ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಜ್ಜೆಗೆ ಹೆಜ್ಜೆಯಾದ ಬಾಳ ಸಂಗಾತಿಯೇ ಐ ಲವ್ ಯೂ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಪ್ರೀತಿ ಪ್ರಾಮಾಣಿಕವಾಗಿರಬೇಕು, ನಂಬಿಕೆ ಅಚಲವಾಗಿರಬೇಕು, ಸ್ವಾರ್ಥ ತ್ಯಜಿಸಿದ, ನಿಸ್ವಾರ್ಥ ಪ್ರೀತಿಯಷ್ಟೆ ಜೀವನದುದ್ದಕ್ಕೂ ನಮ್ಮನ್ನು ನಡೆಸಬಲ್ಲದು.. ಇದುವರೆಗೆ ನಿಮ್ಮೊಂದಿಗೆ ಕಷ್ಟ, ನೋವು, ನಲಿವು ಎಲ್ಲದರಲ್ಲೂ ಭಾಗಿಯಾಗಿ ಬಾಳ ಪಯಣದಲ್ಲಿ ಹೆಜ್ಜೆಗೆ ಹೆಜ್ಜೆಯಾಗಿ ಬಂದ ಸಂಗಾತಿಗೊಂದು ಕೃತಜ್ಞತೆಯ ಧನ್ಯವಾದ ಸಮರ್ಪಿಸುವ ಸಮಯ.

ಇವತ್ತು ಜಗತ್ತು ಪ್ರೇಮದಲ್ಲಿ ಮುಳುಗುತ್ತದೆ. ಪಾಶ್ಚಿಮಾತ್ಯರಿಗೆ ಪ್ರೇಮಿಗಳ ದಿನವೆನ್ನುವುದು ಆಚರಣೆ ಅಷ್ಟೆ. ಆದರೆ ಭಾರತೀಯರಿಗೆ ಹಾಗಿಲ್ಲ. ಅದು ಬದುಕು. ಈ ಹಿಂದೆ ಪ್ರೇಮಿಗಳಾಗಿದ್ದು, ಹೋಟೆಲ್, ಪಾರ್ಕ್ ಗಳಲ್ಲಿ ಕೈಕೈಹಿಡಿದು ನಲಿದಾಡಿದವರ ಪೈಕಿ ಅದೆಷ್ಟೋ ಮಂದಿ ಈಗ ಬಾಳ ಸಂಗಾತಿಗಳಾಗಿದ್ದಾರೆ. ಸಂಸಾರದ ಸಾಗರದಲ್ಲಿ ನೋವು ನಲಿವಿನ ಹಾದಿಯಲ್ಲಿ ಬಾಳ ನೌಕೆಯಲ್ಲಿ ಸಾಗುತ್ತಿದ್ದಾರೆ. ಅಂತಹವರು ತಪ್ಪದೆ ಹಿಂತಿರುಗಿ ನೋಡಿ ಆ ದಿನಗಳನ್ನು ನೆನೆಯುತ್ತಾ ಸಂಗಾತಿಗೊಂದು ಸಿಹಿ ಮುತ್ತು ನೀಡಿಬಿಡಿ.

ಪ್ರೇಮಿಗಳ ದಿನ; ದೇಶ, ವಿದೇಶಕ್ಕೆ ಗುಲಾಬಿ ಕಳಿಸುವ ಚಿಕ್ಕಬಳ್ಳಾಪುರ ರೈತ ಪ್ರೇಮಿಗಳ ದಿನ; ದೇಶ, ವಿದೇಶಕ್ಕೆ ಗುಲಾಬಿ ಕಳಿಸುವ ಚಿಕ್ಕಬಳ್ಳಾಪುರ ರೈತ

