Viral Video: ಚಲಿಸುವ ರೈಲಿನಿಂದ ಕಸ ಬಿಸಾಡಿದ ಅಧಿಕಾರಿಗೆ ಗೇಟ್‌ ಪಾಸ್! ರೈಲ್ವೆ ಇಲಾಖೆ

Indian Railways: ಭಾರತೀಯ ರೈಲ್ವೆಯು ಕೋಟ್ಯಾಂತರ ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ. ರೈಲು ಟ್ರ್ಯಾಕ್, ರೈಲು ನಿಲ್ದಾಣ ಸ್ವಚ್ಚತೆ ಕುರಿತು ಜಾಗೃತಿ ಮೂಡಿಸುತ್ತಲೆ ಇದೆ. ಹೀಗಿದ್ದರೂ ರೈಲ್ವೆ ಹಿರಿಯ ಸಿಬ್ಬಂದಿಯೇ ರೈಲೊಳಗಿನ ಕಸವನ್ನು ಟ್ರ್ಯಾಕ್‌ ಮೇಲೆ ಎಸೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇತ್ತ ತ್ವರಿತವಾಗಿ ಸ್ಪಂದಿಸಿದ ರೈಲ್ವೆ ಇಲಾಖೆಯು ಆ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿ ಕ್ರಮ ಕೈಗೊಂಡಿದೆ.

ಹಿರಿಯ ರೈಲ್ವೆ ಸಿಬ್ಬಂದಿಯೊಬ್ಬರು ಚಲಿಸುತ್ತಿದ್ದ ರೈಲಿನ ಒಳಗೆ ಡೋರ್ ಪಕ್ಕದಲ್ಲಿದ್ದ ಕಸದ ಬುಟ್ಟಿಯಿಂದ ತಿಂಡಿ ಬಾಟಲಿ, ಇತರ ಪ್ಲಾಸ್ಟಿಕ್ ಕಸವನ್ನು ಎತ್ತಿ ಬಾಗಿಲಿನಿಂದ ಟ್ರ್ಯಾಕ್ ಮೇಲೆ ಕಸ ಬಿಸಾಕಿದ್ದ ಘಟನೆ ನಡೆದಿದೆ. ಇದನ್ನು ಅದೇ ಬೋಗಿಯಲ್ಲಿದ್ದ ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೇ ವಿಡಿಯೋ ರಿಟ್ವೀಟ್ ಮಾಡಿದ ರೈಲ್ವೆ ಇಲಾಖೆ ಸಿಬ್ಬಂದಿಯನ್ನು ವಜಾಗೊಳಿಸಿದ್ದಾಗಿ ತಿಳಿಸಿದೆ. ದಂಡವನ್ನು ವಿಧಿಸಲಾಗಿದೆ.

Video of Senior Railway Official Caught Throwing Garbage from Moving Train Prompt Action Taken

ರೈಲ್ವೆ ವ್ಯಾಪ್ತಿಯಲ್ಲಿ ಕಸ ನಿರ್ವಹಣೆಗೆ ಸೂಚನೆ

ಈ ಕೃತ್ಯ ನೋಡಿದ ಪ್ರಮಾಣಿಕರು ಹತಾಶ ವ್ಯಕ್ತಪಡಿಸಿದ್ದಾರೆ. ದೇಶದ ರೈಲ್ವೆ ವ್ಯವಸ್ಥೆಯಲ್ಲಿ ಕಸ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಇದೆ. ಹೀಗಿದ್ದರೂ ಇಲ್ಲಿ ನಿಯಮ ಉಲ್ಲಂಘನೆ ಆಗಿದೆ. ಹೀಗಾಗಿ ಸಿಬ್ಬಂದಿ ಮೆಲೆ ಭಾರೀ ದಂಡ ವಿಧಿಸಲಾಗಿದೆ. ಈ ಘಟನೆ ಬೆನ್ನಲ್ಲೆ ರೈಲ್ವೆ ಪ್ಲಾಟ್‌ಫಾಮ್‌, ರೈಲು ನಿಲ್ದಾಣಗಳಲ್ಲಿ ಕಸ ನಿರ್ವಹಣೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ವರದಿ ಆಗಿದೆ.

