ವಿಡಿಯೋ: ಸ್ಪೈಡರ್ ಕೋತಿಗಳೊಂದಿಗೆ ತರ್ಲೆ ಮಾಡುವಾಗ ಹುಷಾರ್..!
ಸಾಮಾಜಿಕ ಜಾಲತಾಣದಲ್ಲಿ ಹಲವಾರು ಪ್ರಾಣಿಗಳ ವಿಡಿಯೋ ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲ ವಿಡಿಯೋಗಳು ಮನಸ್ಸಿಗೆ ಖುಷಿ ಕೊಟ್ಟರೆ ಮತ್ತೆ ಕೆಲವು ಎಚ್ಚರಿಕೆ ಕೂಡ ನೀಡುತ್ತವೆ. ವೈರಲ್ ವಿಡಿಯೋದಲ್ಲಿ ಬಾಲಕಿಯೋರ್ವಳು ಸ್ಪೈಡರ್ ಕೋತಿಯೊಂದನ್ನು ಕೆಣಕ್ಕೆ ಪಜೀತಿಗೆ ಸಿಕ್ಕಿಕೊಂಡಿರುವುದು ಕಂಡುಬಂದಿದೆ.
ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಹುಡುಗಿ ಒಂದು ಕೈಯಲ್ಲಿ ತನ್ನ ಫೋನ್ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ತಂತಿ ಬೇಲಿಯ ಹಿಂದಿದ್ದ ಸ್ಪೈಡರ್ ಕೋತಿಗೆ ಹೊಡೆಯಲು ಮುಂದಾಗುತ್ತಾಳೆ. ಬೇಲಿಯ ಕಡೆಗೆ ತೂಗಾಡುತ್ತಿದ್ದ ಕೋತಿ ಕೋಪಗೊಳ್ಳುತ್ತದೆ. ತಕ್ಷಣ ಹುಡುಗಿಯ ಕೂದಲನ್ನು ಎಳೆದು ಅವಳನ್ನ ತನ್ನ ಕಡೆಗೆ ಎಳೆಯುತ್ತದೆ. ಹುಡುಗಿ ಕಿರುಚುತ್ತಿದ್ದಂತೆ ಅದು ಮತ್ತಷ್ಟು ಬಲವಾಗಿ ತನ್ನತ್ತ ಹುಡುಗಿಯನ್ನು ಎಳೆಯುತ್ತದೆ. ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋ ರೆಕಾರ್ಡ್ ಮಾಡಿರುವ ಸ್ಥಳ ಇನ್ನಷ್ಟೇ ಗೊತ್ತಾಗಬೇಕಿದೆ.
ವಿಡಿಯೊವನ್ನು ವೀಕ್ಷಿಸಿ:
ಕ್ಲಿಪ್‌ನ ಕೊನೆಯಲ್ಲಿ, ಹುಡುಗಿ ತನ್ನ ಕೂದಲನ್ನು ಕೋತಿ ಕೈಯಿಂದ ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾಳೆ. ಸಾಮಾನ್ಯವಾಗಿ ಮೃಗಾಲಯದಲ್ಲಿನ ಪ್ರಾಣಿಗಳ ಪಂಜರಗಳ ಬಾರ್‌ಗಳನ್ನು ಮುಟ್ಟದಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ. ಪ್ರಾಣಿಗಳು ಉತ್ತಮವೆಂದು ತೋರುತ್ತಿದ್ದರೂ, ಅವುಗಳಿಗೆ ಹತ್ತಿರವಾಗುವುದು ಯಾವಾಗಲೂ ಒಳ್ಳೆಯದಲ್ಲ. ಆದರೂ ಪ್ರವಾಸಿಗರು ಅವುಗಳಿಗೆ ಹತ್ತಿರವಾಗಲು ಹೋಗಿ ಆಪತ್ತು ತಂದುಕೊಳ್ಳುತ್ತಾರೆ.

ಇಂತಹದ್ದೇ ಪ್ರಕರಣದಲ್ಲಿ ಕೆಲ ದಿನಗಳ ಹಿಂದೆ, ಒಬ್ಬ ವ್ಯಕ್ತಿ ಒರಾಂಗುಟಾನ್ ಅನ್ನು ಕೀಟಲೆ ಮಾಡಿ ಅವನ ಕಾಲು ಬಹುತೇಕ ಮುರಿದುಹೋಗಿದೆ. ಇನ್ನೊಂದು ಘಟನೆಯಲ್ಲಿ, ಜಮೈಕಾದ ಮೃಗಾಲಯದ ಪಂಜರದ ಬಾರ್‌ಗಳ ಮೂಲಕ ಕೈ ಹಾಕಿದ್ದಕ್ಕೆ ಸಿಂಹವೊಂದು ವ್ಯಕ್ತಿಯ ಬೆರಳನ್ನು ಕಿತ್ತುಕೊಂಡಿತ್ತು. ಪ್ರಾಣಿಯಿಂದ ದೂರ ಸರಿಯುವ ಪ್ರಯತ್ನದಲ್ಲಿ ಅವನು ಟೀ-ಶರ್ಟ್ ಅನ್ನು ತೆಗೆಯುವುದನ್ನೂ ಸಹ ಕಾಣಬಹುದು.