ಇಷ್ಟಕ್ಕೂ ಪ್ರೀತಿ ನಿಂತಿರುವುದು ಯಾವುದೇ ಉಡುಗೊರೆಯಲ್ಲಿ ಅಲ್ಲ. ಅದು ನಿಂತಿರುವುದು ನಿಮ್ಮೊಳಗಿನ ನಂಬಿಕೆಯಲ್ಲಿ. ಅದಕ್ಕೆ ಮೋಸ ಮಾಡಿದ ಯಾವ ಪ್ರೀತಿಯೂ, ಪ್ರೇಮಿಗಳು ಉದ್ಧಾರವಾಗಿಲ್ಲ. ಕೇವಲ ಎಂಜಾಯ್ ಮಾಡುವ, ಸ್ವಾರ್ಥ ಉದ್ದೇಶಕ್ಕಾಗಿ ಪ್ರೇಮದ ನಾಟಕವಾಡಿ ಮತ್ತೊಬ್ಬರ ಬದುಕಿಗೆ ಕೀಚಕರಾಗದೆ ನಿರ್ಮಲ ಮನಸ್ಸಿನಿಂದ ಪ್ರೀತಿಸಿ ಪ್ರೇಮದೇವರಾಗಿ ಬಿಡಿ.

ಈ ದೇಶದಲ್ಲಿದೆ ಲವ್ ಮಾಡಲು ಲೀವ್; ಪ್ರೀತಿ ಮಾಡಿ ಎನ್ನುತ್ತಿದೆ ಈ ದೇಶಈ ದೇಶದಲ್ಲಿದೆ ಲವ್ ಮಾಡಲು ಲೀವ್; ಪ್ರೀತಿ ಮಾಡಿ ಎನ್ನುತ್ತಿದೆ ಈ ದೇಶ

ಸಾಮಾನ್ಯವಾಗಿ ಮದುವೆಗೆ ಮುನ್ನ ಬರುವ ಒಂದಷ್ಟು ದಿನಗಳು ಪ್ರೇಮಿಗಳಿಗೆ ಪ್ರೇಮಕಾಲ.. ಆ ದಿನಗಳಲ್ಲಿ ಜೊತೆ ಜೊತೆಯಾಗಿ ಸುತ್ತಾಡುತ್ತಾ ಸಂಭ್ರಮಿಸುತ್ತಾ ವಿಚಾರ ವಿನಿಮಯ ಮಾಡುತ್ತಾ ಖುಷಿ ಖುಷಿಯಾಗಿ ಕಾಲ ಕಳೆಯುತ್ತಾರೆ. ಅದೊಂಥರಾ ಮಜಾ.. ಅಷ್ಟೇ ಅಲ್ಲ ಆ ದಿನಗಳು ಪ್ರೀತಿ, ಪ್ರೇಮ, ಆಕರ್ಷಣೆಯನ್ನು ಹೃದಯ, ದೇಹ, ಮನಸ್ಸುಗಳಲ್ಲಿ ತುಂಬುವ ಮತ್ತು ಸದಾ ಜೊತೆಯಾಗಿರ ಬೇಕೆಂದುಕೊಳ್ಳುವ ಸುಂದರ ಕ್ಷಣಗಳೂ ಹೌದು.

Anti Valentine's Week List 2022: ಪ್ರೇಮಿಗಳ ದಿನದ ನಂತರ, ಸ್ಲ್ಯಾಪ್ ಡೇ, ಬ್ರೇಕಪ್ ಡೇ ಯಾವಾಗ ಎಂದು ತಿಳಿಯಿರಿ!Anti Valentine's Week List 2022: ಪ್ರೇಮಿಗಳ ದಿನದ ನಂತರ, ಸ್ಲ್ಯಾಪ್ ಡೇ, ಬ್ರೇಕಪ್ ಡೇ ಯಾವಾಗ ಎಂದು ತಿಳಿಯಿರಿ!

ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಪ್ರೇಮ ಕಥೆಗಳು ನೂರಾರು ಸಿಗುತ್ತವೆ. ಪ್ರೇಮಕ್ಕೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟವರು ಸಾಕ್ಷಿಯಾಗಿ ನಿಲ್ಲುತ್ತಾರೆ. ಇಷ್ಟಕ್ಕೂ ಪ್ರೇಮ ಎನ್ನುವುದು ತೋರಿಕೆಯಲ್ಲ ಅದು ಎರಡು ಹೃದಯಗಳ ವಿಷಯ. ಪ್ರೇಮ ಗಟ್ಟಿಯಾಗಬೇಕಾದರೆ ಪ್ರೇಮಿಗಳಲ್ಲಿ ನಂಬಿಕೆ ಮತ್ತು ಪ್ರಾಮಾಣಿಕತೆ ಅಗತ್ಯ. ಅದೆರಡು ಇಲ್ಲದೆ ಹೋದರೆ ಪ್ರೀತಿಸೋಕೆ ಆಗಲ್ಲ. ಒಂದು ವೇಳೆ ಪ್ರೀತಿಸಿದರೂ ಹೆಚ್ಚು ದಿನ ಬಾಳುವುದಿಲ್ಲ.

