ರಷ್ಯಾ-ಉಕ್ರೇನ್‌ ಯುದ್ಧ: ಉಭಯ ರಾಷ್ಟ್ರಗಳಲ್ಲಿ ಭವಿಷ್ಯದಲ್ಲಿ ಏನು ನಡೆಯುತ್ತದೆ?

ಕೀವ್, ಮಾರ್ಚ್ 05: ಉಕ್ರೇನ್‌ ಮೇಲೆ ರಷ್ಯಾವು ಫೆಬ್ರವರಿ 24 ರಂದು ದಾಳಿ ಮಾಡಿದೆ. ಸದ್ಯ ತಾತ್ಕಾಲಿಕವಾಗಿ ರಷ್ಯಾ ಕದನ ವಿರಾಮವನ್ನು ಘೋಷಣೆ ಮಾಡಿದ್ದರೂ ಕೂಡಾ ಉಕ್ರೇನ್‌-ರಷ್ಯಾ ಈ ನಡುವೆ ಪ್ರಮುಖ ಐದು ಘಟನೆಗಳನ್ನು ಎದುರಿಸಲಿದೆ. ಉಕ್ರೇನ್‌ನಲ್ಲಿರುವ ಜನರು ಬೇರೆ ಕಡೆಗೆ ತೆರಳಲು ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ರಷ್ಯಾ ಕದನ ವಿರಾಮ ಘೋಷಣೆ ಮಾಡಿದೆಯಾದರೂ ಇದು ತಾತ್ಕಾಲಿಕ ಕದನ ವಿರಾಮವಾಗಿದೆ.

ಉಕ್ರೇನ್‌ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಣೆ ಮಾಡಿರುವ ಯುದ್ಧವು ಸದ್ಯಕ್ಕೆ ಕೊನೆಗೊಳ್ಳುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ವ್ಲಾಡಿಮಿರ್ ಪುಟಿನ್ ಈ ಯುದ್ಧವನ್ನು ಹಿಂದೆಗೆದುಕೊಳ್ಳುವ ಯಾವುದೇ ಲಕ್ಷಣವನ್ನು ಕಂಡು ಬಂದಿಲ್ಲ.

ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವುದಕ್ಕಾಗಿ ರಷ್ಯಾ ಕೊಂಚ ವಿರಾಮ ನೀಡಿದೆ. ಇನ್ನು ರಷ್ಯಾವು ಒಂದೇ ವಾರದಲ್ಲಿ ಐನ್ನೂರು ಕ್ಷಿಪಣಿಗಳ ದಾಳಿಯನ್ನು ನಡೆಸಿದೆ. ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಿದ ಹಿನ್ನೆಲೆ ಅಮರಿಕ ಸೇರಿ ಹಲವಾರು ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧವನ್ನು ಹೇರಿದೆ. ಆದರೆ ಇದರ ಪರಿಣಾಮವು ಜಾಗತಿಕ ಮಟ್ಟದಲ್ಲಿ ಬೀರಲಿದೆ. ಈಗಾಗಲೇ ಯುದ್ಧದ ಹಿನ್ನೆಲೆಯಿಂದಾಗಿ ಕಚ್ಚಾ ತೈಲ ದರವು ಏರಿಕೆ ಕಾಣುತ್ತಿದೆ. ಇನ್ನು ಈ ನಡುವೆ ತಜ್ಞರುಗಳು ಉಕ್ರೇನ್‌ ಈ ಯುದ್ಧದ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಐದು ಘಟನೆಗಳನ್ನು ಎದುರಿಸಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿದೆ.

