Get Updates
Get notified of breaking news, exclusive insights, and must-see stories!

Valentine’s Day: ನಿಮ್ಮ ಸಂಗಾತಿಯೊಂದಿಗೆ ಪ್ರೇಮಿಗಳ ದಿನ ಆಚರಿಸಲು ಇಲ್ಲಿವೆ ಅತ್ಯುತ್ತಮ ಸ್ಥಳಗಳು

ಈ ಪ್ರೇಮಿಗಳ ದಿನದಂದು ಬೆಂಗಳೂರಿನಲ್ಲಿ ಯಾವ ಸ್ಥಳಕ್ಕೆ ಹೋಗಬೇಕು, ಎಲ್ಲಿ ಆಚರಣೆ ಮಾಡಬೇಕು ಎಂಬ ಗೊಂದಲವಿದ್ದರೇ ಇಲ್ಲಿದೆ ಉತ್ತರ.

ಬೆಂಗಳೂರು, ಫೆಬ್ರವರಿ. 13: ಮಂಗಳವಾರ ವ್ಯಾಲೆಂಟೈನ್ಸ್ ಡೇ. ಪ್ರೇಮಿಗಳಿಗೆ ಪ್ರತಿ ದಿನವು ಪ್ರೇಮಿಗಳ ದಿನವೇ. ಆದರೂ ಈ ದಿನಕ್ಕೆ ಒಂದು ವಿಶೇಷ ಮಹತ್ವವಿದೆ. ಈ ದಿನಕ್ಕಾಗಿ ಪ್ರೇಮಿಗಳು ವರ್ಷಪೂರ್ತಿ ಕಾಯುತ್ತಾರೆ. ಈ ಸ್ಪೆಷಲ್ ದಿನವನ್ನು ಮತ್ತಷ್ಟು ವಿಶೇಷವಾಗಿಸಲು, ಉತ್ತಮ ಸ್ಥಳಗಳ ಹುಡುಕಾಟದಲ್ಲಿರುವ ಬೆಂಗಳೂರಿಗರಿಗಾಗಿ ಇಲ್ಲಿವೆ ಕೆಲವು ಮಾಹಿತಿಗಳು.

ಕ್ಯಾಂಡಲ್‌ಲೈಟ್ ಡಿನ್ನರ್ ಮಾಡುತ್ತಾ ತನ್ನ ಸಂಗಾತಿಯ ಕೈಹಿಡಿದು ಪ್ರೇಮ ನಿವೇದನೆ ಮಾಡಿಕೊಳ್ಳುವ ರೋಮ್ಯಾಂಟಿಕ್ ಸ್ಥಳಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

*ಸೆಟಾ* : ನಿಮ್ಮ ಪ್ರೀತಿಪಾತ್ರರನ್ನು ಸಂಜೆಯ ಊಟಕ್ಕೆ ಕರೆದುಕೊಂಡು ಹೋಗಲು ಉತ್ತಮ ಸ್ಥಳ. ಇಝಕಯಾದ ಊಟವನ್ನು ಸವಿಯತ್ತಾ, ಈ ಜಪಾನೀಸ್ ಬಾರ್‌ನಲ್ಲಿ ನೀವು ದಿನವನ್ನು ಆಚರಿಸಬಹುದು. ನೀವು ಖಾಸಗಿ ಕ್ಯಾಬಾನಾದಲ್ಲಿ ಕುಳಿತುಕೊಂಡು, ರೊಮ್ಯಾಂಟಿಕ್ ಅಲಂಕಾರ ಮತ್ತು ಕ್ಯಾಂಡಲ್‌ಲೈಟ್‌ನ ಮಧ್ಯೆ ಹೊಳೆಯುವ ವೈನ್ ಬಾಟಲಿಯೊಂದಿಗೆ ಸಂಗಾತಿಯನ್ನು ಖುಷಿ ಪಡಿಸಬಹುದು. ಚಲ್ಲಘಟ್ಟದ ಹಿಲ್ಟನ್ ಬೆಂಗಳೂರು ರಾಯಭಾರ ಕಚೇರಿ ಗಾಲ್ಫ್ ಲಿಂಕ್ಸ್‌ನಲ್ಲಿರುವ ಇಲ್ಲಿ ಪ್ರತಿ ಜೋಡಿಗೆ 11,000 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಇನ್ನು ಉತ್ತಮ ಸೇವೆ ಬೇಕಿದ್ದರು ಹೆಚ್ಚು ಪಾವತಿಸಬಹುದು.