ಪ್ರೇಮಿಗಳೇ ಪ್ರೀತಿಯನ್ನು ಅಮರವಾಗಿಸಿ

ಪ್ರೇಮಿಗಳೇ ಪ್ರೀತಿಯನ್ನು ಅಮರವಾಗಿಸಿ

ಹಾಗೆ ಸುಮ್ಮನೆ ನಮ್ಮ-ನಿಮ್ಮ ಸುತ್ತಮುತ್ತ ದೃಷ್ಠಿ ಹಾಯಿಸಿ ನೋಡಿದರೆ ಗೆಳೆಯ-ಗೆಳೆಯರ ಪ್ರೀತಿ ಪ್ರೇಮಗಳೆಷ್ಟು ಯಶಸ್ವಿಯಾಗಿವೆ? ಇನ್ನೆಷ್ಟು ಮುರಿದುಬಿದ್ದಿವೆ ಎಂಬುದರ ಲೆಕ್ಕ ಸಿಗುತ್ತದೆ. ಜತೆಗೆ ಪ್ರೀತಿಸಿ, ಎಲ್ಲ ಸಮಸ್ಯೆಯನ್ನು ಎದುರಿಸಿ ಮದುವೆಯಾದವರೆಲ್ಲರೂ ಜತೆಯಾಗಿ, ಸುಖವಾಗಿದ್ದಾರಾ? ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಪ್ರೀತಿಯನ್ನು ಅಮರಾಗಿಸುವುದು ಪ್ರತಿ ಪ್ರೇಮಿಗಳಲ್ಲಿದೆ.

ಪ್ರೀತಿಸೋದು ಸುಲಭ ಆದರೆ ಹೊಂದಿ ಕೊಂಡು ಬಾಳ್ವೆ ಮಾಡಿ ಅದಕ್ಕೊಂದು ನ್ಯಾಯ ಒದಗಿಸೋದು ಕಷ್ಟವೇ.. ಇತರರಿಗೆ ಮಾದರಿಯಾಗಿ ಬದುಕೋದು ಪ್ರೇಮಿಗಳು ಪ್ರೇಮಕ್ಕೆ ಕೊಡುವ ದೊಡ್ಡ ಗೌರವವಾಗುತ್ತದೆ. ಈ ವಿಚಾರದಲ್ಲಿ ನಾವು ಎಡವಿದ್ದೇ ಆದರೆ ಪ್ರತಿ ವರ್ಷದ ಪ್ರೇಮಿಗಳ ದಿನವೂ ಕರಾಳ ದಿನವಾಗಿ ಗೋಚರಿಸುವುದರಲ್ಲಿ ಎರಡು ಮಾತಿಲ್ಲ.

ಪರ-ವಿರೋಧದ ನಡುವೆ ಪ್ರೇಮೋತ್ಸವ

ಪರ-ವಿರೋಧದ ನಡುವೆ ಪ್ರೇಮೋತ್ಸವ

ಸಾಮಾನ್ಯವಾಗಿ ಪ್ರೇಮಿಗಳು ಅಂದರೆ ಅವರಲ್ಲಿ ಅದುಮಿಡಲಾರದ ಉತ್ಸಾಹ, ಸಂಭ್ರಮ, ಉಲ್ಲಾಸ, ಕಾತರ ಇದ್ದದ್ದೇ. ಜತೆಗೆ ಒಬ್ಬರ ಮೇಲೊಬ್ಬರು ತಲೆಯಿಟ್ಟು ಏನೇನೋ ಉಸುರುವ ಅಭಿಲಾಷೆ, ಕುಣಿದು ಕುಪ್ಪಳಿಸಬೇಕೆನ್ನುವ ತವಕ. ಉಡುಗೊರೆ ನೀಡಿ ಖುಷಿ ಪಡಿಸುವ.. ನೆನಪುಗಳನ್ನು ಶಾಶ್ವತವಾಗಿಸುವ ಬಯಕೆಗಳು ಇದ್ದೇ ಇರುತ್ತವೆ. ಆದರೆ ಇವುಗಳೆಲ್ಲವೂ ಒಂದು ದಿನಕ್ಕೆ ಸೀಮಿತವಾಗದೆ ಶಾಶ್ವತವಾಗಿ ಉಳಿದು ಬೆಳೆಯುವ ವಿಶಾಲ ಪ್ರೇಮಮರವಾದರೆ ಅದೆಷ್ಟು ಖುಷಿ ಅಲ್ವಾ?

ಹಾಗೆನೋಡಿದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹುಟ್ಟಿಕೊಂಡ ಈ ಪ್ರೇಮಿಗಳ ದಿನ ಕಳೆದ ಎರಡು ದಶಕಗಳಿಂದ ಭಾರತದಲ್ಲಿ ತೀವ್ರಗತಿಯಲ್ಲಿ ಆಚರಣೆಯಾಗಿ ಬೆಳೆಯತೊಡಗಿದೆ. ಇದಕ್ಕೆ ಒಂದಷ್ಟು ಪರ-ವಿರೋಧಗಳು ಇವತ್ತಿಗೂ ಇದೆ. ಆದರೆ ಅದೆಲ್ಲವನ್ನು ಮೀರಿ ಪ್ರೇಮಿಗಳು ಪ್ರೇಮೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ.

ಪ್ರೇಮ ನಿವೇದನೆಗೆ ದಾರಿಗಳು ಹಲವಾರು

ಪ್ರೇಮ ನಿವೇದನೆಗೆ ದಾರಿಗಳು ಹಲವಾರು

ಪ್ರೇಮಪತ್ರ ನೀಡಿ, ಗುಲಾಬಿ ಹೂ ನೀಡಿ, ಪ್ರೇಮ ನಿವೇದನೆ ಮಾಡುವ ಕಾಲ ಬದಲಾಗಿದೆ. ಈಗ ಪ್ರೇಮ ನಿವೇದನೆಗೆ ದಾರಿಗಳು ಹಲವಾರು ಇವೆ. ಕೇವಲ ದೈಹಿಕ ಆಕರ್ಷಣೆಯಿಂದಲೋ ಅಥವಾ ಇನ್ಯಾವುದೋ ಸನ್ನಿವೇಶಗಳಿಂದ ಆರಂಭವಾಗುವ ಪ್ರೀತಿಗಳಿಗೆ ಆಯುಷ್ಯ ಕಡಿಮೆಯಾಗುತ್ತಿದೆ. ಜತೆಗೆ ವಂಚನೆಗೆಂದೇ ಪ್ರೇಮದ ನಾಟಕವಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹಿಂದಿನ ಕಾಲದ ಮಡಿವಂತಿಕೆ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಪ್ರೇಮಿಗಳು ಯಾರ ಭಯವಿಲ್ಲದೆ ವಿಹರಿಸುವ, ಪ್ರೇಮ ಸಲ್ಲಾಪಗಳ ನಡೆಸುವ ಮಟ್ಟಕ್ಕೆ ಬಂದು ನಿಂತಿದ್ದಾರೆ. ಎಲ್ಲವೂ ಅಷ್ಟೆ ಅವುಗಳಿಗೊಂದು ಚೌಕಟ್ಟಿದ್ದರೆ ಲಕ್ಷಣ ಇಲ್ಲದೆ ಹೋದರೆ ಅವಲಕ್ಷಣ.

