ಮನುಷ್ಯನಿಗೆ ಹಂದಿ ಕಿಡ್ನಿ ಕಸಿ: ವಿಶ್ವದ ಮೊದಲ ಕಾರ್ಯಾಚರಣೆ ಯಶಸ್ವಿ

ವಾಷಿಂಗ್ಟನ್, ಅಕ್ಟೋಬರ್ 20: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪ್ರಪಂಚದ ಲಕ್ಷಾಂತರ ಜನರು ಇನ್ನು ಮುಂದೆ ಕಸಿ ಇಲ್ಲದಿದ್ದಲ್ಲಿ ತಮ್ಮ ಜೀವಗಳನ್ನು ಕಳೆದುಕೊಳ್ಳಬೇಕಾಗಿಲ್ಲ. ಯಾಕೆಂದರೆ ಮೂತ್ರಪಿಂಡ ಕಸಿಗಾಗಿ ವೈದ್ಯರು ವಿಶೇಷ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇದರಿಂದಾಗಿ ಪ್ರಪಂಚದ ಲಕ್ಷಾಂತರ ರೋಗಿಗಳ ಜೀವವನ್ನು ಉಳಿಸಲು ಮಾರ್ಗವನ್ನು ಹುಡುಕಿದಂತಾಗಿದೆ.

ವಿಶ್ವದ ಮೊದಲ ಶಸ್ತ್ರಚಿಕಿತ್ಸೆ: ದಿ ಸನ್ ವರದಿಯ ಪ್ರಕಾರ, ಅಮೆರಿಕದಲ್ಲಿ ಪ್ರಪಂಚದಲ್ಲಿ ಮೊಟ್ಟಮೊದಲ ಬಾರಿಗೆ ಮಾನವ ದೇಹದಲ್ಲಿ ಹಂದಿ ಮೂತ್ರಪಿಂಡ ಕಸಿ ಮಾಡಲಾಗಿದೆ. ಈ ಸಾಧನೆಯನ್ನು ನ್ಯೂಯಾರ್ಕ್ ನಗರದ NYU ಲ್ಯಾಂಗೋನ್ ಆರೋಗ್ಯ ವೈದ್ಯಕೀಯ ಕೇಂದ್ರದ ಶಸ್ತ್ರಚಿಕಿತ್ಸಕರು ಮಾಡಿದ್ದಾರೆ. ಕಸಿ ಮಾಡಿದ ನಂತರ ಹಂದಿ ಮೂತ್ರಪಿಂಡವು ರೋಗಿಯ ದೇಹದಲ್ಲಿ ಸರಿಯಾಗಿ ಕೆಲಸ ಮಾಡುತ್ತಿದೆ.

ಹಂದಿ ಮೂತ್ರಪಿಂಡ ಮನುಷ್ಯನಿಗೆ ಕಸಿ

ಹಂದಿ ಮೂತ್ರಪಿಂಡ ಮನುಷ್ಯನಿಗೆ ಕಸಿ

ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಿದ ವೈದ್ಯರ ಸಮಿತಿಯ ಮುಖ್ಯಸ್ಥ ಡಾ.ರಾಬರ್ಟ್ ಮಾಂಟ್ಗೊಮೆರಿ ಈ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಅವರ ಪ್ರಕಾರ, ಹಂದಿಯ ಮೂತ್ರಪಿಂಡವನ್ನು ಕಸಿ ಮಾಡಿದ ರೋಗಿ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಆತನಿಗೆ ದೀರ್ಘಕಾಲದವರೆಗೆ ಮೆದುಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಆದರೆ ಹೃದಯ ಮತ್ತು ಇತರ ಅಂಗಗಳು ಕೆಲಸ ಮಾಡುತ್ತಿದ್ದವು. ಪರೀಕ್ಷೆ ಬಳಿಕ ರೋಗಿಗೆ ಮೂತ್ರಪಿಂಡದ ಸಮಸ್ಯೆ ಕಂಡುಬಂದಿದೆ. ಕೂಡಲೆ ಆ ರೋಗಿಯ ಕುಟುಂಬ ಸದಸ್ಯರಿಂದ ಅನುಮತಿ ಪಡೆದ ವೈದ್ಯರು ಸುದೀರ್ಘ ಶಸ್ತ್ರಚಿಕಿತ್ಸೆ ಮಾಡಿ ರೋಗಿಯ ದೇಹದ ಹೊರಗಿನ ದೊಡ್ಡ ಅಪಧಮನಿಗೆ ಹಂದಿ ಮೂತ್ರಪಿಂಡವನ್ನು ಸಂಪರ್ಕಿಸಿದರು. ಇದರಿಂದ ಅವನಿಗೆ ರಕ್ತ ಮತ್ತು ಆಮ್ಲಜನಕ ಸಿಗುತ್ತಿದೆ.

ಮೂತ್ರಪಿಂಡದ ಸಹಜ ಕಾರ್ಯ

ಮೂತ್ರಪಿಂಡದ ಸಹಜ ಕಾರ್ಯ

ಇದಾದ ನಂತರ ವೈದ್ಯರು ರೋಗಿಯನ್ನು 2-3 ದಿನಗಳವರೆಗೆ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಾರೆ. ರೋಗಿಯ ದೇಹವು ಹಂದಿ ಮೂತ್ರಪಿಂಡವನ್ನು ಸ್ವೀಕರಿಸಿದಾಗ ವೈದ್ಯರು ಆಶ್ಚರ್ಯಚಕಿತರಾದರು. ಆ ಮೂತ್ರಪಿಂಡವು ದೇಹದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಯಶಸ್ವಿಯಾಗಿ ಫಿಲ್ಟರ್ ಮಾಡಿ ಮತ್ತು ಮೂತ್ರವನ್ನು ಬೇರ್ಪಡಿಸಿತು. ಹಂದಿ ಮೂತ್ರಪಿಂಡವು ಮಾನವ ಮೂತ್ರಪಿಂಡದಂತೆ ಮೂತ್ರವನ್ನು ರೋಗಿಯ ದೇಹದಲ್ಲಿ ಬೇರ್ಪಡಿಸುತ್ತಿದೆ.

