ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಜೈವಿಕ ಅಸ್ತ್ರ ಅಲ್ಲ: ಯುಎಸ್‌ಎ ಇಂಟೆಲಿಜೆನ್ಸ್ ವಿಭಾಗ ಸ್ಪಷ್ಟನೆ

|
Google Oneindia Kannada News

2019ರಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ಸಾಕಷ್ಟು ಅನುಮಾನಗಳು ಕೇಳಿ ಬಂದಿದ್ದವು. ನಿಜಕ್ಕೂ ಕೊರೊನಾ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿತಾ? ಅಥವಾ ಇದನ್ನು ಉದ್ದೇಶಪೂರ್ವಕವಾಗಿ ಲ್ಯಾಬ್‌ನಲ್ಲಿ ಸೃಷ್ಟಿ ಮಾಡಿ ಜೈವಿಕ ಅಸವಾಗಿ ಪ್ರಯೋಗಿಸಲಾಯಿತೇ? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿದ್ದವು.

ಇದೀಗ ಈ ಎಲ್ಲಾ ಪ್ರಶ್ನೆಗಳನ್ನು ಹುಡುಕಿಕೊಂಡು ಹೊರಟ ಅಮೆರಿಕಾದ ಡೈರೆಕ್ಟರ್ ಆ್ ನ್ಯಾಷನಲ್ ಇಂಟೆಲಿಜೆನ್ಸ್ ವಿಭಾಗವು (ಒಡಿಎನ್‌ಐ) ''ಕೊರೊನಾ ವೈರಸ್ ಮಾನವ ನಿರ್ಮಿತವಲ್ಲ, ಇದನ್ನು ಜೈವಿಕ ಅಸವಾಗಿ ಪ್ರಯೋಗ ಮಾಡಲಾಗಿಲ್ಲ,'' ಎಂದು ವರದಿ ಬಿಡುಗಡೆ ಮಾಡಿದೆ. ''ಚೀನಾದವರಿಗೆ ಈ ರೀತಿ ಜೈವಿಕ ಪ್ರಯೋಗ ಮಾಡಬೇಕೆಂಬ ಅರಿವು ಇದ್ದಂತಿಲ್ಲ. ಕೊರೊನಾ ವೈರಸ್ ಈ ರೀತಿ ಮನುಕುಲವನ್ನೇ ಕಾಡಬಹುದೆಂಬ ಸಣ್ಣ ಸುಳಿವು ಅವರಿಗೆ ಇರಲಿಲ್ಲ,'' ಎಂದು ಸ್ಪಷ್ಟಪಡಿಸಿದೆ.

ಅಮೆರಿಕಾದ ಡೈರೆಕ್ಟರ್ ಆಫ್ ನ್ಯಾಷನಲ್ ಇಂಟೆಲಿಜೆನ್ಸ್ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶವನ್ನು ಬಹಿರಂಗ ಮಾಡಲಾಗಿದೆ. ಕೊರೊನಾ ವೈರಸ್ ಕಾಣಿಸಿಕೊಳ್ಳುವವರೆಗೆ ಚೀನಾದವರಿಗೆ ಇದರ ಬಗ್ಗೆ ಯಾವುದೇ ಸುಳಿವು ಇರಲಿಲ್ಲ ಎಂದು ಘೋಷಣೆ ಮಾಡಿದೆ.

