ಬ್ಯಾಂಕ್ ಸ್ಲಿಪ್‌ನಲ್ಲಿ ರಾಶಿಯನ್ನು ಬರೆದ ವ್ಯಕ್ತಿ: ಕ್ಯಾಷಿಯರ್ ಕೆಂಡಾಮಂಡಲ
ಯುಪಿಯ ಮೊರಾದಾಬಾದ್‌ನಲ್ಲಿರುವ ಬ್ಯಾಂಕ್‌ನ ಶಾಖೆಯಲ್ಲಿ ಹಣ ಜಮಾ ಮಾಡಲು ಹೋದ ವ್ಯಕ್ತಿಯ ಠೇವಣಿ ಸ್ಲಿಪ್‌ನಲ್ಲಿ ಬರೆದಿರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿದೆ. ಈ ಸ್ಲಿಪ್ ಇಂಡಿಯನ್ ಬ್ಯಾಂಕ್‌ನದ್ದು. ಇದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು ಜನ ಹೊಟ್ಟೆ ಹುಣ್ಣಾಗುವಷ್ಟು ನಗಾಡಿದ್ದಾರೆ. ವಾಸ್ತವವಾಗಿ ವ್ಯಕ್ತಿಯು ಇಂಡಿಯನ್ ಬ್ಯಾಂಕ್‌ನ ಮೊರಾದಾಬಾದ್ ಶಾಖೆಯಲ್ಲಿ ಒಂದು ಸಾವಿರ ರೂಪಾಯಿಗಳನ್ನು ಠೇವಣಿ ಮಾಡಬೇಕಾಗಿತ್ತು. ಠೇವಣಿ ಚೀಟಿಯಲ್ಲಿ ವ್ಯಕ್ತಿ ಬರೆದ ಪದ ತುಂಬಾ ಚರ್ಚೆಯಲ್ಲಿದೆ.
ಇಂಡಿಯನ್ ಬ್ಯಾಂಕ್ (ಹಿಂದಿನ ಅಲಹಾಬಾದ್ ಬ್ಯಾಂಕ್) ಖಾತೆಗೆ ಹಣವನ್ನು ಜಮಾ ಮಾಡಲು ವ್ಯಕ್ತಿಯೊಬ್ಬರು ಮೊರಾದಾಬಾದ್ ಶಾಖೆಗೆ ಹೋದರು. ಠೇವಣಿ ಸ್ಲಿಪ್ ಮತ್ತು ಹಣದೊಂದಿಗೆ ಕೌಂಟರ್‌ಗೆ ಬಂದಾಗ ಬ್ಯಾಂಕ್ ಸಿಬ್ಬಂದಿ ಸ್ಲಿಪ್ ಅನ್ನು ನೋಡಿ ಅದನ್ನು ಸರಿಪಡಿಸುವಂತೆ ಹೇಳಿದರು. ಅದೇ ವ್ಯಕ್ತಿ ತನ್ನ ತಿಳುವಳಿಕೆಗೆ ತಕ್ಕಂತೆ ಸ್ಲಿಪ್ ಅನ್ನು ಸರಿಯಾಗಿ ತುಂಬಿದ್ದಾಗಿ ಹೇಳಿದ್ದಾರೆ.
कितने तेजस्वी लोग हैं।
— Anoop Kotwal🇮🇳 (@NationFirst78) April 16, 2022
Dedicated to @singhkhushboo61
(तुला राशि)😜😜😜 pic.twitter.com/sstwLZfAc6
ಪೇ ಸ್ಲಿಪ್ ನೋಡಿದಾಗ ವ್ಯಕ್ತಿಯು ಬ್ಯಾಂಕ್ ಖಾತೆಗೆ 1,000 ರೂ.ಗಳನ್ನು ಜಮಾ ಮಾಡಲು ಬಯಸಿದ್ದರು. ಆದರೆ ಠೇವಣಿ ಸ್ಲಿಪ್‌ನಲ್ಲಿ ಮೊತ್ತದ ಕಾಲಂನಲ್ಲಿ 'ತುಲಾ' ಎಂದು ಬರೆದಿದ್ದರು. ಈ ಠೇವಣಿ ಸ್ಲಿಪ್ ಏಪ್ರಿಲ್ 12 ರದ್ದು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಾಸ್ತವವಾಗಿ, ಠೇವಣಿ ಮಾಡಬೇಕಾದ ಮೊತ್ತವನ್ನು ಚೀಟಿಯಲ್ಲಿ ತುಂಬಬೇಕಾದರೆ, ವ್ಯಕ್ತಿ ತನ್ನ ರಾಶಿಯನ್ನು ಅಂದರೆ ಅವನ ಜನ್ಮ ರಾಶಿಯನ್ನು ಬರೆದಿದ್ದಾನೆ. ಈ ವೇಳೆ ಯಾರೋ ಒಬ್ಬರು ಚೀಟಿಯ ಚಿತ್ರ ತೆಗೆದು ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ನಂತರ ಅದು ಹೆಚ್ಚು ವೈರಲ್ ಆಗಿದೆ.












Click it and Unblock the Notifications