ರೋಗಿಯ ಕ್ರಿಯೇಟಿನೈನ್ ಮಟ್ಟವೂ ಸಾಮಾನ್ಯ

ರೋಗಿಯ ಕ್ರಿಯೇಟಿನೈನ್ ಮಟ್ಟವೂ ಸಾಮಾನ್ಯ

ಕಸಿ ಮಾಡಿದ ಹಂದಿ ಮೂತ್ರಪಿಂಡ ಸರಿಯಾಗಿ ಕೆಲಸ ಮಾಡುತ್ತಿದೆ ಎಂದು ಡಾ. ರಾಬರ್ಟ್ ಮಾಂಟ್ಗೊಮೆರಿ ಹೇಳಿದರು. ಇದುವರೆಗಿನ ಎಲ್ಲಾ ಫಲಿತಾಂಶಗಳು ಉತ್ತಮವಾಗಿವೆ. ಮೂತ್ರಪಿಂಡ ವೈಫಲ್ಯದ ನಂತರ ರೋಗಿಯ ಕ್ರಿಯೇಟಿನೈನ್ ಮಟ್ಟವು ಅಸಹಜವಾಗಿದೆ. ಈಗ ಹಂದಿಯ ಮೂತ್ರಪಿಂಡದ ಕಸಿ ಬಳಿಕ ವ್ಯಕ್ತಿ ಸಹಜ ಸ್ಥಿತಿಗೆ ಮರುಕಳಿಸುತ್ತಿದ್ದಾರೆ. ಅಂದರೆ, ರೋಗಿಯ ದೇಹವು ಆ ಮೂತ್ರಪಿಂಡವನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿದೆ.

ಮಾನವ ಅಂಗಗಳ ಕೊರತೆ ಉಂಟಾಗುತ್ತದೆಯೇ?

ಮಾನವ ಅಂಗಗಳ ಕೊರತೆ ಉಂಟಾಗುತ್ತದೆಯೇ?

ವರದಿಯ ಪ್ರಕಾರ, ಪ್ರಪಂಚದಲ್ಲಿ ಮಾನವ ಅಂಗಗಳ ದೊಡ್ಡ ಕೊರತೆಯಿದೆ. ಇದರಿಂದಾಗಿ ಪ್ರತಿದಿನ ಸಾವಿರಾರು ರೋಗಿಗಳು ತಮ್ಮ ಜೀವವನ್ನು ಕಳೆದುಕೊಳ್ಳುವಂತಾಯಿತು. ಈ ಕೊರತೆಯನ್ನು ನೀಗಿಸಲು ವಿವಿಧ ದೇಶಗಳ ವಿಜ್ಞಾನಿಗಳು ಪಿಗ್ ಮೇಲೆ ದೀರ್ಘಕಾಲ ಸಂಶೋಧನೆ ನಡೆಸುತ್ತಿದ್ದಾರೆ. ಇಲ್ಲಿಯವರೆಗಿನ ಸಂಶೋಧನೆಯಲ್ಲಿ, ಹಂದಿಯ ಜೀವಕೋಶಗಳಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿರುವುದರಿಂದ ಮಾನವ ದೇಹದ ಮೇಲೆ ಪರಿಣಾಮ ಬೀರುವ ಆತಂಕವಿದೆ. ಆದರೆ ಇದರಿಂದ ಯಾವುದೇ ತೊಂದರೆ ಇಲ್ಲ ಎನ್ನುತ್ತದೆ ವೈದ್ಯಲೋ.

ಹಂದಿಯ ವಂಶವಾಹಿಗಳಲ್ಲಿ ಬದಲಾವಣೆ

ಹಂದಿಯ ವಂಶವಾಹಿಗಳಲ್ಲಿ ಬದಲಾವಣೆ

ಈ ಶಸ್ತ್ರಚಿಕಿತ್ಸೆಗೆ ವೈದ್ಯರು ವಿಶೇಷ ಜೀನ್ ಹೊಂದಿರುವ ಹಂದಿಯನ್ನು ಬಳಸಿದರು. ಆ ಹಂದಿಯ ಕೋಶದಲ್ಲಿರುವ ಸಕ್ಕರೆಯನ್ನು ತೊಡೆದುಹಾಕಲು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ದಾಳಿಯನ್ನು ತಪ್ಪಿಸಲು ಕೆಲವು ಆನುವಂಶಿಕ ಬದಲಾವಣೆಗಳನ್ನು ಮಾಡಲಾಗಿದೆ. ಈ ತಳೀಯವಾಗಿ ಮಾರ್ಪಡಿಸಿದ ಹಂದಿ ಸಿದ್ಧವಾದಾಗ, ಅದರ ಮೂತ್ರಪಿಂಡವನ್ನು ತೆಗೆದು ಮೆದುಳು ಸತ್ತ ರೋಗಿಯ ದೇಹದಲ್ಲಿ ಅಳವಡಿಸಲಾಯಿತು. ಅದು ಚೆನ್ನಾಗಿ ಕೆಲಸ ಮಾಡಿ ಮತ್ತು ಮಾನವ ಅಂಗಗಳ ಕೊರತೆಯನ್ನು ಪೂರೈಸಲು ಜಗತ್ತಿಗೆ ಅದ್ಭುತವಾದ ಮಾರ್ಗವನ್ನು ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+