ವಿಡಿಯೋ: ಭೋಜ್ ಪುರಿಯ ಅಸಭ್ಯ ಹಾಡಿಗೆ ತರಗತಿಯಲ್ಲಿ ಮಕ್ಕಳೆದುರು ಕುಣಿದ ಶಿಕ್ಷಕಿ
ಶಾಲಾ ಶಿಕ್ಷಕಿಯೊಬ್ಬರು ತರಗತಿಯಲ್ಲಿ ಭೋಜ್‌ಪುರಿಯ ಅಸಭ್ಯ ಹಾಡಿಗೆ ತನ್ನ ವಿದ್ಯಾರ್ಥಿಗಳ ಎದುರು ನೃತ್ಯ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಿಂದ ನೆಟ್ಟಿಗರು ಕೋಪಗೊಂಡಿದ್ದು ವಿಡಿಯೋವನ್ನು ಟ್ರೋಲ್ ಆಗಿದೆ.
ಪ್ರತಿ ವ್ಯಕ್ತಿಯೂ ತಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನವನ್ನು ಒಬ್ಬ ಗುರುವಿಗೆ ನೀಡುತ್ತಾರೆ. ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಶಿಕ್ಷಣದ ಮೂಲಾರ್ಥವವನ್ನು ತಿಳಿಸಿ ಪ್ರತಿ ವ್ಯಕ್ತಿಯ ಬದಕನ್ನು ಬೆಳಗುವವರು ಶಿಕ್ಷಕರಾಗಿರುವುದರಿಂದ, ಇಡೀ ಪ್ರಪಂಚವೇ ಅವರನ್ನು ಅಗ್ರಸ್ಥಾನದಲ್ಲಿಟ್ಟು ಪೂಜಿಸುತ್ತದೆ. ಆದರೆ ಇಲ್ಲೊಬ್ಬ ಶಿಕ್ಷಕಿ ತಲೆತಗ್ಗಿಸುವಂತ ಕೆಲಸ ಮಾಡಿದ್ದಾಳೆ.
ಶಿಕ್ಷಕ ಭೋಜ್‌ಪುರಿ ಹಾಡಿಗೆ ನೃತ್ಯ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋದಲ್ಲಿ ಅವರ ವಿದ್ಯಾರ್ಥಿಗಳು ಸಹ ಕಾಣಿಸಿಕೊಳ್ಳುತ್ತಾರೆ. ಶಿಕ್ಷಕಿ ತನ್ನೊಂದಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ನೃತ್ಯ ಮಾಡಿದ್ದಾರೆ.

ಸೀರೆ ಉಟ್ಟ ಶಿಕ್ಷಕಿಯೊಬ್ಬರು ತರಗತಿಯಲ್ಲಿ ಪತ್ಲಿ ಕಾಮಾರಿಯಾ ಮೊರ ಹೈ (patli kamariya mor hai hai) ನೃತ್ಯ ಮಾಡುವುದನ್ನು ನೀವು ನೋಡಬಹುದು. ಗುಲ್ಜಾರ್_ಸಾಹಬ್ ಎಂಬ ಟ್ವಿಟ್ಟರ್ ಬಳಕೆದಾರರು ಈ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ. ವಿಡಿಯೋ ಹಂಚಿಕೊಂಡ ಅವರು "ನಮ್ಮ ಬಾಲ್ಯದಲ್ಲಿ ನಾವು ಅಂತಹ ಶಿಕ್ಷಕರನ್ನು ಏಕೆ ಪಡೆಯಲಿಲ್ಲ?" ಎಂದು ಪ್ರಶ್ನೆ ಮಾಡಿದ್ದಾರೆ.
ವಿಡಿಯೊ 268k ವೀಕ್ಷಣೆಗಳನ್ನು ಮತ್ತು 8,200 ಲೈಕ್‌ಗಳನ್ನು ಪಡೆದುಕೊಂಡಿದೆ. ಅನೇಕ ಟ್ವಿಟ್ಟರ್ ಬಳಕೆದಾರರು ಮನನೊಂದಿದ್ದಾರೆ ಮತ್ತು ಕೆಲವರು ವೀಡಿಯೊದಿಂದ ಆಕ್ರೋಶಗೊಂಡಿದ್ದಾರೆ. ಕೆಲವರು ತರಗತಿಯ ಶಿಸ್ತಿಗೆ ಭಂಗತಂದಿರುವ ಶಿಕ್ಷಕಿಯನ್ನು ವಜಾಗೊಳಿಸುವಂತೆ ಅಥವಾ ಅಮಾನತುಗೊಳಿಸುವಂತೆ ಶಾಲೆಯನ್ನು ಒತ್ತಾಯಿಸಿದರು. ಆದರೆ ಈ ವಿಡಿಯೋ ಎಲ್ಲಿಯದ್ದು ಎಂದು ತಿಳಿದು ಬಂದಿಲ್ಲ.
ಶಿಕ್ಷಕರು ಭೋಜ್ಪುರಿ ಹಾಡಿಗೆ ತರಗತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ನೃತ್ಯ ಮಾಡುವ ವೈರಲ್ ವಿಡಿಯೊವನ್ನು ಇಲ್ಲಿ ವೀಕ್ಷಿಸಿ:
बचपन में ऐसी Teacher हमें क्यों नहीं मिली 🥲❤️ pic.twitter.com/DCmx6USvD1
— ज़िन्दगी गुलज़ार है ! (@Gulzar_sahab) December 2, 2022
"ಈ ಮಹಿಳೆಯನ್ನು ಕೂಡಲೇ ಶಿಕ್ಷಕಿ ಸ್ಥಾನದಿಂದ ತೆಗೆದುಹಾಕಬೇಕು. ಅವರು ಯಾವ ಅಸಭ್ಯತೆಯನ್ನು ಹರಡುತ್ತಿದ್ದಾರೆ ಮತ್ತು ಅದು ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಸಣ್ಣ ತಿಳಿವಳಿಕೆ ಆಕೆಗಿಲ್ಲ. ಇದೊಂದು ಅವಮಾನಕರ ಸಂಗತಿ" ಎಂದು ಬಳಕೆದಾರರು ಬರೆದಿದ್ದಾರೆ.
"ಇದು ಉತ್ತಮ ಶಿಕ್ಷಕರ ನಡೆಯಲ್ಲ. ಶಿಕ್ಷಕರು ಮಾದರಿಯಾಗಿರಬೇಕು. ಅದು ಐಟಂ ಡ್ಯಾನ್ಸರ್‌ಗಳಿಂದಲ್ಲ. ಸನಾತನ ಧರ್ಮದಲ್ಲಿ ನಮ್ಮ ಗುರುಗಳ ಬಗ್ಗೆ ನಮಗೆ ಅಪಾರ ಗೌರವವಿದೆ. ಅದನ್ನು ಕಾಪಾಡಿಕೊಳ್ಳಬೇಕು ಮತ್ತು ಮಕ್ಕಳಿಗೆ ಕಲಿಸಬೇಕು" ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.












Click it and Unblock the Notifications