ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನುಷ್ಯರ ಪ್ರಾಣ ತೆಗೆಯಲು ‘ಯಮಧರ್ಮ’ ಗಾಳಿ ಮೂಲಕ ಬರುತ್ತಾನಂತೆ..!

|
Google Oneindia Kannada News

ಈಗಾಗಲೇ ಇಡೀ ಜಗತ್ತು ಕೊರೊನಾ ಕೂಪಕ್ಕೆ ಬಿದ್ದು ನರಳುತ್ತಿದೆ, ಮಾಹಾಮಾರಿಯಿಂದ ಬಚಾವ್ ಆಗಲು ಸರ್ಕಸ್ ಮಾಡುತ್ತಿದೆ. ಇಂತಹ ಭಯಾನಕ ಸ್ಥಿತಿಯಲ್ಲೇ ವಿಜ್ಞಾನಿಗಳು ಮತ್ತೊಂದು ವಾರ್ನಿಂಗ್ ನೀಡಿದ್ದಾರೆ. ಕೆಲ ಭೀಕರ ಬ್ಯಾಕ್ಟೀರಿಯಾಗಳು ಧೂಳಿನ ಕಣಗಳ ಮೂಲಕ ಒಂದು ಖಂಡದಿಂದ (Continent) ಇನ್ನೊಂದು ಖಂಡಕ್ಕೆ ಪ್ರಯಾಣ ಮಾಡುತ್ತವೆ ಎಂಬುದನ್ನು ಕಂಡುಕೊಂಡಿದ್ದಾರೆ. ಇದು ಇಷ್ಟಕ್ಕೇ ಸೀಮಿತವಾಗಿದ್ದರೆ ಬೇರೆ ಏನೂ ವಿಶೇಷತೆ ಇರುತ್ತಿರಲಿಲ್ಲ.

ಮನುಷ್ಯರ ಮೆದುಳು ತಿನ್ನುವ ಹುಳು ದಾಳಿ ಮಾಡುತ್ತಿದೆ ಹುಷಾರ್..! ಮನುಷ್ಯರ ಮೆದುಳು ತಿನ್ನುವ ಹುಳು ದಾಳಿ ಮಾಡುತ್ತಿದೆ ಹುಷಾರ್..!

ಆದರೆ ಧೂಳಿನ ಕಣದಲ್ಲಿ ಸೇರಿಕೊಂಡು ವಾತಾವರಣದಲ್ಲಿ ಪ್ರಯಾಣಿಸುವ ಸೂಕ್ಷ್ಮಾಣು ಜೀವಿಗಳು ಮನುಷ್ಯರು, ಪ್ರಾಣಿಗಳ ಆರೋಗ್ಯದ ಮೇಲೆ ಭಾರಿ ಪ್ರಭಾವ ಬೀರಲಿವೆ ಎನ್ನಲಾಗಿದೆ. ಅಟ್ಮಾಸ್ಪಿಯರಿಕ್ ರಿಸರ್ಚ್‌ ಜರ್ನಲ್‌ನಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ. ಮನುಷ್ಯರು ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ಭಾರಿ ಪ್ರಭಾವ ಬೀರುವ ಜೊತೆ ಹವಾಮಾನ ಹಾಗೂ ಪರಿಸರ ವ್ಯವಸ್ಥೆಯಲ್ಲಿ ಏರುಪೇರು ಉಂಟಾಗಲು ಸೂಕ್ಷ್ಮಾಣು ಜೀವಿಗಳು ಕಾರಣವಾಗುತ್ತಿವೆ.

 ಜಗತ್ತಿನಾದ್ಯಂತ ಮತ್ತೆ ತುರ್ತು ಪರಿಸ್ಥಿತಿ, ಕಾರಣ ಆಘಾತಕಾರಿ! ಜಗತ್ತಿನಾದ್ಯಂತ ಮತ್ತೆ ತುರ್ತು ಪರಿಸ್ಥಿತಿ, ಕಾರಣ ಆಘಾತಕಾರಿ!

ಇನ್ನು ಅಧ್ಯಯನದಲ್ಲಿ ವಾಯುಮಂಡಲದ ಕಣಗಳ ಮೂಲಕ 'ಐಬೆರುಲೈಟ್ಸ್‌' ಎನ್ನಲಾಗುವ ಸೂಕ್ಷ್ಮಾಣುಗಳು, ಹೇಗೆ ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ಟ್ರಾವೆಲ್ ಮಾಡುತ್ತವೆ ಎಂಬುದರ ಉದಾಹರಣೆಯನ್ನೂ ನೀಡಲಾಗಿದೆ.

‘ಕೊರೊನಾ’ ಬರ್ತ್‌ಡೇ ದಿನವೇ ಶಾಕ್..!

‘ಕೊರೊನಾ’ ಬರ್ತ್‌ಡೇ ದಿನವೇ ಶಾಕ್..!

