Unforgettable 2020: ಈ ವರ್ಷದ ವಿಶಿಷ್ಟ ಗಿನ್ನೆಸ್ ವಿಶ್ವದಾಖಲೆಗಳು
ಹೊಸ ವರ್ಷ ಸಮೀಪಿಸುತ್ತಿದೆ. 2020 ಎಂಬ ಇತಿಹಾಸ ಪುಟಗಳಿಂದ ಮರೆತುಬಿಡುವಂತಹ ವರ್ಷಕ್ಕೆ ವಿದಾಯ ಹೇಳುವ ಸಮಯ ಬಂದಿದೆ. ಹಾಗೆಂದು 2020 ಜನಮಾನಸದಿಂದ ಅಷ್ಟು ಸುಲಭಕ್ಕೆ ಮರೆಯಾಗುವುದಿಲ್ಲ. ಏಕೆಂದರೆ ಇದು ಸಂಕಷ್ಟ, ಸವಾಲುಗಳ ವರ್ಷ. ಜನವರಿಯಿಂದ ಜಗತ್ತಿನ ವಿದ್ಯಮಾನಗಳ ನಡುವೆ ನಾವು ಸಾಗಿಬಂದ ಹಾದಿಯತ್ತ ಒಂದು ನೋಟ ಹಾಯಿಸಿದರೆ ಅನೇಕ ವಿಶಿಷ್ಟ, ಸಿಹಿ-ಕಹಿ ಘಟನೆಗಳು ಕಾಣಿಸುತ್ತವೆ.
ಜನರು ಈ ವರ್ಷ ಹೆಚ್ಚಿನ ದಿನಗಳನ್ನು ಮನೆಯ ಒಳಗೇ ಕಳೆದಿದ್ದಾರೆ. ಇಡೀ ಜಗತ್ತು ಚಟುವಟಿಕೆಗಳಿಲ್ಲದೆ ಸ್ತಬ್ಧಗೊಂಡಿತ್ತು ಎಂಬ ಅನಿಸಿಕೆ ಮೂಡಿದೆ. ಈಗ ಎಲ್ಲರೂ ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳುತ್ತಿದ್ದಾರೆ ಅಥವಾ ಈ ಸ್ಥಿತಿಯನ್ನೇ ಸಹಜ ಎಂದು ಒಪ್ಪಿಕೊಳ್ಳುವ ರೀತಿ ಬದಲಾಗುತ್ತಿದ್ದಾರೆ.
ಇವೆಲ್ಲದರ ನಡುವೆ ಅನೇಕರು ಸುಮ್ಮನೆ ಕುಳಿತಿಲ್ಲ. ತಮ್ಮ ಹವ್ಯಾಸ, ಆಸಕ್ತಿ, ಗುರಿಗಳನ್ನು ಈಡೇರಿಸಿಕೊಳ್ಳುವ ಕೆಲಸಗಳನ್ನು ಮಾಡಿದ್ದಾರೆ. ಇನ್ನು ಕೆಲವರು ಒಂದಷ್ಟು ವಿಶೇಷ ಸಾಧನೆಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಂತಹ ಕೆಲವು ಸಾಧನೆಗಳು ವಿಶ್ವದಾಖಲೆಯ ಪಟ್ಟಿಯಲ್ಲಿ ಸೇರಿವೆ. ನೆಟ್ಟಿಗರನ್ನು ಈ ವರ್ಷ ಬೆರಗಾಗಿಸಿದ ವಿಶ್ವದಾಖಲೆಗಳ ಪಟ್ಟಿ ಇಲ್ಲಿದೆ.

2 ಮೀಟರ್ ಉದ್ದದ ತಲೆಗೂದಲು
ಈ ವರ್ಷ ಅತಿ ಉದ್ದದ ಕೂದಲು ಹೊಂದಿರುವ ಮಹಿಳೆ ಎಂಬ ಸಾಧನೆಯನ್ನು ಗುಜರಾತ್ ಮೂಲದ ನಿಲಾಂಶಿ ಪಟೇಲ್ ಗಿನ್ನೆಸ್ ವಿಶ್ವದಾಖಲೆ ಮಾಡಿದ್ದಾರೆ. 17 ವರ್ಷದ ನಿಲಾಂಶಿ ಅವರ ಕೂದಲಿ ಉದ್ದ 6 ಅಡಿ ಮತ್ತು 2.8 ಇಂಚ್ ಅಥವಾ 190 ಸೆಂಟಿ ಮೀಟರ್. 2018ರಲ್ಲಿ 170.5 ಸೆಂಟಿಮೀಟರ್ ಉದ್ದದ ಕೂದಲಿನ ಮೂಲಕ ನಿಲಾಂಶಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು. ಇದು ಮೂರನೇ ವರ್ಷ ತಮ್ಮ ದಾಖಲೆಯನ್ನು ಅವರು ಸ್ವತಃ ತಾವೇ ಮುರಿದಿದ್ದಾರೆ.