ವರದಿಯಲ್ಲಿ ಇದೊಂದು ಜೈವಿಕ ಅಸ್ತ್ರ ಅಲ್ಲ ಎಂದೇನೋ ಹೇಳಲಾಗಿದೆ. ಆದರೆ, ಇದು ಪ್ರಾಣಿಗಳಿಂದ ಮನುಷ್ಯರಿಗೆ ಬಂತಾ? ಅಥವಾ ವುಹಾನ್‌ನಲ್ಲಿರುವ ಇನ್ಸಿಟಿಟ್ಯೂಟ್ ಆಫ್ ವೈರಾಲಜಿಯಲ್ಲಿದ್ದ ವೈರಸ್ ಲೀಕ್ ಆಯಿತಾ? ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಚೀನಾ ವೈರಸ್‌ ವುಹಾನ್‌ ಲ್ಯಾಬ್‌ನಿಂದ ಬರುತ್ತಿದೆ ಎಂದು ನಾನು ಹೇಳಿದ್ದು ಸರಿ ಎಂದ ಟ್ರಂಪ್‌ಚೀನಾ ವೈರಸ್‌ ವುಹಾನ್‌ ಲ್ಯಾಬ್‌ನಿಂದ ಬರುತ್ತಿದೆ ಎಂದು ನಾನು ಹೇಳಿದ್ದು ಸರಿ ಎಂದ ಟ್ರಂಪ್‌

ಅಮೆರಿಕಾದ ನಾಲ್ಕು ಬೇರೆ ಬೇರೆ ಇಂಟೆಲಿಜೆನ್ಸ್ ಏಜೆನ್ಸಿಗಳು, 'ಪ್ರಾಣಿಗಳಿಂದ ಈ ವೈರಸ್ ಮನುಷ್ಯರಿಗೆ ಹರಡಿದೆ' ಎಂದು ಹೇಳಿದರೆ ಐದನೇ ಏಜೆನ್ಸಿ ಮಾತ್ರ 'ವುಹಾನ್ ಇನ್ಸಿಟಿಟ್ಯೂಟ್‌ನ ವ್ಯಕ್ತಿಯಲ್ಲಿ ಈ ವೈರಸ್ ಮೊದಲು ಕಾಣಿಸಿಕೊಂಡಿದೆ. ಹಾಗಾಗಿ ಲ್ಯಾಬಿನಿಂದಲೇ ವೈರಸ್ ಹರಡಿದೆ,'' ಎಂದಿದೆ. ಆದರೆ, ಖಡಾಖಂಡಿತಾವಾಗಿ ಹೀಗೆ ಆಗಿದೆ ಎಂಬುದನ್ನೂ ಕೂಡ ಏಜೆನ್ಸಿ ಹೇಳಿಯೂ ಹೇಳಿಲ್ಲ. (Reuters, AP)

ಯಾಕೆ ದೃಢವಾಗಿ ಯಾರೂ ಏನು ಹೇಳುತ್ತಿಲ್ಲ?

ಯಾಕೆ ದೃಢವಾಗಿ ಯಾರೂ ಏನು ಹೇಳುತ್ತಿಲ್ಲ?

ಇಷ್ಟೆಲ್ಲಾ ತನಿಖೆ, ಸಂಶೋಧನೆ ನಂತರವೂ ಯಾರು ಪೂರ್ತಿ ಆತ್ಮವಿಶ್ವಾಸ ಅಥವಾ ದೃಢವಾಗಿ ಹೀಗೆ ಆಗಿದೆ ಎಂದು ಹೇಳುತ್ತಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಟೆಲಿಜೆನ್ಸ್ ವಿಭಾಗದ ಹಿರಿಯ ಅಧಿಕಾರಿಯೊಬ್ಬರು, ''ವೈರಸ್ ಹುಟ್ಟಿನ ಬಗ್ಗೆ ಸಾರ್ವಜನಿಕರಿಗೆ ನಾವಿನ್ನೂ ಸ್ಪಷ್ಟವಾದ ಉತ್ತರ ಕೊಡಬೇಕಿತ್ತು. ಚೀನಾದಿಂದ ವೈರಸ್ ಬಂತು ಎಂಬ ಮಾಹಿತಿಯಷ್ಟೇ ನಮ್ಮ ಬಳಿ ಇದೆ. ಆದರೆ, ಹೇಗೆ ಬಂತು? ಎಲ್ಲಿಂದ ಬಂತು? ಇದರ ಮೂಲ ಯಾವುದು ಎಂಬ ಮಾಹಿತಿ ಕಂಡು ಹಿಡಿಯಲು ಪ್ರಯತ್ನಿಸಿದರೂ ಅದು ಲಭ್ಯವಾಗಲಿಲ್ಲ. ಇನ್ನೂ ಒಂದಷ್ಟು ದಿವಸ ತನಿಖೆ ಮಾಡಿ ಎರಡು ಮೂರು ವರದಿ ತಯಾರಿಸಿದರೂ ನಿಖರ ಉತ್ತರ ಸಿಗುವ ಭರವಸೆ ಇಲ್ಲ,'' ಎಂದಿದ್ದಾರೆ.

ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಅವರು, ಕಳೆದ ಆಗಸ್ಟ್‌ನಲ್ಲೇ 90 ದಿನದ ಇಂಟೆಲಿಜೆನ್ಸ್ ವಿಭಾಗದ ಅಧ್ಯಯನದ ವರದಿ ಕೇಳಿದ್ದರು. ಆ ಮೂಲಕ ವರದಿ ಸಾರ ಬಂದ ಮೇಲೆ ವೈರಸ್ ಮೂಲ ಎಲ್ಲಿಂದ ಬಂತು ಎಂದು ಸಾರ್ವಜನಿಕರಿಗೆ ಘೋಷಣೆ ಮಾಡಲು ಬಯಸಿದ್ದರು. ವುಹಾನ್ ಲ್ಯಾಬಿನಿಂದಲ್ಲೇ ಕೊರೊನಾ ಈ ವೈರಸ್ ಬಂದಿದೆ ಎಂಬ ವಿಷಯ ಎಲ್ಲೆಡೆ ಕೇಳಿ ಬಂದಿದ್ದು ಇದಕ್ಕೆ ಕಾರಣವಾಗಿತ್ತು.

ಇದೊಂದು ಜೈವಿಕ ಪ್ರಯೋಗ ಎನ್ನಲಾಗಿತ್ತು

ಇದೊಂದು ಜೈವಿಕ ಪ್ರಯೋಗ ಎನ್ನಲಾಗಿತ್ತು

ಈ ಹಿಂದಿನ ಅಮೆರಿಕಾದ ಅಧ್ಯಕ್ಷರಾದ ಡೋನಾಲ್ಡ್ ಟ್ರಂಪ್ ಅವರು ಬಳಿ ಇದ್ದ ಮಾಹಿತಿ ಪ್ರಕಾರ ಇದೊಂದು ಜೈವಿಕ ಪ್ರಯೋಗ ಎಂದುಕೊಂಡಿದ್ದರು. ಅಲ್ಲದೆ, ಇದರಲ್ಲಿ ರಾಜಕೀಯ ಲೇಪನ ಮಾಡಲಾಗುತ್ತಿದೆ ಎಂದೇ ಭಾವಿಸಲಾಗಿತ್ತುಘಿ. ಆದರೆ, ಆನಂತರ ಬಂದ ಜೋ ಬೈಡನ್ ಅವರಿಗೆ ಇಂಟೆಲಿಜೆನ್ಸ್ ವಿಭಾಗ ವರದಿ ತಲುಪಿಸಿತು. ಆ ವರದಿ ಪ್ರಕಾರ, ವುಹಾನ್‌ನ ಇನ್ಸಿಟಿಟ್ಯೂಟ್ ಆಫ್ ವೈರಾಲಜಿಯೂ ನಾನಾ ರೀತಿಯ ವೈರಸ್ ಹರಡಿಸುವ ಒಂದು ಸಂಸ್ಥೆ ಎಂಬುದೇನೋ ನಿಜ.