ಕೊರೊನಾ ವೈರಸ್ ಹುಟ್ಟುಹಬ್ಬ ಆಚರಿಸಿಕೊಂಡಿದೆ. ಈ ತಿಂಗಳಿಗೆ ಕೊರೊನಾ ಭೂಮಿ ಮೇಲೆ ಹುಟ್ಟಿ, ಇಡೀ ಮನುಕುಲ ನರಳುವಂತೆ ಮಾಡಿ ಒಂದು ವರ್ಷ ಪೂರ್ಣವಾಗಿದೆ. ಇಂತಹ ಹೊತ್ತಲ್ಲೇ ವಿಜ್ಞಾನಿಗಳು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. 'ಕೊರೊನಾ' ರೀತಿ ರೋಗ ತರುವ ಬ್ಯಾಕ್ಟೀರಿಯಾಗಳು ಹೇಗೆ ಗಾಳಿಯ ಮೂಲಕ ಸಾವಿರಾರು ಕಿಲೋ ಮೀಟರ್ ಪ್ರಯಾಣ ಮಾಡಬಲ್ಲವು ಎಂಬುದನ್ನ ವಿವರಿಸಿದ್ದಾರೆ. ಇದು ಸಹಜವಾಗಿಯೇ ಮಾನವರಿಗೆ ಮತ್ತೊಂದು ಕಂಟಕ. ಏಕೆಂದರೆ ಮೊದಲೇ ಕೊರೊನಾ ಭೀತಿಯಲ್ಲಿ ಮಾನವ ಬದುಕುತ್ತಿರುವಾಗ, ಮತ್ತೊಂದು ಶಾಕ್ ಸಿಕ್ಕಿದೆ. ವಿಜ್ಞಾನಿಗಳ ಎಚ್ಚರಿಕೆ ಭವಿಷ್ಯದ ಕರಾಳ ದಿನಗಳನ್ನು ನೆನಪಿಸುವಂತಿದೆ.

ಇನ್ನಷ್ಟು ಭಯಾನಕ ರೋಗಗಳು..?

ಇನ್ನಷ್ಟು ಭಯಾನಕ ರೋಗಗಳು..?

ಬಹು ಹಿಂದೆಯೇ ವಿಜ್ಞಾನಿಗಳು ವಾರ್ನಿಂಗ್ ಕೊಟ್ಟಿದ್ದರು. ಹವಾಮಾನ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸಿ. ಗ್ಲೋಬಲ್ ವಾರ್ಮಿಂಗ್ ಬಗ್ಗೆ ನೀವು ಏನಾದರೂ ತಮಾಷೆ ಮಾಡಿದರೆ, ಅದರ ಪರಿಣಾಮ ತೀವ್ರ ಪ್ರಮಾಣದಲ್ಲಿ ಇರುತ್ತದೆ ಎಂದು. ಈಗ ಅದೇ ರೀತಿ ಆಗುತ್ತಿದ್ದು, ವಿಜ್ಞಾನಿಗಳು ಹೇಳಿದಂತೆ ಹೊಸ ರೀತಿಯ ಸಮಸ್ಯೆಗಳು ಮನುಷ್ಯನಿಗೆ ಎದುರಾಗುತ್ತಿವೆ. ಅದರಲ್ಲೂ ಸೂಕ್ಷ್ಮಜೀವಿ ಸಮೂಹ ಮಾನವನ ಸರ್ವನಾಶಕ್ಕಾಗಿ ಪಣತೊಟ್ಟಂತೆ ಕಾಣುತ್ತಿದೆ. ಹವಾಮಾನ ಬದಲಾದಂತೆ ಹೊಸ ಪ್ರಬೇಧದ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಭೂಮಿ ಮೇಲೆ ಜನ್ಮತಾಳುತ್ತಿವೆ. ಅಲ್ಲದೆ ಈ ರೀತಿ ಜಗತ್ತಿನ ಎಲ್ಲಾ ಕಡೆಗೂ ಹರಡುತ್ತಿವೆ.

ಚೀನಾದಲ್ಲಿ ಹೊಸ ಕಾಯಿಲೆ: ಬ್ಯಾಕ್ಟೀರಿಯಾದಿಂದ ಪುರುಷ ಬಂಜೆತನಚೀನಾದಲ್ಲಿ ಹೊಸ ಕಾಯಿಲೆ: ಬ್ಯಾಕ್ಟೀರಿಯಾದಿಂದ ಪುರುಷ ಬಂಜೆತನ