Take a Poll

ಇದು ಒಂದು ದಿನದ ಕಹಿ ಘಟನೆ ಅಲ್ಲ. ಕೋಟ್ಯಾಂತರ ಜನರು ನಿತ್ಯ ಪ್ರಯಾಣಿಸುತ್ತಾರೆ. ಅವರೆಲ್ಲರಿಂದ ನೀರಿನ ಖಾಲಿ ಬಾಟಲಿ, ಪ್ಲಾಸ್ಟಿಕ್ ಕವರ್, ಹಸಿ ಮತ್ತು ಒಣ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಅವರಲ್ಲಿ ಕೆಲವರು ಚಲಿಸುವ ರೈಲಿನಿಂದ ಹೊರಕ್ಕೆ ಬಿಸಾಡುತ್ತಾರೆ. ಟ್ರ್ಯಾಕ್ ಅಕ್ಕಪಕ್ಕ ನೀವು ನೋಡದರೆ ಉದ್ದಕ್ಕೂ ಪ್ಲಾಸ್ಟಿಕ್ ಸೇರಿ ಸಾಕಷ್ಟು ಕಸ ಕಂಡು ಬರುತ್ತಿದೆ. ಇದರಿಂದ ನಾಡಿಗೆ ನಾವೆಲ್ಲರು ಏನು ಕೊಡುಗೆ ನಿಡುತ್ತಿದ್ದೇವೆ ಎಂಬುದನ್ನು ಗಮನಿಸಿದೆ. ಪರಿಸರ ಕಾಳಜಿ ಮೆರೆಯುವುದು ಅಗತ್ಯವಿದೆ.

ಒಟ್ಟು 49 ಸೆಕೆಂಡುಗಳ ಈ ವೈರಲ್ ವೀಡಿಯೊ ಸಾಕಷ್ಡು ಟೀಕೆಗೆ ಗುರಿಯಾಗಿದೆ. ರೈಲ್ವೆ ವ್ಯಾಪ್ತಿಯಲ್ಲಿನ ಸ್ವಚ್ಛತೆ ಕುರಿತು ಕಳವಳ ಹುಟ್ಟುಹಾಕಿದೆ. ಈ ಘಟನೆ ನಡೆದಿರುವುದು ಕಳೆದ ತಿಂಗಳೂ ಮಾರ್ಚ್ 27ರಂದು ವರದಿ ಆಗಿದೆ. ಕೃತ್ಯ ಎಸಗಿದೆ ಅಧಿಕಾರಿ ಅದೇ ದಿನ ಕೆಲಸ ಕಳೆದುಕೊಂಡಿದ್ದಾರೆ.

ವಿಡಿಯೋ ರೆಕಾರ್ಡ್ ವೇಳೆ ಪ್ರಯಾಣಿಕರು ಕಸವನ್ನು ಏಕೆ ಹೊರ ಚೆಲ್ಲುತ್ತಿದ್ದೀರಿ ಎಂದು ಕೂಗಿದ್ದಾರೆ. ಅದಕ್ಕೆ ಆ ಸಿಬ್ಬಂದಿ ಸಬೂಬು ಹೇಳುತ್ತಲೇ ಬಾಗಿಲು ತೆರೆದು ಕಸದ ಬುಟ್ಟಿ ಖಾಲಿ ಆಗುವವರೆಗೂ ಹೊಸಕ್ಕೆ ಕಸ ಚೆಲ್ಲಿದ್ದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಆದರೆ ಅವರ ಕೃತ್ಯ ತಡೆಯಲು ಸಾಧ್ಯವಾಗಲಿಲ್ಲ. ರೈಲ್ವೆ ಅಧಿಕಾರಿಯ ದುರಹಂಕಾರ ಮತ್ತು ಆತ್ಮವಿಶ್ವಾಸ ಎಲ್ಲಿಂದ ಬರುತ್ತದೆ? ಎಂದು ಪ್ರಶ್ನಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+