Valentine’s Day 2023: Here some best spot in Bengaluru to celebrate Valentine’s Day

*ಬೆಂಗಳೂರು ಬ್ರಾಸ್ಸೆರಿ* : ನಿಂಬು ಪಾಪ್ಡಿ ಪನೀರ್, ಗ್ರಿಲ್ಡ್ ಫಿಶ್ ಸ್ಟೀಕ್ಸ್ ಮತ್ತು ಸ್ಟ್ರಾಬೆರಿ ಮಸ್ಕಾರ್ಪೋನ್ ಡಿಲೈಟ್ ಅನ್ನು ಒಳಗೊಂಡಿರುವ ವಿಶೇಷ ಮೆನುವಿನೊಂದಿಗೆ ಓಪನ್ ಸ್ಕೈ ಕೆಳಗೆ ಕೊಳದ ಬಳಿ ತನ್ನ ಸಂಗಾತಿಯ ಹೆಗಲಿಗೆ ತಲೆ ಒರಗಿಸಿ ಸಂಜೆಯನ್ನು ಕಳೆಯಬಹದು. ವ್ಯಾಲೆಂಟೈನ್ಸ್ ಡಿನ್ನರ್ ಬಫೆಯ ಬೆಲೆಗಳು ಪ್ರತಿ ವ್ಯಕ್ತಿಗೆ 1,500 ರೂಪಾಯಿಯಿಂದ ಪ್ರಾರಂಭವಾಗುತ್ತವೆ. ಆದರೆ ಐದು-ಕೋರ್ಸ್ ಮೆನು ಪ್ರತಿ ಜೋಡಿಗೆ 5,000 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಇದು ಎಂಜಿ ರಸ್ತೆ ಹಯಾಟ್ ಸೆಂಟ್ರಿಕ್ ಎಂಜಿ ರಸ್ತೆ ಮತ್ತು ಓಲ್ಡ್ ಮದ್ರಾಸ್ ರಸ್ತೆ, ಹಲಸೂರು ಬಳಿ ಇವೆ.

*ಪರ್ಷಿಯನ್ ಟೆರೇಸ್* : ನಕ್ಷತ್ರಗಳ ಅಡಿಯಲ್ಲಿ ಕ್ಯಾಂಡಲ್ಲೈಟ್ ಡಿನ್ನರ್ ಅಥವಾ ಪರ್ಷಿಯನ್ ಟೆರೇಸ್ನಲ್ಲಿ ವಿಶೇಷವಾಗಿ ಅಲಂಕರಿಸಿದ ಕ್ಯಾಬಾನಾದಲ್ಲಿ ಕುಳಿತು ಪ್ರೇಂಇಗಳ ದಿನವನ್ನು ಆಚರಿಸಬಹುದು. ನಕ್ಷತ್ರಗಳ ಕೆಳಗೆ ಊಟಕ್ಕೆ 8,000 ಮತ್ತು ಖಾಸಗಿ ಕ್ಯಾಬಾನಾದಲ್ಲಿ ಊಟಕ್ಕೆ 12,000 ರೂಪಾಯಿಯಿಂದ ಆರಂಭವಾಗುತ್ತದೆ. ಪರ್ಷಿಯನ್ ಟೆರೇಸ್ ಕೆಫೆ, ಶೆರಟನ್ ಗ್ರ್ಯಾಂಡ್ ಬೆಂಗಳೂರು ಮತ್ತು ರಾಜಾಜಿನಗರದ ಡಾ ರಾಜ್‌ಕುಮಾರ್ ರಸ್ತೆಯಲ್ಲಿವೆ.

*ಗಾವ್ಕಿ ಗೂಸ್* : ಮುನಿಯಪ್ಪ ಲೇಔಟ್‌ನ ವಿಂಡ್ ಟನಲ್ ರಸ್ತೆಯಲ್ಲಿರು ಗಾವ್ಕಿ ಗೂಸ್ ಆಕರ್ಷಕ ಉಪಾಹಾರ ಗೃಹವಾಗಿದ್ದು, ನಿಮ್ ಸಂಗಾತಿಯಿಂದಿಗೆ ರೊಮ್ಯಾಂಟಿಕ್ ಮೆಲೋಡಿಗಳಿಗೆ ನಿಧಾನವಾಗಿ ನೃತ್ಯ ಮಾಡುತ್ತಾ ದಿನವನ್ನು ಆಚರಿಸಬಹುದು. ಸಂಗೀತಗಾರರ ಫೆರ್ನಾಂಡಿಸ್ ಕುಟುಂಬದ ಜಾನ್ ಫೆರ್ನಾಂಡಿಸ್ ಅವರ ಸಂಗೀತ ಮತ್ತು ಅತಿಥಿಗಳಿಗೆ ರಾತ್ರಿ ನೃತ್ಯ ಮಾಡಲು ಡ್ಯಾನ್ಸ್ ಫ್ಲೋರ್ ಲಭ್ಯವಿರುತ್ತದೆ. ಇಲ್ಲಿ ಪ್ರತಿ ವ್ಯಕ್ತಿಗೆ 1,699 ರೂಪಾಯಿ ಟಿಕೆಟ್ ಇದೆ.

