ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊಬರ್ ಕಾರ್‌ನಂತೆ ಬಸ್ ಬುಕ್ ಮಾಡಿ, ಬೆಂಗಳೂರಿಗೆ ಯಾವಾಗ್ ಬರುತ್ತೆ ಗಾಡಿ?

|
Google Oneindia Kannada News

ತಂತ್ರಜ್ಞಾನ ಏನೆಲ್ಲಾ ಬದಲಾವಣೆ ಮಾಡಿಸುತ್ತೆ ನೋಡಿ! ನಾವು ಕನಸಿನಲ್ಲೂ ಎಣಿಸದ ಐಷಾರಾಮಿ ಕಾರನ್ನು ಮನೆ ಬಾಗಿಲಿಗೆ ಕರೆಸುವ ಓಲಾ, ಊಬರ್ ಕ್ಯಾಬ್ ವ್ಯವಸ್ಥೆ ಬಂದಿದ್ದನ್ನು ನೋಡಿದ್ದೇವೆ. ಇದೀಗ ಊಬರ್ ಬಸ್ ಕೂಡ ಬಂದುಬಿಟ್ಟಿದೆ. ದೆಹಲಿ ಬಳಿಯ ಗುರುಗ್ರಾಮ್‌ನಲ್ಲಿ ಊಬರ್ ಬಸ್ ಪ್ರಾಯೋಗಿಕವಾಗಿ ಚಾಲನೆ ಪಡೆದಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿಗೂ ಕಾಲಿಡುತ್ತೆ ಊಬರ್ ಬಸ್.

ಕಳೆದ ವರ್ಷವೇ ಊಬರ್ ಇಂಥದ್ದೊಂದು ಪ್ರಯೋಗವನ್ನು ಆರಂಭಿಸಿತ್ತು. ದೆಹಲಿಯಲ್ಲಿ ಕಾರ್ಪೊರೇಟ್ ಉದ್ಯೋಗಿಗಳೆಂದು ಊಬರ್ ಕಾರ್ಪೊರೇಟ್ ಶಟ್ಲ್ ಯೋಜನೆಯನ್ನು ಶುರು ಮಾಡಿತು. 10ರಿಂದ 50 ಸೀಟುಗಳಿರುವ ವಿವಿಧ ಬಸ್ಸುಗಳನ್ನು ಕಾರ್ಪೊರೇಟ್ ಉದ್ಯೋಗಿಗಳಿಗಾಗಿ ಸೇವೆಗೆ ನಿಯೋಜಿಸಲಾಗಿತ್ತು. ಅತ್ತ ಈಜಿಪ್ಟ್ ರಾಜಧಾನಿ ಕೈರೋ ನಗರದಲ್ಲೂ ಇಂಥದ್ದೇ ಪ್ರಯೋಗವನ್ನು ಮಾಡಲಾಗಿದೆ. ಅದು ವರ್ಕೌಟ್ ಆದಂತೆ ಕಾಣುತ್ತಿದೆ.

ರಸ್ತೆಗಿಳಿಯಿತು ಊಬರ್ ಬಸ್; ಸೀಟು ಬುಕ್ ಮಾಡಿ ಬಸ್ ಹತ್ತಿ!ರಸ್ತೆಗಿಳಿಯಿತು ಊಬರ್ ಬಸ್; ಸೀಟು ಬುಕ್ ಮಾಡಿ ಬಸ್ ಹತ್ತಿ!

ಇದೀಗ ಗುರುಗ್ರಾಮ್‌ನಲ್ಲಿ ಸಾರ್ವಜನಿಕರ ಸೇವೆಗೆಂದು ಊಬರ್ ಬಸ್ ಅನ್ನು ಚಾಲನೆಗೊಳಿಸಲಾಗಿದೆ. ಇದೂ ಕೂಡ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ.

ಪ್ರಯಾಣಿಕ ಸೇವೆಯಲ್ಲಿ ವಿಶೇಷ ಪ್ರಯೋಗ ಮತ್ತು ತಂತ್ರಜ್ಞಾನ ಉನ್ನತೀಕರಣ ಮಾಡಲು ಊಬರ್ ನಿರತವಾಗಿದೆ. ವಿಶ್ವಾದ್ಯಂತ 11 ಕಡೆ ಟೆಕ್ ಕೇಂದ್ರಗಳನ್ನು ಇದಕ್ಕಾಗಿ ವಿನಿಯೋಗಿಸಿದೆ. ಬೆಂಗಳೂರು ಮತ್ತು ಹೈದರಾಬಾದ್‌ನಲ್ಲೂ ಊಬರ್‌ನ ಎರಡು ಟೆಕ್ ಸೆಂಟರ್‌ಗಳಿವೆ. ಅಲ್ಲಿ ತಲಾ 500 ಮಂದಿ ಕೆಲಸ ಮಾಡುತ್ತಾರೆ.