 ಸೇನಾ ಬಿಕ್ಕಟ್ಟು ಸಾಧ್ಯತೆ

ಸೇನಾ ಬಿಕ್ಕಟ್ಟು ಸಾಧ್ಯತೆ

ಉಕ್ರೇನಿಯನ್ ಪಡೆಗಳು ಇಲ್ಲಿಯವರೆಗೆ ರಷ್ಯಾದ ಆಕ್ರಮಣವನ್ನು ವಿರೋಧಿಸಿವೆ. ಆರಂಭಿಕ ದಿನಗಳಲ್ಲಿ ರಾಜಧಾನಿಯನ್ನು ವಶಪಡಿಸಿಕೊಳ್ಳುವ ಮಾಸ್ಕೋ ಪ್ರಯತ್ನವನ್ನು ವಿಫಲಗೊಳಿಸಿದೆ. ಖಾರ್ಕಿವ್ ಮತ್ತು ಮಾರಿಯುಪೋಲ್‌ನಂತಹ ಪ್ರಮುಖ ನಗರಗಳ ಮೇಲೆ ನಿಯಂತ್ರಣವನ್ನು ಇಟ್ಟುಕೊಂಡಿತ್ತು. ರಷ್ಯಾವು ಸಂಪೂರ್ಣ ವಾಯುಮಾರ್ಗದ ಹತೋಟಿ ಹೊಂದಿದೆ ಎಂದು ಹೇಳಿಕೊಂಡರೂ, ರಾಜಧಾನಿ ಕೀವ್‌ ಹಾಗೂ ಇತರ ಪ್ರದೇಶಗಳಲ್ಲಿ ಉಕ್ರೇನ್‌ನ ವಾಯು ರಕ್ಷಣೆಯು ಕೆಳಮಟ್ಟಕ್ಕಿಳಿದಿದೆ. ಆದರೆ ಇನ್ನೂ ಕಾರ್ಯನಿರ್ವಹಿಸುತ್ತಿದೆ ಎಂದು ಪಾಶ್ಚಿಮಾತ್ಯ ಅಧಿಕಾರಿಗಳು ಹೇಳುತ್ತಾರೆ. ಹೆಚ್ಚಿನ ಸಂಖ್ಯೆಯ ಉಕ್ರೇನಿಯನ್ನರು ಪ್ರಾದೇಶಿಕ ರಕ್ಷಣಾ ಘಟಕಗಳಿಗೆ ಸೇರಿದ್ದಾರೆ. ಆದರೆ ಇಲ್ಲಿ ರಷ್ಯಾದ ಸೇನೆಯ ಬಗ್ಗೆ ಪ್ರಶ್ನೆ ಉಳಿದಿದೆ. ರಷ್ಯಾದ ಆರ್ಥಿಕತೆಯ ಮೇಲೆ ಪಾಶ್ಚಿಮಾತ್ಯ ನಿರ್ಬಂಧಗಳು ಪ್ರಭಾವ ಬೀರುತ್ತಿದೆ. ಯುದ್ಧ ಮುಂದುವರಿದಂತೆ ಸೇನಾ ಬಿಕ್ಕಟ್ಟು, ಅಸ್ತವ್ಯಸ್ಥತೆ ಎದುರಾಗುವ ಸಾಧ್ಯತೆ ಇದೆ.

 ರಷ್ಯಾದಲ್ಲಿ ಆಗಲಿದೆ ಹಲವಾರು ಬದಲಾವಣೆ

ರಷ್ಯಾದಲ್ಲಿ ಆಗಲಿದೆ ಹಲವಾರು ಬದಲಾವಣೆ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೇಶೀಯ ಭಿನ್ನಾಭಿಪ್ರಾಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸ್ವತಂತ್ರ ಮಾಧ್ಯಮ ಮತ್ತು ವಿದೇಶಿ ಸುದ್ದಿ ಪೂರೈಕೆದಾರರ ಮೇಲಿನ ದಬ್ಬಾಳಿಕೆಯು ಯುದ್ಧದ ಬಗ್ಗೆ ಮಾಹಿತಿಯ ಪರ್ಯಾಯ ಮೂಲಗಳನ್ನು ತೆಗೆದುಹಾಕಿದೆ. ರಷ್ಯಾ ಸರ್ಕಾರದ ಹತೋಟಿಯ ಮಾಧ್ಯಮಗಳು ಮಾತ್ರ ಭದ್ರವಾಗಿದೆ. ಅದೇನೇ ಇದ್ದರೂ, ಸೇಂಟ್ ಪೀಟರ್ಸ್‌ಬರ್ಗ್‌ನಿಂದ ಮಾಸ್ಕೋದವರೆಗಿನ ನಗರಗಳಲ್ಲಿ ಯುದ್ಧ ವಿರೋಧಿ ಪ್ರತಿಭಟನೆಗಳು ನಡೆದಿದೆ. ಸ್ಥಳೀಯ ಗುಂಪುಗಳ ಪ್ರಕಾರ ಕನಿಷ್ಠ 6,000 ಜನರನ್ನು ಬಂಧಿಸಲಾಗಿದೆ. ಕೆಲವು ಸಂಸ್ಥೆಗಳು, ಶ್ರೀಮಂತರು ಕೂಡಾ ಕದನ ವಿರಾಮ ಘೋಷಣೆ ಮಾಡಲು ಒತ್ತಾಯ ಮಾಡುತ್ತಿದ್ದಾರೆ. ಇದರಿಂದಾಗಿ ರಷ್ಯಾ ಆಡಳಿತದಲ್ಲಿ ಬಿರುಕು ಕಾಣುವ ಸಾಧ್ಯತೆಗಳು ಇದೆ.