ತುರ್ತು ಪರಿಸ್ಥಿತಿ ಘೋಷಿಸಲು ಹೇಳಿದ್ದರು

ತುರ್ತು ಪರಿಸ್ಥಿತಿ ಘೋಷಿಸಲು ಹೇಳಿದ್ದರು

ಹವಾಮಾನ ವೈಪರಿತ್ಯ ಹಿನ್ನೆಲೆ ಎಲ್ಲಾ ದೇಶಗಳು ತುರ್ತು ಪರಿಸ್ಥಿತಿ ಘೋಷಿಸಬೇಕೆಂದು ವಿಶ್ವಸಂಸ್ಥೆ ಹೇಳಿತ್ತು. ಕೆಲ ದಿನಗಳ ಹಿಂದೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರೆಸ್ ಈ ಕರೆ ನೀಡಿದ್ದರು. ಪ್ಯಾರಿಸ್ ಪರಿಸರ ಸಮ್ಮೇಳನದ 5ನೇ ವಾರ್ಷಿಕೋತ್ಸವ ಹಿನ್ನೆಲೆ ಗುಟೆರೆಸ್ ಈ ಕರೆ ನೀಡಿದ್ದರು. ಹವಾಮಾನ ವೈಪರಿತ್ಯ ಮಿತಿಮೀರಿದ್ದು, ತಕ್ಷಣ ತುರ್ತು ಪರಿಸ್ಥಿತಿ ಘೋಷಿಸಿ ಎಂದು ಜಾಗತಿಕ ಸಮುದಾಯದ ಎದುರು ಗುಟೆರೆಸ್ ಮನವಿ ಮಾಡಿದ್ದಾರೆ. ಇಡೀ ಜಗತ್ತಿನಲ್ಲಿ ಪ್ರತಿಯೊಂದು ದೇಶವೂ ಹವಾಮಾನ ವೈಪರಿತ್ಯದ ಸಮಸ್ಯೆ ಎದುರಿಸುತ್ತಿದೆ. ಯಾರಾದರೂ ನಾವು ಸಮಸ್ಯೆ ಎದುರಿಸುತ್ತಿಲ್ಲ ಎಂದು ಹೇಳುವುದಕ್ಕೆ ಸಾಧ್ಯ ಇದೆಯಾ..? ಎಂದು ಗುಟೆರೆಸ್ ಪ್ರಶ್ನಿಸಿದ್ದರು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರೆಸ್ ಮಾತಿನ ಹಿಂದೆ ಹಲವು ಅರ್ಥ ಅಡಗಿದ್ದು, ಎಚ್ಚರಿಕೆಯ ಸಂದೇಶವೂ ಅಡಗಿದೆ.

ಹಿಮ ಪದರ ಕರಗುವ ಆತಂಕ

ಹಿಮ ಪದರ ಕರಗುವ ಆತಂಕ

ಗ್ಲೋಬಲ್ ವಾರ್ಮಿಂಗ್ ಪರಿಣಾಮ ಹೇಗಿದೆ ಎಂಬುದನ್ನು ಅರಿಯಲು ವಿಜ್ಞಾನಿಗಳ ತಾಪಮಾನ ಬದಲಾವಣೆ ಬಗೆಗಿನ ವರದಿಯನ್ನ ಓದಲೇ ಬೇಕು ಅದರಲ್ಲೂ 2020ರ ಬಗ್ಗೆ ಶಾಕ್ ಮೇಲೆ ಶಾಕ್‌ಗಳು ಸಿಗುತ್ತಲೇ ಇವೆ. 2020ರ ಬಗ್ಗೆ ಬೆಚ್ಚಿಬೀಳುವ ಸಂಗತಿಯೊಂದನ್ನು ವಿಜ್ಞಾನಿಗಳು ಬಿಚ್ಚಿಟ್ಟಿದ್ದಾರೆ. ಮಾನವ ಬದುಕಿನ ಇತಿಹಾಸದಲ್ಲಿ 2020 ಇಸವಿ 3ನೇ ಅತಿಹೆಚ್ಚು ತಾಪಮಾನ ತೋರಿದ ವರ್ಷವಾಗಿದೆ. 2016, 2019ರ ನಂತರ 2020 ಅತಿ ಹೆಚ್ಚಾದ ತಾಪಮಾನ ಹೊಂದಿರುವ ವರ್ಷವಾಗಿದೆ. ತಾಪಮಾನ ಏರಿಕೆ ಕಡಿವಾಣಕ್ಕೆ ಎಷ್ಟೇ ಮುತುವರ್ಜಿ ವಹಿಸಿದರೂ ಪ್ರಯೋಜನವಾಗುತ್ತಿಲ್ಲ. ತಾಪಮಾನ ಏರಿಕೆ ತಡೆಯಲು ಪ್ಯಾರಿಸ್ ಒಪ್ಪಂದಂತಹ ಪ್ರಯತ್ನ ವಿಫಲವಾಗಿದೆ. 2020ರಲ್ಲಿ ತಾಪಮಾನ 1.2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದ್ರೆ ರಷ್ಯಾದ ಸೈಬೀರಿಯಾ ಪ್ರಾಂತ್ಯದಲ್ಲಿ ಅತಿಹೆಚ್ಚು ತಾಪಮಾನ ಏರಿಕೆಯಾಗಿದೆ. ಸೈಬೀರಿಯಾ ಪ್ರಾಂತ್ಯದಲ್ಲಿ 2020ರಲ್ಲಿ 5 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ ಕಂಡಿದೆ. ಇದು ರಷ್ಯಾದ ಇತಿಹಾಸದಲ್ಲೇ ಭಯಾನಕ ವರ್ಷವಾಗಿದೆ.

English summary
Unforgettable 2020: After the Coronavirus pandemic, biologists given another big warning about microbes. Scientists said that microbes can travel from one continent to another by air.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X