ಗುರುಗ್ರಾಮದಲ್ಲಿ ಹೇಗಿದೆ ಊಬರ್?

ಗುರುಗ್ರಾಮದಲ್ಲಿ ಹೇಗಿದೆ ಊಬರ್?

ಕ್ಯಾಬ್, ಆಟೋಗಳ ಮಾದರಿಯಲ್ಲೇ ಬಸ್ಸುಗಳನ್ನೂ ಬುಕ್ ಮಾಡಲು ಊಬರ್ ಅವಕಾಶ ಕೊಡುತ್ತದೆ. ಊಬರ್ ಕೇವಲ ಮಧ್ಯವರ್ತಿಯಂತೆ ಕಾರ್ಯನಿರ್ವಹಿಸುತ್ತದೆ. ಗುರುಗ್ರಾಮದಲ್ಲಿ ಅಲ್ಲಿನ ಸರಕಾರಿ ಬಸ್ ಸಂಸ್ಥೆ ಗುರುಗ್ರಾಮ್ ಮೆಟ್ರೋಪಾಲಿಟನ್ ಸಿಟಿ ಬಸ್ ಸರ್ವಿಸಸ್‌ನೊಂದಿಗೆ ಊಬರ್ ಒಪ್ಪಂದ ಮಾಡಿಕೊಂಡಿದೆ. ನಿರ್ದಿಷ್ಟ ಮಾರ್ಗದಲ್ಲಿ ಸಂಚರಿಸುವ ನಾಲ್ಕು ಬಸ್ಸುಗಳನ್ನು ಜಿಎಂಸಿಬಿಎಲ್‌ನಿಂದ ಎರವಲು ಪಡೆದು ಊಬರ್ ಈ ಸೇವೆ ನೀಡುತ್ತಿದೆ. ಈ ನಾಲ್ಕು ಬಸ್ಸುಗಳು 36 ಸೀಟರ್‌ನದ್ದಾಗಿ ಏಸಿ ಬಸ್ಸುಗಳಾಗಿವೆ.

ಈ ಬಸ್ಸುಗಳು ಸದ್ಯ ಎರಡು ಮಾರ್ಗಗಳಲ್ಲಿ ಸಂಚರಿಸುತ್ತವೆ. ಊಬರ್ ಬಹಳ ಸಮೀಕ್ಷೆ ನಡೆಸಿ, ಜನರಿಗೆ ಹೆಚ್ಚು ಬೇಡಿಕೆ ಇರುವುದನ್ನು ಮನಗಂಡು ಈ ಎರಡು ಮಾರ್ಗಗಳನ್ನು ಸದ್ಯಕ್ಕೆ ಆರಿಸಿಕೊಂಡಿದೆ. ಬೆಳಗ್ಗೆ 7ರಂದ ಮಧ್ಯಾಹ್ನ 12ಗಂಟೆ, ಹಾಗು ಮಧ್ಯಾಹ್ನ 3ರಿಂದ ರಾತ್ರಿ 8ರವರೆಗೆ ಸದ್ಯಕ್ಕೆ ಬಸ್ಸುಗಳು ಸಂಚರಿಸುತ್ತವೆ. ಇವುಗಳ ಬೆಲೆ ಒಂದು ಕಿಮೀಗೆ 7 ರೂ ಎಂದು ನಿಗದಿ ಮಾಡಲಾಗಿದೆ.

ಕಿಲ್ ಸ್ವಿಚ್, ಹಿಂಸಾಚಾರ, ದೊಡ್ಡವರ ಆಟ- ಊಬರ್ ಫೈಲ್ಸ್ ಹೇಳೋದೇನು?ಕಿಲ್ ಸ್ವಿಚ್, ಹಿಂಸಾಚಾರ, ದೊಡ್ಡವರ ಆಟ- ಊಬರ್ ಫೈಲ್ಸ್ ಹೇಳೋದೇನು?

ಟಿಕೆಟ್ ಬುಕಿಂಗ್

ಟಿಕೆಟ್ ಬುಕಿಂಗ್

ಊಬರ್ ಆ್ಯಪ್‌ನಲ್ಲಿ ಈ ಬಸ್ಸುಗಳ ಟಿಕೆಟ್ ಕಾಯ್ದಿರಿಸಬಹುದು. ಇದು ಗುರುಗ್ರಾಮ ನಿವಾಸಿಗಳಿಗೆ ಮಾತ್ರ ಬಳಕೆಗೆ ಸಿಗುವ ಸೌಲಭ್ಯ. ಜನರು ಊಬರ್ ಆ್ಯಪ್ ಓಪನ್ ಮಾಡಿ 'ರೈಡ್' ಆಯ್ದುಕೊಳ್ಳಬಹುದು. ನಿಮ್ಮ ಪಿಕಪ್ ಮತ್ತು ಡ್ರಾಪ್ ಆಫ್ ಸ್ಥಳಗಳನ್ನು ನಮೂದಿಸಬೇಕು. ನಂತರ ನಿಮಗೆ ರೈಡಿಂಗ್ ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ 'ಗುರುಗ್ರಾಂ ಪ್ಲಸ್' ಅನ್ನು ಆಯ್ದುಕೊಳ್ಳಬೇಕು.