ವರ್ಣಿಸಿದಷ್ಟೂ ಮುಗಿಯದ ಸುಂದರ ಲೋಕ

ವರ್ಣಿಸಿದಷ್ಟೂ ಮುಗಿಯದ ಸುಂದರ ಲೋಕ

ಇಷ್ಟಕ್ಕೂ ಪ್ರೀತಿ, ಪ್ರೇಮವನ್ನು ವರ್ಣಿಸಲು ಪದವೇ ಇಲ್ಲ. ಈಗಾಗಲೇ ಕೋಟ್ಯಂತರ ಮಂದಿ ತಮ್ಮದೇ ಕಲ್ಪನೆಯಲ್ಲಿ ಪ್ರೇಮವನ್ನು ತೆರೆದಿಟ್ಟಿದ್ದಾರೆ. ಕೆಲವರು ಪ್ರೇಮ ಅಂದ್ರೆ ಅದೊಂದು ಸೂಕ್ಷ್ಮ ಸಂವೇದಿ. ಅದಕ್ಕೆ ಆಳ, ಗಾತ್ರ ಯಾವುದೂ ಇಲ್ಲ ಎಂದರೆ, ಮತ್ತೆ ಕೆಲವರು ಪ್ರೇಮ ಹೃದಯಾಂತರಾಳದಲ್ಲಿ ಅಂಕುರಿಸಿತೆಂದರೆ ಸಾಕು ಅದು ಜಾತಿಯ ಹಂಗು, ಬಡತನ, ವಯಸ್ಸು, ಸ್ಥಾನಮಾನ ಎಲ್ಲವನ್ನೂ ಧಿಕ್ಕರಿಸಿ ಬೆಳೆವ ವಿಸ್ಮಯ ಎಂದಿದ್ದಾರೆ ಅಷ್ಟೇ ಅಲ್ಲದೆ ವರ್ಣಿಸಿದಷ್ಟೂ ಮುಗಿಯದ ಸುಂದರ ಅದ್ಭುತ ಲೋಕ ಎಂದಿದ್ದಾರೆ.

ಪ್ರೇಮ ಅಂದ್ರೆ ಪ್ರಣಯ, ದೇಹ ಸಂಬಂಧ ಅರ್ಥಾತ್ ಕಾಮವನ್ನು ತ್ಯಜಿಸಿದ ಪ್ರೀತಿ, ಕರುಣೆ, ಅನುಕಂಪ ತುಂಬಿದ ಸಂಬಂಧ. ಪ್ರೀತಿ ಭವಸಾಗರ ದಾಟಿಸುವ ಹಡಗಾದರೆ ಪ್ರೇಮಿಗಳು ನಾವಿಕರಾಗಬೇಕಷ್ಟೆ. ಪ್ರೀತಿಯ ಹುಟ್ಟನ್ನು ಹುಡುಕಲು ಅದಕ್ಕೆ ಮೂಲವೂ ಇಲ್ಲ ಹೇಳಿಕೊಡೋದಕ್ಕೆ ಗುರುವೂ ಬೇಕಾಗಿಲ್ಲ. ನಿಷ್ಕಲ್ಮಶ ಮನಸ್ಸು, ನಿಷ್ಠೆ, ನಂಬಿಕೆ, ಪ್ರಾಮಾಣಿಕತೆಯಷ್ಟೆ ಪ್ರೀತಿಗೆ ಬೇಕಾಗಿರೋದು. ಪ್ರೇಮ ಮತ್ತು ವಿವಾಹ ಎರಡು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಪ್ರೀತಿಯ ಮುಂದಿನ ಹಂತವೇ ಮದುವೆ. ಪ್ರೇಮವೆಂಬುವುದು ಸಾಗರದಂತೆ. ಅಲ್ಲಿ ಈಜಿ ಗೆಲ್ಲಬೇಕು ಸಂಸಾರದ ಸುಖ ಅನುಭವಿಸಬೇಕು. ಎಲ್ಲ ಕಷ್ಟಗಳ ನಡುವೆ ಒಬ್ಬರಿಗೊಬ್ಬರು ಆಸರೆಯಾಗಿ ನಿಂತು ಬದುಕಿ ತೋರಿಸಬೇಕು ಅದಷ್ಟೆ ನಾವು ಪ್ರೀತಿ, ಪ್ರೇಮಕ್ಕೆ ನೀಡಬಹುದಾದ ದೊಡ್ಡ ಗೌರವ.

Recommended Video

ಹಿಜಾಬ್ ಧಾರಿಣಿ ಮುಂದಿನ ಪ್ರಧಾನಿಯಾಗೋದು ಗ್ಯಾರೆಂಟಿ ಎಂದ ಓವೈಸಿ | Oneindia Kannada

English summary
Valentine's day special article. Share your love with the person who come with your life journey. Just say i love you.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X