Valentine’s Day 2023: Here some best spot in Bengaluru to celebrate Valentine’s Day

*ಡೇಸಿ* : ಎಂಜಿ ರಸ್ತೆಯಲ್ಲಿರುವ ಎಲ್ಲಾ ದಿನದ ಕ್ಯಾಶುಯಲ್ ಬಾರ್ ಆಗಿದ್ದು, ಈ ವ್ಯಾಲೆಂಟೈನ್ಸ್ ಡೇ ಆಚರಣೆಯಲ್ಲಿ ಪ್ರೇಮಕ್ಕೆ ಸಂಬಂಧಿಸಿದ ವಿಷಯಾಧಾರಿತ ಕಟ್-ಔಟ್‌ಗಳು ಮತ್ತು ರೊಮ್ಯಾಂಟಿಕ್ ಪ್ರೇಮಗೀತೆಗಳ ನಡುವೆ ನಿಮ್ಮ ನೆನಪುಗಳನ್ನು ಸೆರೆಹಿಡಿಯಬಹುದು. ವಿಶೇಷವಾಗಿ ರಚಿಸಲಾದ ಸಿಹಿತಿಂಡಿ ಮತ್ತು ಕಾಕ್ಟೈಲ್ ಮೆನುವನ್ನು ಆನಂದಿಸಬಹುದು. ಬೆಲೆಗಳು 370 ರೂಪಾಯಿಯಿಂದ ಆರಂಬವಾಗುತ್ತವೆ. ಜೊತೆಗೆ ತೆರಿಗೆ ಅನ್ವಯವಾಗುತ್ತದೆ.

*ಅಡ್ಡಾ 1522* : ಅಡ್ಡಾ 1522 ರಲ್ಲಿ ಗ್ಲೋ ವಿತ್ ದಿ ಫ್ಲೋ ಪಾರ್ಟಿ ನಡೆಯುತ್ತಿದೆ. ಬೆಳಗ್ಗೆ 11 ರಿಂದ ಮಧ್ಯಾಹ್ನ 12:30 ರವರೆಗೆ ನಡೆಯುವ ಈ ವಿಶಿಷ್ಟ ಆಚರಣೆಯಲ್ಲಿ ಭಾಗವಹಿಸಬಹುದು. ಸ್ಟಿಕರ್‌ಗಳಲ್ಲಿ ತಮ್ ಸಮಬಂಧಗಳನ್ನು ತಿಳಿಸುವ ಆಟವಾಗಿದೆ. ಹಸಿರು ಗ್ಲೋ ಸ್ಟಿಕ್ ಒಂಟಿಯಾಗಿರುವುದನ್ನು ಸೂಚಿಸುತ್ತದೆ, ಕೆಂಪು ಎಂದರೆ ಸಂಬಂಧದಲ್ಲಿರುವುದು ಮತ್ತು ಹಳದಿ ಎಂದರೆ ಸಂಕೀರ್ಣ ಸ್ಥಿತಿ ಹೀಗೆ ಹಲವು ಅರ್ಥಗಳನ್ನು ಸೂಚಿಸುವ ಸ್ಟಿಕ್‌ಗಳನ್ನು ಅಂಟಿಸಿ ಆಟವಾಡುವುದು. ಒಬ್ಬರಿಗೆ 199 ರೂಪಾಯಿ ಚಾರ್ಜ್ ಮಾಡಲಾಗುತ್ತದೆ.

ಇದರ ಜೊತೆಗೆ ಬೆಂಗಳೂರಿನ ಹಲವು ಪಬ್, ರೆಸ್ಟೋರೆಂಟ್‌ಗಳು ಪ್ರೇಮಿಗಳಿಗಾಗಿ ಹಲವು ವಿಶೇಷ ಕೊಡುಗೆ ನೀಡಿದ್ದು, ನಿಮ್ ದಿನವನ್ನು ಮತ್ತಷ್ಟು ಸಂಭ್ರಮದಿಂದ ಆಚರಣೆ ಮಾಡಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+