Get Updates
Get notified of breaking news, exclusive insights, and must-see stories!

Valentine's Day: ಪ್ರೇಮಿಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವುದು ಹೇಗೆ? ನಿಮ್ಮ ಪ್ರೀತಿ ವ್ಯಕ್ತಪಡಿಸಲು ಇಲ್ಲಿದೆ ಟಿಪ್ಸ್‌

ಪ್ರತಿ ವರ್ಷ ಫೆಬ್ರವರಿ 14ರಂದು ಆಚರಿಸುವ ಪ್ರೇಮಿಗಳ ದಿನ (Valentine's Day) ಪ್ರೀತಿ, ಸ್ನೇಹ ಮತ್ತು ಆತ್ಮೀಯತೆಯನ್ನು ವ್ಯಕ್ತಪಡಿಸುವ ವಿಶೇಷ ದಿನ. ಜೋಡಿಗಳಷ್ಟೇ ಅಲ್ಲ, ಕುಟುಂಬದವರು, ಸ್ನೇಹಿತರು, ಜೀವನದಲ್ಲಿ ವಿಶೇಷ ಸ್ಥಾನ ಹೊಂದಿರುವ ಯಾರಿಗಾದರೂ ಕೃತಜ್ಞತೆ ಹಾಗೂ ಪ್ರೀತಿ ತೋರಿಸಲು ಇದು ಒಳ್ಳೆಯ ಅವಕಾಶ. ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಕೆಲವು ವಿಶಿಷ್ಟ ಮತ್ತು ಹೃದಯಸ್ಪರ್ಶಿ ಐಡಿಯಾಗಳು ಇಲ್ಲಿವೆ.

ವಿಶೇಷ ಉಡುಗೊರೆಗಳು

ಮಾರುಕಟ್ಟೆಯಲ್ಲಿ ಸಿಗುವ ಸಾಮಾನ್ಯ ಗಿಫ್ಟ್‌ಗಿಂತ ನಿಮ್ಮ ಕೈಯಿಂದ ತಯಾರಿಸಿದ ಅಥವಾ ವಿಶೇಷ ನೆನಪುಗಳನ್ನು ಒಳಗೊಂಡ ಉಡುಗೊರೆ ಹೆಚ್ಚು ಮೌಲ್ಯ ಹೊಂದಿರುತ್ತದೆ. ಈ ವಿಶೇಷ ದಿನ ಅದನ್ನು ನಿಮ್ಮ ಪ್ರೀತಿಪಾತ್ರರಿಗೆ ನೀಡುವುದರಿಂದ ಹೆಚ್ಚು ಖುಷಿಪಡುತ್ತಾರೆ. ಉದಾಹರಣೆಗೆ ಕೈಬರಹದ ಪ್ರೀತಿಪತ್ರ, ನಿಮ್ಮಿಬ್ಬರ ಫೋಟೋಗಳೊಂದಿಗೆ ಇರುವ ಆಲ್ಬಮ್, ನಿಮ್ಮ ಸಂಗಾತಿಗೆ ಇಷ್ಟವಾದ ಪುಸ್ತಕ ಈ ರೀತಿಯ ಉಡುಗೊರೆಗಳು "ನೀವು ನನ್ನ ಜೀವನದಲ್ಲಿ ಎಷ್ಟು ಮಹತ್ವದವರು" ಎಂಬ ಸಂದೇಶವನ್ನು ಸ್ಪಷ್ಟವಾಗಿ ತಲುಪಿಸುತ್ತವೆ.

Valentines Day Ideas

ಸರ್ಪ್ರೈಸ್ ಡೇಟ್

ಸಾಧಾರಣವಾಗಿ ಡಿನ್ನರ್‌ಗೆ ಹೋಗುವುದಕ್ಕಿಂತ, ಸ್ವಲ್ಪ ಕ್ರಿಯೇಟಿವ್ ಆಗಿ ಯೋಚಿಸಿ. ಮನೆಯಲ್ಲೇ ಕ್ಯಾಂಡಲ್ ಲೈಟ್ ಡಿನ್ನರ್ ವ್ಯವಸ್ಥೆ ಮಾಡಿ. ಸೂರ್ಯಾಸ್ತ ನೋಡುವ ನೆಚ್ಚಿನ ಸ್ಥಳಕ್ಕೆ ಸಣ್ಣ ಟ್ರಿಪ್ ಹೋಗಿ, ಇಬ್ಬರಿಗೂ ಇಷ್ಟವಾದ ಸಿನಿಮಾವನ್ನು ರಾತ್ರಿ ವೀಕ್ಷಿಸಿ, ಸರ್ಪ್ರೈಸ್ ಅಂಶ ಇದ್ದರೆ ಈ ದಿನದ ನೆನಪು ಇನ್ನಷ್ಟು ವಿಶೇಷವಾಗುತ್ತದೆ.