ಅಗ ಬಸ್ ಮಾರ್ಗದಲ್ಲಿ ನಿಮಗೆ ಹತ್ತಿರವಾಗಿರುವ ನಿಲ್ದಾಣಗಳನ್ನು ತೋರಿಸುತ್ತದೆ. ನೀವು 1-3 ಸೀಟುಗಳನ್ನು ಬುಕ್ ಮಾಡಲು ಸಾಧ್ಯವಿರುತ್ತದೆ. ಸೀಟು ಬುಕ್ ಮಾಡಿ ಪೇಮೆಂಟ್ ಮಾಡಿ ದೃಢಪಡಿಸಿದರೆ ನಿಮಗೆ ಕನ್ಫರ್ಮೇಶನ್ ಕೋಡ್ ಬರುತ್ತದೆ. ನೀವು ಆ ಸಮಯಕ್ಕೆ ನೀವು ಬುಕ್ ಮಾಡಿದ ನಿಲ್ದಾಣ ತಲುಪಿದರೆ ಊಬರ್‌ನ ಬಸ್ಸು ಬರುತ್ತದೆ.

ಗುರುಗ್ರಾಮದಲ್ಲಿ ಆರಂಭಿಸಲಾಗಿರುವ ಊಬರ್ ಬಸ್ ಸೇವೆಯಲ್ಲಿ ಸುರಕ್ಷತೆಗೆ ಒತ್ತುಕೊಡಲಾಗಿದೆ. ನಿಲ್ದಾಣಗಳೂ ಹೆಚ್ಚಿರುವುದಿಲ್ಲ. ಬಸ್ಸಿನಲ್ಲಿ ಜನರೂ ಹೆಚ್ಚಿರುವುದಿಲ್ಲ. ಸೀಟು ಭರ್ತಿಯಾಗುವವರೆಗೂ ಮಾತ್ರ ಬುಕಿಂಗ್ ಅವಕಾಶ ಇರುತ್ತದೆ.

ಬೆಂಗಳೂರಿಗೆ ಬರುತ್ತಾ ಊಬರ್ ಬಸ್?

ಬೆಂಗಳೂರಿಗೆ ಬರುತ್ತಾ ಊಬರ್ ಬಸ್?

ಬೆಂಗಳೂರಿನಲ್ಲಿ ಬಸ್ ಸೇವೆ ಆರಂಭಿಸಲು ಊಬರ್ ಅವಲೋಕಿಸುತ್ತಿದೆ. ಗುರುಗ್ರಾಮ್ ಮಾದರಿ ಯಶಸ್ವಿಯಾದರೆ ಬೆಂಗಳೂರಿನಲ್ಲೂ ಊಬರ್ ಬಸ್ ಓಡುವ ಸಾಧ್ಯತೆ ಹೆಚ್ಚಿದೆ. ಬಿಎಂಟಿಸಿ ಜೊತೆ ಊಬರ್ ಒಪ್ಪಂದ ಮಾಡಿಕೊಳ್ಳಲು ಮುಂದಾಗಬಹುದು.

ಒಂದು ವೇಳೆ ಊಬರ್‌ನವರು ಬೆಂಗಳೂರಿನಲ್ಲಿ ಬಸ್ ಸೇವೆ ಆರಂಭಿಸುವುದಾದರೆ ಐಟಿ ಕಂಪನಿಗಳ ಮೇಲೆ ಗಮನ ಹರಿಸಬಹುದು. ಬಿಎಂಟಿಸಿ ಬಳಿ ತೀರಾ ಹೆಚ್ಚುವರಿಯಾಗಿ ಉಳಿದಿರುವ ಅನೇಕ ಬಸ್ಸುಗಳಿವೆ. ಊಬರ್‌ಗೆ ಬಸ್ಸುಗಳ ಕೊರತೆ ಬೀಳುವುದಿಲ್ಲ. ಬಿಎಂಟಿಸಿಗೂ ಒಂದು ಆದಾಯ ಬಂದಂತಾಗುತ್ತದೆ.