 ರಷ್ಯಾದ ಮಿಲಿಟರಿ ಯಶಸ್ಸು

ರಷ್ಯಾದ ಮಿಲಿಟರಿ ಯಶಸ್ಸು

ರಷ್ಯಾದ ಪಡೆಗಳ ಆಧುನಿಕ ಶಸ್ತ್ರಾಸ್ತ್ರಗಳು, ವಾಯು ಶಕ್ತಿ ಮತ್ತು ಫಿರಂಗಿಗಳ ವಿನಾಶಕಾರಿ ಬಳಕೆಯನ್ನು ಗಮನಿಸಿದರೆ ರಷ್ಯಾ ಯುದ್ಧವನ್ನು ಮುಂದೆ ಇನ್ನಷ್ಟು ಗಂಭೀರ ಸ್ಥಿತಿಗೆ ಕೊಂಡೊಯ್ಯುವ ಸಾಧ್ಯತೆ ಇದೆ. ಉಕ್ರೇನ್‌ ರಾಜಧಾನಿಯ ಮೇಲೆ ರಷ್ಯಾ ದಾಳಿ ಮಾಡಿ ಸಂಪೂರ್ಣವಾಗಿ ಹತೋಟಿಗೆ ಪಡೆಯುವ ನಿಟ್ಟಿನಲ್ಲಿ ಕೀವ್‌ನಲ್ಲಿ ಬೃಹತ್ ವಾಹನಗಳನ್ನು ನಿಲ್ಲಿಸಲಾಗಿದೆ. ಪುಟಿನ್ "ಇಡೀ ಉಕ್ರೇನ್‌ನ ನಿಯಂತ್ರಣವನ್ನು ವಶಪಡಿಸಿಕೊಳ್ಳಲು" ಬಯಸಿದ್ದಾರೆ ಎಂದು ಸಹಾಯಕರೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಆದರೆ ರಷ್ಯಾದ ಪಡೆಗಳು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಪದಚ್ಯುತಗೊಳಿಸಿದರೂ 40 ಮಿಲಿಯನ್ ಜನಸಂಖ್ಯೆ ಇರುವ ರಾಷ್ಟ್ರವನ್ನು ಆಕ್ರಮಿಸಿಕೊಳ್ಳುವ ಸವಾಲನ್ನು ಎದುರಿಸಬೇಕಾಗುತ್ತದೆ.

 ಸಂಘರ್ಷ ಹಬ್ಬುವ ಸಾಧ್ಯತೆ

ಸಂಘರ್ಷ ಹಬ್ಬುವ ಸಾಧ್ಯತೆ

ಉಕ್ರೇನ್ ನಾಲ್ಕು ಹಿಂದಿನ ಸೋವಿಯತ್ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಳ್ಳುತ್ತದೆ. ಅದು ಈಗ ಯುಎಸ್ ನೇತೃತ್ವದ ನ್ಯಾಟೋ ಮಿಲಿಟರಿ ಮೈತ್ರಿಕೂಟದ ಸದಸ್ಯ ರಾಷ್ಟ್ರವಾಗಿದೆ. ಆದ್ದರಿಂದ ಒಂದು ರಾಷ್ಟ್ರದ ಮೇಲಿನ ದಾಳಿಯನ್ನು ಎಲ್ಲರ ಮೇಲಿನ ದಾಳಿ ಎಂಬಂತೆ ಈ ರಾಷ್ಟ್ರಗಳು ಪರಿಗಣಿಸುತ್ತದೆ. ಉಕ್ರೇನ್‌ನ ನಂತರ, ಪುಟಿನ್ ಮೊಲ್ಡೊವಾದ ಮೇಲೆ ಯುದ್ಧ ಸಾರುವ ಸಾಧ್ಯತೆ ಇದೆ ಎಂದು ಹಲವಾರು ಮಂದಿ ಊಹೆ ಮಾಡಿದ್ದಾರೆ. ಹೀಗೆಯೇ ಒಂದಾದ ಬಳಿಕ ಒಂದು ರಾಷ್ಟ್ರದೊಂದಿಗೆ ರಷ್ಯಾ ಸಂಘರ್ಷ ನಡೆಸಿ ಆ ರಾಷ್ಟ್ರವನ್ನು ಹತೋಟಿಗೆ ಪಡೆಯುವ ಪ್ರಯತ್ನ ಮಾಡುವ ಸಾಧ್ಯತೆ ಇದೆ.

 ನ್ಯಾಟೋ-ರಷ್ಯಾ ಮುಖಾಮುಖಿಯಾಗುತ್ತದೆಯೇ?

ನ್ಯಾಟೋ-ರಷ್ಯಾ ಮುಖಾಮುಖಿಯಾಗುತ್ತದೆಯೇ?

ಪರಮಾಣು ಬಳಕೆಯು ಅಪಾಯಕಾರಿ ಎಂಬ ಹಿನ್ನೆಲೆ ರಾಷ್ಟ್ರಗಳು ಇದರ ಬಳಕೆಯಿಂದ ಹಿಂದಕ್ಕೆ ಉಳಿಯುತ್ತಿದೆ. ಆದರೆ ಪುಟಿನ್ ರಷ್ಯಾದ ಪರಮಾಣು ನಿರೋಧಕ ಪಡೆಗಳಿಗೆ ಹೆಚ್ಚಿನ ಎಚ್ಚರಿಕೆಯನ್ನು ನೀಡಿದ್ದಾರೆ ಮತ್ತು ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ "ಮೂರನೇ ಮಹಾಯುದ್ಧವು ಕೇವಲ ಪರಮಾಣು ಯುದ್ಧವಾಗಬಹುದು" ಎಂದು ಎಚ್ಚರಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆ ನ್ಯಾಟೋ ಹಾಗೂ ರಷ್ಯಾ ಮುಖಾಮುಖಿ ಆಗಲಿದೆಯೇ ಎಂಬ ಪ್ರಶ್ನೆ ಮೂಡಿದೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+