ಚೀನಾದ ಪ್ರಯೋಗಾಲಯದಿಂದಲೇ ಕೊರೊನಾ ವೈರಸ್ ಸೋರಿಕೆ: ಬ್ರಿಟನ್ಆದರೆ, ಕೊರೊನಾ ವೈರಸ್ ಅಲ್ಲಿಂದಲೇ ಬಂತಾ ಎಂಬುದಕ್ಕೆ ಮಾತ್ರ ಉತ್ತರ ಸಿಕ್ಕಿಲ್ಲ. ಕೊರೊನಾ ವೈರಸ್ ತರ ಬೇರೆ ವೈರಸ್ (ಸಾರ್ಸ್) ಉತ್ಪತಿ ಮಾಡಿರುವುದಕ್ಕೆ ನಮ್ಮ ಬಳಿ ಆಧಾರ ಇದೆ. ಆದರೆ, ಇದಕ್ಕೆ ಮಾತ್ರ ಅಂತಹ ಸಾಕ್ಷ್ಯಿಗಳು ಲಭ್ಯವಾಗಿಲ್ಲ ಎಂದು ತಿಳಿಸಿದೆ. ಮುಂಚೆ ಈ ಪ್ರಯೋಗಾಲಯದಲ್ಲಿ ಸಾರ್ಸ್‌ನಂತಹ ವೈರಸ್ ಉತ್ಪತಿ ಮಾಡಿದೆ ಎಂಬ ಒಂದೇ ಕಾರಣಕ್ಕೆ ಕೊರೊನಾ ಕೂಡ ಇಲ್ಲಿಂದಲೇ ಮಾಡಲಾಗಿದೆ ಎಂದು ಹೇಳಲಾಗದು ಎಂದೂ ಸ್ಪಷ್ಟನೆ ನೀಡಿದೆ.

''ವುಹಾನ್ ಲ್ಯಾಬ್‌ನಲ್ಲಿ ಕೊರೊನಾ ವೈರಸ್ ಹುಟ್ಟುಹಾಕಿದ್ದಾರೆ ಎಂಬುದಕ್ಕೆ ಯಾವುದೇ ಆಧಾರ ಇಲ್ಲಘಿ ನಿಜ. ಆದರೆ, ಕೊರೊನಾ ವೈರಸ್ ರೀತಿಯ, ಅದರಷ್ಟು ಪ್ರಭಾವ ಇಲ್ಲದಿರುವ ಮತ್ತೊಂದು ವೈರಸ್ ಅನ್ನು ಜೆನೆಟಿಕ್ ಎಂಜಿನಿಯರ್ ತಂತ್ರದಿಂದ ಹುಟ್ಟು ಹಾಕಬಹುದು,'' ಎಂಬುದನ್ನು ಲೇಖನವೊಂದು ತಿಳಿಸುತ್ತದೆ.

2017ರಲ್ಲಿ ವುಹಾನ್‌ನಲ್ಲೊಂದು ಪ್ರಯೋಗ

2017ರಲ್ಲಿ ವುಹಾನ್‌ನಲ್ಲೊಂದು ಪ್ರಯೋಗ

2017ರಲ್ಲಿ ವುಹಾನ್‌ನಲ್ಲೊಂದು ಪ್ರಯೋಗ ಮಾಡಲಾಗಿತ್ತು. ಆ ಲ್ಯಾಬ್‌ನಲ್ಲಿದ್ದ ವಿದ್ಯಾರ್ಥಿ ಹೇಳುವ ಪ್ರಕಾರ, ಯಾವುದಾದರೂ ಒಂದು ಪ್ರಾಣಿಯ ಜಿನ್ಸ್‌ನ ರಿವರ್ಸ್ ಪ್ರೋಸೆಸ್ ಅನ್ನು ವುಹಾನ್‌ನಲ್ಲಿ ಮಾಡಲಾಗುತ್ತಿತ್ತು. ಹೀಗೆ ಮಾಡುವಾಗಲೂ ಕೊರೊನಾ ವೈರಸ್ ಹುಟ್ಟಿಕೊಂಡಿಲ್ಲ,'' ಎಂದು ತಿಳಿಸಿದ್ದಾನೆ.