ಸಮಯವೇ ದೊಡ್ಡ ಉಡುಗೊರೆ

ಈ ಬ್ಯುಸಿ ಜೀವನದಲ್ಲಿ ಕೆಲವೊಮ್ಮೆ ಒಬ್ಬರೊಂದಿಗೆ ಒಬ್ಬರು ಸಮಯ ಕಳೆಯುವುದು ದೊಡ್ಡ ಉಡುಗೊರೆಯೇ ಆಗಿರುತ್ತದೆ. ಮೊಬೈಲ್, ಸೋಶಿಯಲ್ ಮೀಡಿಯಾವನ್ನು ಬದಿಗಿಟ್ಟು, ಮನಸಾರೆ ಮಾತನಾಡಿ. ಭವಿಷ್ಯದ ಕನಸುಗಳ ಬಗ್ಗೆ ಚರ್ಚಿಸಿ. ಹಳೆಯ ನೆನಪುಗಳನ್ನು ಹಂಚಿಕೊಳ್ಳುವುದು, ಒಬ್ಬರನ್ನೊಬ್ಬರು ಮೆಚ್ಚಿಕೊಳ್ಳುವುದು ಇವು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ.

ಗೆಳೆಯರು ಮತ್ತು ಕುಟುಂಬದೊಂದಿಗೆ ಆಚರಣೆ

ಈ ವಾಲೆಂಟೈನ್ಸ್ ಡೇ ಎಂದರೆ ಕೇವಲ ಪ್ರೇಮಿಗಳ ದಿನವಲ್ಲ. ಸ್ನೇಹಿತರು, ಪೋಷಕರು, ಸಹೋದರರು-ಸಹೋದರಿಯರಿಗೂ ನಿಮ್ಮ ಕಾಳಜಿ ಮತ್ತು ಪ್ರೀತಿ ತೋರಿಸಬಹುದು. ಅವರಿಗೆ "ಧನ್ಯವಾದ" ಸಂದೇಶ ಕಳುಹಿಸುವುದು, ಚಿಕ್ಕ ಉಡುಗೊರೆ ನೀಡುವುದು, ಕುಟುಂಬದೊಂದಿಗೆ ವಿಶೇಷ ಊಟದ ವ್ಯವಸ್ಥೆ ಮಾಡಿ. ಏಕೆಂದರೆ ಪ್ರೀತಿ ಎಲ್ಲ ಸಂಬಂಧಗಳ ಮೂಲ.

ಸಮಾಜಮುಖಿ ಆಚರಣೆ

ಪ್ರೀತಿಯನ್ನು ಕೇವಲ ಇಬ್ಬರ ಮಧ್ಯೆ ಸೀಮಿತಗೊಳಿಸದೆ, ಸಮಾಜದೊಂದಿಗೆ ಹಂಚಿಕೊಳ್ಳಬಹುದು. ಅನಾಥಾಶ್ರಮ ಅಥವಾ ವೃದ್ಧಾಶ್ರಮದಲ್ಲಿ ಸಮಯ ಕಳೆಯುವುದು, ಅಗತ್ಯವಿರುವವರಿಗೆ ಸಹಾಯ ಮಾಡುವುದು, ಸಣ್ಣ ದಾನ ಕಾರ್ಯಗಳು, ಈ ರೀತಿಯ ಆಚರಣೆ ಮನಸ್ಸಿಗೆ ಹೆಚ್ಚಿನ ತೃಪ್ತಿ ನೀಡುತ್ತದೆ.

Valentines Day Ideas

ಕ್ರಿಯೇಟಿವ್ ಪ್ಲ್ಯಾನಿಂಗ್‌

ಒಟ್ಟಿಗೆ ಹೊಸದನ್ನು ಕಲಿಯುವುದು ಅಥವಾ ಮಾಡುವುದರಿಂದ ನಿಮ್ಮ ಬಂಧ ಇನ್ನಷ್ಟು ಗಾಢವಾಗುತ್ತದೆ. ಒಟ್ಟಿಗೆ ಅಡುಗೆ ಮಾಡುವುದು, ಚಿತ್ರಕಲೆ ಅಥವಾ ಸಂಗೀತ ತರಗತಿಗೆ ಸೇರಿಕೊಳ್ಳುವುದು, ಸಣ್ಣ ಪ್ರವಾಸ ಯೋಜನೆ, ಹೊಸ ಅನುಭವಗಳು ಹೊಸ ನೆನಪುಗಳನ್ನು ಸೃಷ್ಟಿಸುತ್ತವೆ.

ಪ್ರೇಮಿಗಳ ದಿನದ ಸಾರ್ಥಕತೆ ದುಬಾರಿ ಉಡುಗೊರೆಗಳಲ್ಲಿ ಇಲ್ಲ. ನಿಜವಾದ ಪ್ರೀತಿ, ಗೌರವ ಮತ್ತು ಅರ್ಥಪೂರ್ಣ ಸಮಯದಲ್ಲಿದೆ. ಪ್ರೀತಿಯನ್ನು ವ್ಯಕ್ತಪಡಿಸಲು ದೊಡ್ಡ ಕಾರ್ಯಕ್ರಮಗಳ ಅಗತ್ಯವಿಲ್ಲ. ಹೃದಯದಿಂದ ಬಂದ ಸಣ್ಣ ಪ್ರಯತ್ನವೂ ಸಂಬಂಧವನ್ನು ಸದೃಢಗೊಳಿಸುತ್ತದೆ. ಈ ಫೆಬ್ರವರಿ 14ರಂದು ನಿಮ್ಮ ಪ್ರೀತಿಪಾತ್ರರಿಗೆ "ನೀವು ನನಗೆ ಮಹತ್ವವಾದವರು" ಎಂದು ಮನಪೂರ್ವಕವಾಗಿ ತಿಳಿಸಿ. ಅದೇ ಅತ್ಯುತ್ತಮ ಆಚರಣೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+