಂದರೆ ಢಾಬಾದಲ್ಲಿ 250-300 ಡಿಗ್ರಿ ಸೆಲ್ಸಿಯಸ್ ಉಷ್ಣವಿರುತ್ತದೆ. ಡೀಸೆಲ್ ಸುಮಾರು 200 ಡಿಗ್ರಿ ಹೀಟ್, ಬೆಂಕಿಗೆ ಹೊತ್ತಿ ಉರಿಯುತ್ತದೆ. ಇಲ್ಲಿ ಹಾಗಾಗಿಲ್ಲ ಎಂದರೆ ಅದು ಡೀಸೆಲ್ ಅಲ್ಲ, ಸಾಮಾನ್ಯ ಎಣ್ಣೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿ ಪ್ರತಿಪಾದಿಸಿದ್ದಾರೆ.
ಉತ್ತಮ ಆರೋಗ್ಯಕ್ಕೆ ನಿತ್ಯ ನಾವು ತಿನ್ನುವ ಆಹಾರ ಪರಿಶುದ್ಧವಾಗಿರಬೇಕು. ಒಂದಷ್ಟು ವರ್ಗದ ಜನರು ಹಾದಿ, ಬೀದಿಯಲ್ಲಿ ಮತ್ತು ಹೊರಗಿನ ತಿಂಡಿ-ಆಹಾರ ಪದಾರ್ಥ ತಿನ್ನಲು ಹಿಂದೇಟು ಹಾಕುತ್ತಾರೆ. ಇನ್ನೂ ಹೀಗೆ ಡೀಸೆಲ್ ಹಾಕಿದರೆ ಅಂತಹ ಸ್ಥಳಗಳಿಗೆ ಹೋಗುವುದನ್ನೇ ನಿಲ್ಲಿಸಿಬಿಡುತ್ತಾರೆ.












Click it and Unblock the Notifications