2019ರ ನವೆಂಬರ್‌ನಲ್ಲಿ ಶ್ವಾಸಕೋಶ ಸಂಬಂಧಿ ಸಮಸ್ಯೆ ಹಲವರಲ್ಲಿ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಪಟ್ಟ ಸಂಶೋಧನೆ ವುಹಾನ್‌ನಲ್ಲಿ ನಡೆದಿತ್ತು. ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂಬ ಸಂಶೋಧನೆ ನಡೆಯುತ್ತಿತ್ತು. ಆದರೆ, ಇದೊಂದು ಸಾಂಕ್ರಾಮಿಕ ರೀತಿ ಹಬ್ಬುತ್ತದೆ ಎಂಬ ಕಲ್ಪನೆ ನಮಗಿರಲಿಲ್ಲ ಎಂದಿದ್ದಾನೆ.

ಕೊರೊನಾ ಹುಟ್ಟು: ವಿಶ್ವ ಆರೋಗ್ಯ ಸಂಸ್ಥೆ ತನಿಖೆ ಕುರಿತು ತಜ್ಞರ ಅನುಮಾನ
ತನಿಖೆಗೆ ಚೀನಾ ಸಹಕಾರ ನೀಡಿಲ್ಲ

ತನಿಖೆಗೆ ಚೀನಾ ಸಹಕಾರ ನೀಡಿಲ್ಲ

ಕೊರೊನಾ ಮೂಲ ಪತ್ತೆ ಹಚ್ಚುವ ತನಿಖೆಗೆ ಸಂಬಂಧಪಟ್ಟಂತೆ ಜಗತ್ತಿನ ಯಾವುದೇ ಇಂಟೆಲಿಜೆನ್ಸ್ ಏಜೆನ್ಸಿ ಬಂದರೂ ಚೀನಾ ಅವರಿಗೆ ಸಹಕಾರ ನೀಡಿಲ್ಲ. ಕೇವಲ ಪ್ರಾಥಮಿಕ ಮಾಹಿತಿಯನ್ನಷ್ಟೇ ಅಧಿಕಾರಿಗಳಿಗೆ ಕೊಟ್ಟಿದ್ದಾರೆ ವಿನಃ ಬೇರೆ ವಿಜ್ಞಾನಿಗಳಿಗೆ ಲ್ಯಾಬ್‌ನಲ್ಲಿ ಬಂದು ಸಂಶೋಧನೆ ಮಾಡಲು ಯಾವುದೇ ಸಹಕಾರ ಕೊಟ್ಟಿಲ್ಲ. ಚೀನಾ ಇವತ್ತಿಗೂ ವುಹಾನ್ ಅನ್ನು ಚಕ್ರವ್ಯೂಹದಂತೆ ಇಟ್ಟಿದೆ. ಯಾರನ್ನೂ ಕೂಡ ಲ್ಯಾಬ್ ಒಳಗೆ ಬಿಟ್ಟಿಲ್ಲ. ಯಾರಿಗೂ ಸರಿಯಾದ ಮಾಹಿತಿ ಕೊಟ್ಟಿಲ್ಲ. ''ಲ್ಯಾಬ್ ಒಳಗೆ ಬಿಟ್ಟರೆ ವೈರಸ್ ಇನ್ಪೆಕ್ಷನ್ ಆಗಬಹುದು' ಎಂಬ ಕಾರಣವನ್ನು ಚೀನಾ ಅಧಿಕಾರಿಗಳು ಕೊಡುತ್ತಿದ್ದಾರೆ. ಆದರೆ, ಒಳಗೆ ಯಾಕೆ ಬಿಡುತ್ತಿಲ್ಲ? ಏನಿದೆ? ಇವತ್ತಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಅದೇನೇ ಇದ್ದರೂ ಕೋವಿಡ್ 5 ಮಿಲಿಯನ್ ಜನರನ್ನು ಪ್ರಪಂಚದಾದ್ಯಂತ ಸಾಯುವಂತೆ ಮಾಡಿದೆ.

English summary
A report released by the Office of the US Director of National Intelligence (ODNI) said Chinese officials did not have foreknowledge of the virus before the outbreak occurred.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X