ಲಕ್ನೋದಲ್ಲಿ ಮಗುವನ್ನು ಕೊಂದ ಮಂಗ; ಕೆಲ ದಿನಗಳ ಹಿಂದೆ ಉತ್ತರಪ್ರದೇಶ ಬರೇಲಿಯ ಗ್ರಾಮಾಂತರ ಪ್ರದೇಶದಲ್ಲಿ ಕೋತಿಯೊಂದು ಮಗುವನ್ನು ಕೊಂದಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಕೋತಿಯೊಂದು ಮೂರು ಅಂತಸ್ತಿನ ಮನೆಯ ಛಾವಣಿಯಿಂದ 4 ನಾಲ್ಕು ತಿಂಗಳ ಗಂಡು ಮಗುವನ್ನು ಎಸೆದ ಪರಿಣಾಮ ಮಗು ಸಾವನ್ನಪ್ಪಿತ್ತು. ವರದಿಯ ಪ್ರಕಾರ, ಬರೇಲಿಯ ಡುಂಕಾ ಗ್ರಾಮದ ನಿವಾಸಿ ನಿರ್ದೇಶ್ ಉಪಾಧ್ಯಾಯ (25) ಅವರು ಶುಕ್ರವಾರ ಸಂಜೆ ತಮ್ಮ ನಾಲ್ಕು ತಿಂಗಳ ಮಗು ಮತ್ತು ಅವರ ಪತ್ನಿಯೊಂದಿಗೆ ತಮ್ಮ ಮೂರು ಅಂತಸ್ತಿನ ಮನೆಯ ಟೆರೇಸ್ ಮೇಲೆ ನಡೆದುಕೊಂಡು ಹೋಗುತ್ತಿದ್ದರು.
ಇದ್ದಕ್ಕಿದ್ದಂತೆ ಕೋತಿಗಳ ಹಿಂಡು ಛಾವಣಿಯ ಮೇಲೆ ಬಂದವು. ದಂಪತಿಗಳು ಮಂಗಗಳನ್ನು ಓಡಿಸಲು ಪ್ರಯತ್ನಿಸಿದರು. ಆದರೆ ಅವುಗಳು ಸುತ್ತುವರೆದವು. ಅವನು ಮೆಟ್ಟಿಲುಗಳ ಕಡೆಗೆ ಓಡಲು ಪ್ರಯತ್ನಿಸಿದಾಗ, ಮಗು ಅವನ ಕೈಯಿಂದ ಕೆಳಗೆ ಬಿದ್ದಿದೆ. ನಿರ್ದೇಶ್ ಮಗುವನ್ನು ಹಿಡಿಯುವ ಮೊದಲು, ಕೋತಿಯು ನವಜಾತ ಶಿಶುವನ್ನು ಹಿಡಿದು ಛಾವಣಿಯಿಂದ ಎಸೆದಿದೆ. ಮಗು ಸ್ಥಳದಲ್ಲೇ ಬಿದ್ದು ಸಾವನ್ನಪ್ಪಿದೆ.
ಪಿಯಾವಾಯ್‌ನಲ್ಲಿ ಚಾಕು ಹಿಡಿದು ಓಡಾಡುವ ಮಂಗ; ಬ್ರೆಜಿಲ್‌ನ ಪಿಯಾವಾಯ್ ನಗರದಲ್ಲಿ ಮಂಗವೊಂದು ಚಾಕು ಹಿಡಿದು ಜನರಿಗೆ ಭಯ ಹುಟ್ಟಿಸಿತ್ತು. ಮಂಗನ ಕೈಯಲ್ಲಿ ಚಾಕು ಇರುವ ದೃಶ್ಯವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ದೃಶ್ಯಾವಳಿಯಲ್ಲಿ, ಕೋತಿಯು ಶಾಪಿಂಗ್ ಸೆಂಟರ್‌ನ ಬಾಲ್ಕನಿಯಲ್ಲಿ ತನ್ನ ಕೈಯಲ್ಲಿದ್ದ ಚಾಕುವನ್ನು ಶಾರ್ಪ್ ಮಾಡುವುದು ಕಂಡುಬರುತ್ತದೆ. ಕೋತಿ ಚಾಕು ಹಿಡಿದು ಬರುವವರನ್ನು ಹೆದರಿಸುತ್ತಿರುವುದು ಕಂಡು ಬಂದಿದೆ.
ಈ ಚಾಕು ಮಂಗಕ್ಕಿಂತ ಸ್ವಲ್ಪ ಚಿಕ್ಕದಾಗಿದೆ ಎಂದು ಸ್ಥಳೀಯ ವರದಿಗಳು ಹೇಳುತ್ತಾರೆ. ಈ ಚಾಕುವಿನ ಸಹಾಯದಿಂದ ಇಡೀ ನಗರದಲ್ಲಿ ತನ್ನ ಭಯವನ್ನು ಸೃಷ್ಟಿಸಿದೆ ಕೋತಿ. ಅನೇಕ ಜನರು ಇದನ್ನು ತಮಾಷೆಯಾಗಿ ಕಾಣುತ್ತಾರೆ. ಆದರೆ ಅನೇಕ ಜನರು ಮನೆಯಿಂದ ಹೊರಬರುವುದನ್ನು ನಿಲ್ಲಿಸಿಬಿಟ್ಟಿದ್ದಾರೆ.











Click it and Unblock the Notifications