ವಿಡಿಯೋ: ಪಾಟ್ಲಿ ಕಮರಿಯಾ ಮೋರಿ ಹಾಡಿಗೆ ಕಿಲಿ ಮತ್ತು ನೀಮಾ ಪಾಲ್ ಡ್ಯಾನ್ಸ್

ತಾಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪಾಲ್, ಜನಪ್ರಿಯ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮೂಲಕ ಮತ್ತು ನೃತ್ಯ ಮಾಡುವ ಮೂಲಕ ವೈರಲ್ ಸೆನ್ಸೇಷನ್ ಆಗಿದ್ದು, ಮತ್ತೊಂದು ವಿಡಿಯೊದೊಂದಿಗೆ ಮರಳಿದ್ದಾರೆ. ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಅವರು ಮತ್ತು ಅವರ ಸಹೋದರಿ ನೀಮಾ ಲಿಪ್-ಸಿಂಕ್ಸಿಂಗ್ ಮತ್ತು ಡ್ಯಾನ್ಸ್ ಮಾಡುತ್ತಿರುವುದು ಇದೀಗ ಇನ್‌ಸ್ಟಾಗ್ರಾಮ್ ನಲ್ಲಿ ಟ್ರೆಂಡ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಹಿಟ್ ಆದ 'ಪಟ್ಲಿ ಕಮರಿಯ ಮೋರಿ ಹಾಯ್ ಹಾಯ್‌ ಹಾಯ್' ಹಾಡಿಗೆ ಕಿಲಿ ಪಾಲ್ ನೃತ್ಯ ಮಾಡಿದ್ದಾರೆ.

ಕಿಲಿ ಇನ್‌ಸ್ಟಾಗ್ರಾಂನಲ್ಲಿ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ, "ಟ್ರೆಂಡ್ ಹಾಡಿಗೆ ನನಗೆ ನೃತ್ಯ ಮಾಡಲು ಸಾಧ್ಯವಾಗಲಿಲ್ಲ" ಅವರು ಬರೆದಿದ್ದಾರೆ. 34 ಮಿಲಿಯನ್ ವೀಕ್ಷಣೆಗಳು ಮತ್ತು 2.5 ಮಿಲಿಯನ್ ಲೈಕ್‌ಗಳೊಂದಿಗೆ ವಿಡಿಯೊ ಹುಚ್ಚು ವೈರಲ್ ಆಗಿದೆ. ವಿಡಿಯೊದಲ್ಲಿ ನೀಮಾ ಹಾಗೂ ಕಿಲಿ ಸಾಂಪ್ರದಾಯಿಕ ಮಸಾಯಿ ಉಡುಪುಗಳನ್ನು ಧರಿಸಿ, ಲಿಪ್-ಸಿಂಕ್ ಮತ್ತು ಟ್ರೆಂಡಿಂಗ್ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ.

ಕಿಲಿ ಲಿಪ್ ಸಿಂಕ್ ಮಾಡುವ ಮೂಲಕ ಹಾಡನ್ನು ಪ್ರಾರಂಭಿಸಿದಾಗ, ಅವರ ಸಹೋದರಿ 'ಪಟ್ಲಿ ಕಮರಿಯ ಮೋರಿ' ಹಾಡಿಗೆ ನೃತ್ಯ ಮಾಡಲು ಪ್ರಾರಂಭಿಸುತ್ತಾರೆ. ಕಿಲಿ ನಂತರ 'ಹಯೇ ಹಯೇ' ಎನ್ನುತ್ತಾ ತಮ್ಮ ಎಲ್ಲಾ ಶಕ್ತಿಯೊಂದಿಗೆ ನೃತ್ಯ ಮಾಡುತ್ತಾರೆ. ದೇಸಿ ನೆಟಿಜನ್‌ಗಳು ರೀಲ್ ಅನ್ನು ಉಲ್ಲಾಸದಿಂದ ವೀಕ್ಷಿಸಿದ್ದಾರೆ. ಜೊತೆಗೆ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ತಮ್ಮ ನೆಚ್ಚಿನ ವಿದೇಶಿ ಪ್ರಭಾವಿಗಳು ದೇಶಿ ಹಾಡುಗಳಿಗೆ ಲಿಪ್ ಸಿಂಕ್ ಮಾಡುವುದನ್ನು ನೆಚ್ಚಿಕೊಂಡು- "ಹಾಯ್...ಹಾಯ್...ಹಾಯ್" ಎಂದು ಪ್ರತಿಕ್ರಿಯೆ ನೀಡಿದ್ದಾರೆ. "ನೀವು ತುಂಬಾ ಚೆನ್ನಾಗಿ ನೃತ್ಯ" ಮಾಡುವಿರಿ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

Video: Kili and Neema Pal dance to Patli Kamaria Mori song

ಪಾಟ್ಲಿ ಕಮರಿಯ ಮೋರಿಗೆ ಕಿಲಿ ಮತ್ತು ನೀಮಾ ಪಾಲ್ ನೃತ್ಯದ ವೈರಲ್ ವಿಡಿಯೊವನ್ನು ವೀಕ್ಷಿಸಿ:

ಕಿಲಿ ಪೌಲ್ ಅವರು ತಮ್ಮ ಸಹೋದರಿ ನೀಮಾ ಪೌಲ್ ಅವರೊಂದಿಗೆ ಶೇರ್ಷಾ ಹಾಡಿನ 'ರಾತನ್ ಲಂಬಿಯಾನ್' ಗೆ ಲಿಪ್-ಸಿಂಕ್ ಮಾಡುವ ವಿಡಿಯೊದ ನಂತರ ಖ್ಯಾತಿ ಗಳಿಸಿದರು. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿಯವರ ಪ್ರತಿಕ್ರಿಯೆಗಳನ್ನು ಸಹ ಪಡೆದರು. ಜನಪ್ರಿಯ ಮತ್ತು ಟ್ರೆಂಡಿಂಗ್ ಭಾರತೀಯ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮತ್ತು ನೃತ್ಯ ಮಾಡುವ ವಿಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುವುದರಿಂದ ಅವರು ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+