ಬೆಂಗಳೂರಿನಲ್ಲಿ ಊಬರ್‌ನ ಟೆಕ್ ಸೆಂಟರ್ ಸ್ಥಾಪನೆಯಾಗಿದ್ದು 500 ಮಂದಿ ಕೆಲಸ ಮಾಡುತ್ತಿದ್ದಾರೆ. ತಂತ್ರಜ್ಞಾನ ಅಪ್‌ಗ್ರೇಡೇಶನ್ ಹೇಗೆ ಮಾಡಬಹುದು ಎಂದು ಇಲ್ಲಿ ಸಂಶೋಧನೆಗಳು ನಡೆಯುತ್ತಿವೆ. ವಿಶ್ವಾದ್ಯಂತ ಊಬರ್ ತನ್ನ ಪ್ರಯೋಗಗಳನ್ನು ಮಾಡುತ್ತಿದ್ದು ಸುರಕ್ಷಿತ ಪ್ರಯಾಣ ವ್ಯವಸ್ಥೆ ಅಳವಡಿಸುವ ನಿಟ್ಟಿನಲ್ಲಿ ಕೆಲಸವಾಗುತ್ತಿದೆ.

ತಂತ್ರಜ್ಞಾನ ಹೇಗೆ ಸಾಧ್ಯ?

ತಂತ್ರಜ್ಞಾನ ಹೇಗೆ ಸಾಧ್ಯ?

ಸದ್ಯ ಬಸ್ ಬುಕಿಂಗ್ ಸೇವೆ ಅಂತ-ನಗರ ಮತ್ತು ಅಂತರ್‌ರಾಜ್ಯ ಮಾರ್ಗಗಳಲ್ಲಿ ಲಭ್ಯ ಇದೆ. ರೆಡ್ ಬಸ್ ಇತ್ಯಾದಿ ಕಂಪನಿಗಳು ಬುಕಿಂಗ್ ಸೇವೆ ಒದಗಿಸುತ್ತಿವೆ. ಊಬರ್ ಬಸ್ ನಗರದೊಳಗೆ ಇಂಥದ್ದೊಂದು ಸೇವೆ ಒದಗಿಸುತ್ತದೆ. ಕ್ಯಾಬ್ ಬುಕ್ ಮಾಡಿದಾಗ ಅಥವಾ ಫುಡ್ ಡೆಲಿವರಿ ಬುಕ್ ಮಾಡಿದಾಗ ರಿಯಲ್ ಟೈಮ್‌ನಲ್ಲಿ ವಾಹನವಿರುವ ಸ್ಥಳ ಕಾಣಿಸುವಂತೆ ಊಬರ್ ಬಸ್ ಸೇವೆಯಲ್ಲೂ ಬಸ್‌ಗಳನ್ನು ರಿಯಲ್ ಟೈಮ್‌ನಲ್ಲಿ ಕಾಣಬಹುದು. ನಮಗೆ ಬೇಕಾದ ಸಮಯದಲ್ಲಿ ಬೇಕಾದ ನಿಲ್ದಾಣದಲ್ಲಿ ಟಿಕೆಟ್ ಕಾಯ್ದಿರಿಸಬಹುದು.

ಬೆಂಗಳೂರಿನಲ್ಲಿ ಊಬರ್ ಬಸ್ ಬಂದರೆ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂದು ಅಂದಾಜು ಮಾಡುವುದು ಕಷ್ಟ. ಬಿಎಂಟಿಸಿಯ ಅನೇಕ ಬಸ್ಸುಗಳು ಬಿಳಿ ಆನೆಯ ರೀತಿ ಆಗಿವೆ. ಎಸಿ ಬಸ್ಸುಗಳನ್ನು ಜನರು ಕೇಳದಂತಾಗಿದೆ. ಕೆಲವೇ ಮಾರ್ಗ ಬಿಟ್ಟರೆ ಹೆಚ್ಚಿನ ಎಸಿ ಬಸ್ಸುಗಳು ಖಾಲಿ ಖಾಲಿಯಾಗಿ ಓಡಾಡುತ್ತಿವೆ. ಇವುಗಳಿಂದ ಸಾರಿಗೆ ಇಲಾಖೆಗೆ ಭಾರಿ ನಷ್ಟವಾಗುತ್ತದೆ. ಇಂಥ ಹೊತ್ತಲ್ಲಿ ಊಬರ್ ಬಸ್ಸಿನ ಸೇವೆಗೆ ಈ ಬಸ್ಸುಗಳು ನಿಯೋಜನೆಗೊಂಡು ಲಾಭದಾಯಕವಾಗಿ ಪರಿಣಮಿಸುತ್ತವಾ ನೋಡಬೇಕು.

(ಒನ್ಇಂಡಿಯಾ ಸುದ್ದಿ)

English summary
Uber has started bus service in Gurugram, near Delhi. It may expand the service to various other cities, including Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X