ರೋಲರ್ ಸ್ಕೇಟ್‌ನಲ್ಲಿ ಸ್ಕಿಪ್ಪಿಂಗ್
ನಿಂತ ಗಟ್ಟಿ ನೆಲದ ಮೇಲೆ ಸ್ಕಿಪ್ಪಿಂಗ್ ಮಾಡುವುದೇ ಸಾಹಸ. ಆದರೆ ದೆಹಲಿ ಮೂಲದ ಜೊರಾವರ್ ಸಿಂಗ್ ಎಂಬ 21 ವರ್ಷದ ಯುವಕ ರೋಲರ್ ಅಥವಾ ಇನ್‌ಲೈನ್ ಸ್ಕೇಟ್ ಧರಿಸಿ ಕೇವಲ 30 ಸೆಕೆಂಡುಗಳಲ್ಲಿ 147 ಬಾರಿ ಸ್ಕಿಪ್ಪಿಂಗ್ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಶಾಲೆಯಲ್ಲಿ ಡಿಸ್ಕಸ್ ಥ್ರೋ ಪಟುವಾಗಿದ್ದ ಜೊರಾವರ್, ಗಾಯದ ಕಾರಣ ಆ ಆಟದಿಂದ ದೂರ ಸರಿದರು. ಫಿಟ್ನೆಸ್ ಉಳಿಸಿಕೊಳ್ಳಲು ಸ್ಕಿಪ್ಪಿಂಗ್ ಆರಂಭಿಸಿದ್ದರು.

ಮಣ್ಣಿನ ತಟ್ಟೆ ಒಡೆಯುವುದು
ಮಾರ್ಷಿಯಲ್ ಆರ್ಟ್ಸ್‌ನಲ್ಲಿ ಪರಿಣತರಾದ ಪಾಕಿಸ್ತಾನದ ಮುಹಮ್ಮದ್ ರಶೀದ್ ಎಂಬುವವರು ಒಂದು ನಿಮಿಷದಲ್ಲಿ ಸತತವಾಗಿ 62 ಮಣ್ಣಿನ ತಟ್ಟೆಗಳನ್ನು ಪುಡಿಗಟ್ಟಿ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಒಂದು ಬದಿಯಲ್ಲಿ ನಿಂತ ವ್ಯಕ್ತಿಯೊಬ್ಬರು ಪಟಪಟನೇ ರಶೀದ್ ಎದುರು ಮಣ್ಣಿನ ತಟ್ಟೆಗಳನ್ನು ಎಸೆಯುತ್ತಾರೆ. ರಶೀದ್ ಒಂದೇ ಕೈಯಲ್ಲಿ ಅಷ್ಟೇ ವೇಗವಾಗಿ ಅವುಗಳನ್ನು ಗುದ್ದಿ ಪುಡಿಗಟ್ಟುತ್ತಾರೆ. ಇದು ಗಿನ್ನೆಸ್ ವಿಶ್ವದಾಖಲೆ ಪಟ್ಟಿಯಲ್ಲಿ ಸೇರಿದೆ. 30 ಸೆಕೆಂಡುಗಳಲ್ಲಿ ಅತಿ ಹೆಚ್ಚು ತಟ್ಟೆಗಳನ್ನು ಒಡೆದ ದಾಖಲೆಯೂ ರಶೀದ್ ಹೆಸರಲ್ಲಿದೆ.

ಜಗತ್ತಿನ ಅತಿ ಎತ್ತರದ ತರುಣ
ಚೀನೀಯರು ಸಾಮಾನ್ಯವಾಗಿ ಅಷ್ಟೇನೂ ಎತ್ತರದ ನಿಲುವು ಹೊಂದಿದವರಲ್ಲ. ಆದರೆ ರೆನ್ ಕೆಯು ಎಂಬಾತ ಬರೋಬ್ಬರಿ 221.02 ಸೆಂಟಿ ಮೀಟರ್, ಅಂದರೆ 7 ಅಡಿ 3.02 ಇಂಚು ಎತ್ತರವಿದ್ದಾನೆ. ಅಂದಹಾಗೆ ಆತನ ವಯಸ್ಸು ಕೇವಲ 14 ವರ್ಷ. ಅಂಗನವಾಡಿಗೆ ಹೋಗುವಾಗಲೇ ಆತ 150 ಸೆಂ.ಮೀ ಉದ್ದವಿದ್ದ. 18 ವರ್ಷದೊಳಗಿನ ತರುಣರಲ್ಲಿ ಅತಿ ಎತ್ತರದ ವ್ಯಕ್ತಿ ಎಂಬ ದಾಖಲೆ ಈತನ ಹೆಸರಿನಲ್ಲಿದೆ.

ತಿನ್ನುವುದರಲ್ಲಿ ದಾಖಲೆ
ತಿನ್ನುವ ಚಾಲೆಂಜ್‌ಗಳು ಅನೇಕ ರೀತಿಯಲ್ಲಿ ನಡೆಯುತ್ತಿರುತ್ತದೆ. ಇದು ಮೋಜಿನಂತೆ ಕಂಡರೂ ತಿನ್ನುವುದು ಕೂಡ ಸುಲಭವಲ್ಲ. ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್ ನಿವಾಸಿ ಲೀಹ್ ಶುಟ್ಕೆವರ್ ಮೂರು ನಿಮಿಷದಲ್ಲಿ ಒಮ್ಮೆಯೂ ನಾಲಿಗೆಯನ್ನು ತುಟಿಗೆ ಸವರಿಕೊಳ್ಳದೆ ಹತ್ತು ಜಾಮ್ ಡೋನಟ್‌ಗಳನ್ನು ತಿಂದುಮುಗಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾಳೆ. ಈ ವರ್ಷ ಇದುವರೆಗೂ ಆಕೆ 18 ಗಿನ್ನೆಸ್ ದಾಖಲೆಗಳನ್ನು ಸೃಷ್ಟಿಸಿದ್ದಾಳೆ. 12 ಚಾಕೋಲೇಟ್ ಟ್ರಫಲ್‌ಗಳನ್ನು ಕೈಯಲ್ಲಿ ಮುಟ್ಟದೆ ಒಂದು ನಿಮಿಷದಲ್ಲಿ ತಿಂದು ಮುಗಿಸಿದ್ದು ಆಕೆಯ ಇತ್ತೀಚಿನ ದಾಖಲೆ.
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications